Subscribe to Gizbot

ಭಾರತದಲ್ಲಿ ಲಭ್ಯವಿರುವ ಹೈ ಸ್ಪೀಡ್ ಇಂಟರ್ನೆಟ್ ವ್ಯವಸ್ಥೆಗಳು

Written By:

ಇತರ ದೇಶಗಳಂತೆಯೇ ಭಾರತದಲ್ಲಿ ಕೂಡ ಹೆಚ್ಚು ವೇಗದ ಇಂಟರ್ನೆಟ್‌ಗೆ ಹೆಚ್ಚಿನ ಬೆಂಬಲವಿಲ್ಲ. ಅದಾಗ್ಯೂ ದೊರೆಯುತ್ತಿರುವ ಇಂಟರ್ನೆಟ್ ಸೌಲಭ್ಯಕ್ಕೆ ಹೆಚ್ಚಿನ ಪೈಪೋಟಿ ಎದುರಾಗುತ್ತಿದೆ. ಹೆಚ್ಚಿನ ದೇಶಗಳು ಹೆಚ್ಚು ವೇಗದ ಇಂಟರ್ನೆಟ್ ಯೋಜನೆಗಳು ಮತ್ತು ಪ್ಯಾಕ್‌ಗಳಿಗಾಗಿ ಮುನ್ನುಗ್ಗುತ್ತಿರುವಾಗ ಭಾರತ ಇದೀಗ ತಾನೇ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಭಾರತದಲ್ಲಿ ಸದ್ಯದಲ್ಲಿ ದೊರೆಯುತ್ತಿರುವ ಹೆಚ್ಚು ವೇಗದ ಇಂಟರ್ನೆಟ್ ಪ್ಯಾಕ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದು ನೀವು ಇದನ್ನು ಅರಿತುಕೊಳ್ಳಬಹುದಾಗಿದೆ.

ಓದಿರಿ: ಬಿಎಸ್‌ಎನ್‌ಎಲ್ ರೂ 20 ರ ಸಿಮ್ ಕಾರ್ಡ್ ವಿಶೇಷತೆ ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕ್ಟ್ ಎಕ್ಸ್ಟ್ರಾವೇಗಂಟ್

ಆಕ್ಟ್ ಎಕ್ಸ್ಟ್ರಾವೇಗಂಟ್

ಆಕ್ಟ್ ಫೈಬರ್ ನೆಟ್, ಬೀಮ್ ಫೈಬರ್ ಎಂಬುದಾಗಿ ಹೆಸರು ಗಳಿಸಿಕೊಂಡಿರುವ ಭಾರತದ ಪ್ರಮುಖ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಮೂಲಕ ಹೆಚ್ಚಿನ ಬಳಕೆದಾರರು ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ದೆಹಲಿ, ಬೆಂಗಳೂರು, ಹೈದ್ರಾಬಾದ್‌ಗಳಲ್ಲಿ ಹೊಸ ಯೋಜನೆಗಳನ್ನು ಆರಂಭಿಸಿದ್ದು ಇದು ನಿಮಗೆ ರೂ 1,999 ಕ್ಕೆ ಲಭ್ಯವಿದೆ ಮತ್ತು 100Mbps ವೇಗವನ್ನು ನೀಡುತ್ತಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್

ಏರ್‌ಟೆಲ್ ಬ್ರಾಡ್‌ಬ್ಯಾಂಡ್

ಟೆಲಿಕಾಮ್ ಪ್ರಮುಖ ಭಾರತಿ ಏರ್‌ಟೆಲ್ ಹೆಚ್ಚು ವೇಗದ ಇಂಟರ್ನೆಟ್ ಅನ್ನು ಒದಗಿಸುವಲ್ಲಿ ಕೇಳಿಬರುತ್ತಿರುವ ಹೆಸರಾಗಿದೆ. 40 ಎಮ್‌ಬಿಪಿಎಸ್ ಗರಿಷ್ಟ ವೇಗವು ರೂ 2,399 ಕ್ಕೆ ಆರಂಭವಾಗುತ್ತಿದೆ. ಪ್ರತಿಯೊಂದು ಯೋಜನೆಗಳೂ ತಮ್ಮದೇ ಆದ ಡೇಟಾ ಕ್ಯಾಪ್‌ನೊಂದಿಗೆ ಬಂದಿದ್ದು ವೇಗವು 1 ಎಮ್‌ಬಿಪಿಎಸ್‌ಗೆ ಸೀಮಿತಗೊಂಡಿದೆ.

ಯು ಬ್ರಾಡ್‌ಬ್ಯಾಂಡ್ ಅನಿಯಮಿತ ಯೋಜನೆ

ಯು ಬ್ರಾಡ್‌ಬ್ಯಾಂಡ್ ಅನಿಯಮಿತ ಯೋಜನೆ

ಹೆಸರು ಕೊಂಚ ಹೊಸದಾಗಿದ್ದರೂ, ದೇಶದಲ್ಲಿ ಇತರ ಸ್ಪರ್ಧಿಗಳಿಗೆ ಸಮನಾಗಿರುವಂತೆಯೇ ಇದು ತನ್ನ ಸೇವೆಯನ್ನು ಒದಗಿಸುತ್ತಿದೆ. ಸ್ಥಳೀಯ ಕಂಪೆನಿ ಒದಗಿಸುತ್ತಿರುವ ವೇಗ 100 ಎಮ್‌ಬಿಪಿಎಸ್ ಆಗಿದ್ದು ಇದರ ಬೆಲೆ ರೂ 1724 ತಿಂಗಳ ಮೌಲ್ಯವಾಗಿದೆ.

ಟಿಕೋನಾ ಬ್ರಾಡ್‌ಬ್ಯಾಂಡ್ ಯೋಜನೆಗಳು

ಟಿಕೋನಾ ಬ್ರಾಡ್‌ಬ್ಯಾಂಡ್ ಯೋಜನೆಗಳು

ಭಾರತಲ್ಲಿ ಇದೀಗ ತಾನೇ ಮೊಳಕೆಯೊಡೆದಿರುವ ಬ್ರಾಂಡ್ ಇದಾಗಿದೆ. ಇದರ ಪ್ಯಾಕೇಜ್ ಹೇಗಿದೆ ಎಂದರೆ 2 ಎಮ್‌ಬಿಪಿಎಸ್‌ನಿಂದ 4 ಎಮ್‌ಬಿಪಿಎಸ್‌ವರೆಗೆ ಇದು ಹೋಗುತ್ತದೆ. ಇವರುಗಳ ಗರಿಷ್ಟ ವೇಗವೆಂದರೆ ರೂ 950 ಕ್ಕೆ 80 ಜಿಬಿಯಾಗಿದೆ.

ಬಿಎಸ್ಎನ್‌ಎಲ್

ಬಿಎಸ್ಎನ್‌ಎಲ್

ಬಿಎಸ್‌ಎನ್‌ಎಲ್ ಕೂಡ ಗ್ರಾಹಕ ಸ್ನೇಹಿ ಕೆಲವೊಂದು ಉತ್ತಮ ಯೋಜನೆಗಳನ್ನು ಪ್ರಸ್ತುತಪಡಿಸಿದೆ. ನೀವು ಬಿಎಸ್‌ಎನ್ಎಲ್‌ನ 100 ಎಮ್‌ಬಿಪಿಎಸ್ ಅನ್ನು ರೂ 16,999 ಕ್ಕೆ ಪಡೆದುಕೊಳ್ಳಬಹುದಾಗಿದೆ.

ರಿಲಾಯನ್ಸ್ ಬ್ರಾಡ್‌ಬ್ಯಾಂಡ್

ರಿಲಾಯನ್ಸ್ ಬ್ರಾಡ್‌ಬ್ಯಾಂಡ್

ರಿಲಾಯನ್ಸ್ ಬ್ರಾಡ್‌ಬ್ಯಾಂಡ್ ಇದಾಗಿದ್ದು ಜಿಯೋ ಗಿಗಾಫೈಬರ್ ಇದಲ್ಲ. ರೂ 999 ಕ್ಕೆ ಪ್ರತೀ ತಿಂಗಳಿಗೆ 12 ಎಮ್‌ಬಿಪಿಎಸ್ ಗರಿಷ್ಟ ವೇಗವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ರಿಲಾಯನ್ಸ್ ಉತ್ತಮ ಒಪ್ಪಂದವನ್ನು ತನ್ನ ಬಳಕೆದಾರರಿಗೆ ಈ ಮೂಲಕ ಒದಗಿಸುತ್ತಿದೆ.

ಎಮ್‌ಟಿಎನ್‌ಎಲ್ ಬ್ರಾಡ್‌ಬ್ಯಾಂಡ್

ಎಮ್‌ಟಿಎನ್‌ಎಲ್ ಬ್ರಾಡ್‌ಬ್ಯಾಂಡ್

100 ಎಮ್‌ಬಿಪಿಎಸ್‌ಗೆ ಎಮ್‌ಟಿಎನ್‌ಎಲ್ ನೀಡುತ್ತಿರುವ ಬೆಲೆ ರೂ 6,999 ಆಗಿದೆ. ಪಟ್ಟಿಯಲ್ಲಿರುವ ಇತರ ಯೋಜನೆಗಳಿಗೆ ಹೋಲಿಸಿದಾಗ ಇದು ಕೊಂಚ ದುಬಾರಿ ಎಂದೆನಿಸಿದೆ.

ಏರ್‌ಲಿಂಕ್ ಡಿಸೈರ್‌ಇಕೊ ಅನ್‌ಲಿಮಿಟೆಡ್ ಪ್ಲಾನ್

ಏರ್‌ಲಿಂಕ್ ಡಿಸೈರ್‌ಇಕೊ ಅನ್‌ಲಿಮಿಟೆಡ್ ಪ್ಲಾನ್

ಇದು ಹೆಚ್ಚು ವೇಗದ ಇಂಟರ್ನೆಟ್ ವ್ಯವಸ್ಥೆಯನ್ನು ಒದಗಿಸುತ್ತಿಲ್ಲ ಆದರೆ ತನ್ನ ಬೆಲೆಯ ಮೂಲಕ ಇದು ಸ್ಥಾನವನ್ನು ಪಡೆದುಕೊಂಡಿದೆ. ವರ್ಷಕ್ಕೆ ರೂ 2,400 ಕ್ಕೆ ನೀವು ಈ ಸೇವೆಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ ಇದು 200 ಕೆಬಿಪಿಎಸ್ ವೇಗದೊಂದಿಗೆ ಬಂದಿದ್ದು, ಮನೆ ಬಳಕೆಗೆ ಉತ್ತಮ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Take a look at the top eight high-speed internet packs available in India right now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot