ಜಿಯೋ ಬ್ರಾಂಡ್‌ಬ್ಯಾಂಡ್: ಮೂರು ತಿಂಗಳು ಉಚಿತ, ಸ್ಪೀಡ್ ಎಷ್ಟು ಗೊತ್ತಾ..?

Written By:

ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ವಲಯದಲ್ಲಿ ಹೊಸ ಶಕೆಯನ್ನು ಆರಂಭಿಸಿತು. ಜಿಯೋ ಮುಂಚಿನ ಅವಧಿ, ಜಿಯೋ ನಂತರದ ಅವಧಿ ಎಂಬ ಎರಡು ಭಾಗಗಳ ನಡುವೆ ಎದ್ದು ಕಾಣುವಷ್ಟು ವ್ಯತ್ಯಾಸವನ್ನು ಹುಟ್ಟಿಹಾಕಿತು. ಇದೇ ಮಾದರಿಯಲ್ಲಿ ಈಗ ಬ್ರಾಂಡ್‌ಬ್ಯಾಂಡ್ ಸೇವೆಯ ಕಡೆಗೂ ತನ್ನ ಗಮನ ಹರಿಸಿದ್ದು, ಈಗಾಗಲೇ 1 Gbps ವೇಗದ ಬ್ರಾಂಡ್‌ಬ್ಯಾಂಡ್ ಟೆಸ್ಟಿಂಗ್ ಆರಂಭಿಸಿದೆ.

ಜಿಯೋ ಬ್ರಾಂಡ್‌ಬ್ಯಾಂಡ್: ಮೂರು ತಿಂಗಳು ಉಚಿತ, ಸ್ಪೀಡ್ ಎಷ್ಟು ಗೊತ್ತಾ..?

ಓದಿರಿ: ಜಿಯೋ ಬ್ರಾಡ್‌ಬ್ಯಾಂಡ್ ಲಾಂಚ್ ಮುನ್ನವೇ BSNLನಿಂದ ಶಾಂಕಿಗ್ ಆಫರ್

ಮುಂಬೈ ಮತ್ತು ಫುಣೆಯಲ್ಲಿ ಜಿಯೋ 'ಫೈಬರ್ ಟು ದ ಹೋಮ್' ಬ್ರಾಂಡ್‌ಬ್ಯಾಂಡ್ ಸೇವೆಯೂ ಆರಂಭವಾಗಿದೆ. ಈ ಸೇವೆಯನ್ನು ದೇಶ 100 ಸಿಟಿಗಳಿಗೆ ವಿಸ್ತರಿಸುವ ಯೋಜನೆಯನ್ನು ಜಿಯೋ ಹಾಕಿಕೊಂಡಿದ್ದು, ಸದ್ಯ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಲಿ ಎಂದು ಕಾಯುತ್ತಿದೆ.

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಮೂರು ತಿಂಗಳು ಉಚಿತ:

ಮೊದಲ ಮೂರು ತಿಂಗಳು ಉಚಿತ:

ಜಿಯೋ ಬ್ರಾಂಡ್‌ಬ್ಯಾಂಡ್ ಸೇವೆಯೂ 4G VoLET ಸೇವೆಯಂತೆ ಗ್ರಾಹಕರಿಗೆ ವೆಲ್‌ಕಮ್ ಆಫರ್ ನೀಡಲು ಜಿಯೋ ಮುಂದಾಗಿದ್ದು, ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡುತ್ತಿದೆ. ಅದುವೇ ಅನ್‌ಲಿಮಿಟೆಡ್, ಉಚಿತ ಎನ್ನುವ ಕಾರಣಕ್ಕೆ ನಿಧಾನಗತಿಯ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿಲ್ಲ ಬದಲಾಗಿ 1 Gbps ವೇಗದ ಸೇವೆಯನ್ನು ನೀಡುತ್ತಿದೆ.

ಉಚಿತದ ನಂತರ ಪ್ರತಿ ತಿಂಗಳಿಗೆ ರೂ.249:

ಉಚಿತದ ನಂತರ ಪ್ರತಿ ತಿಂಗಳಿಗೆ ರೂ.249:

ಜಿಯೋ ಮೊದಲ ಮೂರು ತಿಂಗಳ ಉಚಿತ ಸೇವೆಯ ನಂತರ ಬ್ರಾಂಡ್‌ಬ್ಯಾಂಡ್ ಗ್ರಾಹಕರಿಗೆ 1Gbps ವೇಗದ ಇಂಟರ್ನೆಟ್ ಸೇವೆಗೆ ರೂ.249 ಶುಲ್ಕವನ್ನು ವಿಧಿಸಲಿದೆ ಎನ್ನಲಾಗಿದೆ. ಈಗಾಗಲೇ ಪ್ರಯೋಗಿಕ ಪರೀಕ್ಷೆಯ ಕಾರಣ ಯಾವುದೇ ಪ್ಲಾನ್ ಘೋಷಣೆ ಮಾಡಿಲ್ಲ. ಸದ್ಯ ರೂ.249 ಮಾತ್ರವೇ ಜಾರಿಯಲ್ಲಿದೆ.

ಜಿಯೋ 'ಫೈಬರ್ ಟು ದ ಹೋಮ್' ಪ್ಲಾನ್ ಬೇರೆನೇ ಇದೆ:

ಜಿಯೋ 'ಫೈಬರ್ ಟು ದ ಹೋಮ್' ಪ್ಲಾನ್ ಬೇರೆನೇ ಇದೆ:

ಜಿಯೋ 'ಫೈಬರ್ ಟು ದ ಹೋಮ್' ಮೂಲಕ ನಿಮ್ಮ ಮನೆಯನ್ನು ಸ್ಮಾರ್ಟ್ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಜಿಯೋ 'ಫೈಬರ್ ಟು ದ ಹೋಮ್' ನಲ್ಲಿ ಜಿಯೋ ಮಿಡಿಯಾ ಕಿಟ್ ದೊರೆಯಲಿದೆ. ಇದರಲ್ಲಿ ಶೆರ್ ಡಿವೈಸ್, ಸ್ಮಾರ್ಟ್ ಸೆಟಪ್ ಬಾಕ್ಸ್, ರೌಟರ್, ಪವರ್ ಲೈನ್ ಡಿಸೈಸ್ ಜೊತೆಗೆ ಲಾಂಡ್ ಲೈನ್ ಸಂಪರ್ಕ ದೊರೆಯಲಿದೆ.

ನಿಮ್ಮ ಮನೆಯಾಗಲಿದೆ ಸ್ಮಾರ್ಟ್‌:

ನಿಮ್ಮ ಮನೆಯಾಗಲಿದೆ ಸ್ಮಾರ್ಟ್‌:

ಫೈಬರ್ ಟು ದ ಹೋಮ್ ಸೇವೆಯಲ್ಲಿ ಜಿಯೋ ನಿಮ್ಮ ಸಾಮಾನ್ಯ ಮನೆಯನ್ನು ಸ್ಮಾರ್ಟ್ ಮಾಡಲಿದೆ. ಫೈಬರ್ ಟು ದ ಹೋಮ್' ನಲ್ಲಿ ಹೋಮ್ ಆಟೋಮೆಷನ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ಪ್ಲಗ್ಸ್, ಹೋ ಸರ್ವಲೆನ್ಸ್, ಸ್ಮಾರ್ಟ್ ಕ್ಯಾಮೆರಾ, ಸ್ಮಾರ್ಟ್ ಡೋರ್ ಬೆಲ್, ಸ್ಮಾರ್ಟ್ ಲಾಕ್ ಜೊತೆಗೆ ಕ್ರೈಮ್ ಆಲರ್ಮ್ ಗಳನ್ನು ಆಕ್ಟಿವ್ ಮಾಡಿಕೊಳ್ಳಬಹುದಾಗಿದ್ದು, ಅದನ್ನು ನಿಮ್ಮ ಫೋನಿನಿಂದ ನಿಯಂತ್ರಿಸಬಹುದು. ಇದಕ್ಕೆಲ ಇಂಟರ್ನೆಟ್ ಸೇವೆಯನ್ನು ಜಿಯೋ ನೀಡಲಿದೆ.

 ಇದಲ್ಲದೇ HD TV ಸೇವೆ:

ಇದಲ್ಲದೇ HD TV ಸೇವೆ:

ಜಿಯೋ ಫೈಬರ್ ಟು ದ ಹೋಮ್' ನಲ್ಲಿ ಸ್ಮಾರ್ಟ್ ಸೆಟಪ್ ಬಾಕ್ಸ್ ದೊರೆಯಲಿದ್ದು, ಇದೊಂದಿಗೆ HD TV ಸೇವೆಯೂ ದೊರೆಯಲಿದೆ. ಬ್ರಾಡ್ ಬ್ಯಾಂಡ್ ಮೂಲಕವೇ ಟಿವಿಯನ್ನು ನೋಡಬಹುದಾಗಿದೆ. ಇದಲ್ಲದೇ ವಿಡಿಯೋ ಆನ್ ಡಿಮಾಂಡ್ ಸೇವೆಯೂ ದೊರೆಯಲಿದೆ. ಜೊತೆಗೆ ಮನೆಗೆ ಲಾಂಡ್ ಲೈಸ್ ಸಂಪರ್ಕ ಸಹ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
FTTH services will be bundled with JioMedia share device, smart set top box, routers, and Power Line Communication (PLC) devices, which will allow Jio to offer HD TV services. to know more visit kannada,gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot