ಗೂಗಲ್ ಡುಯೋ ಮತ್ತು ಸ್ಕೈಪ್: ನಿಮಗೆ ಗೊತ್ತಿರಬೇಕಾದ ಐದು ಪ್ರಮುಖ ವ್ಯತ್ಯಾಸಗಳು.

|

ಮನೆಯಿಂದ ದೂರವಿರುವ ಜನರಿಗೆ ವೀಡಿಯೋ ಕರೆಗಳು ಬೇಕೆನ್ನಿಸುತ್ತದೆ. ದಿನ ಕಳೆದ ಹಾಗೆ ವೀಡಿಯೋ ತಂತ್ರಾಂಶಗಳು ಹೆಚ್ಚುತ್ತಲಿವೆ, ಯಾವುದು ಸೂಕ್ತವಾದುದು ಎನ್ನುವುದೇ ಗೊಂದಲದ ಸಂಗತಿಯಾಗಿದೆ.

ಗೂಗಲ್ ಡುಯೋ ಮತ್ತು ಸ್ಕೈಪ್: ನಿಮಗೆ ಗೊತ್ತಿರಬೇಕಾದ ಐದು ಪ್ರಮುಖ ವ್ಯತ್ಯಾಸಗಳು.

ಪ್ಲೇ ಸ್ಟೋರಿನಲ್ಲಿ ಹಲವಾರು ತಂತ್ರಾಂಶಗಳು ಲಭ್ಯವಿದೆ, ಅವುಗಳಲ್ಲಿ ಯಾವುದನ್ನು ಆರಿಸಬೇಕು ಎನ್ನುವುದು ಜನರನ್ನು ಗೊಂದಲಕ್ಕೆ ದೂಡುತ್ತದೆ. ಸ್ಕೈಪ್, ಹ್ಯಾಂಗ್ ಔಟ್, ಫೇಸ್ ಬುಕ್ ಮೆಸೆಂಜರ್ ನಂತಹ ತಂತ್ರಾಂಶಗಳಿಗೆ ಹೊಸ ಸೇರ್ಪಡೆ ಗೂಗಲ್ಲಿನ ಡುಯೋ.

ಓದಿರಿ: ರಿಲಾಯನ್ಸ್‌ನಿಂದ 57 ರೂಗೆ 10 GB ಡಾಟಾ ಆಫರ್: ಇಂದೇ ಪಡೆಯಿರಿ!

ಗೂಗಲ್ಲಿನ ಜನಪ್ರಿಯ ತಂತ್ರಾಂಶವಾದ ಅಲ್ಲೋ ಮೆಸೇಜಿಂಗ್ ತಂತ್ರಾಂಶದ ಮುಂಚೆ ಗೂಗಲ್ ವೀಡಿಯೋ ಕರೆ ಸೌಕರ್ಯವಿರುವ ಡುಯೋ ಆ್ಯಪ್ ಅನ್ನು ಬಿಡುಗಡೆಗೊಳಿಸಿತು.

ಓದಿರಿ: ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಬೆಸ್ಟ್‌ ಡೀಲ್ಸ್ ಪತ್ತೆಗಾಗಿ 5 ಆಪ್‌ಗಳು

ಗಿಜ್ಬಾಟಿಲ್ಲಿ ಗೂಗಲ್ ಡುಯೋ ಮತ್ತು ನಮ್ಮ ನೆಚ್ಚಿನ ಹಾಗು ಬಹಳಷ್ಟು ಜನರು ಉಪಯೋಗಿಸುವ ಸ್ಕೈಪ್ ತಂತ್ರಾಂಶದ ನಡುವೆ ಹೋಲಿಕೆ ಮಾಡಿದ್ದೀವಿ. ನಿಮಗೆ ಯಾವುದು ಸೂಕ್ತವೆನ್ನುವುದನ್ನು ತಿಳಿಯಲು ಈ ಲೇಖನ ಓದಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಗಿನ್ ಪ್ರಕ್ರಿಯೆ.

ಲಾಗಿನ್ ಪ್ರಕ್ರಿಯೆ.

ತಂತ್ರಾಂಶವೊಂದಕ್ಕೆ ಲಾಗಿನ್ ಆಗುವ ಪ್ರಕ್ರಿಯೆ ದೀರ್ಘವಾದಷ್ಟೂ ಬಳಕೆದಾರರಿಗೆ ಕಿರಿಕಿರಿಯಾಗಿ ಆ್ಯಪ್ ಅನ್ನು ಡಿಲೀಟ್ ಮಾಡಿಬಿಡುತ್ತಾರೆ. ಸ್ಕೈಪ್ ಅನ್ನು ಹೆಚ್ಚಿನ ಜನರು ಉಪಯೋಗಿಸಿದರೂ ಕೂಡ ಅದರ ಲಾಗಿನ್ ಪ್ರಕ್ರಿಯೆಯಲ್ಲಿ ಹಲವಾರು ಹಂತಗಳಿವೆ.

ಆದರೆ, ಗೂಗಲ್ ಡುಯೋದಲ್ಲಿ ನಿಮ್ಮ ಗೂಗಲ್ ಖಾತೆಯನ್ನೇ ಬಳಸಿ ಕ್ಷಣಮಾತ್ರದಲ್ಲಿ ಲಾಗಿನ್ ಆಗಿಬಿಡಬಹುದು. ಹೀಗಾಗಿ ಗೂಗಲ್ ಡುಯೋ ಗ್ರಾಹಕ ಸ್ನೇಹಿ.

ಗೂಗಲ್ ಡುಯೋ ಬಳಸಿ ಡೇಟಾ ಉಳಿಸಿ.

ಗೂಗಲ್ ಡುಯೋ ಬಳಸಿ ಡೇಟಾ ಉಳಿಸಿ.

ವೀಡಿಯೋ ಕರೆಗಳಲ್ಲಿ ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಡೇಟಾ ಖರ್ಚಾಗುತ್ತದೆ. ಆದರೆ ಗೂಗಲ್ ಡುಯೋ ಬಳಕೆದಾರರಿಗಲ್ಲ.

ಡುಯೋ ಉಪಯೋಗಿಸುವ ಬಳಕೆದಾರರು ಕ್ನಾಕ್ ಕ್ನಾಕ್ ಆಯ್ಕೆ ಬಳಸಿ ಡೇಟಾ ಉಳಿಸಬಹುದು. ಟಾಗಲ್ ಆಫ್ ಮಾಡಿದರೆ ಆಯಿತು ಅಷ್ಟೇ. ಸ್ಕೈಪ್ ನಲ್ಲಿ ಈ ರೀತಿಯ ಡೇಟಾ ಉಳಿಸುವ ಆಯ್ಕೆಗಳಿಲ್ಲ. ನಿಮ್ಮ ಡೇಟಾ ಕಡಿಮೆಯಿದ್ದರೆ ಮತ್ತು ನೀವು ಡೇಟಾ ಉಳಿಸಬೇಕೆಂದಿದ್ದರೆ ಗೂಗಲ್ ಡುಯೋ ಬಳಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧ್ವನಿ ಮತ್ತು ವೀಡಿಯೋ ಕರೆಗಳೆರಡೂ ಬೇಕಾ?

ಧ್ವನಿ ಮತ್ತು ವೀಡಿಯೋ ಕರೆಗಳೆರಡೂ ಬೇಕಾ?

ಮನೆಯಿಂದ ಗೆಳೆಯರಿಂದ ದೂರವಿದ್ದಾಗ ವೀಡಿಯೋ ಕರೆಗಳು ಮುಖ್ಯವೆಂದೆನ್ನಿಸುತ್ತದೆಯಾದರೂ, ತುರ್ತಿನ ಪರಿಸ್ಥಿತಿಯಲ್ಲಿ, ನಿಮ್ಮ ಫೋನಿನಲ್ಲಿ ಸಾಕಷ್ಟು ಡೇಟಾ ಇಲ್ಲದಿದ್ದರೆ ಏನು ಮಾಡಬೇಕು? ಅಂತಹ ಸಮಯದಲ್ಲಂತೂ ವೀಡಿಯೋ ಆ್ಯಪ್ ಉಪಯುಕ್ತವಲ್ಲ.

ಈ ಸಂದರ್ಭದಲ್ಲಿ ಗೂಗಲ್ ಡುಯೋಗೆ ಹೋಲಿಸಿದರೆ ಸ್ಕೈಪ್ ಉತ್ತಮ. ಸ್ಕೈಪ್ ಬಳಕೆದಾರರು ಧ್ವನಿ ಮತ್ತು ವೀಡಿಯೋ ಕರೆಗಳೆರಡನ್ನೂ ಮಾಡಬಹುದು. ಡುಯೋದಲ್ಲಿ ಕೇವಲ ವೀಡಿಯೋ ಕರೆಗಳನ್ನಷ್ಟೇ ಮಾಡಬಹುದು.

ಗುಂಪು ಕರೆಗಳು.

ಗುಂಪು ಕರೆಗಳು.

ಗುಂಪು ಕರೆ ಮಾಡುವುದು ನಿಮ್ಮ ಆಯ್ಕೆಯಾದರೆ, ಡುಯೋ ನಿಮಗೆ ಸೂಕ್ತವಲ್ಲ. ಆದರೆ ಸ್ಕೈಪ್ ಉಪಯೋಗಿಸಿ ಗುಂಪು ಹರಟೆ ನಡೆಸುವುದು ಸುಲಭ.

ಗೂಗಲ್ ಡುಯೋದಲ್ಲಿ ಒನ್ ಟು ಒನ್ ಕರೆ ಸೌಕರ್ಯ ಮಾತ್ರ ಲಭ್ಯವಿದೆ. ಸ್ಕೈಪಿನಲ್ಲಿರುವ ಗುಂಪು ಕರೆಗಳು ಮತ್ತು ಇನ್ಸ್ಟಂಟ್ ಮೇಸೇಜುಗಳು ಇದರಲ್ಲಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡುಯೋ ಮತ್ತು ಸ್ಕೈಪಿನ ಲಭ್ಯತೆ.

ಡುಯೋ ಮತ್ತು ಸ್ಕೈಪಿನ ಲಭ್ಯತೆ.

ಗೂಗಲ್ ಡುಯೋ ಸದ್ಯಕ್ಕೆ ಐ.ಒ.ಎಸ್ ಮತ್ತು ಆ್ಯಂಡ್ರಾಯ್ಡ್ ಫೋನುಗಳಲ್ಲಿ ಮಾತ್ರ ಲಭ್ಯ. ಸ್ಕೈಪ್ ಅನ್ನು ಯಾವ ಸಾಧನದಲ್ಲಾದರೂ ಬಳಸಬಹುದು.

ಸ್ಕೈಪ್ ಅನ್ನು ಆ್ಯಪಲ್ ಉತ್ಪನ್ನಗಳು, ವಿಂಡೋಸ್, ಆ್ಯಂಡ್ರಾಯ್ಡ್, ವಿಂಡೋಸ್ ಫೋನ್, ಲಿನಕ್ಸ್, ಬ್ಲ್ಯಾಕ್ ಬೆರ್ರಿ, ಅಮೆಜಾನ್ ಫೈರ್ ಫೋನ್ ಮತ್ತು ಟ್ಯಾಬ್ಲೆಟ್ ಹಾಗೂ ಹಲವು ಟಿವಿಗಳಲ್ಲೂ ಲಭ್ಯವಿದೆ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's the comparison between Google Duo and Skype. Read more to know which one you should use as per your need.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X