ರಿಯಲ್‌ಮಿ ಕಂಪೆನಿಯಿಂದ ಮೊದಲ ಪ್ರೀಮಿಯಂ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ರಿಯಲ್‌ಮಿ ಕಂಪೆನಿ ಏರುಗತಿಯ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ತನ್ನ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಆಕರ್ಷಕ ವಿನ್ಯಾಸದ ಸ್ಮಾರ್ಟ್‌ ಪ್ಯಾಡ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ರಿಯಲ್‌ಮಿ ಪ್ಯಾಡ್‌ X ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಈ ರಿಯಲ್‌ಮಿ ಪ್ಯಾಡ್‌ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ ಪ್ಯಾಡ್‌ X ಲಾಂಚ್‌ ಮಾಡಿದೆ. ಇನ್ನು ಈ ಹೊಸ ಟ್ಯಾಬ್ಲೆಟ್‌ ವೈಫೈ ಆವೃತ್ತಿಯಲ್ಲಿ ಮಾತ್ರ ಬರುತ್ತದೆ. ಇದು 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲಿಸುವ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 8340mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಈ ಪ್ಯಾಡ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಪ್ಯಾಡ್‌ X

ರಿಯಲ್‌ಮಿ ಪ್ಯಾಡ್‌ X 2K ರೆಸಲ್ಯೂಶನ್‌ ಸಾಮರ್ಥ್ಯದ 11 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ DC ಬ್ಲರಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇದು 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಕೂಡ ಹೊಂದಿದೆ. ಇದಲ್ಲದೆ TUV ರೈನ್‌ಲ್ಯಾಂಡ್ ಬ್ಲೂ ಲೈಟ್ ಫಿಲ್ಟರ್ ಮತ್ತು ಸ್ಕ್ರೀನ್‌ 4,096 ಲೆವೆಲ್‌ ಪ್ರೆಸರ್‌ ಸೆನ್ಸಾರ್‌ನೊಂದಿಗೆ ಸ್ಟೈಲಸ್ ಇನ್‌ಪುಟ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಈ ಪ್ಯಾಡ್‌ ಹೈ ಲೆವೆಲ್‌ ಟ್ಯಾಬ್ಲೆಟ್ ಆಗಿದ್ದು, ವೀಡಿಯೊಗಳು ಮತ್ತು ಫೋಟೋಗಳನ್ನು ಎಡಿಟ್ ಮಾಡಲು ಮತ್ತು ಡಾಕ್ಯುಮೆಂಟ್‌ಗಳಲ್ಲಿ ಕೆಲಸ ಮಾಡಲು ಬಯಸುವ ಬಳಕೆದಾರರಿಗಾಗಿ ತಯಾರಿಸಲಾಗಿದೆ.

ಚಲನಚಿತ್ರ

ಈ ಪ್ಯಾಡ್‌ನಲ್ಲಿ ನಿಮ್ಮ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸುತ್ತದೆ. ಆದರೆ ಡಾಲ್ಬಿ ಅಟ್ಮೋಸ್‌ ಮತ್ತು ಹೈ-ರೇಸ್‌ ಆಡಿಯೋ ಬೆಂಬಲಿತ ಕ್ವಾಡ್ ಸ್ಪೀಕರ್‌ಗಳು ಅನುಭವಕ್ಕೆ ಪೂರಕವಾಗಿರುತ್ತವೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಹೊಂದಿದ್ದು, UI 3.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಬಳಸಿ 512GB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಟ್ಯಾಬ್ಲೆಟ್‌

ಇನ್ನು ಈ ಟ್ಯಾಬ್ಲೆಟ್‌ನಲ್ಲಿ ನೀವು ಇಂಟರ್ನೆಟ್ ಮತ್ತು ಕರೆಗಳಿಗಾಗಿ ಸಿಮ್ ಕಾರ್ಡ್ ಅನ್ನು ಬಳಸುವುದಕ್ಕೆ ಅವಕಾಶವಿಲ್ಲ. ಬದಲಿಗೆ ಇದು PC ಕನೆಕ್ಟ್, ಸ್ಪ್ಲಿಟ್ ವ್ಯೂ ಮತ್ತು ಆಪಲ್ ಸೆಂಟರ್ ಸ್ಟೇಜ್ ತರಹದ ಫಿಚರ್ಸ್‌ಗಳನ್ನು ಒಳಗೊಂಡಿದೆ. ಈ ಪ್ಯಾಡ್‌ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದು 105 ಡಿಗ್ರಿ ವ್ಯೂ ಫೀಲ್ಡ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ.

ರಿಯಲ್‌ಮಿ ಪ್ಯಾಡ್‌ X

ರಿಯಲ್‌ಮಿ ಪ್ಯಾಡ್‌ X 33W ವೇಗದ ಚಾರ್ಜಿಂಗ್ ಬೆಂಬಲಿಸುವ 8,340mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹೈ-ರೆಸ್ ಆಡಿಯೊ, ನಾಲ್ಕು ಸ್ಪೀಕರ್‌ಗಳು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಡಾಲ್ಬಿ ಅಟ್ಮೋಸ್‌ಗೆ ಬೆಂಬಲವನ್ನು ನೀಡಲಿದೆ. ಪ್ರಸ್ತುತ ರಿಯಲ್‌ಮಿ ಪ್ಯಾಡ್‌ X ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಪ್ಯಾಡ್‌ನ 4GB ಮತ್ತು 64GB ಮಾದರಿಗೆ CNY 1,299 (ಸುಮಾರು 15,000ರೂ) ಮತ್ತು 6GB ಮತ್ತು 128GB ರೂಪಾಂತರಕ್ಕಾಗಿ CNY 1,599 (ಸುಮಾರು 18,400ರೂ)ಬೆಲೆ ಹೊಂದಿದೆ.

Best Mobiles in India

English summary
Realme Pad X is the company's first premium tablet with Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X