Subscribe to Gizbot

ಮೈಕ್ರೋಮ್ಯಾಕ್ಸ್ ಯುನೈಟ್ 3 ಫೋನ್ ರೂ 6,569 ಕ್ಕೆ

Written By:

ಕಂಪೆನಿಯ ಸೈಟ್‌ನಲ್ಲಿ ಪಟ್ಟಿಯಾಗಿರುವ ಯುನೈಟ್ 3 ಸ್ಮಾರ್ಟ್‌ಫೋನ್ ಅನ್ನು ಮೈಕ್ರೋಮ್ಯಾಕ್ಸ್ ಲಾಂಚ್ ಮಾಡಲಿದ್ದು, ಆನ್‌ಲೈನ್ ರೀಟೈಲರ್ ತಾಣದಲ್ಲಿ ಫೋನ್ ರೂ 6,569 ಕ್ಕೆ ಲಭ್ಯವಾಗುತ್ತಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 3 ಫೋನ್ ರೂ 6,569 ಕ್ಕೆ

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

ಮೈಕ್ರೋಮ್ಯಾಕ್ಸ್ ಯುನೈಟ್ 3 ವೋಡಾಫೋನ್ ಆಫರ್ ಮಾಡುತ್ತಿರುವ 500 ಎಮ್‌ಬಿ ವರೆಗೆ ಉಚಿತ ಡೇಟಾವನ್ನು ಎರಡು ತಿಂಗಳಿಗೆ ಒದಗಿಸುತ್ತಿದೆ. ಮೈಕ್ರೋಮ್ಯಾಕ್ಸ್ ಯುನೈಟ್ ಮತ್ತು ಮೈಕ್ರೋಮ್ಯಾಕ್ಸ್ ಯುನೈಟ್ 2 ಶ್ರೇಣಿಯಲ್ಲಿ ಬರುವ ಮೂರನೇ ಫೋನ್ ಇದಾಗಿದೆ.

ಓದಿರಿ: ಏನು ಶ್ಯೋಮಿ ಎಮ್ಐ4i ನಲ್ಲಿ ಬ್ಯಾಟರಿ ಸಮಸ್ಯೆಯೇ?

ಇನ್ನು ಯುನೈಟ್ 3 ಬಹು ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು 10 ಸ್ಥಳೀಯ ಭಾಷೆಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಇಂಗ್ಲೀಷ್‌ನಿಂದ ನೀವು ಬಯಸುವ ಭಾಷೆಗೆ ಅನುವಾದವನ್ನು ಮಾಡುವ ಹೊಸ ಫೀಚರ್ ಅನ್ನು ಕೂಡ ಡಿವೈಸ್ ಒಳಗೊಳ್ಳಲಿದೆ. ಇನ್ನು ಫೋನ್ ವೈಶಿಷ್ಟ್ಯತೆಗಳತ್ತ ಗಮನಿಸುವುದಾದರೆ ಇದು ಡ್ಯುಯಲ್ ಸಿಮ್‌ನೊಂದಿಗೆ ಬಂದಿದ್ದು, ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ರನ್ ಮಾಡುತ್ತಿದೆ.

ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

ಫೋನ್ 4.7 ಇಂಚಿನ WVGA ಐಪಿಎಸ್ ಡಿಸ್‌ಪ್ಲೇ ಇದರಲ್ಲಿದೆ. ಫೋನ್ 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ (MTK6582M) ಪ್ರೊಸೆಸರ್ ಜೊತೆಗೆ 1 ಜಿಬಿ RAM ಅನ್ನು ಒಳಗೊಂಡಿದ್ದು 8 ಜಿಬಿ ಆಂತರಿಕ ಸ್ಟೋರೇಜ್ ಅನ್ನು ಡಿವೈಸ್ ಹೊಂದಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ. ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. ಫೋನ್‌ನ ಸಂಪರ್ಕ ಅಂಶಗಳೆಂದರೆ 3ಜಿ, GPRS/ EDGE, ವೈ-ಫೈ 802.11 b/g/n, ಮೈಕ್ರೊ-ಯುಎಸ್‌ಬಿ, ಬ್ಲ್ಯೂಟೂತ್ ಆಯ್ಕೆಗಳಿವೆ. ಫೋನ್ ಬ್ಯಾಟರಿ 2000mAh ಆಗಿದೆ.

English summary
Micromax appears set to launch the Unite 3 smartphone, which is now listed on the company's site and also available via a third-party online retailer at Rs. 6,569.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot