ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

By Ashwath
|

ಇಂಟರ್‌ನೆಟ್‌‌ನಲ್ಲಿ ಮಾಲ್‌ವೇರ್‌‌ಗಳನ್ನು ಕಳುಹಿಸಿ ಬ್ಯಾಂಕ್‌ ಪಾಸ್‌ವರ್ಡ್‌‌‌ಗಳನ್ನು ಪತ್ತೆ ಹಚ್ಚಿ ಆನ್‌ಲೈನ್‌ ಅಕೌಂಟ್‌ನಿಂದಲೇ ಹಣವನ್ನು ದೋಚುತ್ತಿದ್ದ ಸೈಬರ್‌ ಕಳ್ಳರು ಈಗ ಈ ಕಳ್ಳತನಕ್ಕೆ ಹೈಟೆಕ್‌ ತಂತ್ರವನ್ನು ಕಂಡು ಹಿಡಿದಿದ್ದಾರೆ.

ದೆಹಲಿ ಪೊಲೀಸರು ನೈಜೀರಿಯನ್‌ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 1.5 ಕೋಟಿ ಹಣವನ್ನು ವಶಪಡಿಸಿ ಕೊಂಡಿದ್ದಾರೆ. ಭಾರತೀಯ ಮೂಲದ ಜಪಾನ್ ವ್ಯಕ್ತಿಗೆ ಸೇರಿದ್ದ ಹಣ ಇದಾಗಿದ್ದು ನೈಜೀರಿಯನ್‌ ಕಳ್ಳರು ಹೊಸ ಹೈಟೆಕ್‌ ಕಳ್ಳತನಕ್ಕೆ ದೆಹಲಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ಇಲ್ಲಿ ನೈಜೀರಿಯನ್‌ ಗ್ಯಾಂಗ್‌‌ನವರ ಹೊಸ ರೀತಿಯಲ್ಲಿ ಕಳ್ಳತನ ಹೇಗೆ ಮಾಡುತ್ತಿದ್ದಾರೆ? ಈ ಹಿಂದೆ ಹೇಗೆ ಇಂಟರ್‌ನೆಟ್‌ನಲ್ಲಿ ಕಳ್ಳತನ ಮಾಡುತ್ತಿದ್ದರು ಎನ್ನುವುದರ ವಿವರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಸುಲಭವಾಗಿ ಪತ್ತೆಯಾಗುವ ಎಟಿಎಂ ಪಿನ್‌‌ ನಂಬರ್‌ಗಳು

ಇದನ್ನೂ ಓದಿ: ಇಮೇಲ್‌ನ್ನು ಸುರಕ್ಷಿತವಾಗಿ ಬಳಸಲು 8 ಟಿಪ್ಸ್‌

Click Here For New Gadgets, Smartphones, Laptops, Camera Gallery

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ


ಇಂದು ಯಾವುದೇ ಬ್ಯಾಂಕಿನಲ್ಲಿ ಇಂಟರ್‌ನೆಟ್‌ ವ್ಯವಹಾರ ನಡೆಸಿದ್ದರೆ ಆ ವ್ಯವಹಾರದ ಮಾಹಿತಿ ಕೂಡಲೇ ಮೆಸೇಜ್‌‌ ಮೂಲಕ ಗ್ರಾಹಕರ ಮೊಬೈಲ್‌‌ ತಲುಪುತ್ತದೆ. ಇದರಿಂದಾಗಿ ತಮ್ಮ ಅಕೌಂಟ್‌ನಲ್ಲಿ ಯಾವುದೇ ಅವ್ಯವಹಾರ ನಡೆದರು ಅದು ಗ್ರಾಹಕರಿಗೆ ತಿಳಿಯುತ್ತದೆ.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ಇಲ್ಲಿಯವರೆಗೆ ಕಳ್ಳರು ಬ್ಯಾಂಕ್‌ ಅಕೌಂಟ್‌ನ ಪಾಸ್‌‌ವರ್ಡ್‌ನ್ನು ಮಾಲ್‌ವೇರ್‌ಗಳ ಮೂಲಕ ಕದ್ದು ಅಕೌಂಟಿನಲ್ಲಿರುವ ಹಣವನ್ನು ದೋಚುತ್ತಿದ್ದರು. ಆದರೆ ಈಗ ಎಸ್‌ಎಂಎಸ್‌ ಮೂಲಕ ಬ್ಯಾಂಕ್‌‌ನ ವ್ಯವಹಾರ ಗ್ರಾಹಕರಿಗೆ ಮೊಬೈಲ್‌ಗೆ ಬರುತ್ತಿರುವುದರಿಂದ ಈ ಕಳ್ಳತನ ಕಷ್ಟವಾಗುತಿತ್ತು.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ


ಒಂದು ವೇಳೆ ಸೈಬರ್‌ ಕಳ್ಳರು ಗ್ರಾಹಕರ ಅಕೌಂಟ್‌ನಿಂದ ಕಳ್ಳತನ ಮಾಡಿದ್ದರೂ, ವ್ಯವಹಾರದ ಮಾಹಿತಿ ಗ್ರಾಹಕರ ಮೊಬೈಲ್‌‌‌ಗೆ ಬಂದ ಕೂಡಲೇ ಗ್ರಾಹಕರು ಕೂಡಲೇ ಎಚ್ಚೆತ್ತು, ಆನ್‌ಲೈನ್ ಅಕೌಂಟ್‌ನ್ನು ಬ್ಲಾಕ್ ಮಾಡುತ್ತಿದ್ದರು.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ಈ ಕಳ್ಳತನದ ಬದಲಾಗಿ ಈಗ ಕಳ್ಳರು ಗ್ರಾಹಕರ ಪಾಸ್‌ವರ್ಡ್‌ನ್ನು ಕದಿಯುವುದರ ಜೊತೆಗೆ ಮೊಬೈಲ್‌ ನಂಬರ್‌ನ್ನು ಪತ್ತೆ ಮಾಡಲು ಆರಂಭಿಸಿದ್ದಾರೆ. ಆರಂಭದಲ್ಲಿ ಮೊಬೈಲ್‌ ನಂಬರ್‌ ಪತ್ತೆ ಮಾಡಿ, ಮೊಬೈಲ್‌ ಸೇವಾ ಕಂಪೆನಿಗಳಿಗೆ ತೆರಳಿ ಮೊಬೈಲ್‌ ನಂಬರ್‌ ಕಳೆದು ಹೋಗಿದೆ ಎಂದು ಹೇಳಿ ಆ ಮೊಬೈಲ್‌ ನಂಬರ್‌ನ್ನು ಬ್ಲಾಕ್‌ ಮಾಡುತ್ತಾರೆ.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ


ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿದ ಬಳಿಕ ತಕ್ಷಣ ಗ್ರಾಹಕರ ಬ್ಯಾಂಕ್‌ ಖಾತೆಯಲ್ಲಿರುವ ವಿಳಾಸವನ್ನು ನೋಡಿ ನಕಲಿ ವಿಳಾಸವನ್ನು ಸೃಷ್ಟಿಸಿ ಅದೇ ನಂಬರಿನ ಸಿಮ್‌ ಕಾರ್ಡ್‌ನ್ನು ಪುನ: ಪಡೆಯುತ್ತಾರೆ.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ


ಸಿಮ್‌ ಕಾರ್ಡ್‌ ಪಡೆದ ನಂತರ ನಕಲಿ ಕ್ರೆಡಿಟ್‌,ಡೆಬಿಟ್‌ ಕಾರ್ಡ್‌ ಮೂಲಕ ಆನ್‌ಲೈನ್‌ನಲ್ಲಿರುವ ಹಣವನ್ನು ದೋಚುತ್ತಾರೆ. ಗ್ರಾಹಕರ ಮೊಬೈಲ್‌ ನಂಬರ್‌ ಬ್ಲಾಕ್‌ ಆಗಿರುವುದರಿಂದ ಈ ಬ್ಯಾಂಕ್‌ನ ವ್ಯವಹಾರ ಮೆಸೇಜ್‌ ಮೊಬೈಲ್‌ಗೆ ಬಾರದ ಕಾರಣ ಕಳ್ಳತನದ ಮಾಹಿತಿ ಗೊತ್ತಾಗುವುದಿಲ್ಲ.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ


ಪ್ರತಿದಿನ ಆನ್‌ಲೈನ್‌ ಬ್ಯಾಂಕಿಂಗ್‌ ಅಕೌಂಟ್‌ನ್ನು ಓಪನ್‌ ಮಾಡದ ಕಾರಣ ಮತ್ತೊಮ್ಮೆ ಅಕೌಂಟ್‌ ಓಪನ್‌ ಮಾಡಿದಾಗ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತದೆ. ಆ ಹೊತ್ತಿಗೆ ಕಳ್ಳರು ಭಾರೀ ಪ್ರಮಾಣದ ಹಣವನ್ನು ದೋಚಿ ಆಗಿರುತ್ತದೆ.

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ನೈಜೀರಿಯನ್‌ ಹ್ಯಾಕರ್‌ಗಳ ಹೈಟೆಕ್‌ ಕಳ್ಳತನ

ಇತ್ತೀಚಿಗಷ್ಟೇ ಸ್ಮಾರ್ಟ್‌ಫೋನ್‌ಗಳಿಗೆ ಟ್ರೋಜನ್‌ ಮೆಸೇಜ್‌ ಕಳುಹಿಸಿ ಸ್ಮಾರ್ಟ್‌‌‌‌‌‌ಫೋನ್‌ನಲ್ಲಿರುವ ಮಾಹಿತಿ ಕದಿಯುತ್ತಿರುವ ವಿಷಯ ಪ್ರಕಟವಾದ ಬೆನ್ನಲೇ ಮೊಬೈಲ್‌‌ನ ಸಿಮ್‌ ಬ್ಲಾಕ್‌ ಮಾಡಿ ಕಳ್ಳತನ ಮಾಡುವ ವಿಷಯ ಬಹಿರಂಗವಾದ ಹಿನ್ನೆಲೆಯಲ್ಲಿ ಆನ್‌ಲೈನ್‌ಲ್ಲಿ ವ್ಯವಹಾರ ಮಾಡುವಾಗ ಮತ್ತಷ್ಟು ಎಚ್ಚರದಿಂದ ವ್ಯವಹಾರ ನಡೆಸುವುದು ಒಳ್ಳೆಯದು.

Click Here For List of The New Smartphones And Tablets Price & Specs

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X