ಲೀಕೊ ಸೂಪರ್3 ಟಿವಿಗಳ ಮೇಲೆ ಅತ್ಯದ್ಭುತ ಆಫರ್

By Shwetha
|

ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಗಳಿಸಿಕೊಂಡಿರುವ ಲೀಕೊ ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಹಬ್ಬದ ಈ ಸುಸಂದರ್ಭದಲ್ಲಿ ಲೀಕೊ ತನ್ನ ಸೂಪರ್ 3 ಟಿವಿ ಸಿರೀಸ್‌ಗಳ ಮೇಲೆ ಆಫರ್‌ಗಳನ್ನು ಪ್ರಸ್ತುತಪಡಿಸಿದ್ದು ಇದು ಲೀಮಾಲ್.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಆಫರ್ ಲಭ್ಯವಿರುವ ಉತ್ಪನ್ನಗಳ ವಿವರಗಳನ್ನು ಇಲ್ಲಿ ನೀಡಿದ್ದೇವೆ.

ಸೂಪರ್3x55

ಸೂಪರ್3x55

ಸೂಪರ್ 3x55 ಅನ್ನು ಲೀಮಾಲ್.ಕಾಮ್‌ನಲ್ಲಿ ಖರೀದಿ ಮಾಡಿದಾಗ ಬಳಕೆದಾರರಿಗೆ ರೂ 4,000 ಕ್ಯಾಶ್‌ಬ್ಯಾಕ್ ದೊರೆಯಲಿದ್ದು ಐಸಿಐಸಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಈ ಆಫರ್ ನಿಮ್ಮದಾಗಿಸಿಕೊಳ್ಳಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರು 12 ತಿಂಗಳು ಶೂನ್ಯ ಇಎಮ್ಐ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಫ್ಲಿಪ್‌ಕಾರ್ಟ್ ಬಳಕೆದಾರರು ರೂ 4,000 ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದ್ದು (ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬಹುದಾಗಿದೆ) 6 ತಿಂಗಳ ಸೊನ್ನೆ ದರದ ಇಎಮ್ಐ ಅನ್ನು ಎಲ್ಲಾ ಬ್ಯಾಂಕ್‌ಗಳು ಮತ್ತು ಬಜಾಜ್ ಫಿನ್ ಸರ್ವ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಸೂಪರ್ 3x65 ಮತ್ತು ಮ್ಯಾಕ್ಸ್65

ಸೂಪರ್ 3x65 ಮತ್ತು ಮ್ಯಾಕ್ಸ್65

ಮ್ಯಾಕ್ಸ್65 ಅನ್ನು ಲೀ ಮಾಲ್.ಕಾಮ್‌ನಲ್ಲಿ ಖರೀದಿಸುವ ಬಳಕೆದಾರರು 12 ತಿಂಗಳುಗಳ ಸೊನ್ನೆ ದರದ ಇಎಮ್ಐ ಅನ್ನು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ, ಸೂಪರ್3x65 ಅಥವಾ ಮ್ಯಾಕ್ಸ್65 ಅನ್ನು ಖರೀದಿಸುವಾಗ ರೂ 25,000 ದವರೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಲೀಕೊದ 2 ವರ್ಷದ ಚಂದಾದಾರಿಕೆ

ಲೀಕೊದ 2 ವರ್ಷದ ಚಂದಾದಾರಿಕೆ

ಹೆಚ್ಚುವರಿಯಾಗಿ, ಸೂಪರ್ 3 ಟಿವಿಗಳನ್ನು ಲೀಮಾಲ್.ಕಾಮ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವಾಗ ಲೀಕೊದ 2 ವರ್ಷದ ಚಂದಾದಾರಿಕೆಯನ್ನು ರೂ 9,800 ಕ್ಕೆ ಯಾವುದೇ ದರವಿಲ್ಲದೆ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಈ ಸದಸ್ಯತ್ವದ ಮೂಲಕ ಭಾರತದಲ್ಲಿರುವ ಅತಿ ದೊಡ್ಡ ಎಚ್‌ಡಿ/ಎಚ್‌ಡಿ ಫಿಲ್ಮ್ಸ್ ಲೈಬ್ರರಿಗೆ ಬಳಕೆದಾರರು ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಹಾಲಿವುಡ್, ಬಾಲಿವುಡ್ ಚಲನ ಚಿತ್ರಗಳು ಅಂತೆಯೇ 100 ಕ್ಕಿಂತ ಹೆಚ್ಚಿನ ಸ್ಯಾಟಲೈಟ್ ಚಾನಲ್‌ಗಳು, 3.5 ಮಿಲಿಯನ್ ಸಾಂಗ್ಸ್, ಮತ್ತು 50 ಕ್ಕಿಂತಲೂ ಹೆಚ್ಚಿನ ಲೈವ್ ಕನ್ಸರ್ಟ್‌ಗಳನ್ನು ವೀಕ್ಷಕರು ಪಡೆದುಕೊಳ್ಳಬಹುದಾಗಿದೆ.

ಸೀಮಿತ ಅವಧಿಯಲ್ಲಿ ಲಭ್ಯ

ಸೀಮಿತ ಅವಧಿಯಲ್ಲಿ ಲಭ್ಯ

ಪ್ರಸ್ತುತ ಆಫರ್‌ಗಳು ಮತ್ತು ಡೀಲ್‌ಗಳು ಸೀಮಿತ ಅವಧಿಯಲ್ಲಿ ಲಭ್ಯವಾಗುತ್ತಿದ್ದು ಲೀಮಾಲ್.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಅಕ್ಟೋಬರ್ 2 ರಿಂದ 6 ರವರೆಗೆ ದೊರೆಯಲಿದೆ. ಭಾರತದಲ್ಲಿ ಟಿವಿಗಳನ್ನು ಲಾಂಚ್ ಮಾಡುವ ಹೊಸ ದಾಖಲೆಯನ್ನೇ ಲೀಕೊ ಹೊಂದಿದೆ. ಪ್ರಥಮ ಫ್ಲ್ಯಾಶ್ ಸೇಲ್‌ನಲ್ಲಿ ಸೂಪರ್3 ಟಿವಿ ಸಿರೀಸ್ ಬರೇ 3 ನಿಮಿಷದಲ್ಲಿ 1500 ಕ್ಕಿಂತಲೂ ಹೆಚ್ಚಿನ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಆನ್‌ಲೈನ್ ಪ್ರಿ ಸೇಲ್ ಅವಧಿಯಲ್ಲಿ, ಲೀಕೊ 55 ಇಂಚು ಮತ್ತು ಅದರ ಮೇಲ್ಮಟ್ಟದ ವರ್ಗದಲ್ಲಿ ಒಂದನೇ ಸ್ಥಾನವನ್ನು ಗಳಿಸಿಕೊಂಡಿದೆ.

ದೃಢವಾದ ಮೆಟಲ್ ಬಾಡಿ

ದೃಢವಾದ ಮೆಟಲ್ ಬಾಡಿ

ಲೀಕೊ ಸೂಪರ್3 ಟಿವಿ ದೃಢವಾದ ಮೆಟಲ್ ಬಾಡಿಯನ್ನು ಪಡೆದುಕೊಂಡು ಬಂದಿದ್ದು 4ಕೆ ಅಲ್ಟ್ರಾ ಎಚ್‌ಡಿ ಡಿಸ್‌ಪ್ಲೇ ಅಂತೆಯೇ ಕ್ರಿಸ್ಟಲ್ ಕ್ಲಿಯರ್ ವೀಕ್ಷಣೆಗೆ ಇದು ಅನುವು ಮಾಡಿಕೊಡುತ್ತದೆ. ಲೀಕೊದ ಸೂಪರ್ 3x55 - 139.7 cm (55) ರೂ 59,790 ಕ್ಕೆ ಲಭ್ಯವಿದ್ದು, ಸೂಪರ್ 3x65 - 163.9 cm ಬೆಲೆ ರೂ 99,790 ಆಗಿದೆ ಮತ್ತು ಸೂಪರ್3 ಮ್ಯಾಕ್ಸ್65 - 163.9 cm (65) ರೂ 149,790 ಕ್ಕೆ ಲಭ್ಯವಿದೆ.

Best Mobiles in India

English summary
Here is a snapshot of the offers that will be available to users in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X