Subscribe to Gizbot

ಲ್ಯಾಪ್‌ಟಾಪ್‌ನಲ್ಲಿ ಡೇಟಾ ಬ್ಯಾಕಪ್‌ ಮಾಡುವುದು ಹೇಗೆ?

Posted By: Staff
ಲ್ಯಾಪ್‌ಟಾಪ್‌ನಲ್ಲಿ ಡೇಟಾ ಬ್ಯಾಕಪ್‌ ಮಾಡುವುದು ಹೇಗೆ?
ಕೆಲವೊಮ್ಮೆ ಕಂಪ್ಯೂಟರ್‌ಗಳು ಅಥವಾ ಲ್ಯಾಪ್ಟಾಪ್‌ಗಳಲ್ಲಿ ಕೆಲವೊಮ್ಮೆ ವೈರಸ್‌ ದಾಳಿಯಿಂದಾಗಿ ಅಥವಾ ಇನ್ನಾವುದೋ ಸಮಸ್ಯೆಯಿಂದಾಗಿ ಕೈಕೊಡುವುದರಿಂದ ಅದರಲ್ಲಿನ ಪ್ರಮುಖ ಡೇಟಾಗಳೂ ಕೂಡಾ ಹಾಳಾಗಿಬಿಡುವ ಸಾಧ್ಯತೆ ಹೆಚ್ಚರುತ್ತದೆ.ಹೀಗಿದ್ದ ಸಂದರ್ಭದಲ್ಲಿ ನಿಮ್ಮ ಅಗತ್ಯದ ಡೇಟಾಗಳ ಬ್ಯಾಕಪ್‌ಗಾಗಿ ನೀವು ಪ್ರತ್ಯೇಕ ಹಾರ್ಡ್‌ಡಿಸ್ಕ್‌ ಅಥವಾ ಡಿವಿಡಿಗಳಲ್ಲಿ ನಿಮ್ಮ ಡೇಟಾ ಸ್ಟೋರ್‌ ಮಾಡಿ ಇಡ ಬೇಕಾಗುತ್ತದೆ. ಕಡಿಮೆ ಡೇಟಾ ಇದ್ದಲ್ಲಿ ಡಿವಿಡಿ ಗಳಲ್ಲಿ ಸೇವ್‌ ಮಾಡಿ ಇಡಬಹುದು ಆದರೆ ಹೆಚ್ಚಿನ ಡೇಟಾ ಇತ್ತೆಂದರೆ ನೀವು ಪ್ರತ್ಯೇಕ ಹಾರ್ಡ್‌ ಡಿಸ್ಕ್‌ ಒಂದನ್ನು ಖರೀದಿಸಿಕೊಳ್ಳ ಬೇಕಾಗುತ್ತದೆ.

ಹಾಗಿದ್ದಲ್ಲಿ ಬನ್ನಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿನ ಡೇಟಾಗಳನ್ನು ಬ್ಯಾಕಪ್‌ ಸಲುವಾಗಿ ಪ್ರತ್ಯೇಕವಾಗಿ ಹೇಗೆ ಸೇವ್‌ ಮಾಡುವುದು ಎಂದು ಗಿಜ್ಬಾಟ್‌ ಇಂದು ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

  • ಮೊದಲಿಗೆ ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿನ ಸ್ಟಾರ್ಟ್‌ ಮೆನ್ಯುವಿಗೆ ತೆರಳಿ.

  • ಸ್ಟಾರ್ಟ್‌ಮೆನ್ಯುವಿನಲ್ಲಿ ಕಂಟ್ರೋಲ್‌ ಪ್ಯಾನೆಲ್‌ ಆಪ್ಷನ್‌ ಆಯ್ಕೆ ಮಾಡಿಕೊಳ್ಳಿ, ನಂತರ ಕಂಟ್ರೋಲ್‌ ಪ್ಯಾನೆಲ್‌ನಲ್ಲಿ ಸಿಸ್ಟಂ ಎಂಡ್‌ ಮೇನ್ಟೆನೆಂನ್ಸ್ ಸೆಲೆಕ್ಟ್‌ ಮಾಡಿ ಅದರಲ್ಲಿ ಬ್ಯಾಕಪ್‌ ಹಾಗೂ ರೀಸ್ಟೋರ್‌ ಆಪ್ಷನ್‌ ನೀಡಲಾಗಿರುತ್ತದೆ ಅದನ್ನು ಕ್ಲಿಕ್‌ ಮಾಡಿ.

  • ರಿಸ್ಟೋರ್‌ ಆಪ್ಷನ್‌ ಕ್ಲಿಕ್‌ ಮಾಡುತ್ತಿದ್ದಹಾಗೆಯೇ ಸೆಟ್‌ಅಪ್‌ ಬ್ಯಾಕಪ್‌ ಆಪ್ಷನ್‌ ಕ್ಲಿಕ್ ಮಾಡಿ ನಂತರ ನಿಮ್ಮ ಕಂಪ್ಯೂಟರ್‌ ಬ್ಯಾಕಪ್‌ ಲೊಕೇಷನ್‌ ಸೆಟ್‌ ಮಾಡಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಕೊಂಚ ತಾಳ್ಮೆಯಿಂದಿರಿ.

  • ಕಂಪ್ಯೂಟರ್‌ ಡೇಟಾಬ್ಯಾಕಪ್‌ ಲೊಕೇಷನ್‌ ಆಯ್ಕೆ ಮಾಡಿಕೊಂಡ ಬಳಿಕ ನೀವು ನಿಮ್ಮ ಆಯ್ಕೆಯ ಅನುಸಾರ ಡಿವಿಡಿ ಅಥವಾ ಹಾರ್ಡ್‌ಡಿಸ್ಕ್‌ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ಅಂದಹಾಗೆ ಡಿವಿಡಿ ಯಾಗಲಿ ಪೆನ್‌ಡ್ರೈವ್‌ ಆಗಲಿ ಅಥವಾ ಹಾರ್ಡ್‌ ಡಿಸ್ಕ್‌ ಆಗಲಿ ಕನಿಷ್ಟ ಪಕ್ಷ 10 ಜಿಬಿ ಮೆಮೊರಿ ಸ್ಪೇಸ್‌ ಇರಬೇಕಾಗುತ್ತದೆ.

  • ಸೆಲೆಕ್ಟ್‌ ಮಾಡಿದ ಬಳಿಕ ನೆಕ್ಸ್ಟ್ ಆಪ್ಷನ್‌ ಕ್ಲಿಕ್‌ ಮಾಡಿ.

  • ಅಂದಹಾಗೆ ನೀವು ಯಾವಾಗ ಬೇಕೋ ಆಗ ನಿಮ್ಮ ಕಂಪ್ಯೂಟರ್‌ನಿಂದ ಬ್ಯಾಕಪ್ ಪಡೆಯಬಹುದಾಗಿದೆ. ನಿಮ್ಮ ಕೆಲಸ ಕಾರ್ಯಗಳ ನಂತರ ಬ್ಯಾಕಪ್‌ ಮಾಡಬೇಕೆಂದಿದ್ದಲ್ಲಿ ಬ್ಯಾಕಪ್ ಪ್ರೋಗ್ರಾಂ ಅನ್ನು ಶೆಡ್ಯೂಲ್ ಕೂಡಾ ಮಾಡಬಹುದಾಗಿದೆ.

ಉಚಿತ ಆನ್ಟಿ ವೈರಸ್‌ ಇನ್ಸ್ಟಾಲ್‌ ಮಾಡುವುದು ಹೇಗೆ?

ಡಿಫ್ರಾಗ್ಮೆಂಟೇಶನ್‌ ಮೂಲಕ ಕಂಪ್ಯೂಟರ್‌ನ ಸ್ಪೀಡ್‌ ಹೆಚ್ಚಿಸುವುದು ಹೇಗೆ?

ಉಚಿತ ಆನ್ಟಿ ವೈರಸ್‌ ಇನ್ಸ್ಟಾಲ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot