ಸ್ಮಾರ್ಟ್‌‌ಫೋನ್‌ ಉದ್ಯಮಕ್ಕೆ ಎಂಟ್ರಿ ಕೊಡಲಿರುವ ಫ್ಲಿಪ್‌ಕಾರ್ಟ್‌

Posted By:

ಭಾರತದಲ್ಲಿ ಸ್ಮಾರ್ಟ್‌ಫೋನ್‌ ವಹಿವಾಟು ಹೆಚ್ಚಾಗುತ್ತಿದ್ದಂತೆ ಈಗ ಮತ್ತಷ್ಟು ದೇಶೀಯ ಕಂಪೆನಿಗಳು ಸ್ಮಾರ್ಟ್‌‌ಫೋನ್ ತಯಾರಿಸಲು ಮುಂದಾಗುತ್ತಿವೆ.ಇದಕ್ಕೆ ಹೊಸ ಸೇರ್ಪಡೆಯಾಗಿ ಭಾರತದ ಪ್ರಖ್ಯಾತ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್‌ ಕಂಪೆನಿ ತೆರೆಯಲು ಸಿದ್ದತೆ ನಡೆಸುತ್ತಿದೆ.

ಫ್ಲಿಪ್‌ಕಾರ್ಟ್‌‌‌ ಕಳೆದ ಎರಡು ವರ್ಷ‌ಗಳಿಂದ ಚಿಪ್‌ ತಯಾರಕ ಕಂಪೆನಿಗಳಾದಇಂಟೆಲ್‌,ಕ್ವಾಲಕಂ, ಮಿಡಿಯಾಟೆಕ್‌ ಕಂಪೆನಿಗಳ ಜೊತೆ ಮಾತುಕತೆ ನಡೆಸುತ್ತಿದ್ದು ಸದ್ಯದಲ್ಲೇ ಫ್ಲಿಪ್‌‌ಕಾರ್ಟ್‌‌‌ ಬ್ರ್ಯಾಂಡ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಲಿದೆ.

ಐಡಿಸಿ ವರದಿ ಪ್ರಕಾರ 2012ರಲ್ಲಿ 1.62 ಕೋಟಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮಾರಾಟವಾಗಿದ್ದರೆ,2013ರಲ್ಲಿ 4.4 ಕೋಟಿ ಸ್ಮಾರ್ಟ್‌ಫೋನ್‌‌ ಮಾರಾಟವಾಗಿತ್ತು.ಈ ರೀತಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಏರಿಕೆಯಾಗಲು ಆನ್‌ಲೈನ್‌ ಶಾಪಿಂಗ್‌ ತಾಣಗಳ ಪಾತ್ರ ದೊಡ್ಡದು ಎಂದು ವಿಶ್ಲೇಷಿಸಲಾಗುತ್ತಿದೆ.

ಫೆಬ್ರವರಿ ತಿಂಗಳಿನಲ್ಲಿ ಮೋಟೋ ಜಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು ಫ್ಲಿಫ್‌‌ಕಾರ್ಟ್‌ನಲ್ಲಿ ಮಾತ್ರ ಮಾರಾಟವಾಗುತ್ತಿದೆ.ಫ್ಲಿಪ್‌ಕಾರ್ಟ್‌ ಊಹಿಸದಷ್ಟೂ ಬೇಡಿಕೆ ಗ್ರಾಹಕರಿಂದ ಈ ಸ್ಮಾರ್ಟ್‌ಫೋನ್‌‌‌‌ಗೆ ವ್ಯಕ್ತವಾಗಿರುವುದು ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ ಆರಂಭಿಸಲು ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ ವಹಿವಾಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಪಲ್‌ ಕಂಪೆನಿ ಮಾಜಿ ಸಿಇಒ ಜಾನ್‌ ಸ್ಕಲ್ಲೆ(John Sculley) ಸಹ ದೇಶೀಯ ಸ್ಮಾರ್ಟ್‌‌‌ಫೋನ್‌ ಕಂಪೆನಿಯನ್ನು ಆರಂಭಿಸಲು ಮುಂದಾಗಿದ್ದು ಸದ್ಯದಲ್ಲೇ ಈ ಕಂಪೆನಿಯಿಂದ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌‌‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಸ್ಮಾರ್ಟ್‌‌ಫೋನ್‌ ಉದ್ಯಮಕ್ಕೆ ಎಂಟ್ರಿ ಕೊಡಲಿರುವ ಫ್ಲಿಪ್‌ಕಾರ್ಟ್‌

ಭಾರತದಲ್ಲಿ ಈಗಾಗಲೇ ಹಲವಾರು ದೇಶೀಯ ಕಂಪೆನಿಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿಶ್ವದ ಟಾಪ್‌ ಕಂಪೆನಿಗಳಿಗೆ ಪ್ರಭಲ ಪೈಪೋಟಿಯನ್ನು ನೀಡುತ್ತಿವೆ. ಮೈಕ್ರೋಮ್ಯಾಕ್ಸ್‌, ಝೋಲೋ,ಕಾರ್ಬ‌ನ್‌,ಐಬಾಲ್,ಸೆಲ್ಕಾನ್,ವಿಡಿಯೋಕಾನ್‌,ಇಂಟೆಕ್ಸ್‌,ಮ್ಯಾಕ್ಸ್‌‌,ಲಾವಾ,ಸ್ಪೈಸ್‌,ಬಿಯಾಂಡ್‌,ಎಚ್‌ಸಿಎಲ್‌,ಸಿಮ್‌ಟ್ರಾನಿಕ್ಸ್‌ನಂತಹ ದೇಶೀಯ ಕಂಪೆನಿಗಳು ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದರಲ್ಲಿ ಮೈಕ್ರೋಮ್ಯಾಕ್ಸ್‌ ಮತ್ತು ಕಾರ್ಬ‌ನ್‌ ಕಂಪೆನಿಗಳು ಮುಂಚೂಣಿಯಲ್ಲಿದೆ.

ದೇಶೀಯ ಕಂಪೆನಿಗಳ ಪೈಕಿ ಮೈಕ್ರೋಮ್ಯಾಕ್ಸ್‌ ಒಂದೇ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದಿಸಲು ಆರಂಭಿಸಿದೆ.ಉಳಿದ ಕಂಪೆನಿಗಳ ಸ್ಮಾರ್ಟ್‌‌ಫೋನಿನ ಹಾರ್ಡ್‌‌ವೇರ್‌ ಭಾಗಗಳು ಚೀನಾದಲ್ಲೇ ಹೆಚ್ಚಾಗಿ ತಯಾರಾಗುತ್ತದೆ.ಮೈಕ್ರೋಮ್ಯಾಕ್ಸ್‌ ಬಿಟ್ಟರೆ ಸ್ಯಾಮ್‌ಸಂಗ್‌ ಮತ್ತು ನೋಕಿಯಾ ಕಂಪೆನಿಯ ಫ್ಯಾಕ್ಟರಿಗಳು ಭಾರತದಲ್ಲಿದೆ. ಸ್ಯಾಮ್‌ಸಂಗ್‌ ಫ್ಯಾಕ್ಟರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದ್ದರೆ, ನೋಕಿಯಾ ಫ್ಯಾಕ್ಟರಿ ತಮಿಳುನಾಡಿನ ಚೆನ್ನೈನಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot