ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರ ಬದಲಾವಣೆ ಹೇಗೆ?

Written By:

ವಾಟ್ಸಾಪ್ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಸಾಕಷ್ಟು ಅತ್ಯುತ್ತಮ ಆಫರ್‌ಗಳನ್ನು ಒದಗಿಸುವುದರ ಮೂಲಕ ತಾಣದಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಫೇಸ್‌ಬುಕ್‌ನ ಆಡಳಿತದಲ್ಲಿರುವ ಈ ಕಂಪೆನಿ ಇನ್ನಷ್ಟು ಸಾಮರ್ಥ್ಯವನ್ನು ಪಡೆದುಕೊಂಡು ಬಳಕೆದಾರರ ಪ್ರೀತಿ ಅಭಿಮಾನವನ್ನು ಹೆಚ್ಚು ಗಳಿಸಿಕೊಂಡಿದೆ.

ಓದಿರಿ: ಜಿಯೋಗೆ ಸ್ಪರ್ಧೆ: ಟಾಪ್ 8 ಉಚಿತ ಡೇಟಾ ಮತ್ತು ಇಂಟರ್ನೆಟ್ ಪ್ಲಾನ್ಸ್

ಇಂದಿನ ಲೇಖನದಲ್ಲಿ ವಾಟ್ಸಾಪ್‌ಗೆ ಸಂಬಂಧಿಸಿದ ಟ್ರಿಕ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದು ನಿಮ್ಮ ಸ್ನೇಹಿತರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಹೌದು ಹೀಗೆ ಮಾಡಲು ಸಾಧ್ಯವೇ ಎಂಬುದಾಗಿ ಆಶ್ಚರ್ಯಚಕಿತರಾಗದಿರಿ ಇದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳಿ.

ಓದಿರಿ: ಜಿಯೋಗೆ ಕಠಿಣ ಸ್ಪರ್ಧೆ: ಏರ್‌ಟೆಲ್, ಬಿಎಸ್‌ಎನ್‌ಎಲ್, ವೊಡಾಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1. ಮೋಜಿನ ಚಿತ್ರವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಹಂತ 1. ಮೋಜಿನ ಚಿತ್ರವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್‌ನಿಂದ, ನಿಮ್ಮ ಸ್ನೇಹಿತನ ಪ್ರೊಫೈಲ್ ಚಿತ್ರಕ್ಕೆ ಅನುಗುಣವಾಗಿರುವ ಮೋಜಿನ ಚಿತ್ರವನ್ನು ಡೌನ್‌ಲೋಡ್ ಮಾಡಿ. ಸ್ನೇಹಿತನ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಫುಲ್ ಸ್ಕ್ರೀನ್ ಮೋಡ್‌ನಲ್ಲಿ ತೆರೆಯಿರಿ ಮತ್ತು ಅದನ್ನು ಕ್ಲೋಸ್ ಮಾಡಿ.

ಹಂತ 2. ಇಮೇಜ್ ರಿಸೈಜ್ ಮಾಡಿ

ಹಂತ 2. ಇಮೇಜ್ ರಿಸೈಜ್ ಮಾಡಿ

ಈಗ ಈ ಹಂತ ಹೆಚ್ಚು ಮುಖ್ಯವಾದುದು. ಇಮೇಜ್ ಎಡಿಟರ್‌ನಲ್ಲಿ ಡೌನ್‌ಲೋಡ್ ಮಾಡಿರುವ ಚಿತ್ರವನ್ನು ತೆರೆಯಿರಿ ಮತ್ತು ಅದನ್ನು 561x561 ಗೆ ಮರುಗಾತ್ರಗೊಳಿಸಿ. ಚಿತ್ರವನ್ನು ಸೇವ್ ಮಾಡಿ.

ಹಂತ 3. ಚಿತ್ರಕ್ಕೆ ಮರುಹೆಸರು ನೀಡಿ

ಹಂತ 3. ಚಿತ್ರಕ್ಕೆ ಮರುಹೆಸರು ನೀಡಿ

ನಿಮ್ಮ ಸ್ನೇಹಿತರ ವಾಟ್ಸಾಪ್ ಸಂಖ್ಯೆಯಲ್ಲಿರುವ ಫೋಟೋಗೆ ರಿನೇಮ್ ಮಾಡಿ. ಫೋನ್ ಸಂಖ್ಯೆಗೆ ಮುನ್ನ ದೇಶದ ಕೋಡ್ ಅನ್ನು ನಮೂದಿಸಿ. ಉದಾಹರಣೆಗೆ, 91XXXXXXXXXX.

ಹಂತ 4. ಚಿತ್ರವನ್ನು ಉಳಿಸಿ

ಹಂತ 4. ಚಿತ್ರವನ್ನು ಉಳಿಸಿ

ಎಸ್‌ಡಿ ಕಾರ್ಡ್‌ಗೆ ಹೋಗಿ > ವಾಟ್ಸಾಪ್ > ಪ್ರೊಫೈಲ್ ಚಿತ್ರಗಳು. ಪ್ರಸ್ತುತ ಫೈಲ್‌ಗೆ ಓವರ್ ವ್ರೈಟ್ ಮಾಡಿ.

ಹಂತ 5. ವಾಟ್ಸಾಪ್‌ಗೆ ಹಿಂತಿರುಗಿ

ಹಂತ 5. ವಾಟ್ಸಾಪ್‌ಗೆ ಹಿಂತಿರುಗಿ

ಕೊನೆಯದಾಗಿ ವಾಟ್ಸಾಪ್‌ಗೆ ಹಿಂತಿರುಗಿ ಮತ್ತು ಬದಲಾವಣೆಯನ್ನು ಗಮನಿಸಿ! ನೀವು ಇಷ್ಟೇ ಮಾಡಬೇಕಾಗಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
you are wondering is this really possible? Well, it is. Here are the steps to do the same. Take a look.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot