ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್‌ ಟಾಪಿಕ್ಸ್‌ ನೋಡಿ!

Written By:

ಫೇಸ್‌‌ಬುಕ್‌ ಒಂದೊಂದಾಗಿ ಟ್ವೀಟರ್‌ ವಿಶೇಷತೆಗಳನ್ನು ಫಾಲೋ ಮಾಡಲು ಆರಂಭಿಸಿದೆ. ಟ್ವೀಟರ್‌ನಲ್ಲಿದ್ದಂತೆ ಇನ್ನು ಮುಂದೆ ಟ್ರೆಂಡಿಂಗ್‌ ಪೋಸ್ಟ್‌‌‌ಗಳನ್ನು ಫೇಸ್‌‌ಬುಕ್‌ನಲ್ಲಿ ನೋಡಬಹುದು.

ಫೇಸ್‌ಬುಕ್‌ಈ ಸುದ್ದಿಯನ್ನು ತನ್ನ ನ್ಯೂಸ್‌ರೂಮ್‌ನಲ್ಲಿ ತಿಳಿಸಿದ್ದು,ಸದ್ಯದಲ್ಲೇ ಅಮೆರಿಕ,ಇಂಗ್ಲೆಂಡ್‌‌, ಕೆನಡಾ,ಆಸ್ಟ್ರೇಲಿಯಾದ ಫೇಸ್‌ಬುಕ್‌ ಬಳಕೆದಾರರಿಗೆ ಈ ಸೇವೆ ನೀಡಲಿದ್ದೇವೆ ಎಂದು ತಿಳಿಸಿದೆ.

ಈ ವಿಶೇಷತೆ ಡೆಸ್ಕ್‌ಟಾ‌ಪ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು ಬಳಕೆದಾರರ ಬಲಗಡೆಯ ನ್ಯೂಸ್‌‌ಫೀಡ್‌‌ ವಿಭಾಗದಲ್ಲಿ ಫೇಸ್‌ಬುಕ್‌‌ ಈ ವಿಶೇಷತೆಯನ್ನು ಸೇರಿಸಲಿದೆ.ಆಪ್‌ ಮೂಲಕ ಈ ವಿಶೇಷತೆಯನ್ನು ಬಳಸುವ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿದ್ದು ಕೆಲವೇ ದಿನದಲ್ಲಿ ಸ್ಮಾರ್ಟ್‌‌‌‌‌‌ಫೋನ್‌ ಬಳಕೆದಾರರಿಗೆ ಈ ಸೇವೆ ನೀಡಲಾಗುವುದು ಎಂದು ಫೇಸ್‌ಬುಕ್‌ ತಿಳಿಸಿದೆ.

 ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್‌ ಟಾಪಿಕ್ಸ್‌ ನೋಡಿ!

ಟ್ವೀಟರ್‌ನಲ್ಲಿ ದೇಶ ನಗರಗಳ ಆಧಾರದ ಮೇಲೆ ಟ್ರೆಂಡಿಂಗ್‌ ಟ್ವೀಟ್‌‌ಗಳನ್ನು ನೋಡುವ ಅವಕಾಶವಿದ್ದು ಫೇಸ್‌ಬುಕ್‌ ಈ ಸೇವೆಯನ್ನು ಹೇಗೆ ನೀಡುತ್ತದೆ ಎನ್ನುವುದು ಈ ಸೇವೆ ಆರಂಭವಾದ ಬಳಿಕವಷ್ಟೇ ತಿಳಿಯಬಹುದಾಗಿದೆ.

ಫೇಸ್‌‌ಬುಕ್‌‌ ಟ್ವೀಟರ್‌ನಲ್ಲಿದ್ದಂತೆ ಹ್ಯಾಶ್‌ ಟ್ಯಾಗ್‌ ವಿಶೇಷತೆಯನ್ನು ಈ ಹಿಂದೆ ಆರಂಭಿಸಿತ್ತು.ಆದರೆ ಬಹಳಷ್ಟು ಸೋಶಿಯಲ್‌ ಮೀಡಿಯಾ ತಜ್ಞರು ಫೇಸ್‌ಬುಕ್‌ ಹ್ಯಾಶ್‌ಟ್ಯಾಗ್‌ ಟ್ವೀಟರ್‌ನಲ್ಲಿದ್ದಂತೆ ಬಳಕೆದಾರರ ಮೇಲೆ ಅಷ್ಟೇನು ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಫೇಸ್‌ಬುಕ್‌ ಈಗ ಬಳಕೆದಾರರ ಮೇಲೆ ಪ್ರಭಾವ ಬೀರುವಂತಾಗಲು ಹ್ಯಾಶ್‌ಟ್ಯಾಗ್‌ ಇರುವ ಟ್ರೆಂಡಿಂಗ್‌ ಪೋಸ್ಟ್‌ ವಿಶೇಷತೆ ಸೇರಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸುದ್ದಿಗಳ ಲಿಂಕ್‌ಗಳನ್ನು ಶೇರ್‌‌ ಮಾಡುತ್ತಿರುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಪ್ರಮುಖ ಸುದ್ದಿ ವೆಬ್‌ಸೈಟ್‌‌ಗಳು ಪೋಸ್ಟ್‌‌ ಮಾಡಿರುವ ಸುದ್ದಿಗಳನ್ನು ಬಳಕೆದಾರರು ಸುಲಭವಾಗಿ ನೋಡುವಂತಾಗಲು ಹೊಸ ನ್ಯೂಸ್‌ ಫೀಡ್‌‌ ವಿಶೇಷತೆಯನ್ನು ಸೇರಿಸಲು ಮುಂದಾಗಲಿದ್ದೇವೆ ಎಂದು ಕಳೆದ ಡಿಸೆಂಬರ್‌ನಲ್ಲಿ ಹೇಳಿತ್ತು.ಆದರೆ ಇಲ್ಲಿವರೆಗೆ ಈ ವಿಶೇಷತೆಯನ್ನು ಫೇಸ್‌ಬುಕ್‌ ಸೇರಿಸಿಲ್ಲ.

ಇದನ್ನೂ ಓದಿ: ಫೇಸ್‌ಬುಕ್‌ನ್ನು ಸಕ್ರಿಯವಾಗಿ ಬಳಸುವವರಿಗೆ ಏಳು ಟಿಪ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot