Subscribe to Gizbot

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು

Posted By:

ವಿಶ್ವ ದೊಡ್ಡ ಟೆಕ್‌ ಕಂಪೆನಿಗಳು ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಲು ಆಗಾಗ ಸಣ್ಣ ಸಣ್ಣ,ದೊಡ್ಡ ದೊಡ್ಡ ಐಟಿ ಕ್ಷೇತ್ರದ ಕಂಪೆನಿಗಳು ಖರೀದಿಸುತ್ತಿರುತ್ತವೆ.ಇದಕ್ಕೆ ಈಗ ಹೊಸ ಸೇರ್ಪಡೆಯಾಗಿ ಫೇಸ್‌ಬುಕ್‌ ಮೆಸೆಜಿಂಗ್‌ ಆಪ್‌ ಕಂಪೆನಿ ವಾಟ್ಸ್‌ಆಪ್‌ನ್ನು 19 ಶತಕೋಟಿ ಡಾಲರ್‌ ನೀಡಿ ಖರೀದಿಸಿದೆ.

ಆದರೆ ಫೇಸ್‌ಬುಕ್‌ ಇತಿಹಾಸದಲ್ಲಿ ವಾಟ್ಸ್‌ಆಪ್‌ನ್ನು ಖರೀದಿ ಒಪ್ಪಂದ ಅತ್ಯಧಿಕವಾಗಿದ್ದರೂ, ಕಂಪೆನಿ ಖರೀದಿ ವಿಚಾರ ಬಂದಾಗ ಫೇಸ್‌ಬುಕ್‌ ಎರಡನೇ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಫೇಸ್‌ಬುಕ್‌ ಖರೀದಿಗೂ ಹಿಂದೆ ಎಚ್‌ಪಿ ಕಂಪೆನಿ ಕಾಂಪ್ಯಾಕ್‌ನ್ನು ಅತ್ಯಧಿಕ ಬೆಲೆಗೆ ಖರೀದಿಸಿತ್ತು.ಹೀಗಾಗಿ ನಿಮ್ಮ ಕುತೂಹಲಕ್ಕೆ ಟೆಕ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಕೆಲವು ಕಂಪೆನಿಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆಪಲ್‌ ಡೀಲ್‌-ಆಪಲ್‌ ಖರೀದಿಸಿದ ಟಾಪ್‌ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಚ್‌‌ಪಿ- ಕಾಂಪ್ಯಾಕ್‌ :

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಅಮೆರಿಕದ ಎಚ್‌ಪಿ ಕಂಪೆನಿ ಐಬಿಎಂ ವಿರುದ್ದ ಸ್ಪರ್ಧಿಸಲು ಕಾಂಪ್ಯಾಕ್‌ ಕಂಪೆನಿಯನ್ನು 2001 ಸೆಪ್ಟೆಂಬರ್‌ನಲ್ಲಿ ಖರೀದಿಸಿತ್ತು.ಈ ಖರೀದಿಗೆ ಎಚ್‌ಪಿ ಕಂಪೆನಿ 25 ಶತಕೋಟಿ ಡಾಲರ್‌‌ನ್ನುಕಾಂಪ್ಯಾಕ್‌ಗೆ ನೀಡಿತ್ತು.

ಗೂಗಲ್‌-ಮೋಟರೋಲಾ:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಇಂಟರ್‌ನೆಟ್‌ ದಿಗ್ಗಜ ಕಂಪೆನಿ ಗೂಗಲ್‌ ಕೆಲವು ಪೇಟೆಂಟ್‌‌‌ಗಳಿಗಾಗಿ ಮೋಟರೋಲಾಕಂಪೆನಿಯನ್ನು ಅಗಸ್ಟ್‌ 2011ರಲ್ಲಿ ಖರೀದಿಸಿತ್ತು. ಈ ಖರೀದಿ ಒಪ್ಪಂದಕ್ಕಾಗಿ ಮೋಟರೋಲಾ ಕಂಪೆನಿಗೆ ಗೂಗಲ್‌ 12.5 ಶತಕೋಟಿ ಡಾಲರ್‌ ನೀಡಿತ್ತು. ನಂತರ 2014ರಲ್ಲಿ ಗೂಗಲ್‌ ಮೋಟರೋಲಾ ಮೊಬಿಟಲಿಟಿ ಕಂಪೆನಿಯನ್ನು ಚೀನಾದ ಲೆನೊವೊ ಕಂಪೆನಿಗೆ 2.91 ಶತಕೋಟಿ ಡಾಲರ್‌‌ಗೆ ಮಾರಾಟ ಮಾಡಿತ್ತು.

 ಎಚ್‌ಪಿ -ಆಟೋನಮಿ:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಅಮೆರಿಕದ ಕಂಪ್ಯೂಟರ್‌ ತಯಾರಕ ಕಂಪೆನಿ ಎಚ್‌ಪಿ ಇಂಗ್ಲೆಂಡ್‌ನ ಸಾಫ್ಟ್‌ವೇರ್‌‌ ಕಂಪೆನಿ ಆಟೋನಮಿಯನ್ನುಅಗಸ್ಟ್‌ 2011ರಲ್ಲಿ ಖರೀದಿಸಿತ್ತು. ಎಚ್‌ಪಿ ಮತ್ತು ಆಟೋನಮಿ ನಡುವೆ 10.24 ಶತಕೋಟಿ ಖರೀದಿ ಒಪ್ಪಂದ ನಡೆದಿತ್ತು.

 ಮೈಕ್ರೋಸಾಫ್ಟ್‌ -ಸ್ಕೈಪ್‌:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಮೈಕ್ರೋಸಾಫ್ಟ್‌ ಇಂಟರ್‌‌ನೆಟ್‌ ವಿಡಿಯೋ ಕಾಲಿಂಗ್‌‌ ಸೇವೆ ನೀಡುವ ಸ್ಕೈಪ್‌‌ ಕಂಪೆನಿಯನ್ನು 2011 ಮೇ ತಿಂಗಳಿನಲ್ಲಿ ಖರೀದಿಸಿತ್ತು.ಈ ಖರೀದಿಗೆ ಮೈಕ್ರೋಸಾಫ್ಟ್‌ 8.5 ಶತಕೋಟಿ ಡಾಲರ್‌ನ್ನು ಸ್ಕೈಪ್‌ಗೆ ನೀಡಿತ್ತು.

 ಒರೆಕಲ್‌- ಸನ್‌ ಮೈಕ್ರೋ ಸಿಸ್ಟಂ:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು

ಬಿಸಿನೆಸ್‌ ಸಾಫ್ಟ್‌ವೇರ್‍ ಕಂಪೆನಿ ಒರೆಕಲ್‌, ಜಾವಾ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್‌ಗಾಗಿ ಸನ್‌ ಮೈಕ್ರೋ ಸಿಸ್ಟಂ ಕಂಪೆನಿಯನ್ನು 2009 ಏಪ್ರಿಲ್‌‌ನಲ್ಲಿ ಖರೀದಿಸಿದೆ. ಸನ್‌ಮೈಕ್ರೋ ಸಿಸ್ಟಂಗೆ ಒರೆಕಲ್‌‌ 7.4 ಶತಕೋಟಿ ಡಾಲರ್‌ ನೀಡಿತ್ತು.

 ಮೈಕ್ರೋಸಾಫ್ಟ್‌-ನೋಕಿಯಾ:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಸ್ಮಾರ್ಟ್‌ಫೋನ್‌‌ ಮಾರುಕಟ್ಟೆಯಲ್ಲಿ ಗೂಗಲ್‌ ಮತ್ತು ಆಪಲ್‌ ಪ್ರಾಬಲ್ಯವನ್ನು ಕುಗ್ಗಿಸಲು ಮೈಕ್ರೋಸಾಫ್ಟ್‌‌ ನೋಕಿಯಾ ಕಂಪೆನಿಯನ್ನು 2013 ಸೆಪ್ಟೆಂಬರ್‌ನಲ್ಲಿ ಖರೀದಿಸುತ್ತಿರುವುದಾಗಿ ಘೋಷಿಸಿದೆ.ಖರೀದಿ ಸಲುವಾಗಿ ಮೈಕ್ರೋಸಾಫ್ಟ್‌‌ ನೋಕಿಯಾ ಕಂಪೆನಿಗೆ 7.2 ಶತಕೋಟಿ ಡಾಲರ್‌ ನೀಡಲಿದೆ.

 ಗೂಗಲ್‌ ಯೂ ಟ್ಯೂಬ್‌:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಗೂಗಲ್‌‌ ಆನ್‌‌ಲೈನ್‌ ವಿಡಿಯೋ ತಾಣ ಯೂ ಟ್ಯೂಬ್‌ನ್ನು ಅಕ್ಟೋಬರ್‌ 2006ರಲ್ಲಿ ಖರೀದಿಸಿದೆ.ಈ ಖರೀದಿ ಸಂಬಂಧ ಗೂಗಲ್‌ 1.65 ಶತ ಕೋಟಿ ಡಾಲರ್‌ನ್ನು ಯೂಟ್ಯೂಬ್‌ಗೆ ನೀಡಿದೆ.

 ಯಾಹೂ-ಟಂಬ್ಲರ್‌:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಮರಿಸ್ಸಾ ಮೇಯರ್‌ ಸಿಇಒ ಆಗಿ ನೇಮಕವಾದ ಬಳಿಕ ಅವರ ಆಣತಿಯಂತೆ ಯಾಹೂ ಕಂಪೆನಿ ಜನಪ್ರಿಯ ಬ್ಲಾಗಿಂಗ್‌ ತಾಣ ಟಂಬ್ಲರ್‌‌ನ್ನು 2013 ಮೇ ತಿಂಗಳಿನಲ್ಲಿ ಖರೀದಿಸಿದೆ.ಈ ಖರೀದಿಗೆ ಯಾಹೂ ಟಂಬ್ಲರ್‌ಗೆ 1.1 ಶತಕೋಟಿ ಡಾಲರ್‌ ನೀಡಿತ್ತು.

 ಫೇಸ್‌ಬುಕ್‌- ಇನ್‌ಸ್ಟಾಗ್ರಾಮ್‌:

ಅತ್ಯಧಿಕ ಬೆಲೆಗೆ ಖರೀದಿಯಾದ ಟೆಕ್‌‌ ಕಂಪೆನಿಗಳು


ಜನಪ್ರಿಯ ಫೋಟೋ ಶೇರಿಂಗ್‌ ತಾಣ ಇನ್‌ಸ್ಟಾಗ್ರಾಮ್‌ನ್ನು ಫೇಸ್‌ಬುಕ್‌‌ ಏಪ್ರಿಲ್‌ 2012ರಲ್ಲಿ ಖರೀದಿಸಿದೆ. ವಾಟ್ಸ್‌ಆಪ್‌‌ ಖರೀದಿ ಮೊದಲು ಫೇಸ್‌ಬುಕ್‌ ಅತಿ ದೊಡ್ಡ ಕಂಪೆನಿ ಖರೀದಿ ಇದಾಗಿದ್ದು ಫೇಸ್‌‌ಬುಕ್‌‌‌ ಇನ್‌ಸ್ಟಾಗ್ರಾಮ್‌ಗೆ 1 ಶತಕೋಟಿ ಡಾಲರ್‌ ನೀಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot