ಫೇಸ್‌ಬುಕ್‌ನಲ್ಲಿ ಫೋಟೋವನ್ನು ಅನ್‌ಟ್ಯಾಗ್‌ ಮಾಡುವುದು ಹೇಗೆ..?

By Super
|
ಫೇಸ್‌ಬುಕ್‌ನಲ್ಲಿ ಫೋಟೋವನ್ನು ಅನ್‌ಟ್ಯಾಗ್‌ ಮಾಡುವುದು ಹೇಗೆ..?


ಫೇಸ್‌ಬುಕ್‌ನಲ್ಲಿ ಅನೇಕ ಮಂದಿ ಫೊಟೋವನ್ನು ಅಪ್‌ಲೋಡ್‌ ಮಾಡುವುದರ ಜೊತೆಗೆ ನಮಗೂ ಆ ಫೊಟೋವನ್ನು ಟ್ಯಾಗ್‌ ಮಾಡುತ್ತಾರೆ . ಇದು ನಮ್ಮ ಅಲ್ಬನಲ್ಲಿ ಡೈರೆಕ್ಟ್‌ ಆಗಿ ಸೇವ್‌ ಆಗುತ್ತದೆ. ಈ ಫೊಟೋಗಳು ನಮ್ಮ ಅನುಮತಿ ಇಲ್ಲದೇ ಟ್ಯಾಗ್‌ ಅಗುವುದರಿಂದ ನಮಗೂ ಕಿರಿಕಿರಿ. ಅಲ್ಲದೇ ಈ ಫೊಟೋಗಳನ್ನು ತೆಗೆಯದಿದ್ದರೆ ಇದರ ಸಂಖ್ಯೆ ಜಾಸ್ತಿ ಅಗುತ್ತಲೇ ಹೋಗುತ್ತದೆ. ಹೀಗಾಗಿ ನಮಗೆ ಕಿರಿಕಿರಿಯಾಗುವ ಈ ಫೊಟೋಗಳನ್ನು ತೆಗೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಮೂರು ಸರಳ ವಿಧಾನಗಳಿದ್ದು ಅದನ್ನು ಅನುಸರಿಸಿದ್ರೆ ನೀವು ಫೋಟೋವನ್ನು ಅನ್‌ಟ್ಯಾಗ್‌ ಮಾಡಬಹುದು.

ಸ್ಟೆಪ್‌ -1 :

ಮೊದಲನೇಯದಾಗಿ ನೀವು ಫೊಟೋ ವ್ಯೂವರ್‌ನ್ನು ಓಪನ್‌ ಮಾಡಿ.

ಸ್ಟೆಪ್‌ -2 :

ನೀವು ತೆಗೆಯಬೇಕಾದ ಫೊಟೋದ ಮೇಲೆ ಮೌಸ್‌ನ್ನು ತೆಗೆದುಕೊಂಡು ಹೋಗಿ. ಆಗ ನಿಮ್ಮ ಫೊಟೋ ಮೇಲ್ಬಾಗದಲ್ಲಿ ಎರಡು ಆಯ್ಕೆಗಳಿರುವ ಬಟನ್‌ ಕಾಣುತ್ತದೆ. ಇದರಲ್ಲಿ ನೀವು "Report/Remove Tag." ಸೆಲೆಕ್ಟ್‌ ಮಾಡಿ

ಸ್ಟೆಪ್‌- 3 :

ಈವಾಗ ನಿಮ್ಮ ಸ್ಕ್ರೀನ್‌ನಲ್ಲಿ "I want to remove the tag" ಸೆಲೆಕ್ಟ್‌ ಮಾಡಿ ಅಮೇಲೆ "Continue" ಕ್ಲಿಕ್‌ ಮಾಡಿ . ಈಗ ನಿಮ್ಮ ಫೇಸ್‌ಬುಕ್‌ನಲ್ಲಿರುವ ಫೊಟೋ ಆನ್‌ಟ್ಯಾಗ್‌ ಆಗಿರುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X