ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ರಿಲಾಯನ್ಸ್‌'ಗಳ ನಡುವೆ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

By Suneel
|

ಎಲ್ಲಾ ಪ್ರಿಪೇಡ್ ಮೊಬೈಲ್ ಬಳಕೆದಾರರಿಗೂ ಎದುರಾಗುವ ಒಂದು ಸಾಮಾನ್ಯ ಸಮಸ್ಯೆ ಎಂದರೆ ಅರ್ಜೆಂಟಾಗಿ ಕರೆ ಮಾಡಬೇಕು ಎಂದುಕೊಂಡಾಗ ಜಿರೋ ಬ್ಯಾಲೆನ್ಸ್ ಇರುವುದು. ಕಛೇರಿಗೆ ತುರ್ತು ಸಂದರ್ಭದಲ್ಲಿ ಕರೆ ಮಾಡಿ ಮಾತನಾಡುವಾಗ ಜಿರೋ ಬ್ಯಾಲೆನ್ಸ್‌ನಿಂದಾಗಿ ಕರೆ ಡಿಸ್‌ಕನೆಕ್ಟ್ ಆಗುತ್ತದೆ.

ನಿಮ್ಮ ಬ್ಯಾಡ್‌ ಲಕ್‌ ಇರಬಹುದು. ನೀವಿರುವ ಪ್ರದೇಶದಲ್ಲಿ ಯಾವುದೇ ರೀಚಾರ್ಜ್ ಶಾಪ್‌ ಇಲ್ಲ. ಅಲ್ಲದೇ ಇಂಟರ್ನೆಟ್‌ ಪ್ಯಾಕ್‌ ಸಹ ಇಲ್ಲ. ಅಂತಹ ಸಮಯದಲ್ಲಿ ಏನು ಮಾಡುತ್ತೀರಿ? ಏನು ಮಾಡಬಹುದು?

ಏರ್‌ಟೆಲ್‌ನಿಂದ ರೂ.29 ಕ್ಕೆ 1GB ಡಾಟಾ ಪಡೆಯಲು ಈ ಹಂತಗಳನ್ನು ಪಾಲಿಸಿ

ಆದ್ರೆ ನಿಮ್ಮ ಸ್ನೇಹಿತರು ನಿಮಗೆ ಬ್ಯಾಲೆನ್ಸ್ ಅನ್ನು ವರ್ಗಾವಣೆ ಮಾಡುವ ಮುಖಾಂತರ ಸಹಾಯ ಮಾಡಬಹುದು. ಅದು ಹೇಗೆ ಅಂತಿರಾ? ಜಸ್ಟ್‌ ನಿಮ್ಮ ಸ್ನೇಹಿತರಿಗೆ ಬ್ಯಾಲೆನ್ಸ್‌ ಅನ್ನು ಅವರ ಖಾತೆಯಿಂದ ವರ್ಗಾವಣೆ ಮಾಡುವಂತೆ ಹೇಳಿ. ಬ್ಯಾಲೆನ್ಸ್ ವರ್ಗಾವಣೆ ಮಾಡುವ ವಿಶೇಷ ಸೌಲಭ್ಯವನ್ನು ಎಲ್ಲಾ ಟೆಲಿಕಾಂ ಸೇವೆದಾರರು ಸಹ ನೀಡಿದ್ದಾರೆ.

ನೀವು ಯಾವ ಟೆಲಿಕಾಂ ಬಳಸುತ್ತಿದ್ದರು ಪರವಾಗಿಲ್ಲ. ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್‌, ರಿಲಾಯನ್ಸ್ ಬಳಕೆದಾರರು ತಾವು ಪರಸ್ಪರ ಮೊಬೈಲ್‌ ಬ್ಯಾಲೆನ್ಸ್ ಅನ್ನು ಕೆಲವು ನಂಬರ್‌ ಡಯಲ್‌ ಮಾಡುವ ಮುಖಾಂತರ ವರ್ಗಾವಣೆ ಮಾಡಿಕೊಳ್ಳಬಹುದು. ಏರ್‌ಟೆಲ್‌(Airtel) ಬಳಕೆದಾರರು ಐಡಿಯಾ, ರಿಲಾಯನ್ಸ್ ಮಾತ್ರವಲ್ಲದೇ ಯಾವುದೇ ಇತರೆ ಟೆಲಿಕಾಂ ಬಳಸುವ ಇತರರಿಗೆ ಬ್ಯಾಲೆನ್ಸ್(ಕರೆನ್ಸಿ) ವರ್ಗಾವಣೆ ಮಾಡಬಹುದು. ಅದು ಹೇಗೆ ಎಂದು ಲೇಖನದ ಕೆಳಗಿನ ಮಾಹಿತಿಗಳನ್ನು ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು

ಏರ್‌ಟೆಲ್‌ ಬಳಕೆದಾರರು ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

ಏರ್‌ಟೆಲ್‌ ಬಳಕೆದಾರರು ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

ಡಯಲ್‌: ಏರ್‌ಟೆಲ್‌ ಬಳಕೆದಾರರು ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡಲು *141# ಡಯಲ್‌ ಮಾಡಿ ಸೂಚನೆಗಳನ್ನು ಫಾಲೋ ಮಾಡಿ ಅಥವಾ GIFT 'Amoutnt' ಎಸ್‌ಎಂಎಸ್‌ ಟೈಪಿಸಿ 121 ಗೆ ಸೆಂಡ್‌ ಮಾಡಿ.
ಬ್ಯಾಲೆನ್ಸ್ ವರ್ಗಾವಣೆ ಲಿಮಿಟ್: ಇತರೆ ನೆಟ್‌ವರ್ಕ್‌ನವರಿಗೆ ಏರ್‌ಟೆಲ್‌ನಿಂದ 5-50 ರೂ.ವರೆಗೆ ಬ್ಯಾಲೆನ್ಸ್ ವರ್ಗಾವಣೆ ಮಾಡಬಹುದು.
ಸರ್ವೀಸ್‌ ಚಾರ್ಜ್‌: ಮೊಬೈಲ್ ಬ್ಯಾಲೆನ್ಸ್ ವರ್ಗಾವಣೆಗಾಗಿ ಯಾವುದೇ ಚಾರ್ಜ್‌ ಆಗುವುದಿಲ್ಲ.
ಸೂಚನೆ; ನಿಮ್ಮ ಬ್ಯಾಲೆನ್ಸ್ ಕನಿಷ್ಟ ರೂ.20 ಇರಬೇಕು.

ವೊಡಾಫೋನ್‌ ಬಳಕೆದಾರರು ಮೊಬೈಲ್ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

ವೊಡಾಫೋನ್‌ ಬಳಕೆದಾರರು ಮೊಬೈಲ್ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

ಡಯಲ್‌: ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡಲು *567*ಸ್ನೇಹಿತರ ಮೊಬೈಲ್‌ ನಂಬರ್‌*amount# ನಂತರ ಕರೆ ಬಟನ್‌ ಪ್ರೆಸ್‌ ಮಾಡಿ.
ವರ್ಗಾವಣೆ ಲಿಮಿಟ್‌: 5-30 ರೂ ಬ್ಯಾಲೆನ್ಸ್ ವರೆಗೆ ಇತರೆ ನೆಟ್‌ವರ್ಕ್‌ಗಳಿಗೆ ಬ್ಯಾಲೆನ್ಸ್ ವರ್ಗಾವಣೆ ಮಾಡಬಹುದು.
ಸರ್ವೀಸ್ ಚಾರ್ಜ್‌: ವೊಡಾಫೋನ್‌ನಲ್ಲಿ ಬ್ಯಾಲೆನ್ಸ್ ವರ್ಗಾವಣೆಗಾಗಿ ರೂ. 2 ಚಾರ್ಜ್‌ ಆಗುತ್ತದೆ. 10-19 ರೂ ಬ್ಯಾಲೆನ್ಸ್ ವರ್ಗಾವಣೆಗಾಗಿ ರೂ.3 ಚಾರ್ಜ್‌ ಆಗುತ್ತದೆ. 20-30 ರೂ ಬ್ಯಾಲೆನ್ಸ್ ವರ್ಗಾವಣೆಗಾಗಿ ರೂ.4 ಚಾರ್ಜ್‌ ಆಗುತ್ತದೆ.
ಮಾನದಂಡ: ಸೆಂಡರ್‌ ದಿನದಲ್ಲಿ ಒಂದು ಬಾರಿ ಮಾತ್ರ ಬ್ಯಾಲೆನ್ಸ್ ವರ್ಗಾವಣೆ ಮಾಡಲು ಸಾಧ್ಯ.

ಬಿಎಸ್‌ಎನ್‌ಎಲ್‌ನಿಂದ ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

ಬಿಎಸ್‌ಎನ್‌ಎಲ್‌ನಿಂದ ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

ಡಯಲ್‌: ಬಿಎಸ್‌ಎನ್‌ಎಲ್‌ ಬಳಕೆದಾರರು ಬ್ಯಾಲೆನ್ಸ್ ವರ್ಗಾವಣೆ ಮಾಡಲು ಮೆಸೇಜ್‌ ಬಾಕ್ಸ್‌ನಲ್ಲಿ GIFT ಎಂದು ಟೈಪಿಸಿ 533733 ಗೆ ಸೆಂಡ್ ಮಾಡಿ.
ವರ್ಗಾವಣೆ ಲಿಮಿಟ್‌: ಕನಿಷ್ಟ ರೂ.5 ರಿಂದ ರೂ.50 ರವರೆಗೆ ಇತರೆ ನೆಟ್‌ವರ್ಕ್‌ಗಳಿಗೆ ಬ್ಯಾಲೆನ್ಸ್ ವರ್ಗಾವಣೆ ಮಾಡಬಹುದು.

 ಐಡಿಯಾ'ದಿಂದ ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

ಐಡಿಯಾ'ದಿಂದ ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

ಡಯಲ್‌: ಐಡಿಯಾ ಬಳಕೆದಾರರು ಬ್ಯಾಲೆನ್ಸ್ ವರ್ಗಾವಣೆಗಾಗಿ *567*FriendMobileNumber*Amount# ಡಯಲ್‌ ಮಾಡಿ.
ವರ್ಗಾವಣೆ ಲಿಮಿಟ್‌: ಕನಿಷ್ಟ ರೂ.10 ರಿಂದ ರೂ.50 ರವರೆಗೆ ಬ್ಯಾಲೆನ್ಸ್ ಅನ್ನು ಇತರೆ ನೆಟ್‌ವರ್ಕ್‌ಗೆ ವರ್ಗಾವಣೆ ಮಾಡಬಹುದು.
ಸರ್ವೀಸ್ ಚಾರ್ಜ್‌: ಒಂದು ವರ್ಗಾವಣೆಗಾಗಿ ರೂ. 2 ಚಾರ್ಜ್‌ ಆಗುತ್ತದೆ.
ಮಾನದಂಡ: ಸೆಂಡರ್‌ ದಿನದಲ್ಲಿ ಒಮ್ಮೆ ಸೆಂಡ್‌ ಮಾಡಬಹುದು.

ರಿಲಾಯನ್ಸ್ ಬಳಕೆದಾರರು ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

ರಿಲಾಯನ್ಸ್ ಬಳಕೆದಾರರು ಮೊಬೈಲ್‌ ಬ್ಯಾಲೆನ್ಸ್ ವರ್ಗಾವಣೆ ಮಾಡುವುದು ಹೇಗೆ?

-ಡಯಲ್‌: *367*3# ಡಯಲ್‌ ಮಾಡಿ
- ನಂತರ *312*3# ಮತ್ತು ಮೊಬೈಲ್‌ ನಂಬರ್‌ ಅನ್ನು ಎಂಟರ್‌ ಮಾಡಿ
- ಬ್ಯಾಲೆನ್ಸ್ ಅಮೌಂಟ್‌ ಅನ್ನು ಎಂಟರ್‌ ಮಾಡಿ
- ಪಿನ್‌ ಅನ್ನು ಎಂಟರ್‌ ಮಾಡಿ. ಡಿಫಾಲ್ಟ್‌ ಪಿನ್‌ 1
- ಬ್ಯಾಲೆನ್ಸ್ ವರ್ಗಾವಣೆ ಆಗುತ್ತದೆ.

Best Mobiles in India

English summary
How to Transfer Balance in Airtel, BSNL, Vodafone, Idea and Reliance. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X