Subscribe to Gizbot

ಫೇಸ್‌ಬುಕ್‌ 'ಲೈವ್‌ ವೀಡಿಯೊ' ಫೀಚರ್ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ!

Written By:

ಫೇಸ್‌ಬುಕ್ ಖ್ಯಾತಿಯ ಬಗೆಗಿನ ಇತ್ತೀಚಿನ ವಿಷಯಗಳೆಂದರೆ '360 ಡಿಗ್ರಿ' ವೀಡಿಯೋ ಸಪೋರ್ಟ್ ಮತ್ತು ಲೈವ್‌ ವೀಡಿಯೊ ಸ್ಟ್ರೀಮಿಂಗ್ ಫೀಚರ್ ಅಪ್‌ಡೇಟ್‌. ಅಂದಹಾಗೆ ಫೇಸ್‌ಬುಕ್‌ ಈಗ ಇನ್ನೊಂದು ಹೊಸ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದಹಾಗೆ ಈ ಮಾಹಿತಿ ಎಂದರೆ ಫೇಸ್‌ಬುಕ್‌ ಶೀಘ್ರದಲ್ಲಿ ಲೈವ್‌ ವೀಡಿಯೊ ಫೀಚರ್‌ ಅನ್ನು ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ಗೆ ನೀಡಲಿದೆಯಂತೆ. ಈ ಫೀಚರ್‌ ಬರುವವರೆಗೆ ಮೊಬೈಲ್‌ ಬಳಕೆದಾರರಿಗೆ ಮಾತ್ರ ಫೇಸ್‌ಬುಕ್ ಲೈವ್‌ ಫೀಚರ್‌ ಲಭ್ಯ ಎಂದಿದೆ.

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಫೇಸ್‌ಬುಕ್‌ 'ಲೈವ್‌ ವೀಡಿಯೊ' ಫೀಚರ್ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ!

ಫೇಸ್‌ಬುಕ್‌, ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಲೈವ್‌ ವೀಡಿಯೊ ಫೀಚರ್‌ ವಿಸ್ತರಣೆಯನ್ನು ಹಲವು ವೀಡಿಯೊ ಲಾಗರ್‌ಗಳು, ಪತ್ರಕರ್ತರು ಮತ್ತು ಪ್ರಕಟಣೆದಾರರು ವಿನಂತಿಸಿಕೊಂಡ ನಂತರ ನೀಡಲಾಗುವುದು ಎಂದಿದೆ.

"ಜನರು ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ ಮೂಲಕ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲು ಅನುಕೂಲವಾಗುವ ಫೀಚರ್‌ ಅನ್ನು ನೀಡಲು ಆರಂಭಿಸಿದ್ದೇವೆ," ಎಂದು ಫೇಸ್‌ಬುಕ್‌ ಪ್ರತಿನಿಧಿ ಅಧಿಕೃತ ಮಾಧ್ಯಮ ಮೂಲಗಳಿಗೆ ತಿಳಿಸಿದ್ದಾರೆ. ಈ ಫೀಚರ್ ಪ್ರಸ್ತುತದಲ್ಲಿ ಪರಿಶೀಲನೆ ಹಂತದಲ್ಲಿದೆ, ಅಲ್ಲದೇ ಈ ಫೀಚರ್ ನಿರ್ದಿಷ್ಟ ಆಯ್ಕೆಯ ಬಳಕೆದಾರರಿಗೆ ಲಭ್ಯವಾಗಲಿದೆ. ಸೂಚನೆಯ ಅಂಶವೆಂದರೆ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಫೇಸ್‌ಬುಕ್ ಲೈವ್‌ 'ಬಾಹ್ಯ ಕ್ಯಾಮೆರಾ ಮತ್ತು ಇನ್‌ಬಿಲ್ಟ್ ಕ್ಯಾಮೆರಾ' ಎರಡರಿಂದಲೂ ಸಹ ಸಾಧ್ಯವಾಗುತ್ತದೆ.

ಫೇಸ್‌ಬುಕ್‌ 'ಲೈವ್‌ ವೀಡಿಯೊ' ಫೀಚರ್ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ!

ಇತ್ತೀಚೆಗೆ ಟೇಲರ್ ಎಂಬ ಫೇಸ್‌ಬುಕ್‌ ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್‌ ಲೈವ್‌ ವೀಡಿಯೊ ಟೆಸ್ಟ್‌ ಬಗ್ಗೆ ವೀಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ಅವರು ಮೊದಲು ಫೇಸ್‌ಬುಕ್‌ ಲೈವ್‌ ಫೀಚರ್‌ ಮೇಲೆ ಕ್ಲಿಕ್ ಮಾಡಿದಾಗ ಯಾವುದೇ ಪ್ರಿತಿಕ್ರಿಯೆ ನಡೆದಿಲ್ಲ. ಕಮೆಂಟ್‌ ನೀಡಿ ನಂತರ 'Next' ಅನ್ನು ಕ್ಲಿಕ್‌ ಮಾಡಿದಾಗ ಎರಡನೇ ಸ್ಕ್ರೀನ್ ಓಪನ್‌ ಆಗುತ್ತದೆ. ಇದು ಗೂಗಲ್‌ ಹ್ಯಾಂಗೌಟ್ಸ್ ರೀತಿಯಲ್ಲಿ ಕಾಣುತ್ತದೆ. ನಂತರ ಕ್ಯಾಮೆರಾ ಮತ್ತು ಮೈಕ್ರೋಫೋನ್ ವ್ಯವಸ್ಥೆಗೊಳಿಸಿ 'Go Live' ಕ್ಲಿಕ್‌ ಮಾಡಬೇಕು ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಫೇಸ್‌ಬುಕ್‌ 'ಲೈವ್‌ ವೀಡಿಯೊ' ಫೀಚರ್ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ!

ಫೇಸ್‌ಬುಕ್‌ ಲೈವ್‌ ವೀಡಿಯೊ ಅತ್ಯಂತ ಆಕರ್ಷಕ ಮತ್ತು ಪರಸ್ಪರ ಪ್ರತಿಕ್ರಿಯೆಗೆ ಅನುಕೂಲ ಒದಗಿಸಲಿದೆ. ಫೇಸ್‌ಬುಕ್‌ ಬಳಕೆದಾರರು ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲಿ ಆಪ್‌ನಿಂದ ನೇರವಾಗಿ ಲೈವ್‌ ವೀಡಿಯೊ ಸ್ಟ್ರೀಮ್‌ ಮಾಡಬಹುದು. ಹಲವು ತಿಂಗಳುಗಳಿಂದ ಫೇಸ್‌ಬುಕ್‌ ಲೈವ್ ವೀಡಿಯೊಗೆ ಹಲವು ಫೀಚರ್‌ಗಳನ್ನು ಅಪ್‌ಡೇಟ್‌ ಮಾಡುತ್ತಿದೆ.

 

 

Read more about:
English summary
Facebook Live video feature is coming to desktops and laptops soon. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot