Subscribe to Gizbot

ಮೈಕ್ರೋಮ್ಯಾಕ್ಸ್‌ನ ಯುಫೋರಿಯಾ ರೂ 6,999 ಕ್ಕೆ

Written By:

ಮೈಕ್ರೋಮ್ಯಾಕ್ಸ್‌ನ ಅಂಗ ಸಂಸ್ಥೆ ವೈಯು ತನ್ನ ಎರಡನೇ ಸಿನೋಜಿನ್ ಓಎಸ್ ಪವರ್ ಉಳ್ಳ ಸ್ಮಾರ್ಟ್‌ಫೋನ್ ಆದ ಯುಫೋರಿಯಾವನ್ನು ರೂ 6,999 ಕ್ಕೆ ಲಾಂಚ್ ಮಾಡಿದೆ. ಮೆಟಲ್ ಫ್ರೇಮ್ ಅನ್ನು ಹೊಂದಿರುವ ಈ ಡಿವೈಸ್ ಸ್ಟೀಲ್ ಮತ್ತು ಚಿನ್ನದ ಬಣ್ಣದಲ್ಲಿ ದೊರೆಯುತ್ತಿದ್ದು ಅಮೆಜಾನ್.ಇನ್‌ನಲ್ಲಿ ಲಭ್ಯವಾಗಲಿದೆ.

ಮೈಕ್ರೋಮ್ಯಾಕ್ಸ್‌ನ ಯುಫೋರಿಯಾ ರೂ 6,999 ಕ್ಕೆ

ಓದಿರಿ: ಅಬ್ಬರದ ಅಲೆಗಳನ್ನೆಬ್ಬಿಸಲಿರುವ ಗ್ಯಾಲಕ್ಸಿ ನೋಟ್ 5 ವಿಶೇಷತೆ ಏನು?

ಇದು 5 ಇಂಚಿನ ಎಚ್‌ಡಿ ಪೂರ್ಣ ಲ್ಯಾಮಿನೇಶನ್ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿವೈಸ್‌ನಲ್ಲಿದೆ. 64 ಬಿಟ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಚಿಪ್, ಅಡ್ರೆನೊ 306 GPU ಮತ್ತು 2 ಜಿಬಿ RAM ಅನ್ನು ಪಡೆದುಕೊಂಡಿದೆ.

ಮೈಕ್ರೋಮ್ಯಾಕ್ಸ್‌ನ ಯುಫೋರಿಯಾ ರೂ 6,999 ಕ್ಕೆ

ಓದಿರಿ: ರೂ 30,000 ದ ಒಳಗಿನ ಅತ್ಯದ್ಭುತ ಫೋನ್‌ಗಳು

ಫೋನ್ 16 ಜಿಬಿ ಆಂತರಿಕ ಮೆಮೊರಿಯನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು. ಇದು ಸಿನೋಜಿನ್ ಓಎಸ್ 12 ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 5.0 ಲಾಲಿಪಪ್ ಡಿವೈಸ್‌ನಲ್ಲಿದೆ. ತನ್ನ ಕಸ್ಟಮೈಸೇಬಿಲಿಟಿ, ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಫೀಚರ್‌ಗಳಿಗೆ ಈ ಓಎಸ್ ಪ್ರಸಿದ್ಧವಾಗಿದೆ.

ಮೈಕ್ರೋಮ್ಯಾಕ್ಸ್‌ನ ಯುಫೋರಿಯಾ ರೂ 6,999 ಕ್ಕೆ

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ಇನ್ನು ಫೋನ್ ರಿಯರ್ ಕ್ಯಾಮೆರ 8 ಎಮ್‌ಪಿಯಾಗಿದ್ದು, ಎಲ್‌ಇಡಿ ಫ್ಲ್ಯಾಶ್ ಅನ್ನು ಇದು ಪಡೆದುಕೊಂಡಿದೆ. ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದ್ದು 86 ಡಿಗ್ರಿ ವೈಡ್ ಏಂಗಲ್ ಲೆನ್ಸ್ ಅನ್ನು ಡಿವೈಸ್ ಹೊಂದಿದೆ. ಇನ್ನು ಡಿವೈಸ್ 3ಜಿ, 4ಜಿ, ಬ್ಲ್ಯೂಟೂತ್‌ಗೆ ಸಂಪರ್ಕವನ್ನು ಪಡೆದುಕೊಂಡಿದ್ದು 160 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ಫೋನ್ ಒದಗಿಸುತ್ತದೆ.

English summary
Micromax YU Yuphoria launched at Rs 6,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot