Subscribe to Gizbot

ಮೈಕ್ರೋಸಾಫ್ಟ್‌ನಿಂದ ಹೊಸ ಸಿಮ್‌ಕಾರ್ಡ್‌

Written By:

ಹೊಸ ಟೆಕ್ನಾಲಜಿಗಳು ಎಂದಿಗೂ ಸಂತೋಷವನ್ನು ತರುವಲ್ಲಿ ಅನುತ್ತೀರ್ಣವಾಗುವುದಿಲ್ಲ. ಹಾಗೆ ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸ ಅದ್ಭುತವನ್ನು ಪ್ರದರ್ಶಿಸಿ ಟೆಕ್‌ ಕ್ಷೇತ್ರದಲ್ಲಿ ತಮ್ಮ ಘನತೆ ಕಾಪಾಡಿಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿ ಅಮೇರಿಕ ಟೆಕ್‌ ಸಂಸ್ಥೆ ಮೈಕ್ರೋಸಾಫ್ಟ್‌ ಎಲ್ಲರಿಗೂ ಒಂದು ಆಶ್ಚರ್ಯವನ್ನು ನೀಡುತ್ತಿದೆ.

ಮೈಕ್ರೋಸಾಫ್ಟ್ ಹೊಸ ಸಂಶೋಧನೆ ಹೋಲೋಗ್ರಾಮ್ 

ಮೈಕ್ರೋಸಾಫ್ಟ್‌ನಿಂದ ಹೊಸ ಸಿಮ್‌ಕಾರ್ಡ್‌

ಮೈಕ್ರೋಸಾಫ್ಟ್‌, ದೀರ್ಘಕಾಲದವರೆಗೆ ತನ್ನ ಬೆಳವಣಿಗೆಯಲ್ಲಿ ಅತ್ಯುನ್ನತ ವೈರ್‌ಲೆಸ್‌ ಸಂವಹನದ ಅತಿ ವೇಗದ ಡಾಟಾವನ್ನು ಮೊಬೈಲ್‌ಗಳಿಗೆ ನೀಡುವ ತನ್ನ ಹೊಸ ಸಿಮ್‌ ಕಾರ್ಡ್‌ ಅನ್ನು ಲಾಂಚ್‌ ಮಾಡಲಿದೆ. ಉಚಿತ ಅಪ್ಲಿಕೇಶನ್‌ "ಸೆಲ್ಯೂಲಾರ್‌ ಡಾಟಾ" ಎಂಬ ಅಪ್ಲಿಕೇಶನ್‌ ಅನ್ನು ತನ್ನ ವಿಂಡೋಸ್‌ ಸ್ಟೋರ್‌ನಲ್ಲಿ ಪ್ರಕಟಿಸಿದೆ. ಮುಂದೆ ಯಾವ ರೀತಿಯಲ್ಲಿ ಆಫರ್‌ ನೀಡಲಿದೆ ಎಂಬುದರ ಬಗ್ಗೆಯೂ ಸಹ ಮಾಹಿತಿಯನ್ನು ಸ್ಟೋರ್‌ನಲ್ಲಿ ನೀಡಿದೆ.

ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ? 

ಮೈಕ್ರೋಸಾಫ್ಟ್‌ನಿಂದ ಹೊಸ ಸಿಮ್‌ಕಾರ್ಡ್‌

ವರ್ಜ್‌ (Verge) ಟೆಕ್‌ ಸಂಸ್ಥೆ ಪ್ರಕಾರ "ಸೆಲ್ಯೂಲಾರ್ ಡಾಟಾ" ಅಪ್ಲಿಕೇಶನ್‌ ವಿಂಡೋಸ್‌ 10 ಡಿವೈಸ್‌ಗಳಲ್ಲಿ ಇತರ ಮೊಬೈಲ್‌ ನೆಟ್‌ವರ್ಕ್‌ಗಳಿಗೆ ಸಂಪರ್ಕ್‌ ಕಲ್ಪಿಸುತ್ತದೆಯೇ ಎಂಬುದನ್ನು ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಇದುವರೆಗೆ ಮೈಕ್ರೋಸಾಫ್ಟ್‌ ಕಂಪನಿಯು 'ಸಿಮ್‌ ಕಾರ್ಡ್‌' ಬೆಲೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ವಿಂಡೋಸ್‌ ಸ್ಟೋರ್‌ ಮೂಲಕ 'ಸೆಲ್ಯೂಲಾರ್‌ ಡಾಟಾ' ಮಾರಾಟ ಮಾಡಲು ಯೋಜನೆ ರೂಪಿಸಿದೆ.

ಓದಿರಿ:
40 ರ ಹರೆಯಕ್ಕೆ ಕಾಲಿಟ್ಟ ಹಳೆ ಹುಲಿ ಮೈಕ್ರೋಸಾಫ್ಟ್ ಕರಾಮತ್ತೇನು?
ಅಮೇರಿಕದ ಮೈಕ್ರೋಸಾಫ್ಟ್‌ ಆಫೀಸ್‌ನ್ನು ನೋಡೋಣ ಬನ್ನಿ

English summary
Microsoft Planning to Launch Its Own SIM Card. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot