Subscribe to Gizbot

ರಿಲಾಯನ್ಸ್ ಜಿಯೋ ಮಾತ್ರವಲ್ಲ, ಏರ್‌ಟೆಲ್‌ ಸಹ 10GB 4G ಡಾಟಾ ಉಚಿತವಾಗಿ ನೀಡುತ್ತಿದೆ

Written By:

ದೇಶದ ಟೆಲಿಕಾಂ ಸಿಗ್ಮೆಂಟ್‌ನಲ್ಲಿ ರಿಲಾಯನ್ಸ್ ಜಿಯೋ ಹೊಸ ಅಲೆ ಎಬ್ಬಿಸಿದೆ. ಡಿಸೆಂಬರ್‌ 31, 2016 ಅಂತ್ಯದ ವರೆಗೆ ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಜೊತೆಗೆ ಉಚಿತ ಕರೆ ಸೇವೆ ಆಫರ್‌ ನೀಡಿದೆ. ಅದರ ಜೊತೆಗೆ ಈಗ ಇನ್ನೊಂದು ಹೊಸ ಸುದ್ದಿ ಎಂದರೆ ಲೈಫ್‌(LYF) ಬ್ರ್ಯಾಂಡ್ ಫೋನ್ ಖರೀದಿಸುವವರು 1 ವರ್ಷ ರಿಲಾಯನ್ಸ್ ಜಿಯೋ 4 ಸಿಮ್‌ನ ವೆಲ್ಕಮ್‌ ಆಫರ್‌ ಅನ್ನು ಪಡೆಯಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

ಹೊಸ ಆಫರ್‌ ನೋಡಿ ಇತರೆ ಟೆಲಿಕಾಂಗಳು ಸುಮ್ನೆ ಇರುತ್ತವಾ? ಖಂಡಿತಾ ಇಲ್ಲ. ಅದಕ್ಕೆ ಸಾಕ್ಷಿಯಾಗಿ ಈಗಾಗಲೇ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹೊಸ ಆಫರ್ ಅನ್ನು ಪ್ರಕಟಗೊಳಿಸಿದೆ. ರಿಲಾಯನ್ಸ್ ಜಿಯೋ ಗ್ರಾಹಕರು ಮಾತ್ರವಲ್ಲದೇ ಏರ್‌ಟೆಲ್‌, ವೊಡಾಫೋನ್, ಬಿಎಸ್‌ಎನ್‌ಎಲ್‌ ಮತ್ತು ಇತರೆ ಟೆಲಿಕಾಂಗಳು ಚೀಪ್‌ ರೇಟ್‌ನಲ್ಲಿ ಟ್ಯಾರಿಫ್‌ ಪ್ಲಾನ್ ಅನ್ನು ನೀಡುವಲ್ಲಿ ಸಂಶಯವಿಲ್ಲ.

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಏರ್‌ಟೆಲ್‌(Airtel) ತನ್ನ 4G ಸಬ್‌ಸ್ಕ್ರೈಬರ್‌ಗಳಿಗೆ ಪರಿಚಯಿಸಿರುವ ಹೊಸ ಉಚಿತ ಡಾಟಾ ಪ್ಲಾನ್‌ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಏರ್‌ಟೆಲ್‌, ರಿಲಾಯನ್ಸ್ ಜಿಯೋಗಿಂತ ಹಿಂದೆ ಉಳಿಯಲು ಬಯಸುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಪ್ಲಾನ್‌ ಪಡೆಯುವುದು ಹೇಗೆ ಎಂದು ಮುಂದೆ ಓದಿರಿ.

ಏರ್‌ಟೆಲ್‌ ಪ್ರೀಪೇಡ್ ಬಳಕೆದಾರರು 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏರ್‌ಟೆಲ್‌ನಿಂದ 10GB 4G ಡಾಟಾ ಉಚಿತವಾಗಿ ಪಡೆಯಿರಿ

ಏರ್‌ಟೆಲ್‌ನಿಂದ 10GB 4G ಡಾಟಾ ಉಚಿತವಾಗಿ ಪಡೆಯಿರಿ

ಅಂದಹಾಗೆ ಏರ್‌ಟೆಲ್‌ ಸೆಲೆಕ್ಟ್ ಮಾಡಿದ ಗ್ರಾಹಕರು 10GB 4G ಡಾಟಾ ಉಚಿತವಾಗಿ ಪಡೆಯುವ ಮೆಸೇಜ್‌ ಅನ್ನು ಪಡೆಯುತ್ತಾರೆ. ಮೆಸೇಜ್‌ ಪಡೆದ ಗ್ರಾಹಕರು 10GB 4G ಡಾಟಾವನ್ನು ಯಾವುದೇ ರೀಚಾರ್ಜ್ ಮಾಡಿಸದೇ ಪಡೆಯುತ್ತಾರೆ. ಅಂದಹಾಗೆ ಈ ಪ್ಲಾನ್ ಜನವರಿ 1, 2017 ರಿಂದ ಲಭ್ಯವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಜಿಯೋ ಲಾಂಚ್‌ ಲೈನ್‌ನೊಂದಿಗೆ

ರಿಲಾಯನ್ಸ್ ಜಿಯೋ ಲಾಂಚ್‌ ಲೈನ್‌ನೊಂದಿಗೆ

ಅಂದಹಾಗೆ ಏರ್‌ಟೆಲ್‌ ಗ್ರಾಹಕರಿಗೆ ಬರುವ ಎಸ್‌ಎಂಎಸ್‌ನಲ್ಲಿ ಈ ಆಫರ್‌ ಅನ್ನು ಬಳಕೆದಾರರು ಜನವರಿ 1, 2017 ರಿಂದ ರಿಲಾಯನ್ಸ್ ಜಿಯೋ ಕಮರ್ಷಿಯಲ್‌ ಲೈನ್ ಲಾಂಚ್‌ ನಂತರ ಪಡೆಯಬಹುದು ಎಂದು ಇತರುತ್ತದೆ. ('users can take advantage of the free 10 GB 4G plan from January 1, 2017').

 ಉಚಿತ ಡಾಟಾ ಹಗಲು ಮತ್ತು ರಾತ್ರಿಗೆ ವಿಭಾಗಿಸಲಾಗಿದೆ

ಉಚಿತ ಡಾಟಾ ಹಗಲು ಮತ್ತು ರಾತ್ರಿಗೆ ವಿಭಾಗಿಸಲಾಗಿದೆ

ಏರ್‌ಟೆಲ್‌ ನೀಡುವ 10GB 4G ಡಾಟಾವು, 5GB ಡಾಟಾ ಹಗಲು ವೇಳೆಗೆ ಮತ್ತು 5GB ಡಾಟಾ ರಾತ್ರಿ ವೇಳೆಗೆ ಎಂದು ವಿಭಾಗಿಸಲಾಗಿದೆ. ಅಂದಹಾಗೆ ರಾತ್ರಿ ಡಾಟಾವನ್ನು 12AM ನಿಂದ 6AM ವರೆಗೆ ಬಳಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್‌ನಿಂದ ಇತರೆ ಟೆಲಿಕಾಂಗೆ ಪೋರ್ಟ್‌ ಆಗುವವರಿಗೆ ಆಫರ್

ಏರ್‌ಟೆಲ್‌ನಿಂದ ಇತರೆ ಟೆಲಿಕಾಂಗೆ ಪೋರ್ಟ್‌ ಆಗುವವರಿಗೆ ಆಫರ್

ಏರ್‌ಟೆಲ್‌ ಗ್ರಾಹಕರು ಗಮನಿಸಬೇಕಾದ ಅಂಶವೆಂದರೆ, 10GB 4G ಉಚಿತ ಡಾಟಾ ಆಫರ್ ಏರ್‌ಟೆಲ್‌ ಆಯ್ಕೆ ಮಾಡಿದ ಕೆಲವು 4G ಗ್ರಾಹಕರಿಗೆ ಮಾತ್ರವಾಗಿದ್ದು, ಯಾರು ಏರ್‌ಟೆಲ್‌ನಿಂದ ಇತರೆ ಟೆಲಿಕಾಂಗೆ ಪೋರ್ಟ್‌ ಆಗಲು ಬಯಸುತ್ತಾರೋ ಅವರಿಗೆ ಮಾತ್ರ ಈ ಆಫರ್.

ಹೊಸ ಫೋನ್‌ ಖರೀದಿದಾರರು ರೂ.259 ಕ್ಕೆ 10GB ಡಾಟಾ ಪಡೆಯಿರಿ

ಹೊಸ ಫೋನ್‌ ಖರೀದಿದಾರರು ರೂ.259 ಕ್ಕೆ 10GB ಡಾಟಾ ಪಡೆಯಿರಿ

ವಿವಿಧ ಆಫರ್‌ಗಳ ಮೂಲಕ ಏರ್‌ಟೆಲ್‌ 10GB 4G ಡಾಟಾವನ್ನು ನೀಡುತ್ತಿದ್ದು, ಬಳಕೆದಾರರು ಹೊಸ 4G ಸ್ಮಾರ್ಟ್‌ಫೋನ್ ಖರೀದಿಸಿದಲ್ಲಿ 1GB 4G ಡಾಟಾ ಬೆಲೆ ರೂ.259 ಕ್ಕೆ 10GB ಡಾಟಾ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Reliance Jio Threat: Airtel Offers 10GB 4G Data for FREE! To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot