Subscribe to Gizbot

ಕನಿಷ್ಠ 2,617 ಸಲ ದಿನಕ್ಕೆ ಸ್ಮಾರ್ಟ್‌ಫೋನ್‌ ಸ್ಕ್ರೀನ್ ಟಚ್ ಮಾಡುತ್ತೇವಂತೆ!

Written By:

ಸ್ಮಾರ್ಟ್‌ಫೋನ್‌ ಇಂದು ಎಲ್ಲರ ಜೀವನದ ಪ್ರಮುಖ ವಸ್ತುವಾಗಿದೆ. ಫೇಸ್‌ಬುಕ್‌ನಂತ ಸಾಮಾಜಿಕ ತಾಣ, ವಾಟ್ಸಾಪ್‌ನಂತ ಮೆಸೇಜಿಂಗ್‌ ಆಪ್‌, ಫೋಕ್ಮನ್ ಗೋ ನಂತಹ ಗೇಮ್‌ ಮೊಬೈಲ್‌ನಲ್ಲಿ ಇದ್ದರೇ ಯಾರು ತಾನೆ ಮೊಬೈಲ್‌ ಬಿಟ್ಟಿರುತ್ತಾರೆ? ಯಾರು ಸಹ ಮೊಬೈಲ್‌ನಿಂದ ದೂರವಿರುವುದಿಲ್ಲ. ಮೊಬೈಲ್‌ ಮಲಗುವ ವೇಳೆಯಲ್ಲು ಪಕ್ಕದಲ್ಲೇ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅವರು ನಿದ್ರೆ ಮಾಡಿದ್ರು ಮೊಬೈಲ್‌ ಮಾತ್ರ ದೂರದಲ್ಲಿ ನಿದ್ರೆ ಮಾಡಲು ಬಿಡೊಲ್ಲ.

ಅಬ್ಬಬ್ಬಾ ಅಂದ್ರೆ ದಿನ ಒಂದಕ್ಕೆ ಸ್ಮಾರ್ಟ್‌ಫೋನ್‌ ಬಳಸುವವರು ಎಷ್ಟು ಬಾರಿ ಸ್ಕ್ರೀನ್ ಟಚ್‌ ಮಾಡಬಹುದು ಎಂದು ಯಾರಾದ್ರು ಯೋಚಿಸಿದ್ದೀರಾ. ಖಂಡಿತ ಇಲ್ಲ ಅನಿಸುತ್ತೆ. ಅಂದಹಾಗೆ ಹೊಸ ಅಧ್ಯಯನ ಒಂದು 'ಸ್ಮಾರ್ಟ್‌ಫೋನ್‌ ಬಳಸುವವರು ದಿನ ಒಂದಕ್ಕೆ 2,617 ಬಾರಿ ಕನಿಷ್ಠ ಪಕ್ಷ ಸ್ಕ್ರೀನ್‌ ಟಚ್‌ ಮಾಡುತ್ತಾರೆ" ಎಂದು ಹೇಳಿದೆ.

ಅಲ್ಲದೇ ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಸುವವರು ತಮ್ಮ ಡಿವೈಸ್ ಅನ್ನು ಒಂದು ದಿನಕ್ಕೆ 5,427 ಬಾರಿ ಕ್ಲಿಕ್‌ ಮಾಡುವುದು, ಟ್ಯಾಪ್ ಮಾಡುವುದು, ಸ್ವೈಪ್ ಮಾಡುವುದು ಮಾಡುತ್ತಾರೆ ಎಂದಿದೆ. ಸ್ಮಾರ್ಟ್‌ಫೋನ್‌ ಪ್ರಿಯರು, 'ಅಧ್ಯಯನ' ಹೇಳಿರುವ ಇತ್ಯಾದಿ ಮಾಹಿತಿಗಳು ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

10 ರೂ ಪಾವತಿಸಿ ಅನ್‌ಲಿಮಿಟೆಡ್‌ ಸಿನಿಮಾಗಳನ್ನು ನೋಡಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್ಕೌಟ್‌(Dscout)

ಡಿಸ್ಕೌಟ್‌(Dscout)

' ಡಿಸ್ಕೌಟ್‌(Dscout)' ಎಂಬ ಅಧ್ಯಯನ ಸಂಸ್ಥೆಯು ಉತ್ಪನ್ನಗಳಿಗೆ ಗ್ರಾಹಕ ಪ್ರತಿಕ್ರಿಯೆಗಳ ಬಗ್ಗೆ ಪರಿಣತಿ ಹೊಂದಿದೆ. ಸಂಸ್ಥೆಯು 94 ಆಂಡ್ರಾಯ್ಡ್ ಡಿವೈಸ್‌ ಬಳಕೆದಾರರನ್ನು ನೇಮಕಾತಿ ಮಾಡಿಕೊಂಡು, ಅವರ ಸ್ಮಾರ್ಟ್‌ಫೋನ್‌ಗೆ ವಿಶೇಷ ಸಾಫ್ಟ್‌ವೇರ್‌ ಒಂದನ್ನು ಇನ್‌ಸ್ಟಾಲ್‌ ಮಾಡಿತ್ತು.

ಟ್ರ್ಯಾಕಿಂಗ್‌

ಟ್ರ್ಯಾಕಿಂಗ್‌

ಸಂಸ್ಥೆಯು ಇನ್‌ಸ್ಟಾಲ್‌ ಮಾಡಿದ ಸಾಫ್ಟ್‌ವೇರ್‌, 'ಆಂಡ್ರಾಯ್ಡ್‌ ಬಳಕೆದಾರರು ಡಿವೈಸ್‌ ನೊಂದಿಗೆ ಪ್ರತಿಕ್ರಿಯಿಸುವುದನ್ನು 5 ದಿನಗಳ ಕಾಲ ಟ್ರ್ಯಾಕ್‌ ಮಾಡಿತು'.

ಪ್ರತಿಕ್ರಿಯೆ

ಪ್ರತಿಕ್ರಿಯೆ

ಪ್ರತಿಯೊಬ್ಬರ ಪ್ರತಿಕ್ರಿಯೆ (ಸ್ವೈಪ್‌, ಕ್ಲಿಕ್, ಟ್ಯಾಪ್‌) ದಿನ ಒಂದಕ್ಕೆ ಕನಿಷ್ಟ 2,617 ಬಾರಿ ಸ್ಕ್ರೀನ್‌ ಟಚ್‌ ಮಾಡಿರುವುದು, ಹೆಚ್ಚು ಸ್ಮಾರ್ಟ್‌ಫೋನ್‌ ಬಳಸುವವರು 5,427 ಪ್ರತಿಕ್ರಿಯಿಸುವುದು ಟ್ರ್ಯಾಕ್‌ ಆಗಿರುವ ಬಗ್ಗೆ ಡಿಸ್ಕೌಟ್‌ ಸಂಸ್ಥೆ ಗುರುವಾರ (ಜುಲೈ 14) ತನ್ನ ಬ್ಲಾಗ್‌ನಲ್ಲಿ ಪೋಸ್ಟ್‌ ಮಾಡಿದೆ.

ಮೊಬೈಲ್‌ ಬಳಕೆದಾರರು

ಮೊಬೈಲ್‌ ಬಳಕೆದಾರರು

ದೀರ್ಘಕಾಲ ಬಳಸುವವರು ಸಿನಿಮಾ, ವೀಡಿಯೊ ಮತ್ತು ಓದುವ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ. ಇತರೆ ಸಾಮಾನ್ಯ ಬಳಕೆದಾರರು ಕಡಿಮೆ ಅವಧಿಗಳಲ್ಲಿ ಆಗಾಗ ಬಳಸುತ್ತಿರುತ್ತಾರೆ ಎಂದು ಹೇಳಲಾಗಿದೆ.

ಮಧ್ಯರಾತ್ರಿಯಲ್ಲಿ ಮೊಬೈಲ್‌ ಬಳಕೆ

ಮಧ್ಯರಾತ್ರಿಯಲ್ಲಿ ಮೊಬೈಲ್‌ ಬಳಕೆ

ಶೇಕಡ 87 ರಷ್ಟು ಮೊಬೈಲ್‌ ಬಳಕೆದಾರರು ಮಧ್ಯರಾತ್ರಿಯಿಂದ ಬೆಳಗಿನ 5 ಗಂಟೆ ನಡುವಿನಲ್ಲಿ ಒಮ್ಮೆಯಾದರೂ ಮೊಬೈಲ್‌ ಚೆಕ್ ಮಾಡುತ್ತಾರಂತೆ.

ಮೆಸೇಜ್‌ ಮತ್ತು ಸಾಮಾಜಿಕ ತಾಣಗಳು

ಮೆಸೇಜ್‌ ಮತ್ತು ಸಾಮಾಜಿಕ ತಾಣಗಳು

ಮೆಸೇಜಿಂಗ್‌ ಮತ್ತು ಸಾಮಾಜಿಕ ತಾಣ ಆಪ್‌ಗಳು ಶೇಕಡ 26 ಇದ್ದು, ಅವುಗಳೊಂದಿಗೆ ಶೇಕಡ 22 ರಷ್ಟು ಪ್ರತಿಕ್ರಿಯೆ ನಡೆಯುತ್ತದೆ. ಇಂಟರ್ನೆಟ್‌ನಿಂದ ಬ್ರೌಸರ್‌ನಲ್ಲಿ ಸರ್ಚ್‌ ಮಾಡುವವರು ಶೇಕಡ 10 ರಷ್ಟು ಇದ್ದಾರೆ ಎಂದು ಅಧ್ಯಯನ ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್‌ ಬಳಕೆ ಹೇಗೆ?

10 ರೂ ಪಾವತಿಸಿ ಅನ್‌ಲಿಮಿಟೆಡ್‌ ಸಿನಿಮಾಗಳನ್ನು ನೋಡಿರಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
We touch our smartphones at least 2,617 times a day, reveals study. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot