Subscribe to Gizbot

ಎಚ್ಚರ: ರಿಲಾಯನ್ಸ್ ಜಿಯೋ ಮೇಲೆ ತೂಗುತ್ತಿದೆ ಅಪಾಯದ ತೂಗುಗತ್ತಿ!!!

Written By:

ಭಾರತದಲ್ಲಿ ರಿಲಾಯನ್ಸ್ ಜಿಯೋ ಆಫರ್‌ಗಳನ್ನು ಪ್ರಸ್ತುತಪಡಿಸಿದ ನಂತರದಿಂದ ಗ್ರಾಹಕರಿಗೆ ಜಿಯೋದಿಂದ ಜೀವದಾನ ದೊರಕಿದೆ ಎಂದೇ ಹೇಳಬಹುದು. ಅತಿ ಕಡಿಮೆ ದರದ 4ಜಿ ಯೋಜನೆಗಳಾಗಿರಬಹುದು, ಉಚಿತ ವಾಯ್ಸ್ ಕರೆಯಾಗಿರಬಹುದು ಅಥವಾ ಕೈಗೆಟಕುವ ಬ್ರಾಡ್‌ಬ್ಯಾಂಡ್ ಯೋಜನೆಗಳಾಗಿರಬಹುದು ಹೀಗೆ ಕಂಪೆನಿ ತನ್ನ ಹೊಸ ಹೊಸ ಆಫರ್‌ಗಳ ಮೂಲಕ ಬಳಕೆದಾರರ ಮನದಲ್ಲಿ ಅಚ್ಚಳಿಯದ ಪ್ರಭಾವವನ್ನು ಉಂಟುಮಾಡಿರುವುದಂತೂ ನಿಜ.

ಓದಿರಿ: ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

ಜಿಯೋದ ದುರ್ಬಲ ನೆಟ್‌ವರ್ಕ್ ಸಮಸ್ಯೆಗೆ ಹೆಚ್ಚಿನ ಟೀಕೆಗಳು ವ್ಯಕ್ತವಾಗಿವೆ. ಕಾಲ್ ಡ್ರಾಪ್ಸ್ ಮತ್ತು ಜಿಯೋ ಸಿಮ್‌ನ ಅಲಭ್ಯತೆ ಭಾರತೀಯ ಜನತೆಯ ಆಸೆಗಳನ್ನು ಪೂರೈಸುವಂತಿಲ್ಲ. ಆದರೆ ಇಂದಿನ ಲೇಖನದಲ್ಲಿ ಜಿಯೋ ಕುರಿತಾದ ಇನ್ನಷ್ಟು ಸಮಸ್ಯೆಗಳನ್ನು ನಾವು ತಿಳಿಸುತ್ತಿದ್ದು ಅಪಾಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಗೌಪ್ಯತೆ ಅಪಾಯದಲ್ಲಿರಬಹುದು

ನಿಮ್ಮ ಗೌಪ್ಯತೆ ಅಪಾಯದಲ್ಲಿರಬಹುದು

ಅಜ್ಞಾತ ಹ್ಯಾಕಿಂಗ್ ಸಮೂಹದ ಪ್ರಕಾರ, ಜಿಯೋ ಯುಎಸ್ ಮತ್ತು ಸಿಂಗಾಪೂರ್‌ನಲ್ಲಿರುವ ಟಾರ್ಗೆಟ್ ಮಾಡಲಾದ ಜಾಹೀರಾತು ಗುಂಪುಗಳಿಗೆ ಬಳಕೆದಾರ ಕರೆ ಡೇಟಾವನ್ನು ಬಳಕೆದಾರರಿಗೆ ತಿಳಿದೆಯೇ ಮಾರುತ್ತಿದೆ ಎಂಬ ಸುದ್ದಿ ಇದೆ. ಇದು ಬೇಡದೇ ಇರುವ ಮೇಲ್‌ಗಳು, ಸಂದೇಶಗಳು ಮತ್ತು ಕರೆಗಳನ್ನು ತಮ್ಮ ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಕಂಪೆನಿಗಳು ಒತ್ತತಾಯಪಡಿಸುವ ಸಾಧ್ಯತೆ ಇದೆ.

ಅಪ್ಲಿಕೇಶನ್‌ಗಳಿಂದ ಮಾಹಿತಿ ಸೋರಿಕೆ

ಅಪ್ಲಿಕೇಶನ್‌ಗಳಿಂದ ಮಾಹಿತಿ ಸೋರಿಕೆ

ಈ ಗುಂಪು ಕಂಡುಹಿಡಿದಿರುವಂತೆ, ಜಿಯೋ ಅಪ್ಲಿಕೇಶನ್ ಇದರಲ್ಲಿ ಮೈಜಿಯೋ ಮತ್ತು ಜಿಯೋ ಡಯಲರ್‌ನಲ್ಲಿ ಮ್ಯಾಡ್ ಮೀ ಎಂಬ ಜಾಹೀರಾತು ನೆಟ್‌ವರ್ಕ್‌ಗೆ ಮಾಹಿತಿ ರವಾನೆಯಾಗುತ್ತಿದೆ. ನಿಮ್ಮ ಸಂಪರ್ಕ ಪಟ್ಟಿ, ಸಂದೇಶಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಅಪಾಯದಲ್ಲಿದೆ ಎಂದಾಗಿದೆ.

ಇದೇ ಮೊದಲ ಬಾರಿಯಲ್ಲ

ಇದೇ ಮೊದಲ ಬಾರಿಯಲ್ಲ

ರಿಲಾಯನ್ಸ್ ಸೇವೆಗಳನ್ನು ಅಪಾಯದಲ್ಲಿ ಸಿಲುಕುತ್ತಿರುವುದು ಇದು ಮೊದಲ ಬಾರಿಯಲ್ಲ. ಕಳೆದ ವರ್ಷ, ಹ್ಯಾಕರ್‌ಗಳು ಗುಂಪೊಂದು ನೀಡಿರುವ ಮಾಹಿತಿಯಂತೆ ಆರ್‌ಜಿಯೋ ಚಾಟ್ ಅಪ್ಲಿಕೇಶನ್ ಚೈನೀಸ್ ಐಪಿಗೆ ಕಳುಹಿಸುತ್ತಿದ್ದು ಇದು ಬಳಕೆದಾರರ ಸಮ್ಮತಿಯಿಲ್ಲದೆ ನಡೆದಿದೆ.

ಈ ಬಗ್ಗೆ ರಿಲಾಯನ್ಸ್ ಅಭಿಪ್ರಾಯವೇನು?

ಈ ಬಗ್ಗೆ ರಿಲಾಯನ್ಸ್ ಅಭಿಪ್ರಾಯವೇನು?

ಇನ್ನು ಈ ಬಗ್ಗೆ ಜಿಯೋ ತನ್ನ ಸ್ಪಷ್ಟನೆಯನ್ನು ನೀಡುತ್ತಿದ್ದು, ಜಿಯೋ ಗ್ರಾಹಕರ ಭದ್ರತೆ ಮತ್ತು ಗೌಪ್ಯತೆಗೆ ಹೆಚ್ಚಿನ ಒತ್ತನ್ನು ನೀಡಿದ್ದು ಈ ವಿಷಯದಲ್ಲಿ ಕಂಪೆನಿ ಗಂಭೀರವಾಗಿದೆ ಎಂದಾಗಿದೆ. ತಾನು ಬಳಕೆದಾರರ ಯಾವುದೇ ಮಾಹಿತಿಗಳನ್ನು ಯಾರಿಗೂ ಹಂಚಿಕೊಂಡಿಲ್ಲ ಎಂಬುದು ಜಿಯೋ ವಾದವಾಗಿದೆ.

ಇದನ್ನು ಕುರಿತು ನೀವೇ ತನಿಖೆ ಮಾಡಿ

ಇದನ್ನು ಕುರಿತು ನೀವೇ ತನಿಖೆ ಮಾಡಿ

ಅಂತರಾಷ್ಟ್ರೀಯ ಸರ್ವರ್‌ಗಳೊಂದಿಗೆ ಜಿಯೋ ನೆಟ್‌ವರ್ಕ್ ಯಾವ ಡೇಟಾವನ್ನು ಜಿಯೋ ಹಂಚಿಕೊಂಡಿದೆ ಎಂಬ ವಿವರವಾದ ಹಂತ ಹಂತದ ಮಾರ್ಗದರ್ಶನವನ್ನು ಈ ಹ್ಯಾಕರ್ ಗ್ರೂಪ್ ಹಂಚಿಕೊಂಡಿದೆ. ಜಿಯೋ ಯಾವ ರೀತಿಯಲ್ಲಿ ನಿಮ್ಮ ಕರೆ ಡೇಟಾವನ್ನು ವಿದೇಶಿ ಕಂಪೆನಿಯೊಂದಿಗೆ ಹೇಗೆ ಹಂಚಿಕೊಳ್ಳುತ್ತಿದೆ ಎಂಬುದನ್ನು ಹಂತ ಹಂತವಾಗಿ ಹ್ಯಾಕರ್ ಗುಂಪು ವಿವರಿಸಿದೆ.

ನಾವು ಇದರ ಬಗ್ಗೆ ಯಾವುದೇ ಪರಿಶೀಲನೆಯನ್ನು ನಡೆಸದೇ ಇದ್ದರೂ ಬಳಕೆದಾರರು ಈ ಕುರಿತು ಹೆಚ್ಚುವರಿ ಜಾಗ್ರತೆಯನ್ನು ವಹಿಸಿಕೊಳ್ಳಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
But all above mentioned things seem quite insignificant in comparison to what we are going to tell you now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot