ವಾಟ್ಸಾಪ್‌ನಲ್ಲಿ 'ಜಿಫ್' ಫೀಚರ್; ಕ್ರೇಜ್‌ ಹೇಗಿರುತ್ತೆ!

Written By:

ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ 'ವಾಟ್ಸಾಪ್‌' ತನ್ನ ಹೊಸ ಫೀಚರ್ ಅನ್ನು ಪರೀಕ್ಷೆ ನಡೆಸುತ್ತಿದೆ. ತನ್ನ ಮುಂದಿನ ಲೇಟೆಸ್ಟ್‌ ವರ್ಸನ್‌ನಲ್ಲಿ ಈ ಹೊಸ ಫೀಚರ್‌ ಅನ್ನು ಪರಿಚಯಿಸಲಿದೆ.

ವಾಟ್ಸಾಪ್‌(whatsapp) ವೀಡಿಯೊ ಕಾಲಿಂಗ್ ಫೀಚರ್‌ ಅನ್ನು ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ವಾಟ್ಸಾಪ್‌ ಪ್ರೇಮಿಗಳಿಗೆ ಈಗ ಬೇರೆಯದೇ ಸುದ್ದಿ ಕೇಳುತ್ತಿದೆ.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ವಾಟ್ಸಾಪ್‌ ತನ್ನ ಲೇಟೆಸ್ಟ್‌ ವರ್ಸನ್‌ನಲ್ಲಿ ವೀಡಿಯೊ ಕಾಲಿಂಗ್ ಫೀಚರ್‌, ವಾಯ್ಸ್‌ ಮೆಸೇಜ್‌ ಫೀಚರ್‌ ನೀಡುವ ಮುನ್ನವೇ ತನ್ನ ಫೀಚರ್‌ ಅಪ್‌ಡೇಟ್‌ನಲ್ಲಿ 'GIF' ಫೀಚರ್‌ ಪಡೆಯಲಿದೆ ಎಂದು ಹೇಳಲಾಗುತ್ತಿದೆ. 'GIF' ಫೀಚರ್ ಪಡೆದಲ್ಲಿ ಅದು ಹೇಗೆ ವರ್ಕ್ ಆಗಬಹುದು ಎಂಬುದನ್ನ ಮುಂದೆ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೂಲ್‌ ಜಿಫ್‌

ಕೂಲ್‌ ಜಿಫ್‌

1

ಜಿಫ್ ಫೀಚರ್ ನೀಡುವ ಬರದಲ್ಲಿ ವಾಟ್ಸಾಪ್‌ ಹಲವು ಹೊಸ ಫೀಚರ್‌ಗಳನ್ನು ಮಿಸ್‌ ಮಾಡಿಕೊಳ್ಳುತ್ತಿದೆ. ಅಂದಹಾಗೆ ವಾಟ್ಸಾಪ್‌ನಲ್ಲಿ ಜಿಫ್ ಫೀಚರ್‌ ಇತರ ಫೀಚರ್‌ಗಳಿಗಿಂತ ಹೆಚ್ಚು ಜನರಿಂದ ಬಳಕೆಯಾಗಲಿದೆ. ಚಾಟಿಂಗ್‌, ಗ್ರೂಪ್‌ ಚಾಟಿಂಗ್‌ ವೇಳೆಯಲ್ಲಿ ಹೆಚ್ಚು ಜನರಿಂದ ಬಳಕೆಯಾಗುತ್ತದೆ.

ಸೇವ್‌

ಸೇವ್‌

2

ಪ್ರಸ್ತುತದಲ್ಲಿ ಪರೀಕ್ಷೆ ನಡೆಸಲಾಗುತ್ತಿರುವ ವಾಟ್ಸಾಪ್ನ ಮುಂದಿನ ವರ್ಷನ್‌, ಜಫ್‌ ಫೈಲ್‌ ಅನ್ನು ಕ್ಯಾಮೆರಾ ಇರುವ ಸಾಲಿಗೆ ಪಡೆಯಲಿದೆ. ಗೆಳೆಯರು ಕಳುಹಿಸಿದ ಜಿಫ್‌ ಅನ್ನು ಸೇವ್ ಸಹ ಮಾಡಿಕೊಳ್ಳಬಹುದಾಗಿದೆ.

ಇನ್‌ ಬಿಲ್ಟ್‌

ಇನ್‌ ಬಿಲ್ಟ್‌

3

ಅಂದಹಾಗೆ ಜಿಫ್‌ ಕೀಬೋರ್ಡ್‌ನಿಂದ ಅಥವಾ ಗೂಗಲ್‌ನ ಜಿಬೋರ್ಡ್‌ನಿಂದ ನಿಮಗೆ ಇಷ್ಟವಾದ ಜಿಫ್‌ ಅನ್ನು ಸಹ ಹುಡುಕಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಜಿಫ್‌ ಲಿಂಕ್‌ ಅನ್ನು ಚಾಟ್‌ನಲ್ಲಿ ಶೇರ್‌ ಮಾಡಬಹುದು ಎನ್ನಲಾಗಿದೆ. ಅಥವಾ ಇನ್ನೂ ಹೆಚ್ಚು ಅಭಿವೃದ್ದಿ ಮಾಡಲಾಗುತ್ತದೆಯೋ ಎಂದು ಕಾದುನೋಡಬೇಕಾಗಿದೆ.

ಫೇಸ್‌ಬುಕ್‌ಗಿಂತ ಹೆಚ್ಚು

ಫೇಸ್‌ಬುಕ್‌ಗಿಂತ ಹೆಚ್ಚು

4

ಈ ಹಿಂದೆ ಫೇಸ್‌ಬುಕ್‌ ಕೇವಲ ತನ್ನ ಮೆಸೇಂಜರ್‌ ಆಪ್‌ಗೆ ಜಿಫ್‌ ಫೀಚರ್‌ ನೀಡಿತ್ತು. ಇನ್ಮುಂದೆ ವಾಟ್ಸಾಪ್‌ ಬಳಕೆದಾರರು ಸಹ ತಮ್ಮ ಗೆಳೆಯರಿಗೆ ಜಿಫ್ ಕಳುಹಿಸಬಹುದು. ಫೀಲ್ ತುಂಬಾ ಚೆನ್ನಾಗಿರುತ್ತೆ.

ಆಟೋ ಪ್ಲೇ

ಆಟೋ ಪ್ಲೇ

5

ವಾಟ್ಸಾಪ್‌ನಲ್ಲಿ ಜಿಪ್‌ ಫೈಲ್‌ ಆಟೋ ಪ್ಲೇ ಆದಲ್ಲಿ, ಬ್ರೌಸರ್‌ನಲ್ಲಿ ಜಿಫ್‌ ಲಿಂಕ್ ಓಫನ್ ಮಾಡುವ ತಲೆನೋವು ತಪ್ಪುತ್ತದೆ. ಜಿಫ್‌ ಅನ್ನು ಹೆಚ್ಚು ಜನರು ಹೆಚ್ಚಾಗಿ ಬಳಸುತ್ತಾರೆ. ಬ್ರೌಸರ್‌ ಮೋರೆ ಹೋಗುವುದೇ ಆದಲ್ಲಿ ಜಿಫ್‌ ಬಳಕೆದಾರರು ಕಡಿಮೆ ಆಗಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here is how WhatsApp conversations become more fun with GIFs! Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot