ಫೇಸ್‌ಬುಕ್‌ನಿಂದ ಆಫ್‌ಲೈನ್‌ ವೀಡಿಯೊ ಡೌನ್‌ಲೋಡ್‌ ಫೀಚರ್!

By Suneel
|

ಈ ಹಿಂದೆ ಯೂಟ್ಯೂಬ್‌ನಲ್ಲಿ ಮಾತ್ರ ಆಫ್‌ಲೈನ್ ವೀಡಿಯೊ ಸೇವ್ ಮಾಡುವ ಫೀಚರ್‌ ಲಭ್ಯವಿತ್ತು. ಇನ್ನುಮುಂದೆ ಭಾರತದಲ್ಲಿ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲೂ ಆಫ್‌ಲೈನ್‌ ವೀಡಿಯೊ ವೇದಿಕೆ ಬಳಕೆದಾರರಿಗೆ ಸಿಗಲಿದೆ.

ಭಾರತದಲ್ಲಿನ ಫೇಸ್‌ಬುಕ್‌ ತಾಣದಲ್ಲಿ, 'ಯೂಟ್ಯೂಬ್'‌ ಆಫ್‌ಲೈನ್‌ ವೀಡಿಯೊ ಹೇಗೆ ವರ್ಕ್‌ ಆಗುತ್ತಿತ್ತೋ, ಅದೇ ರೀತಿಯಲ್ಲಿ ಫೇಸ್‌ಬುಕ್‌ ಆಫ್‌ಲೈನ್‌ ವೀಡಿಯೊ ವರ್ಕ್‌ ಆಗಲಿದೆ. ನೀವೂ ಫೇಸ್‌ಬುಕ್‌ ಪ್ರಿಯರೇ? ದಿನನಿತ್ಯ ಫೇಸ್‌ಬುಕ್ ಬಳಸುತ್ತೀರಾ? ಹಾಗಾದ್ರೆ ಈ ವಿಶೇಷ ಮಾಹಿತಿಯನ್ನು ತಿಳಿಯಲೇಬೇಕು.

ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಬಾರದ 8 ಪ್ರಮುಖ ಅಂಶಗಳು

ಫೇಸ್‌ಬುಕ್‌ ಆಫ್‌ಲೈನ್‌ ವೀಡಿಯೊ

ಫೇಸ್‌ಬುಕ್‌ ಆಫ್‌ಲೈನ್‌ ವೀಡಿಯೊ

ಫೇಸ್‌ಬುಕ್ ಇದೇ ತಿಂಗಳ (ಜುಲೈ) 11 ರಿಂದ ಆಫ್‌ಲೈನ್‌ ವೀಡಿಯೋ ಡೌನ್‌ಲೋಡ್‌ ಫೀಚರ್‌ ಅನ್ನು ಭಾರತದಲ್ಲಿ ಪರೀಕ್ಷೆ ನಡೆಸಲಿದೆ ಎಂದು ವರದಿಗಳು ಹೇಳಿವೆ.

ಫೇಸ್‌ಬುಕ್ ಕಂಪನಿ

ಫೇಸ್‌ಬುಕ್ ಕಂಪನಿ

ಫೇಸ್‌ಬುಕ್ ಕಂಪನಿ ಆಯ್ಕೆ ಮಾಡಿದ ತನ್ನ ಮಾಧ್ಯಮ ಸಹಪಾಠಿಗಳಿಗೆ ಇಮೇಲ್‌ ಕಳುಹಿಸಿದ್ದು, ಜುಲೈ 11 ರಿಂದ ಆಫ್‌ಲೈನ್‌ ವೀಡಿಯೊ ಡೌನ್‌ಲೋಡ್‌ ಫೀಚರ್‌ ಪರೀಕ್ಷೆ ಆರಂಭಿಸಲಾಗುವುದು ಎಂದು ತಿಳಿಸಿದೆ. ವಿಶೇಷ ಅಂದ್ರೆ ವೀಡಿಯೊ ಡೌನ್‌ಲೋಡ್‌ ಫೀಚರ್ ಫೀಚರ್‌ ಕೇವಲ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಮಾತ್ರ ಅವಕಾಶವಿದ್ದು, ಕೃತಿಚೌರ್ಯ ಮಾಹಿತಿ ಸುರಕ್ಷತೆ ಹೊಂದಲಿದೆ.

ವೀಡಿಯೊ ಡೌನ್‌ಲೋಡ್‌

ವೀಡಿಯೊ ಡೌನ್‌ಲೋಡ್‌

ಯಾವುದೇ ಪಬ್ಲಿಷರ್‌ಗಳು ಅಪ್‌ಲೋಡ್‌ ಮಾಡಿದ ವೀಡಿಯೊವನ್ನು ಡೌನ್‌ಲೋಡ್‌ ಮಾಡಲು ಅವಕಾಶವಿಲ್ಲ. ಆದರೆ ವೀಡಿಯೊವನ್ನು ಡೌನ್‌ಲೋಡ್‌ ಮಾಡಿ, ಇಂಟರ್ನೆಟ್‌ ಕನೆಕ್ಷನ್‌ ಇಲ್ಲದೆಯೂ ಸಹ ಆಫ್‌ಲೈನ್‌ನಲ್ಲಿ ನೋಡಬಹುದು ಎನ್ನಲಾಗಿದೆ.

ಆಫ್‌ಲೈನ್ ವೀಡಿಯೊ ಫೀಚರ್‌

ಆಫ್‌ಲೈನ್ ವೀಡಿಯೊ ಫೀಚರ್‌

ಸೂಚನೆ- ಫೇಸ್‌ಬುಕ್‌ನಲ್ಲಿ ಡೌನ್‌ಲೋಡ್‌ ಮಾಡಿದ ವೀಡಿಯೊ ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲೇ ಇರುತ್ತದೆ. ಈ ವೀಡಿಯೋವನ್ನು ಇತರರಿಗೆ ಶೇರ್‌ ಮಾಡಲು ಮತ್ತು ಇತರೆ ಅಪ್ಲಿಕೇಶನ್‌ನಲ್ಲಿ ನೋಡಲು ಅವಕಾಶವಿಲ್ಲ. ಆದರೆ ಇಂಟರ್ನೆಟ್‌ ಇಲ್ಲದೇ ಆಫ್‌ಲೈನ್‌ನಲ್ಲೂ ವೀಡಿಯೊ ನೋಡುವ ಅವಕಾಶ ಸಿಗುತ್ತದೆ. ಈ ಫೀಚರ್ ಪಡೆಯಲು >>Settings>>prohibit downloading to Facebook>>Content Distribution.

ಯೂಟ್ಯೂಬ್‌ನಲ್ಲಿನ ಆಫ್‌ಲೈನ್‌ ವೀಡಿಯೊ ನಿರ್ಬಂಧನೆಗಳು

ಯೂಟ್ಯೂಬ್‌ನಲ್ಲಿನ ಆಫ್‌ಲೈನ್‌ ವೀಡಿಯೊ ನಿರ್ಬಂಧನೆಗಳು

ಯೂಟ್ಯೂಬ್‌ನಲ್ಲಿ ಸೇವ್‌ ಮಾಡಲಾದ ಆಫ್‌ಲೈನ್‌ ವೀಡಿಯೊಗಳನ್ನು ಕೇವಲ 48 ಗಂಟೆಗಳ ಕಾಲ ನೋಡಬಹುದು, ನಂತರ ಪುನಃ ಇಂಟರ್ನೆಟ್‌ ಕನೆಕ್ಟ್‌ ಮಾಡಿ ವೀಡಿಯೋ ಇರುವುದರ ಬಗ್ಗೆ ಯೂಟ್ಯೂಬ್‌ ಆಪ್‌ ಪರೀಕ್ಷೆ ನಡೆಸುತ್ತದೆ. ಯೂಟ್ಯೂಬ್‌ ರೀತಿಯಲ್ಲೇ ವರ್ಕ್‌ ಆಗುತ್ತದೆ ಎನ್ನಲಾದ ಫೇಸ್‌ಬುಕ್‌ ಆಫ್‌ಲೈನ್‌ ವೀಡಿಯೊ ಫೀಚರ್‌ ಇದೇ ರೀತಿಯಲ್ಲಿ ಇರುವುದರ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.

ಪಬ್ಲಿಷರ್‌

ಪಬ್ಲಿಷರ್‌

ಯೂಟ್ಯೂಬ್‌ ಆಫ್‌ಲೈನ್‌ ವೀಡಿಯೊ ಫೀಚರ್‌ ಅನುಸರಿಸುತ್ತಿರುವ ಫೇಸ್‌ಬುಕ್‌ನ ಹೊಸ ನಡೆ ಭಾರತದಲ್ಲಿಯ ಬ್ಯುಸಿನೆಸ್ ಪಬ್ಲಿಷರ್‌ಗಳಿಗೆ ಕುತೂಹಲ ಹುಟ್ಟಿಸಿದ್ದು, ಎಷ್ಟು ಪಬ್ಲಿಷರ್‌ಗಳು ಈ ಫೀಚರ್‌ ಅನ್ನು ಸೈನಪ್‌ ಮಾಡಿಕೊಳ್ಳುತ್ತಾರೋ ಕಾದುನೋಡಬೇಕಿದೆ. ಪಬ್ಲಿಷರ್‌ಗಳ ಮಾಹಿತಿ ಸುರಕ್ಷೆ ಕಾಪಾಡುವ ಈ ಪೀಚರ್‌ ಪಡೆಯುವುದು ಹೇಗೆ ಎಂದು ಮುಂದಿನ ಸ್ಲೈಡರ್‌ ಓದಿ ತಿಳಿಯಿರಿ.

ಫೇಸ್‌ಬುಕ್‌

ಫೇಸ್‌ಬುಕ್‌

ಆಫ್‌ಲೈನ್‌ ವೀಡಿಯೊ ಫೀಚರ್ ಆಯ್ಕೆ

ಫೇಸ್‌ಬುಕ್‌

ಫೇಸ್‌ಬುಕ್‌

ಆಫ್‌ಲೈನ್‌ ವೀಡಿಯೊ ಫೀಚರ್ ಆಯ್ಕೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?

ಫೇಸ್‌ಬುಕ್ ಹಿಡನ್ ಫೀಚರ್ಸ್ ನೀವೂ ತಿಳಿದುಕೊಂಡಿರಿ ಫೇಸ್‌ಬುಕ್ ಹಿಡನ್ ಫೀಚರ್ಸ್ ನೀವೂ ತಿಳಿದುಕೊಂಡಿರಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Facebook to test offline video download feature in India: Report. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X