ಕಂಪ್ಯೂಟರ್‌ ಇಂಟರ್ನೆಟ್‌ ವೇಗ ಟ್ರ್ಯಾಕ್‌ ಮಾಡಲು 'ನೆಟ್‌ ಮೀಟರ್‌'

By Suneel
|

ಮನೆಯಲ್ಲಿ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಂಪ್ಯೂಟರ್‌ ಬಳಕೆ ಪ್ರಾರಂಭಿಸಿದ ಮೇಲೆ ಇಂಟರ್ನೆಟ್ ಬಳಸದೆ ಯಾರು ಸಹ ಇರಲಾರರು.

ಇಂಟರ್ನೆಟ್ ಬಳಕೆ ಪ್ರಾರಂಭಿಸಿದ ಮೇಲೆ ಫೇಸ್‌ಬುಕ್‌, ಯೂಟ್ಯೂಬ್ ಓಪನ್‌ ಮಾಡದೇ ಇರಲು ಸಾಧ್ಯವೇ? ಖಂಡಿತ ಬಳಸುತ್ತೀರಿ. ಅಲ್ಲದೇ ಈಗಾಗಲೇ ಬಿಲಿಯನ್‌ಗಟ್ಟಲೇ ಬಳಕೆದಾರರು ಇಂಟರ್ನೆಟ್‌ ಬಳಸುತ್ತೀದ್ದೀರಿ. ಆದ್ರೆ ರಿಯಲ್‌ ಟೈಮ್‌ನಲ್ಲಿ ಇಂಟರ್ನೆಟ್ ವೇಗ ಕಂಪ್ಯೂಟರ್‌ನಲ್ಲಿ ಎಷ್ಟಿದೆ ಎಂಬುದನ್ನ ಟ್ರ್ಯಾಕ್‌ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಅಲ್ವಾ.

ಆಂಟಿವೈರಸ್‌ ಇಲ್ಲದೇ ಕಂಪ್ಯೂಟರ್‌ನಲ್ಲಿ ವೈರಸ್‌ ರಿಮೂವ್‌ ಹೇಗೆ?

ಇಂಟರ್ನೆಟ್ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಇಂಟರ್ನಟ್‌ನ ವೇಗ. ಯೂಟ್ಯೂಬ್‌ ವೀಡಿಯೋ ಕೆಲವೊಮ್ಮೆ ಹೆಚ್ಚು ಸಮಯ ಬಫರಿಂಗ್‌ ತೆಗೆದುಕೊಂಡರೆ ಅದು ಇಂಟರ್ನೆಟ್ ವೇಗ ಕುಸಿದಿದೆಯೋ ಅಥವಾ ಯೂಟ್ಯೂಬ್‌ನ ಸರ್ವರ್‌ ಸಮಸ್ಯೆಯೋ ಎಂಬುದನ್ನ ಹೇಳಲು ಸಾಧ್ಯವಿಲ್ಲ.

ನಿಮ್ಮ ಕಂಪ್ಯೂಟರ್‌ನಲ್ಲಿನ ಇಂಟರ್ನೆಟ್ ವೇಗ ಟ್ರ್ಯಾಕ್‌ ಮಾಡಬೇಕೆ? ಇಂಟರ್ನೆಟ್‌ ವೇಗ ಏಕೆ ಕುಸಿದಿದೆ ಎಂದು ತಿಳಿಯಬೇಕೇ? ಹಾಗಾದ್ರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಅಪ್ಲಿಕೇಶನ್‌ ಬಳಸಿ. ಅದರ ಉಪಯೋಗವನ್ನು ಸಹ ತಿಳಿದುಕೊಳ್ಳಿ. ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?

 ನೋಟಿಫಿಕೇಶನ್ ನೀಡದೇ ರನ್‌ ಆಗುವ ಆಪ್‌ಗಳು

ನೋಟಿಫಿಕೇಶನ್ ನೀಡದೇ ರನ್‌ ಆಗುವ ಆಪ್‌ಗಳು

ಕಂಪ್ಯೂಟರ್‌ನಲ್ಲಿ ಕೆಲವೊಮ್ಮೆ ಅಪ್ಲಿಕೇಶನ್‌ಗಳು ಯಾವುದೇ ನೋಟಿಫಿಕೇಶನ್‌ ನೀಡದೆ, ಅದರಲ್ಲೂ ಕೆಲವು ಅನುಮಾನಾಸ್ಪದ ಅಪ್ಲಿಕೇಶನ್‌ಗಳು ಇಂಟರ್ನೆಟ್‌ ಬಳಸುತ್ತಿರುತ್ತವೆ. ಇದರಿಂದ ನಿಮ್ಮ ಇಂಟರ್ನೆಟ್ ವೇಗ ಕುಸಿದು ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ವೇಗವು ನಿಧಾನವಾಗುತ್ತದೆ.

ವಿಂಡೋಸ್‌ ಸ್ವಯಂಕೃತವಾಗಿ ಅಪ್‌ಡೇಟ್‌

ವಿಂಡೋಸ್‌ ಸ್ವಯಂಕೃತವಾಗಿ ಅಪ್‌ಡೇಟ್‌

ನೀವು ಬಳಸುವ ವಿಂಡೋಸ್‌ ಸಹ ಸ್ವಯಂಕೃತವಾಗಿ ಕೆಲವೊಮ್ಮೆ ಡೌನ್‌ಲೋಡ್‌ ಆಗಿ ಅಪ್‌ಡೇಟ್‌ ಆಗುತ್ತಿರುತ್ತದೆ. ಇದರಿಂದಲೂ ಸಹ ಇಂಟರ್ನೆಟ್‌ ವೇಗ ನಿಧಾನವಾಗುತ್ತದೆ.

ನೆಟ್‌ ಮೀಟರ್‌  (Net Meter)

ನೆಟ್‌ ಮೀಟರ್‌ (Net Meter)

ಕಂಪ್ಯೂಟರ್ ಇಂಟರ್ನೆಟ್ ವೇಗ ಟ್ರ್ಯಾಕ್‌ ಮಾಡಲು 'ನೆಟ್‌ ಮೀಟರ್‌ (Net Meter)' ಎಂಬ ಉಚಿತ ಸಾಫ್ಟ್‌ವೇರ್‌ ಅನ್ನು ಬಳಸಬಹುದಾಗಿದೆ. ಈ ಸಾಫ್ಟ್‌ವೇರ್‌ ಯಾವುದೇ ವರ್ಸನ್‌ನ ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೂ ಟೆಕ್ನಾಲಜೀಸ್‌

ಹೂ ಟೆಕ್ನಾಲಜೀಸ್‌

ಹೂ ಟೆಕ್ನಾಲಜೀಸ್'ನ 'ನೆಟ್ ಮೀಟರ್‌' ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಆದ ನಂತರ ಕಂಪ್ಯೂಟರ್‌ನಲ್ಲಿನ ಎಲ್ಲಾ ನೆಟ್‌ವರ್ಕ್‌ನ ಸಂಪರ್ಕದ ನೆಟ್‌ವರ್ಕ್‌ ಟ್ರ್ಯಾಫಿಕ್‌ ಅನ್ನು ಮಾನಿಟರ್‌ ಮಾಡುತ್ತದೆ. ಅಲ್ಲದೇ ರಿಯಲ್‌ ಟೈಮ್‌ನ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ವೇಗವನ್ನು ಗ್ರಾಫಿಕ್‌ ಮತ್ತು ಸಂಖ್ಯೆಯಲ್ಲಿ ಪ್ರದರ್ಶನ ಮಾಡುತ್ತದೆ.

ನೆಟ್‌ ಮೀಟರ್‌ ಉಪಯೋಗವೇನು?

ನೆಟ್‌ ಮೀಟರ್‌ ಉಪಯೋಗವೇನು?

'ನೆಟ್‌ ಮೀಟರ್‌' ನೆಟ್‌ವರ್ಕ್‌ ಟ್ರ್ಯಾಫಿಕ್ ದಾಖಲೆ ಸಿದ್ಧಪಡಿಸುವುದರ ಜೊತೆಗೆ, ಯಾವುದನ್ನು ಪ್ರತಿದಿನ, ವಾರದಲ್ಲಿ, ತಿಂಗಳಲ್ಲಿ ಪ್ರತ್ಯೇಕಿಸಬಹುದು ಎಂದು ವರದಿ ನೀಡುತ್ತದೆ. ನೀವು ದಿನನಿತ್ಯ ಎಷ್ಟು ಡಾಟಾ ಬಳಸಿದ್ದೀರಿ ಎಂದು ನೋಟಿಫಿಕೇಶನ್‌ ಪಡೆಯಲು ನೆಟ್‌ ಮೀಟರ್‌ನಲ್ಲಿ ವ್ಯವಸ್ಥೆ ಮಾಡಬಹುದು.

ನೆಟ್‌ ಮೀಟರ್‌ ಉಪಯೋಗವೇನು?

ನೆಟ್‌ ಮೀಟರ್‌ ಉಪಯೋಗವೇನು?

ನೆಟ್‌ ಮೀಟರ್‌ ಅನ್ನು ಸ್ವಯಂಕೃತವಾಗಿ 'Start up'ನಲ್ಲಿ ರನ್‌ ಆಗುವಂತೆ ಮಾಡಬಹುದು. ನಂತರ ವಿಂಡೋಸ್‌ ಸಿಸ್ಟಮ್‌ ಟ್ರೇಗೆ ಆಡ್‌ ಮಾಡಿ. ನಂತರ ವಿಂಡೋಸ್‌ ಸ್ಕ್ರೀನ್ ಬಲಭಾಗದಲ್ಲಿ ಕೆಳಗೆ ಲೈವ್ ಐಕಾನ್‌ ಆಗಿ ಪಡೆಯಿರಿ. ಈ ಐಕಾನ್‌ ಇಂಟರ್ನೆಟ್ ವೇಗವನ್ನು ಲೈವ್‌‌ ರೀಡಿಂಗ್ ನೀಡುತ್ತದೆ.
ನೆಟ್‌ ಮೀಟರ್‌ ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳುಲ್ಯಾಪ್‌ಟಾಪ್ ಬ್ಯಾಟರಿ ಕಾಪಾಡುವ ನಾಲ್ಕು ಸಲಹೆಗಳು

ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ? ದೂರದ ಪ್ರದೇಶದಲ್ಲಿರುವ ಸ್ನೇಹಿತರಿಗೆ ಲಾರ್ಜ್ ವೀಡಿಯೊ ಶೇರ್‌ ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Track your PC’s internet speed with this app. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X