ವರ್ಷದ ಹಿಂದೆ ಕಾಣೆಯಾಗಿದ್ದ ಹುಡುಗ ಫೇಸ್‌ಬುಕ್‌ನಿಂದ ಪತ್ತೆ

Written By:

ಇಂದು ಯಾವುದೇ ವಿಳಾಸ ಪತ್ತೆ ಹಚ್ಚಲು ಗೂಗಲ್‌ ಮ್ಯಾಪ್‌ ಓಪನ್‌ ಮಾಡಿ ವಿಳಾಸ ಟೈಪಿಸಿದರೆ ಸಾಕು ಅಲ್ಲಿಗೆ ಹೇಗೆ ಹೋಗಬೇಕೆಂದು ಗೂಗಲ್‌ ಮ್ಯಾಪ್‌ ತೋರಿಸುತ್ತದೆ. ಆದ್ರೆ ಮನುಷ್ಯ ಕಾಣೆಯಾದ್ರೆ ಹುಡುಕುವುದು ಹೇಗೆ??

ಉತ್ತರ ಬಹಳ ಸಿಂಪಲ್‌. ಹೇಗೆ ಅಂದ್ರೆ ಕಾಣೆಯಾದ ವ್ಯಕ್ತಿಯ ಸಾಮಾಜಿಕ ತಾಣಗಳನ್ನು ಟ್ರೇಸ್ ಮಾಡಿದರೆ ಆಯಿತು. ಪ್ರಸ್ತುತದಲ್ಲಿ ಸ್ಮಾರ್ಟ್‌ಫೋನ್ ಮತ್ತು ಸಾಮಾಜಿಕ ತಾಣಗಳು ಎಲ್ಲರಿಗೂ ಮೂಲಭೂತ ವಸ್ತುಗಳಾಗಿದ್ದು, ಹೇಗಿದ್ರು ಕಾಣೆಯಾದವರು ಎಲ್ಲಿಗೆ ಹೋದ್ರು ಸಹ ಸ್ಮಾರ್ಟ್‌ಫೋನ್‌ ಮತ್ತು ಫೇಸ್‌ಬುಕ್‌, ವಾಟ್ಸಾಪ್‌ಗಳನನ್ನು ಬಳಸುತ್ತಾರೆ. ಇವುಗಳ ಆಧಾರದಿಂದ ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಬಹುದಾಗಿದೆ.

ಅಂತೆಯೇ ದೆಹಲಿ ಪೊಲೀಸರು ಒಂದು ವರ್ಷದ ಹಿಂದೆ ಕಾಣೆಯಾಗಿದ್ದ 16 ವರ್ಷದ ಹುಡುಗನನ್ನು ಫೇಸ್‌ಬುಕ್‌ ಸಹಾಯದಿಂದ ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ.

ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಣೆಯಾದ ದೆಹಲಿಯ 16 ವರ್ಷದ ಹುಡುಗ

ಕಾಣೆಯಾದ ದೆಹಲಿಯ 16 ವರ್ಷದ ಹುಡುಗ

ಒಂದು ವರ್ಷದ ಹಿಂದೆ ಕಾಣೆಯಾದ ದೆಹಲಿಯ 16 ವರ್ಷದ ಹುಡುಗ, ಫೇಸ್‌ಬುಕ್ ಸಹಾಯದಿಂದ ಪತ್ತೆಯಾಗಿದ್ದಾನೆ. ಫೇಸ್‌ಬುಕ್‌ ಸಹಾಯದಿಂದ ಅಪರಾಧ ವಿಭಾಗದವರು ಹುಡುಗನನ್ನು ಪತ್ತೆ ಮಾಡಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿ'ಯವರ ಮಾಹಿತಿ

ಹಿರಿಯ ಪೊಲೀಸ್‌ ಅಧಿಕಾರಿ'ಯವರ ಮಾಹಿತಿ

ದೆಹಲಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾತನಾಡಿ, ' ಹುಡುಗನನ್ನು 'ಕೇಶವ್‌ ಕುಮಾರ್‌' ಎಂದು ಗುರುತಿಸಿದ್ದು, ಕಳೆದ ವರ್ಷ ಮೇ 8 ರಂದು ದೆಹಲಿಯ ಖಜೂರಿ ಖಾಶ್'ನ ಮನೆಯಿಂದ ಕಾಣೆಯಾಗಿದ್ದ. ಕಾಣೆಯಾದ ಎರಡನೇ ದಿನ ಆತನ ಪೋಷಕರು ದೂರು ದಾಖಲಿಸಿದ್ದರಂತೆ.

ಸೈಬರ್ ಸೆಲ್‌ ತಂಡ

ಸೈಬರ್ ಸೆಲ್‌ ತಂಡ

ಸೈಬರ್‌ ಸೆಲ್‌ ನೇತೃತ್ವ ತಂಡದ 'ಎಸಿಪಿ ಎನ್‌.ಕೆ. ಮೀನಾ, ಇನ್ಸ್‌ಪೆಕ್ಟರ್‌ ಸಂಜಯ್‌ ಗೇಡ್‌, ಸಂದೀಪ್‌ ಮಲ್ಹೋತ್ರ'ರವರು ಹುಡುಗನ ಫೇಸ್‌ಬುಕ್‌ ಖಾತೆ ಆಧಾರದ ಮೇಲೆ ಆತನನ್ನು ಹುಡುಕಲು ನಿಖರವಾಗಿ ಮತ್ತು ವ್ಯವಸ್ಥಿತವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು.

ಪ್ರಾಮಾಣಿಕ ಪ್ರಯತ್ನದಿಂದ ಬಹುಬೇಗ ಹುಡುಗ ಪತ್ತೆ

ಪ್ರಾಮಾಣಿಕ ಪ್ರಯತ್ನದಿಂದ ಬಹುಬೇಗ ಹುಡುಗ ಪತ್ತೆ

"ಪ್ರಾಮಾಣಿಕ ಪ್ರಯತ್ನದಿಂದ ಫೇಸ್‌ಬುಕ್ ಖಾತೆ ನಿರ್ವಹಿಸುವವರು ಮತ್ತು ಫೇಸ್‌ಬುಕ್‌ ಖಾತೆಯನ್ನು ಎಲ್ಲಿಂದ ಆಕ್ಸೆಸ್‌ ಮಾಡಲಾಗುತ್ತಿದೆ ಎಂಬುದರ ಐಪಿ ವಿಳಾಸವನ್ನು ಪತ್ತೆ ಹಚ್ಚಿ ಬಹುಬೇಗ ಹುಡಗನನ್ನು ಪತ್ತೆಹಚ್ಚಲು ಸಹಾಯವಾಗಿದೆ" ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ರವೀಂದ್ರ ಯಾದವ್'ರವರು ಹೇಳಿದ್ದಾರೆ.

 ಐಪಿ ವಿಳಾಸ

ಐಪಿ ವಿಳಾಸ

ಕಾಣೆಯಾಗಿದ್ದ ಹುಡುಗನ ಫೇಸ್‌ಬುಕ್‌ ಖಾತೆಯನ್ನು ಹಲವು ಮೊಬೈಲ್‌ ನಂಬರ್‌ಗಳಿಂದ ಬಳಸುತ್ತಿರುವುದಾಗಿ ಫೇಸ್‌ಬುಕ್‌ ಐಪಿ ವಿಳಾಸ ಪ್ರದರ್ಶಿತವಾಗುತ್ತಿತ್ತು. ಮೊಬೈಲ್‌ ಆಪರೇಟರ್‌ಗಳು ನೀಡಿದ ಮೊಬೈಲ್‌ ನಂಬರ್‌ಗಳ ಕರೆ ವಿವರಣೆಯಿಂದ ನಂತರ ತಂತ್ರಜ್ಞಾನ ವಿಶ್ಲೇಷಣೆಯಿಂದ ಹುಡುಗನ ಫೇಸ್‌ಬುಕ್‌ ಖಾತೆ 'ಶ್ರೀನಗರದ ದಲಾಲ್‌ ಮೊಹಲ್ಲಾ'ದಿಂದ ಆಕ್ಸೆಸ್‌ ಆಗುತ್ತಿರುವುದು ತಿಳಿದುಬಂತು.

ತನಿಖೆ ವಿಚಾರಣೆಯಲ್ಲಿ ತಿಳಿದ ವಿಷಯ

ತನಿಖೆ ವಿಚಾರಣೆಯಲ್ಲಿ ತಿಳಿದ ವಿಷಯ

ಕಾಣೆಯಾಗಿದ್ದ ಹುಡುಗನನ್ನು ಪತ್ತೆ ಮಾಡಿ ಪೊಲೀಸ್‌ ಅಧಿಕಾರಿಗಳು ಆತನನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಮನೆ ಬಿಟ್ಟು ಹೋಗಲು ಕಾರಣವೇನು ಎಂದು ಹುಡುಗನನ್ನು ಕೇಳಿದಾಗ 'ತನ್ನ ತಂದೆ ಮಧ್ಯಪಾನ ಮಾಡಿ ಒಡೆಯುತ್ತಿದ್ದರು' ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Missed boy in Delhi traced with the help of Facebook. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot