ಫೇಸ್‌ಬುಕ್‌ನಿಂದ ರಿಯಲ್‌ ಟೈಮ್‌ 'ಇನ್‌ಸ್ಟಾಂಟ್ ವೀಡಿಯೊ' ಫೀಚರ್ ಲಾಂಚ್

By Suneel
|

ಸ್ನಾಪ್‌ಚಾಟ್‌, ಇನ್‌ಸ್ಟಗ್ರಾಂ ಮತ್ತು ಗೂಗಲ್‌ ಡ್ಯುಯೊ ರೀತಿಯಲ್ಲಿ ಫೇಸ್‌ಬುಕ್ ಈಗ ಹೊಸ 'ಇನ್‌ಸ್ಟಾಂಗಟ್‌ ವೀಡಿಯೊ' ಫೀಚರ್‌ ಅನ್ನು ಲಾಂಚ್‌ ಮಾಡಿದೆ.

ಇನ್‌ಸ್ಟಾಂಟ್‌ ವೀಡಿಯೊ ಲಾಂಚ್‌ ಮಾಡಿದ್ದು ಮೊದಲಿಗೆ ಫೇಸ್‌ಬುಕ್‌ ಅಲ್ಲ. ಫೇಸ್‌ಬುಕ್‌ 'ಸ್ನಾಪ್‌ಚಾಟ್‌'ನಿಂದ ಹಲವು ಸೂಚನೆಗಳನ್ನು ತೆಗೆದುಕೊಂಡಿರಬಹುದು. ಇನ್‌ಸ್ಟಗ್ರಾಂ ಇಮೇಜ್‌ಗಳ ಸಂಯೋಜನೆ ಮತ್ತು ವೀಡಿಯೊ ಆಗಸ್ಟ್‌ನಲ್ಲಿ 'ಸ್ನಾಪ್‌ಚಾಟ್‌' ಸ್ಟೋರಿ ರೀತಿಯಲ್ಲಿಯೇ ಬಂದಿತು.

ಫೇಸ್‌ಬುಕ್‌ ಮೆಸೇಂಜರ್ 'ಸ್ನಾಪ್‌ಚಾಟ್‌'ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆದರೂ ಸಹ ಈಗ 'ಸ್ನಾಪ್‌ಚಾಟ್‌' ಪ್ರಖ್ಯಾತತೆ ಜುಕರ್‌ಬರ್ಗ್‌'ರವರ ಗಮನಕ್ಕೆ ಬಂದು ಫೇಸ್‌ಬುಕ್ ಸಹ 'ಇನ್‌ಸ್ಟಾಂಟ್‌ ವೀಡಿಯೊ' ಫೀಚರ್ ಅನ್ನು ಲಾಂಚ್‌ ಮಾಡಿದೆ. ಲೇಖನದ ಕೆಳಗಿನ ಸ್ಲೈಡರ್‌ಗಳಲ್ಲಿ ಫೇಸ್‌ಬುಕ್‌ ಲಾಂಚ್‌ ಮಾಡಿರುವ 'ಇನ್‌ಸ್ಟಾಂಟ್ ವೀಡಿಯೊ' ಹೇಗೆ ಕಾರ್ಯನಿರ್ಬಹಿಸುತ್ತದೆ, ಅದರ ವಿಶೇಷತೆ ಎನು ಎಂದು ತಿಳಿಯಿರಿ.

ಫೇಸ್‌ಬುಕ್ ಲೈವ್‌ ನೋಟಿಫಿಕೇಶನ್ ಟರ್ನ್‌ ಆಫ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಮೆಸೇಂಜರ್

ಫೇಸ್‌ಬುಕ್‌ ಮೆಸೇಂಜರ್

ಫೇಸ್‌ಬುಕ್ ಮೆಸೇಂಜರ್‌ ಈಗಾಗಲೇ 2015 ಮೇ ತಿಂಗಳಿನಿಂದ 'ಫೇಸ್‌ ಟೈಮ್‌' ವೀಡಿಯೊ ಚಾಟ್‌ ವೈಶಿಷ್ಟವನ್ನು ಹೊಂದಿದೆ. ಇತ್ತೀಚಿನ ಅಳವಡಿಕೆ ಎಂದರೆ ವಿಂಡೋ ಒಳಗಿರುವ ಚಾಟ್‌ ಬಾಕ್ಸ್‌ನಿಂದ ವೀಡಿಯೋ ಶೇರ್‌ ಮಾಡುವುದಾಗಿದೆ.

ವೀಡಿಯೊ ಕರೆ

ವೀಡಿಯೊ ಕರೆ

ವೀಡಿಯೊ ಕರೆ ಇಂದಿಗೂ ಸಹ ಒಂದು ರೀತಿಯಲ್ಲಿ ಹೊಸದು. ಅಲ್ಲದೇ ಕೇವಲ ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಹೊಸ ಇನ್‌ಸ್ಟಾಂಟ್ ವೀಡಿಯೊ ಸರ್ವತ್ರ ಎಂದು ಬಿಂಬಿಸುತ್ತದೆ ಮತ್ತು ನೈಜ ಸಮಯದ ಫೀಚರ್ ಎಂದು ಬಿಂಬಿಸಬಹುದು.

 ಫೇಸ್‌ಬುಕ್‌ ಹೇಳಿದ್ದೇನು?

ಫೇಸ್‌ಬುಕ್‌ ಹೇಳಿದ್ದೇನು?

ಫೇಸ್‌ಬುಕ್‌ 'ಇನ್ಸ್‌ಟಾಂಟ್ ವೀಡಿಯೊ' ಫೀಚರ್ ಸಂಪೂರ್ಣ ಹ್ಯಾಂಡಿಯಾಗಿದ್ದು, ತಕ್ಕಣದಲ್ಲಿ ಸ್ನೇಹಿತರಿಂದ ಪ್ರತಿಕ್ರಿಯೆ ಪಡೆಯಬಹುದಾಗಿದೆ. ಆದರೆ ಫೇಸ್‌ಬುಕ್‌ 'ಇನ್‌ಸ್ಟಾಂಟ್ ವೀಡಿಯೊ', 'ಸ್ನಾಪ್‌ಚಾಟ್‌' ಅನ್ನು ಹಿಂದಿಕ್ಕುವುದೇ ಎಂದು ಕಾದುನೋಡಬೇಕಾಗಿದೆ.

ಇನ್‌ಸ್ಟಾಂಟ್‌ ವೀಡಿಯೊ ಹೇಗೆ ವರ್ಕ್‌ ಆಗುತ್ತದೆ.

ಇನ್‌ಸ್ಟಾಂಟ್‌ ವೀಡಿಯೊ ಹೇಗೆ ವರ್ಕ್‌ ಆಗುತ್ತದೆ.

ಮೊದಲಿಗೆ ಸೆಂಡರ್‌ ಮತ್ತು ರಿಸೀವರ್‌ ಇಬ್ಬರೂ ಸಹ ಇತ್ತೀಚಿನ ಮೆಸೇಂಜರ್‌ ಆಪ್‌ ವರ್ಸನ್‌ ಅನ್ನು ತಮ್ಮ ಆಂಡ್ರಾಯ್ಡ್ ಅಥವಾ ಐಓಎಸ್‌ಗಳಲ್ಲಿ ಹೊಂದಿರಬೇಕು.

ಇನ್‌ಸ್ಟಾಂಟ್‌ ವೀಡಿಯೊ ಹೇಗೆ ವರ್ಕ್‌ ಆಗುತ್ತದೆ

ಇನ್‌ಸ್ಟಾಂಟ್‌ ವೀಡಿಯೊ ಹೇಗೆ ವರ್ಕ್‌ ಆಗುತ್ತದೆ

ಲೇಟೆಸ್ಟ್ ಮೆಸೇಂಜರ್‌ ಆಪ್‌ನಲ್ಲಿ ಬಲಭಾಗದ ಮೇಲ್ಭಾಗದಲ್ಲಿ ವೀಡಿಯೊ ಐಕಾನ್‌ ಅನ್ನು ಟ್ಯಾಪ್ ಮಾಡಿ, ರಿಯಲ್‌ ಟೈಮ್‌ ವೀಡಿಯೋ ಸಂಭಾಷಣೆಯನ್ನು ಶೇರ್‌ ಮಾಡಿ.

ವೀಡಿಯೊ

ವೀಡಿಯೊ

ರಿಯಲ್‌ ಟೈಮ್‌ ವೀಡಿಯೊನಲ್ಲಿ ಆಡಿಯೋ ಡಿಫಾಲ್ಟ್‌ ಆಗಿ ಸ್ವಿಚ್‌ ಆಫ್‌ ಆಗಿರುತ್ತದೆ. ಕಾರಣ ಕೆಲವೊಮ್ಮೆ ನೀವು ಜಸ್ಟ್‌ ನೋಡಬೇಕಾಗಿರುತ್ತದೆ. ಆದರೆ ಸೌಂಡ್‌ ಬೇಕಾದಲ್ಲಿ ಸರಳವಾಗಿ ಆನ್‌ ಆಗುತ್ತದೆ. ಇತ್ತೀಚೆಗೆ ಗೂಗಲ್‌ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌ ಲಾಂಚ್ ಮಾಡಿತ್ತು.

Best Mobiles in India

Read more about:
English summary
Facebook Launches a New Snapchat y ‘Instant Video’ Feature. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X