ಉತ್ತಮ ಇಂಟರ್ನೆಟ್‌ಗಾಗಿ 6 ಗಂಟೆಕಾಲ ಶೌಚಾಲಯವನ್ನೇ ಬಳಸುವುದಿಲ್ಲವಂತೆ!

Written By:

ಹೆಚ್ಚು ಭಯಪಡುವಷ್ಟು ಏನು ಡಾಟಾ ಮತ್ತು ರೋಮಿಂಗ್‌ ಬಿಲ್‌ ಬರುವುದಿಲ್ಲ. ಆದ್ರೂನೂ ಸಹ ಭಾರತೀಯರಿಗೆ ಇಂಟರ್ನೆಟ್ ಕನೆಕ್ಟಿವಿಟಿ ಅಂದ್ರೆ ಭಯವಂತೆ. ಟ್ರಾವೆಲ್‌ ಮಾಡುವಾಗ ಇಂಟರ್ನೆಟ್‌ ಕನೆಕ್ಷನ್‌ ಅಂದ್ರೆ ಹೆಚ್ಚು ಭಯಬೀಳುತ್ತಾರೆ ಎಂದು ಸಮೀಕ್ಷೆಯೊಂದು ಬುಧವಾರ ಹೇಳಿದೆ. ವಿಶೇಷ ಅಂದ್ರೆ ಶೇ 28.4 ಜನರು ಉತ್ತಮ ಇಂಟರ್ನೆಟ್‌ಗಾಗಿ 6 ಗಂಟೆಕಾಲ ಶೌಚಾಲಯವನ್ನೇ ಬಳಸುವುದಿಲ್ಲವಂತೆ.

ನೀವು ಸಹ ಮೊಬೈಲ್‌, ಕಂಪ್ಯೂಟರ್‌, ಸಾಮಾಜಿಕ ಜಾಲತಾಣ, ಇಂಟರ್ನೆಟ್‌ನ ರೆಗ್ಯೂಲರ್‌ ಬಳಕೆದಾರರಾದಲ್ಲಿ ಒಮ್ಮೆ ಈ ಲೇಖನದ ಸಂಪೂರ್ಣ ಮಾಹಿತಿಯನ್ನು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್ ಲಿಂಕ್‌ ಭಯ

ಇಂಟರ್ನೆಟ್ ಲಿಂಕ್‌ ಭಯ

ಶೇಕಡ 34.5 ರಷ್ಟು ಜನರು ಪ್ರಯಾಣ ಮಾಡುವಾಗ ಮೊಬೈಲ್ ನೆಟ್‌ವರ್ಕ್‌ಗೆ ಹೆದರುತ್ತಾರೆ, ಶೇಕಡ 6.9 ರಷ್ಟು ಜನರು ಹೆಚ್ಚಿನ ರೋಮಿಂಗ್‌ ಬಿಲ್‌ಗೆ ಹೆದರುತ್ತಾರೆ ಎಂದು 'ವೆಬ್‌ ಬ್ರೌಸರ್‌ ಒಪೆರಾ ಮತ್ತು ಲೈಫ್‌ಸ್ಪಾನ್‌ ಅಕೊಮೊಡೇಷನ್‌ ಕಂಪನಿ' ನಡೆಸಿದ್ದ ಸಮೀಕ್ಷೆ ಬುಧವಾರ ಹೇಳಿದೆ.

ಇಂಟರ್ನೆಟ್‌ ಸಂಪರ್ಕ

ಇಂಟರ್ನೆಟ್‌ ಸಂಪರ್ಕ

"ಪ್ರಯಾಣಿಕರಿಗೆ ಇಂಟರ್ನೆಟ್‌ ಸಂಪರ್ಕ ಎಂಬುದು ಪೂರ್ವಪೇಕ್ಷಿತವಾಗಿ ಮುಖ್ಯವಾಗಿದೆ. ಸಾಮಾನ್ಯವಾಗಿ ಹೆಚ್ಚು ಜನರು ಪ್ರಯಾಣ ಮಾಡುವಾಗಲೇ ಇಂಟರ್ನೆಟ್‌ಗೆ ಕನೆಕ್ಷನ್ ಆಗಿ ಅಪ್‌ಡೇಟ್‌ ಮತ್ತು ಶೇರ್‌ ಚಟುವಟಿಕೆ ಮಾಡುತ್ತಾರೆ" ಎಂದು ಒಪೆರಾದ ದಕ್ಷಿಣ ಏಷಿಯಾ ಉಪಾಧ್ಯಕ್ಷ ಹೇಳಿದ್ದಾರೆ.

ಮೊಬೈಲ್‌ ಕಳೆದುಕೊಳ್ಳವಿಕೆ

ಮೊಬೈಲ್‌ ಕಳೆದುಕೊಳ್ಳವಿಕೆ

ಶೇಕಡ 7.8 ರಷ್ಟು ಭಾರತೀಯರು ಪ್ರಯಾಣದ ವೇಳೆ ಮೊಬೈಲ್‌ ಕಳೆದುಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಾರೆ.

ಮೊಬೈಲ್‌ ಡಾಟಾ ಬಳಕೆ

ಮೊಬೈಲ್‌ ಡಾಟಾ ಬಳಕೆ

"ಶೇಕಡ 32.8 ರಷ್ಟು ಭಾರತೀಯರು ಮೊಬೈಲ್‌ ಡಾಟಾವನ್ನು ಸಾಮಾಜಿಕ ತಾಣ ಪೋಸ್ಟ್‌ಗಳಿಗಾಗಿ, ಶೇಕಡ 28.4 ರಷ್ಟು ಭಾರತೀಯರು ತಾವು ಭೇಟಿ ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಸರ್ಚ್‌ ಮಾಡಲು ಮೊಬೈಲ್‌ ಡಾಟಾ ಬಳಸುತ್ತಾರೆ" ಎಂದು ಸಮೀಕ್ಷೆ ಹೇಳಿದೆ.

ಪ್ರಯಾಣದ ವೇಳೆ ಡಾಟಾ ಬಳಕೆ

ಪ್ರಯಾಣದ ವೇಳೆ ಡಾಟಾ ಬಳಕೆ

16.4 ಶೇಕಡ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕಕ್ಕಾಗಿ ಮೊಬೈಲ್ ಡಾಟಾ ಬಳಸಿದರೆ, 17.2 ಶೇಕಡ ಜನರು ಪ್ರಯಾಣ ಮಾಡುವಾಗ ಜಿಪಿಎಸ್‌ಗಾಗಿ ಮೊಬೈಲ್ ಡಾಟಾ ಬಳಸುತ್ತಾರೆ.

ಊಟ ಮಾಡದೇ ಇಂಟರ್ನೆಟ್ ಬಳಕೆ

ಊಟ ಮಾಡದೇ ಇಂಟರ್ನೆಟ್ ಬಳಕೆ

ಶೇಕಡ 13.8 ರಷ್ಟು ಜನರು ಮಂದಗತಿ ಇಂಟರ್ನೆಟ್‌ ಸಂಪರ್ಕದಿಂದ ದಿನವೆಲ್ಲಾ ಆಹಾರವನ್ನು ಸೇವಿಸದೇ ಇಂಟರ್ನೆಟ್ ಸಂಪರ್ಕದಲ್ಲೇ ತೊಡಗಿರುತ್ತಾರೆ ಎಂದಿದೆ ಸಮೀಕ್ಷೆ.

ನೀರನ್ನು ಕುಡಿಯದೇ ಇಂಟರ್ನೆಟ್ ಬಳಸುವವರು

ನೀರನ್ನು ಕುಡಿಯದೇ ಇಂಟರ್ನೆಟ್ ಬಳಸುವವರು

ಸಂಜೆ ವೇಳೆ ಉತ್ತಮ ಇಂಟರ್ನೆಟ್‌ ಸಂಪರ್ಕ ಹೊಂದುವ ಕುತೂಹಲದಿಂದ ಶೇಕಡ 33.6 ರಷ್ಟು ಜನರು ನೀರು ಕುಡಿಯುವುದನ್ನೇ ನಿರ್ಲಕ್ಷಿಸುತ್ತಾರೆ. ಶೇಕಡ 28.4 ರಷ್ಟು ಜನರು ಉತ್ತಮ ಇಂಟರ್ನೆಟ್ ಬಳಸಲು 6 ಗಂಟೆ ಕಾಲ ಶೌಚಾಲಯವನ್ನೇ ಬಳಸುವುದಿಲ್ಲ ಎಂದಿದೆ ಸಮೀಕ್ಷೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Internet links biggest fear for Indians on the move: Survey. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot