ಉಚಿತ ಕರೆ ಮಾಡಲು ಉಚಿತ ಆಂಡ್ರಾಯ್ಡ್ ಆಪ್ಸ್:ಕರೆನ್ಸಿ ಬೇಡ
ಟೆಕ್ ಜಗತ್ತಿನಲ್ಲಿ ಇಂದು ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್ ಬಳಕೆದಾರರ ಮುಂದೆ ಬರುತ್ತಲೇ ಇವೆ. ಆದರೆ ಇಂಟರ್ನೆಟ್ ಸೌಲಭ್ಯವಿಲ್ಲದೇ ಯಾವ ಅಪ್ಲಿಕೇಶನ್ ಅನ್ನು ಸಹ ನಾವು ಬಳಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗಿಜ್‌ಬಾಟ್ 5 ಅತ್ಯುತ್ತಮ ಆಪ್‌ಗಳನ್ನು ಪರಿಚಯಿಸುತ್ತಿದ್ದು, ಇವುಗಳಿಂದ ಉಚಿತವಾಗಿ ಭಾರತದಾದ್ಯಂತ ಮೊಬೈಲ್‌ಗಳಿಗೆ ಹಾಗೂ ಲ್ಯಾಂಡ್‌ಲೈನ್ ದೂರವಾಣಿಗೂ ಸಹ ಕರೆ ಮಾಡಬಹುದಾಗಿದೆ. ಉಚಿತವಾಗಿ ಕರೆಮಾಡಬಹುದಾದ ಆಪ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಿಂದ ತಿಳಿಯಿರಿ.
ಶಾಶ್ವತವಾಗಿ ಫೇಸ್‌ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ? ನೋಕಿಯಾ ಫೋನ್ಸ್: 'ಓಲ್ಡ್ ಈಸ್ ಗೋಲ್ಡ್ ' ಏಕೆ ಗೊತ್ತೇ? ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್ ವೈರಲ್ ವೀಡಿಯೋ!

1
ಲಿಬಾನ್ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೋಕಾಲಿಂಗ್ ಆಪ್ ಆಗಿದ್ದು, ಉಚಿತ ಕರೆಗಳನ್ನು ಲಿಬಾನ್ ಆಪ್ ಹೊಂದಿರುವವರು ಯಾವುದೇ ಮಿತಿಯಿಲ್ಲದೇ ಬಳಸಬಹುದಾಗಿದೆ.
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

2
ಈ ಅಪ್ಲಿಕೇಶನ್ ಆಪ್ ಮಾರುಕಟ್ಟೆಗೆ ಹೊಸ ಅಪ್ಲಿಕೇಶನ್ ಆಗಿದೆ. ಇದನ್ನು ಹೊಂದಿರುವ ವ್ಯಕ್ತಿಗಳಿಬ್ಬರು ಸಹ ಉಚಿತವಾಗಿ ಅಪರಿಮಿತ ಕರೆಗಳನ್ನು ಮಾಡಬಹುದಾಗಿದೆ. ಆದರೆ ನೆಟ್ ಸಂಪರ್ಕ ಇರಬೇಕಾಗಿದೆ.
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

3
ಬಿಗೋ ಆಪ್‌ನಿಂದ ಜಗತ್ತಿನಾದ್ಯಂತ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ದೂರವಾಣಿಗೆ ಉಚಿತ ಕರೆ ಮಾಡಬಹುದಾಗಿದೆ.
ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

4
ಮೊಟ್ಟಮೊದಲು ಈ ಆಪ್ ಅನ್ನು ಟಾಟಾ ಡೊಕೊಮೊ ಸಂಪರ್ಕದಿಂದ ಪರೀಕ್ಷೆ ಮಾಡಿ ಹಲವಾರು ಜನರು ಬಳಸಿದ್ದಾರೆ. ಉತ್ತಮ ಆಪ್ ಎಂಬ ಹೆಗ್ಗಳಿಕೆ ಪಡೆದಿದ್ದು, ಇಂದು ಉಚಿತ ಕರೆಗಾಗಿ ಬಹುಸಂಖ್ಯಾತರಿಂದ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಂದಲೂ ಬಳಸಲ್ಪಡುತ್ತಿದೆ.
ಆಪ್ ಇನ್ಸ್ಟಾಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

5
ಈ ಅಪ್ಲಿಕೇಶನ್ ಮೂಲಕ ಉಚಿತವಾಗಿ ವೈಫೈ, 2G, 3G, ಮತ್ತು 4G ನೆಟ್ ಸಂಪರ್ಕದಿಂದ ಕರೆಗಳನ್ನು ಮಾಡಬಹುದಾಗಿದೆ. ನೀವು ಕರೆ ಮಾಡುವ ವ್ಯಕ್ತಿಯಲ್ಲಿ ಈ ಆಪ್ ಬಳಕೆ ಇಲ್ಲದಿದ್ದರೂ ಸಹ ಕರೆ ಮಾಡಬಹುದಾಗಿದೆ.


Click it and Unblock the Notifications








