ನೋಕಿಯಾ ಅಭಿಮಾನಿಗಳ ಕಣ್ಮಣಿ ಹೊಸ ಅವತಾರದಲ್ಲಿ

By Shwetha
|

ನೋಕಿಯಾ ಅಭಿಮಾನಿಗಳು ಹೆಚ್ಚು ಕಾತರದಿಂದ ನಿರೀಕ್ಷಿಸುತ್ತಿದ್ದ ಸುದ್ದಿ ಇದೋ ಇಲ್ಲಿದೆ! ಮೈಕ್ರೋಸಾಫ್ಟ್ ಕಂಪೆನಿಯ ಮುಂದೆ ಮಂಡಿಯೂರಿ ಆ ಸಂಸ್ಥೆಯ ಅಡಿಯಾಳಾಗಿರುವ ನೋಕಿಯಾ ಮತ್ತೊಮ್ಮೆ ಮೈಕೊಡವಿ 2016 ಕ್ಕೆ ನಿಮ್ಮೆದುರು ಬಂದು ನಿಲ್ಲಲಿದೆ. ಹೌದು ನೋಕಿಯಾ ಹಿಂತಿರುಗಿ ಬರಲಿದೆ! ಕಂಪೆನಿಯ ಅತ್ಯುನ್ನತ ಡಿವೈಸ್ ಆಗಿ ಬಳಕೆದಾರರ ಕಣ್ಮಣಿ ಎಂದೆನಿಸಿದ್ದ ನೋಕಿಯಾ ಮತ್ತೊಮ್ಮೆ ತಮ್ಮ ಬಳಕೆದಾರರನ್ನು ಸಮೀಪಿಸುತ್ತಿದೆ.

ಓದಿರಿ: ದುಬಾರಿ ಫೋನ್ ಬಳಕೆದಾರರಿಗೆ ಅಪಾಯ ಕಟ್ಟಿಟ್ಟಬುತ್ತಿ ನಿಜವೇ?

ನೋಕಿಯಾ ಅಭಿಮಾನಿಗಳ ಕಣ್ಮಣಿ ಹೊಸ ಅವತಾರದಲ್ಲಿ

ಮೈಕ್ರೋಸಾಫ್ಟ್ ನೋಕಿಯಾವನ್ನು ಖರೀದಿಸಿದ ಸಂದರ್ಭದಲ್ಲಿ ನೋಕಿಯಾ ಅಭಿಮಾನಿಗಳಿಗೆ ಇದು ಆಘಾತವನ್ನೇ ಉಂಟುಮಾಡಿತ್ತು. $7 ಬಿಲಿಯನ್ ಡಾಲರ್‌ಗೆ ನೋಕಿಯಾ ಡಿವೈಸ್‌ಗಳು ಮತ್ತು ಸೇವೆಗಳ ಖರೀದಿಯನ್ನು ಮೈಕ್ರೋಸಾಫ್ಟ್ ಮಾಡಿತ್ತು. ಆದರೂ ನೋಕಿಯಾ ತನ್ನನ್ನು ಸಂಪೂರ್ಣವಾಗಿ ಮೈಕ್ರೋಸಾಫ್ಟ್‌ಗೆ ಒಪ್ಪಿಸಿಲ್ಲ ಎಂಬುದು ನಿಜವಾಗಿದೆ.

ಓದಿರಿ: ಈ ಅಪ್ಲಿಕೇಶನ್‌ಗಳು ಫೋನ್‌ನಲ್ಲಿಲ್ಲ ಎಂದರೆ ನೀವು ದುರಾದೃಷ್ಟವಂತರು

ನೋಕಿಯಾ ಅಭಿಮಾನಿಗಳ ಕಣ್ಮಣಿ ಹೊಸ ಅವತಾರದಲ್ಲಿ

ಆಂಡ್ರಾಯ್ಡ್ ಟ್ಯಾಬ್ಲೆಟ್ ಆದ ನೋಕಿಯಾ ಎನ್1 ಅನ್ನು ಲಾಂಚ್ ಮಾಡುವ ಮೂಲಕ ನೋಕಿಯಾ ಮತ್ತೊಮ್ಮೆ ಬಳಕೆದಾರರ ಮನದಲ್ಲಿ ಆಸೆಯನ್ನು ಚಿಗುರಿಸಿದೆ. ಫೋಕ್ಸನ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿ ಈ ಟ್ಯಾಬ್ಲೆಟ್ ಲಾಂಚ್ ಅನ್ನು ಕಂಪೆನಿ ಮಾಡಿದೆ. ಇದು ಪ್ರಪಂಚಕ್ಕೆ ನೋಕಿಯಾದ ಮರುಜನ್ಮದ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದೆ.

ಓದಿರಿ: ನೋಕಿಯಾ ಕಂಪೆನಿ ಕುರಿತ ಟಾಪ್ 10 ವಿಶೇಷತೆಗಳು

ನೋಕಿಯಾ ಅಭಿಮಾನಿಗಳ ಕಣ್ಮಣಿ ಹೊಸ ಅವತಾರದಲ್ಲಿ

ಇನ್ನು 2016 ಕ್ಕೆ ಹೊಸದಾಗಿ ಕಂಗೊಳಿಸುತ್ತಿರುವ ನೋಟದಲ್ಲಿ ನೋಕಿಯಾ ಬಳಕೆದಾರರ ಮನೆ ಮನಕೆ ಆಗಮಿಸಲಿದೆ. ನೋಕಿಯಾದ ಮಾಜಿ ಸಿಇಒ ಸ್ಟೀಫನ್ ಇಲೋಪ್ ನೋಕಿಯಾವನ್ನು ತೆರೆಗೆ ತರುವ ಸರ್ವಪ್ರಯತ್ನಕ್ಕೆ ಅಡಿಪಾಯ ಹಾಕಿದ್ದಾರೆ. ಅಂತೂ ಅಭಿಮಾನಿಗಳ ಕಾತರತೆಯನ್ನು ಮನ್ನಿಸಿ ನೋಕಿಯಾ ಹಿಂತಿರುಗುತ್ತಿದೆ.

Best Mobiles in India

English summary
A much awaited news is here! After a roller coaster ride in mobile industry and finally bending their knees against Microsoft, Nokia is coming back to smartphone industry in 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X