Subscribe to Gizbot

ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು

Written By:

ಸಂಶೋಧಕರು ಹೊಸತೊಂದು ಧರಿಸಬಲ್ಲ ಟಚ್ ಪರದೆಯ ಸಾಧನವನ್ನು ಕಂಡುಹಿಡಿದಿದ್ದಾರೆ. ಇದರ ಪರದೆಯನ್ನು ಹಿಗ್ಗಿಸಬಹುದು, ಇದರ ಮೇಲೆ ಬರೆಯಬಹುದು, ಇದರಲ್ಲಿ ಆಟಗಳನ್ನು ಆಡಬಹುದು.

ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು

ತುಂಬಾ ತೆಳುವಾದ, ಬಾಗಬಲ್ಲ, ಪಾರದರ್ಶಕ ಐಯಾನಿಕ್ ಟಚ್ ಪ್ಯಾಡ್ ಅನ್ನು ಕೈಯಿಗೆ ಕಟ್ಟಿಕೊಂಡು ವೀಡಿಯೋ ಗೇಮುಗಳನ್ನು ಆಡಬಹುದು, ಚಿತ್ರ ಬಿಡಿಸಬಹುದು, ಬರೆಯಬಹುದು; ಅಷ್ಟೇ ಅಲ್ಲ ಪಿಯಾನೋ ಕೂಡ ನುಡಿಸಬಹುದು.

ಓದಿರಿ: ವಿಂಡೋಸ್ 8.1 ಮತ್ತು ಆ್ಯಂಡ್ರಾಯ್ಡ್ 4.0.3 ಫೋನುಗಳಲ್ಲಿ ಇನ್ನು ಮುಂದೆ ಸ್ಕೈಪ್ ಇರುವುದಿಲ್ಲ.
ಟಚ್ ಪ್ಯಾಡನ್ನು ಹೈಡ್ರೋಜೆಲ್ ನಿಂದ ತಯಾರಿಸಲಾಗಿದೆ, ತುಂಬಾ ಮೆತ್ತಗಿನ ಹೈಡ್ರೋಫಿಲಿಕ್ ಪಾಲಿಮರ್ ಗಳು ಈ ಹೈಡ್ರೋಜೆಲ್ ನಲ್ಲಿ ಇರುತ್ತವೆ. ಮುಂಚೆ ಟಚ್ ಪ್ಯಾಡುಗಳಲ್ಲಿ ಉಪಯೋಗಿಸಲಾಗಿದ್ದ ಗಟ್ಟಿ ವಸ್ತುಗಳಾದ ಕಾರ್ಬನ್ ನ್ಯಾನೋ ಟ್ಯೂಬ್ಸ್ ಮತ್ತು ಮೆಟಲ್ ನ್ಯಾನೋವೈರುಗಳಿಗೆ ಹೋಲಿಸಿದರೆ ಇದನ್ನು ಸುಲಭವಾಗಿ ಹಿಗ್ಗಿಸಬಹುದು.
ಓದಿರಿ: ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?

ತನ್ನ ಸಾಮಾನ್ಯ ಗಾತ್ರಕ್ಕಿಂತ ಸಾವಿರ ಪಟ್ಟು ಹಿಗ್ಗಿಸಿದರು ಈ ಟಚ್ ಪ್ಯಾಡ್ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿದೆ.
ಹಾಗಾಗ್ಯೂ, ನೂರರ ಬಳಕೆಯ ನಂತರ ರೆಸೆಸ್ಟೆನ್ಸ್ ಸ್ವಲ್ಪ ಹೆಚ್ಚಗಾಗುತ್ತದೆ, ಪ್ರಾಯಶಃ ಜೆಲ್ ನಲ್ಲಿರುವ ನೀರಿನ ಅಂಶ ಆವಿಯಾಗುವ ಕಾರಣದಿಂದ ಎನ್ನುತ್ತಾರೆ ದಕ್ಷಿಣ ಕೊರಿಯಾದ ಸೀಯೋಲ್ ನ್ಯಾಷನಲ್ ವಿಶ್ವವಿದ್ಯಾಲಯದ ಚಾಂಗ್-ಚಾನ್ ಕಿಮ್.

ಓದಿರಿ: ಕ್ಯೊಸೆರಾ ಸ್ಮಾರ್ಟ್‍ಫೋನ್ ದ್ವಿಗುಣಗೊಂಡಿದೆ ಆಕ್ಷನ್ ಕ್ಯಾಮೆರಾವಾಗಿ
ಈ ಹಿಗ್ಗಿಸಬಲ್ಲ ಟಚ್ ಪ್ಯಾಡ್ ನಲ್ಲಿ, ತಂಡವು ಲಿಥಿಯಂ ಕ್ಲೋರೈಡ್ ಸಾಲ್ಟ್ ಇರುವ ಪಾಲಿಆ್ಯಕ್ರಿಲಮೈಡ್ ಹೈಡ್ರೋಜೆಲ್ ಅನ್ನು ಉಪಯೋಗಿಸಿತ್ತು. ಲಿಥಿಯಂ ಕ್ಲೋರೈಡ್ ಸಾಲ್ಟ್ ವಾಹಕವಾಗಿ ಕಾರ್ಯನಿರ್ವಹಿಸುತ್ತ ಹೈಡ್ರೋಜೆಲ್ ನಲ್ಲಿ ನೀರಿನಂಶವನ್ನು ಹಿಡಿದಿಡಲು ಸಹಕಾರಿ.
ಹೈಡ್ರೋಜೆನ್ ಪ್ಯಾನೆಲ್ ನ ತುದಿಗಳಲ್ಲಿರುವ ಎಲೆಕ್ಟ್ರೋಡುಗಳು ಒಂದೇ ರೀತಿಯ ವೋಲ್ಟೇಜುಗಳನ್ನು ಉತ್ಪಾದಿಸುತ್ತದೆ, ಈ ಮೂಲಕ ಸಮಾನ ಎಲೆಕ್ಟ್ರೋಸ್ಟಾಟಿಕ್ ವಾತಾವರಣವನ್ನು ಕಾಪಿಡುತ್ತದೆ.
ಪರದೆಯನ್ನು ಬೆರಳು ಸೋಕಿದಾಗ, ಹೈಡ್ರೋಜೆಲ್ ಜೊತೆಗಿನ ಸರ್ಕ್ಯೂಟ್ ಮುಚ್ಚಿಹೋಗಿ, ಪರದೆಯ ಎರಡೂ ಬದಿಯಿಂದ ವಿದ್ಯುತ್ ಪರದೆ ಸೋಕಿದ ಜಾಗಕ್ಕೆ ಹರಿಯುತ್ತದೆ.

ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು

ಪರದೆಯ ಪ್ರತಿ ಮೂಲೆಯಲ್ಲೂ ಎಲೆಕ್ಟ್ರಿಕ್ ಸಿಗ್ನಲ್ಲುಗಳನ್ನು ಪತ್ತೆ ಹಚ್ಚುವ ಮೀಟರ್ರುಗಳಿವೆ.
ಮಾನವ - ಕಂಪ್ಯೂಟರ್ ಅವಲಂಬನೆ ಹೆಚ್ಚೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವಂತೆಯೇ, ಸ್ಪರ್ಷ ಪರದೆಗಳು ಹಿಗ್ಗಿಸುವಿಕೆಯ ಗುಣವನ್ನು ಪಡೆಯಬೇಕು, ಮನುಷ್ಯ ದೇಹದೊಡನೆ ಸಮನ್ವಯ ಸಾಧಿಸಲು ಜೈವಿಕ ಹೊಂದಾಣಿಕಯ ಗುಣವನ್ನು ಪಡೆಯಬೇಕು ಎನ್ನುತ್ತಾರೆ ಸಂಶೋಧಕರು.

ಟಚ್ ಪ್ಯಾಡ್ ಮತ್ತು ಕಂಪ್ಯೂಟರ್ ನಡುವೆ ಸಂಪರ್ಕ ಸಾಧಿಸಲು ತಂಡವು ಒಂದು ಕಂಟ್ರೋಲರ್ ಬೋರ್ಡನ್ನು ಕೂಡ ಅಭಿವೃದ್ಧಿಪಡಿಸಿದೆ.
ಮೂಲ: ಐ.ಎ.ಎನ್.ಎಸ್

English summary
Researchers have developed a wearable touch screen panel that is highly stretchable and can be used to write words and play electronic games.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot