ವಾಟ್ಸಪ್ ಬಗ್ಗೆ ಪೋಷಕರಿಗೆ ಗೊತ್ತಿರಬೇಕಾದ 6 ಸಂಗತಿಗಳು.

|

ವಾಟ್ಸಪ್ ವಿಶ್ವದಾದ್ಯಂತ ಸಂವಹನವನ್ನು ಸುಲಭವಾಗಿಸಿದೆ, ವೇಗವಾಗಿಸಿದೆ. ಪ್ರಪಂಚದಲ್ಲಿ ಎಲ್ಲೆಲ್ಲಿ ವೈಫೈ ಅಂತರ್ಜಾಲ ಸೌಲಭ್ಯವಿದೆಯೋ ಅಲ್ಲಿಂದ ನೀವು ಸಂದೇಶವನ್ನು ಕಳುಹಿಸಬಹುದು, ಸಂದೇಶಗಳನ್ನು ಸ್ವೀಕರಿಸಬಹುದು.

ವಾಟ್ಸಪ್ ಬಗ್ಗೆ ಪೋಷಕರಿಗೆ ಗೊತ್ತಿರಬೇಕಾದ 6 ಸಂಗತಿಗಳು.

ವಾಟ್ಸಪ್ಪನ್ನು ಹತ್ತಿರತ್ತಿರ ತಿಂಗಳಿಗೆ ಒಂದು ಬಿಲಿಯನ್ ಜನರು ಉಪಯೋಗಿಸುತ್ತಾರೆ, ಈ ಬಳಕೆದಾರರಲ್ಲಿ ಎಲ್ಲಾ ವಯೋಮಾನದವರೂ ಇದ್ದಾರೆ. ಇದು ಆಕರ್ಷಕವಾಗಿದೆ, ಇದರ ವಿನ್ಯಾಸ ಬಳಸಲು ಬಹು ಸುಲಭದ್ದಾಗಿದೆ, ಆದ ಕಾರಣ ಹದಿಹರೆಯದವರಿಗೆ ಇದು ಅಚ್ಚುಮೆಚ್ಚು. ಹೀಗಾಗಿ, ಹೆತ್ತವರು ತಮ್ಮ ಮಕ್ಕಳ ಆನ್ ಲೈನ್ ಕೆಲಸಗಳ ಬಗ್ಗೆ ಒಂದು ನಿಗಾ ಇರಿಸಬೇಕು; ಯಾಕೆಂದರೆ ಬೆಳೆಯುವ ಈ ಸಮಯದಲ್ಲಿ ಮಕ್ಕಳು ಹೆತ್ತವರೊಂದಿಗೆ ಹೆಚ್ಚು ಮುಕ್ತವಾಗಿರುವುದಿಲ್ಲ ಮತ್ತು ಅಪಾಯಕ್ಕೆ ಸುಲಭವಾಗಿ ಸಿಕ್ಕಿಬಿಡುತ್ತಾರೆ.

ಓದಿರಿ: ಮಿಸ್ ಮಾಡದಿರಿ: ಬಿಎಸ್‌ಎನ್‌ಎಲ್‌ನಿಂದ ಅನಿಯಮಿತ ವಾಯ್ಸ್ ಕರೆಗಳು

ಈ ಮೆಸೇಜಿಂಗ್ ತಂತ್ರಾಂಶದ ಧನಾತ್ಮಕ ಮತ್ತು ನೇತ್ಯಾತ್ಮಕ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಒಮ್ಮೆ ಓದಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡ

ಭಾರವೆನ್ನಿಸುವ ಬಿಲ್ ಇಲ್ಲ.

ಭಾರವೆನ್ನಿಸುವ ಬಿಲ್ ಇಲ್ಲ.

ವಾಟ್ಸಪ್ಪಿನ ಅತಿ ಪ್ರಮುಖ ಆಕರ್ಷಣೆಯೆಂದರೆ ಅದು ಡೇಟಾ ಅನ್ನು ಮುಗಿಸಿಬಿಡುವುದಿಲ್ಲ, ಕರೆ ನಿಮಿಷಗಳು ಮತ್ತು ಸಂದೇಶಗಳಿಗೆ ಮಿತಿಯಿಲ್ಲ. ತಮ್ಮ ಮಕ್ಕಳು ವಿಪರೀತವಾಗಿ ಫೋನ್ ಉಪಯೋಗಿಸುತ್ತಿದ್ದರೂ, ಈ ಆ್ಯಪ್ ಇರುವವರೆಗೂ ದೊಡ್ಡ ಮೊತ್ತದ ಬಿಲ್ ಬಗ್ಗೆ ಪೋಷಕರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.

ತೊಂದರೆಗಳಿಲ್ಲ.

ತೊಂದರೆಗಳಿಲ್ಲ.

ನಿಮ್ಮ ಹದಿಹರೆಯದ ಮಕ್ಕಳು ಯಾವುದಾದರೂ ಪ್ರಾಜೆಕ್ಟ್ ಮಾಡುತ್ತಿದ್ದರೆ ಮತ್ತು ಶಾಲೆಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ ಈ ತಂತ್ರಾಂಶದ ಸಹಾಯದಿಂದ ಸುಲಭವಾಗಿ ಮತ್ತು ವೇಗವಾಗಿ ಸಂವಹನ ನಡೆಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಸ್ತುವಾರಿ ಮಾಡುವುದು ಸಾಧ್ಯವಿಲ್ಲ.

ಉಸ್ತುವಾರಿ ಮಾಡುವುದು ಸಾಧ್ಯವಿಲ್ಲ.

ವಾಟ್ಸಪ್ ಮೂಲಕ ನಿಮ್ಮ ಮಕ್ಕಳು ಸುಲಭವಾಗಿ ಮತ್ತು ವೇಗವಾಗಿ ಯಾವುದೇ ರೀತಿಯ ಫೋಟೋ ಅಥವಾ ಸಂದೇಶವನ್ನು ಕಳುಹಿಸಬಹುದು. ಅವರು ತಮ್ಮ ಸ್ನೇಹಿತರೊಂದಿಗೆ ಏನೇನು ಹಂಚಿಕೊಳ್ಳುತ್ತಿದ್ದಾರೆ ಎಂದು ಗಮನಿಸುವುದು ಕಷ್ಟದ ಕೆಲಸ.

ಇತ್ತೀಚೆಗೆ ಸ್ಯಾನ್ ಆ್ಯಂಟೋನಿಯೋದಲ್ಲಿ ನಡೆದ ಒಂದು ಪ್ರಸಂಗದಲ್ಲಿ, 14 ವರ್ಷದ ಮಗು ಆನ್ ಲೈನ್ ನಲ್ಲಿ ಲೈಂಗಿಕ ನಿಂದನೆಗೊಳಪಟ್ಟಿತ್ತು. ಹೆತ್ತವರಿಗೆ ಇದರ ಬಗ್ಗೆ ಅರಿವೇ ಇರಲಿಲ್ಲ. ಅವರಿಗೆ ಈ ವಿಷಯದ ಬಗ್ಗೆ ಗೊತ್ತಾಗಿದ್ದು ಬರೋಬ್ಬರಿ ಎರಡು ವರುಷಗಳ ನಂತರ. ಹೀಗಾಗಿ ಒಂದಷ್ಟು ಉಸ್ತುವಾರಿ ಮಾಡಿ ಸಂದೇಶಗಳು ಮತ್ತು ಫೋಟೋಗಳನ್ನು ಗಮನಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಖಾಸಗಿ ಡೇಟಾವನ್ನು ವಾಟ್ಸಪ್ ಡೌನ್ ಲೋಡ್ ಮಾಡಿಕೊಳ್ಳುತ್ತದೆ.

ಖಾಸಗಿ ಡೇಟಾವನ್ನು ವಾಟ್ಸಪ್ ಡೌನ್ ಲೋಡ್ ಮಾಡಿಕೊಳ್ಳುತ್ತದೆ.

ಸ್ಮಾರ್ಟ್ ಫೋನಿನ ಸುರಕ್ಷತೆಯ ಬಗ್ಗೆ ವಾಟ್ಸಪ್ ಒಂದಷ್ಟು ಸವಾಲುಗಳನ್ನು ಒಡ್ಡುತ್ತದೆ. ಯಾಕೆಂದರೆ ವಾಟ್ಸಪ್ ನಿಮ್ಮ ಖಾಸಗಿ ಡೇಟಾವನ್ನು ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಎಲ್ಲಾ ಹೆಸರುಗಳನ್ನು ವಾಟ್ಸಪ್ ಡೌನ್ ಲೋಡ್ ಮಾಡಿಕೊಂಡು ವಾಟ್ಸಪ್ ಸಂಪರ್ಕ ಪಟ್ಟಿಗೆ ಸೇರಿಸಿಬಿಡುತ್ತದೆ.

ಸ್ಥಳದ ಮಾಹಿತಿಯನ್ನು ಜಿಪಿಎಸ್ ಮೂಲಕ ಹಂಚಿಕೊಳ್ಳುತ್ತದೆ.

ಸ್ಥಳದ ಮಾಹಿತಿಯನ್ನು ಜಿಪಿಎಸ್ ಮೂಲಕ ಹಂಚಿಕೊಳ್ಳುತ್ತದೆ.

ಬಹಳ ಸಂದರ್ಭದಲ್ಲಿ, ವಾಟ್ಸಪ್ ಜಿಪಿಎಸ್ ಸೇವೆಯನ್ನು ಉಪಯೋಗಿಸುವ ಮೂಲಕ ಇತರರಿಗೆ ಸ್ಥಳದ ಮಾಹಿತಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ ಫೋನಿನ ಲೊಕೇಷನ್ ಮೋಡ್ ಆನ್ ಆಗಿದ್ದರೆ ಮಾತ್ರ ಇದು ಸಾಧ್ಯ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳ ಚಟುವಟಿಕೆಯ ಮೇಲುಸ್ತುವಾರಿ ಮಾಡಲು ಇಲ್ಲಿದೆ ದಾರಿ.

ಮಕ್ಕಳ ಚಟುವಟಿಕೆಯ ಮೇಲುಸ್ತುವಾರಿ ಮಾಡಲು ಇಲ್ಲಿದೆ ದಾರಿ.

ಪಾಸ್ ವರ್ಡ್ ರಕ್ಷಣೆಯುಳ್ಳ ಪೇರೆಂಟ್ಸ್ ಶೆರಿಫ್ (Parentsheriff) ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ಅನ್ನು ನಿಮ್ಮ ಮಗುವಿನ ಫೋನಿನಲ್ಲಿ ಇನ್ಸ್ಟಾಲ್ ಮಾಡಿ, ಲಾಗಿನ್ ಆಗಿ, ಪಾಸ್ ವರ್ಡ್ ಹಾಕಿ.

ನಿಮ್ಮ ಹದಿಹರೆಯದ ಮಕ್ಕಳ ಫೋನಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ಬಗ್ಗೆಯೂ ನಿಮಗೆ ನೋಟಿಫೀಕೇಷನ್ ಬರುತ್ತದೆ. ಒಳಬರುವ ಅಥವಾ ಹೊರಹೋಗುವ ಕರೆಗಳಿರಬಹುದು, ಸಂದೇಶಗಳಿರಬಹುದು, ಚಿತ್ರಗಳು, ಸೇವ್ ಮಾಡಲಾದ ಹೊಸ ಸಂಪರ್ಕ, ನಿಮ್ಮ ಮಕ್ಕಳ ಸ್ಥಳದ ಮಾಹಿತಿ ಎಲ್ಲವೂ ನಿಮಗೆ ಬರುತ್ತದೆ.

ನಿಮ್ಮ ಫೋನಿನಿಂದಲೇ ಯಾವ ವ್ಯಕ್ತಿಯನ್ನಾದರೂ ಅಥವಾ ಚ್ಯಾಟ್ ಅನ್ನಾದರೂ ಬ್ಲಾಕ್ ಅಥವಾ ಡಿಲೀಟ್ ಕೂಡ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
We have listed the positive and negative aspects of WhatsApp that every parent should know before giving your child access to the messaging app. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X