ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು

Written By:

ಸಾಧನೆ ಎಂಬುದು ಸಾಧಿಸುವವರನ್ನು ಆಧರಿಸಿದೆಯೇ ಹೊರತು ಅವರ ವಯಸ್ಸನ್ನಲ್ಲ. ನಿಮಗೆ ನಿಮ್ಮ ಮೇಲೆ ಭರವಸೆ ಇದ್ದಲ್ಲಿ ಯಾವುದೇ ಸ್ಪರ್ಧೆಯನ್ನು ಗೆಲ್ಲುವುದು ಅಸಾಧ್ಯವಾಗಲಾರದು ಎಂಬುದಕ್ಕೆ ಸಾಧನೆಯ ಶಿಖರವನ್ನೇರಿರುವ ಯುವ ವ್ಯಕ್ತಿಗಳ ಪರಿಚಯವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಕಾಯಕವೇ ಕೈಲಾಸ ಎಂಬ ನಂಬಿಕೆಯನ್ನು ಆಧಾರವಾಗಿಸಿಕೊಂಡು ಇವರುಗಳು ಅತಿ ಸಣ್ಣ ಪ್ರಯತ್ನದಲ್ಲೇ ಮೇಲ್ಮಟ್ಟದ ಹಂತವನ್ನೇರುತ್ತಾ ಇಂದು ಮಾನ್ಯತೆಯನ್ನು ಗಳಿಸಿಕೊಂಡಿದ್ದಾರೆ. ಮತ್ತು ತಮ್ಮದೇ ಆದ ಸಂಸ್ಥೆಗಳನ್ನು ಹುಟ್ಟಿ ಹಾಕಿ ಸಾಧನಾಶೀಲರಾಗಿದ್ದಾರೆ.

ಹಾಗಿದ್ದರೆ ಭಾರತದ ಪ್ರತಿಭೆಗಳಾದ ಈ ಯುವ ಉದ್ಯಮಿಗಳು ಮತ್ತು ಅವರ ಉದ್ಯಮಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಿದ್ದು ಪ್ರಗತಿಯತ್ತ ಅವರು ಕಾಲಿಟ್ಟಿದ್ದು ಹೇಗೆ ಎಂಬುದನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಬನ್ ಲ್ಯಾಡರ್ಸ್ ಸಹಸ್ಥಾಪಕರು

ಅರ್ಬನ್ ಲ್ಯಾಡರ್ಸ್ ಸಹಸ್ಥಾಪಕರು

ರಾಜೀವ್ ಶ್ರೀವಾಸ್ತವ್ ಹಾಗೂ ಅಶೀಷ್ ಗೋಯಲ್

ಮಿಕ್‌ಕಿನ್ಸೆ ಮತ್ತು ಯಾಹೂನಲ್ಲಿ ಕೆಲಸ ಮಾಡಿ ಪಳಗಿದವರು ರಾಜೀವ್ ಶ್ರೀವಾಸ್ತವ್ ಹಾಗೂ ಅಶೀಷ್ ಗೋಯಲ್. ಆನ್‌ಲೈನ್ ಫರ್ನೀಚರ್ ವ್ಯವಹಾರವಾಗಿರುವ ಅರ್ಬನ್ ಲ್ಯಾಡರ್ಸ್ ಭಾರತದಲ್ಲಿ 12 ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ.

ಫುಡ್ ಪಾಂಡಾ ಸಹಸ್ಥಾಪಕರು

ಫುಡ್ ಪಾಂಡಾ ಸಹಸ್ಥಾಪಕರು

ರೋಹಿತ್ ಚಡ್ಡಾ

ಯುಕೆನಲ್ಲಿ ಬ್ಯಾಂಕ್ ಕೆಲಸವನ್ನು ಮಾಡುತ್ತಿದ್ದ ರೋಹಿತ್ ಚಡ್ಡಾ ಉತ್ತಮ ಆಹಾರ ವಿತರಣಾ ಸೈಟ್‌ಗಳಿಗಾಗಿ ಅನ್ವೇಷಿಸುತ್ತಿದ್ದರು. ಆದರೆ ಈ ಅನ್ವೇಷಣೆ ಅವರಿಗೆ ಹೊ ಉದ್ಯಮದ ಕನಸೊಂದನ್ನು ಬಿತ್ತಲು ಕಾರಣವಾಯಿತು. ಯುಕೆಯ ಉದ್ಯೋಗಕ್ಕೆ ತಿಲಾಂಜಲಿಯನ್ನಿಟ್ಟು ಭಾರತದಲ್ಲಿ ಆಹಾರ ವಿತರಣಾ ಉದ್ಯಮವಾಗಿರುವ ಆನ್‌ಲೈನ್ ಫುಡ್ ಪಾಂಡಾದ ಸ್ಥಾಪನೆಗೆ ಕಾರಣವಾಯಿತು. 10 ನಗರಗಳಲ್ಲಿ 2000 ಹೋಟೆಲ್‌ಗಳಿಂದ ಫುಡ್ ಪಾಂಡಾ ಆಹಾರ ಡೆಲಿವರಿ ಮಾಡುತ್ತಿದೆ.

ಮ್ಯಾಪ್ ಮೈ ಇಂಡಿಯಾ ಸ್ಥಾಪಕರು

ಮ್ಯಾಪ್ ಮೈ ಇಂಡಿಯಾ ಸ್ಥಾಪಕರು

ರೋಹನ್ ವರ್ಮಾ

ಭಾರತೀಯ ಮಾರುಕಟ್ಟೆಗೆ ಗೂಗಲ್ ಮ್ಯಾಪ್ಸ್ ಬರುವುದಕ್ಕೂ ಮುನ್ನ ತನ್ನ ಹಾಜರಾತಿಯನ್ನು ದಾಖಲಿಸಿರುವ ಸಂಸ್ಥೆಯಾಗಿದೆ ಮ್ಯಾಪ್ ಮೈ ಇಂಡಿಯಾ. ತನ್ನ ಅಭಿವೃದ್ಧಿ ಶೀಲ ವಿಚಾರಗಳಿಂದ ಭಾರತದಲ್ಲಿ ಸ್ಥಳಗಳ ಅನ್ವೇಷಣೆಗೆ ಸರಳವಾದ ರಹದಾರಿಯನ್ನು ಕಂಡುಹಿಡಿಯುವುದಕ್ಕೆ ಕಾರಣವಾಗಿರುವುದು ಮ್ಯಾಪ್ ಮೈ ಇಂಡಿಯಾವಾಗಿದೆ. ವಿಳಾಸದ ಮೂಲಕ ಸ್ಥಳಗಳನ್ನು ಅನ್ವೇಷಿಸುವುದಕ್ಕೆ ಮ್ಯಾಪ್ ಮೈ ಇಂಡಿಯಾ ಕಾರಣವಾಗಿದೆ.

ಹ್ಯಾಪಿಲಿ ಅನ್‌ಮ್ಯಾರೀಡ್

ಹ್ಯಾಪಿಲಿ ಅನ್‌ಮ್ಯಾರೀಡ್

ರಜತ್ ತುಲಿ ಮತ್ತು ರಾಹುಲ್ ಆನಂದ್

ಉದ್ಯೋಗ ಹೋದ ಕೂಡಲೇ ಹೆಚ್ಚಿನವರು ಹತಾಶರಾಗಿ ಆತ್ಮಹತ್ಯೆಯಂತಹ ಯೋಚನೆಗೆ ಮುಂದಡಿಯಿಡುತ್ತಾರೆ. ಆದರೆ ರಜತ್ ಮತ್ತು ರಾಹುಲ್ ಈ ರೀತಿ ಮಾಡದೇ ತಮ್ಮ ಸೋಲನ್ನು ಸವಾಲಾಗಿ ಸ್ವೀಕರಿಸಿ ಹ್ಯಾಪಿಲಿ ಅನ್‌ಮ್ಯಾರೀಡ್ ಸಂಸ್ಥೆಯನ್ನು ಹುಟ್ಟುಹಾಕಿದರು. ಜನರ ಅಪಹಾಸ್ಯ ಮತ್ತು ವ್ಯಂಗ್ಯದ ನಡುವೆಯೇ ತಮ್ಮ ಸಂಸ್ಥೆಯನ್ನು ಮುಂದಕ್ಕೆ ಬೆಳೆಸಿದರು.ಇದೀಗ ಸಂಸ್ಥೆ 23 ಸ್ಟೋರ್‌ಗಳನ್ನು ಭಾರತದಲ್ಲಿ ಹೊಂದಿದೆ.

ಸ್ನ್ಯಾಪ್‌ಡೀಲ್ ಸಹಸ್ಥಾಪಕರು

ಸ್ನ್ಯಾಪ್‌ಡೀಲ್ ಸಹಸ್ಥಾಪಕರು

ರೋಹಿತ್ ಬನ್ಸಾಲ್ ಮತ್ತು ಕುನಾಲ್ ಬಾಲ್

ಆನ್‌ಲೈನ್ ಡೀಲ್‌ಗಳಗಾಗಿ ಪೋರ್ಟಲ್‌ನಂತೆ ಆರಂಭವಾಗಿದ್ದ ಸ್ನ್ಯಾಪ್‌ಡೀಲ್ ಈಗ ರೀಟೈಲ್ ತಾಣವಾಗಿ ಮಾರ್ಪಟ್ಟಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೂ ಸ್ಪರ್ಧೆಯನ್ನೊಡ್ಡುವ ಮಾದರಿಯಲ್ಲಿ ಸ್ನ್ಯಾಪ್‌ಡೀಲ್ ಬೆಳೆದಿದೆ.

ಓಲಾ ಕ್ಯಾಬ್ಸ್ ಸಹಸ್ಥಾಪಕರು

ಓಲಾ ಕ್ಯಾಬ್ಸ್ ಸಹಸ್ಥಾಪಕರು

ಭಾವಿಶ್ ಅಗರ್‌ವಾಲ್

ಐಐಟಿಯಿಂದ ಪದವಿಯನ್ನು ಪಡೆದ ಭಾವಿಶ್ ಓಲಾ ಕ್ಯಾಬ್ಸ್ ಆರಂಭಿಸಲು ತಮ್ಮ ಮೈಕ್ರೋಸಾಫ್ ರೀಸರ್ಚ್ ಕೆಲಸವನ್ನು ತ್ಯಜಿಸಿದರು. ಇಂದು ಓಲಾ 18,000 ವಾಹನಗಳನ್ನು ಭಾರತದಾದ್ಯಂತ ಹೊಂದಿದೆ ಮತ್ತು ಯಶಸ್ಸನ್ನು ಕಾಣುತ್ತಿದೆ.

ರೆಡ್ ಬಸ್.ಇನ್ ಸ್ಥಾಪಕರು

ರೆಡ್ ಬಸ್.ಇನ್ ಸ್ಥಾಪಕರು

ಫನೀಂದ್ರಾ ಸಮಾ

ಸಮಸ್ಯೆಯೆಂಬುದು ಗೆಲುವಿನ ದಾರಿಗೆ ಮೆಟ್ಟಿಲು ಎಂಬುದು ಫನೀಂದ್ರಾ ಸಮಾ ಮಾತಾಗಿದೆ. ತಮ್ಮ ನಿವಾಸ ಸ್ಥಾನಕ್ಕೆ ಬಸ್ ಟಿಕೇಟ್ ದೊರೆಯದೇ ಇದ್ದ ಸಂದರ್ಭದಲ್ಲಿ ಮನದಲ್ಲಿ ಮೂಡಿದ ವಿಚಾರವೇ ಇಂದು ನಾವು ಕಾಣುತ್ತಿರುವ ರೆಡ್ ಬಸ್ ಡಾಟ್ ಇನ್ ಆಗಿದೆ.

ಮೈಕ್ರೋಮ್ಯಾಕ್ಸ್ ಸಹಸ್ಥಾಪಕರು

ಮೈಕ್ರೋಮ್ಯಾಕ್ಸ್ ಸಹಸ್ಥಾಪಕರು

ರಾಹುಲ್ ಶರ್ಮಾ

ಭಾರತೀಯ ಬಳಕೆದಾರರ ಆಗ್ರಹವಾಗಿದ್ದ ದೀರ್ಘ ಬ್ಯಾಟರಿ ಫೋನ್‌ಗಳಿಗಿದ್ದ ಬೇಡಿಕೆಯನ್ನು ಕಂಡು ರಾಹುಲ್ ಅವರು ಫೋನ್ ತಯಾರಿಕಾ ಕಾರ್ಯಕ್ಕೆ ಅಡಿಇಟ್ಟರು. ಮೈಕ್ರೋಮ್ಯಾಕ್ಸ್ ಯಶಸ್ಸಿನ ಬೆನ್ನುಲುಬು ಇವರೇ ಅಂದರೂ ತಪ್ಪಿಲ್ಲ.

ಹೌಸಿಂಗ್ ಸಹಸ್ಥಾಪಕರು

ಹೌಸಿಂಗ್ ಸಹಸ್ಥಾಪಕರು

ಅದ್ವಿತೀಯ ಶರ್ಮಾ

ಐಐಟಿಯ ಇಂಜನಿಯರ್ ಪದವೀಧರರಾಗಿದ್ದ ಅದ್ವಿತೀಯ ಶರ್ಮಾ ಹೌಸಿಂಗ್‌ನ ರುವಾರಿಯಾಗಿದ್ದಾರೆ. ಯಾವುದೇ ಸಮಸ್ಯೆಯೂ ಪರಿಹಾರವಾಗುವುದು ಸೂಕ್ತ ಯೋಚನೆ ಮತ್ತು ಯೋಜನೆಗಳಿಂದ. 26 ರ ಹರೆಯದ ಆದಿತ್ಯಾ ಕೂಡ ಹೆಚ್ಚು ಮೌಲ್ಯಯುಳ್ಳ ಸ್ಟಾರ್ಟ್ ಅಪರ್ ಆಗಿ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.

ಜೊಮಾಟೊ ಸ್ಥಾಪಕರು

ಜೊಮಾಟೊ ಸ್ಥಾಪಕರು

ದೀಪೆಂದರ್ ಗೋಯಲ್

ಆಹಾರಕ್ಕಿದ್ದ ತೀವ್ರ ಬೇಡಿಕೆ ಮತ್ತು ಅದನ್ನು ಆರ್ಡರ್ ಮಾಡುವ ಜನರ ಕಷ್ಟವೇ ಜೊಮಾಟೊದ ಸ್ಥಾಪನೆಗೆ ದೀಪೆಂದರ್‌ ಅನ್ನು ಉತ್ತೇಜಿಸಿತು.ರೆಸ್ಟಾರೆಂಟ್‌ಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಜೊಮಾಟೊ ಬಳಕೆದಾರರಿಗೆ ನೀಡುತ್ತದೆ.

ಜಿವಾಮೆ ಸ್ಥಾಪಕರು

ಜಿವಾಮೆ ಸ್ಥಾಪಕರು

ರಿಚಾ ಕಾರ್

ವಿಕ್ಟೋರಿಯಾಸ್ ಸೀಕ್ರೇಟ್ ಸೇಲ್ ಇವರನ್ನು ಜಿವಾಮೆ ಉದ್ಯಮಕ್ಕೆ ತೊಡಗುಂತೆ ಮಾಡಿತು. ಮಹಿಳೆಯರ ಒಳುಉಡುಪುಗಳ ಬ್ರ್ಯಾಂಡ್ ಆಗಿರುವ ಜಿವಾಮೆ ಇಂದು ಯಶಸ್ವೀ ಆನ್‌ಲೈನ್ ವ್ಯವಹಾರವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಫ್ಲಿಪ್‌ಕಾರ್ಟ್ ಸಹಸ್ಥಾಪಕರು

ಫ್ಲಿಪ್‌ಕಾರ್ಟ್ ಸಹಸ್ಥಾಪಕರು

ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್

ಅಮೆಜಾನ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸಿದ್ದ ಇವರಿಬ್ಬರೂ ಸ್ಪರ್ಧಾತ್ಮಕ ಸರ್ಚ್ ಇಂಜಿನ್ ಅನ್ನು ಆರಂಭಿಸುವ ಛಲವನ್ನು ತೊಟ್ಟರು. ಆದರೆ ನಂತರ ಇವರ ಗಮನಕ್ಕೆ ಬಂದಿದ್ದು ಇ ಕಾಮರ್ಸ್ ಮಾರುಕಟ್ಟೆ ತುಂಬಾ ಸಣ್ಣದಾಯಿತು ಎಂಬುದು. ಇದಕ್ಕಾಗಿ ತುಸು ದೊಡ್ಡ ಮಾರುಕಟ್ಟೆಯನ್ನು ಆರಂಭಿಸುವುದಕ್ಕೆ ಇವರು ಮನಸ್ಸು ಮಾಡಿ ಫ್ಲಿಪ್‌ಕಾರ್ಟ್ ಸ್ಥಾಪನೆಗೆ ಮುಂದಾದರು. ಇಂದು ಫ್ಲಿಪ್‌ಕಾರ್ಟ್ ಹೇಗೆ ಯಶಸ್ವಿಯಾಗಿದೆ ಎಂಬುದನ್ನು ನಾವು ಹೇಳಬೇಕಿಲ್ಲ ಅಲ್ಲವೇ?

ಕಾಮನ್ ಫ್ಲೋರ್ ಸಹಸ್ಥಾಪಕರು

ಕಾಮನ್ ಫ್ಲೋರ್ ಸಹಸ್ಥಾಪಕರು

ಸುಮಿತ್ ಜೈನ್

ಒರೇಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಜೈನ್ 2007 ರಲ್ಲಿ ಕಾಮನ್ ಫ್ಲೋರ್ ಅನ್ನು ಆರಂಭಿಸಿದರು. ಆನ್‌ಲೈನ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇದು ನಂಬರ್ ಒನ್ ಸ್ಥಾನದಲ್ಲಿದೆ.

ಮಿಂತ್ರಾ ಸಹಸ್ಥಾಪಕರು

ಮಿಂತ್ರಾ ಸಹಸ್ಥಾಪಕರು

ಮುಕೇಶ್ ಬನ್ಸಾಲ್

ಬಳಕೆದಾರರಿಗೆ ಟಿ ಶರ್ಟ್, ಮಗ್ಸ್, ಫೋಟೋ ಫ್ರೇಮ್ಸ್ ಖರೀದಿಸುವ ತಾಣವಾಗಿ ಮಿಂತ್ರಾ ಆರಂಭವಾಯಿತು. ಇಷ್ಟಕ್ಕೇ ಸುಮ್ಮನಾಗಿರದ ಮುಕೇಶ್ ಬನ್ಸಾಲ್ ಪ್ರಯತ್ನದ ಮಂತ್ರವನ್ನು ತಮ್ಮದಾಗಿಸಿಕೊಂಡು ಮಿಂತ್ರಾವನ್ನು ಮುಂದಕ್ಕೆ ಕೊಂಡೊಯ್ದರು. ಇದೀಗ ಸಂಸ್ಥೆ 1000 ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಹೊಂದಿದೆ.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಪುಟ

ಇನ್ನಷ್ಟು ವೈವಿಧ್ಯಮಯ ಸುದ್ದಿಗಳನ್ನು ಓದಲು ತಪ್ಪದೇ ನಮ್ಮ ಗಿಜ್‌ಬಾಟ್ ಕನ್ನಡ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you have the spirit but have curbed it because of certain doubts, read the stories of these young Indians who are living their dreams and ruling the markets as well.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot