ಆಂಡ್ರಾಯ್ಡ್, ಐಫೋನ್ ಡಿವೈಸ್‌ಗಳನ್ನು ವೈಫೈ ರೂಟರ್ ಮಾಡುವುದು ಹೇಗೆ?

By Shwetha
|

ಯಾವುದೇ ತೊಂದರೆ ಇಲ್ಲದ ಇಂಟರ್ನೆಟ್ ಸಂಪರ್ಕವನ್ನು ನೀವು ಆನಂದಿಸಬೇಕು ಎಂದಾದಲ್ಲಿ ಅದಕ್ಕೆ ಸೂಕ್ತವಾದ ರೂಟರ್ ಸಹಾಯವನ್ನು ನೀವು ಪಡೆದುಕೊಳ್ಳಲೇಬೇಕು. ಇಂದಿನ ಯುಗದಲ್ಲಿ ರೂಟರ್ ಕೊಂಚ ದುಬಾರಿಯಾಗಿದ್ದು, ಉತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದಾದಲ್ಲಿ ಕೊಂಚ ಹಣ ಖರ್ಚು ಮಾಡಬೇಕಾಗುತ್ತದೆ.

ಓದಿರಿ: ಜಿಯೋ ಸಿಮ್ ಬೆಂಗಳೂರಿನಲ್ಲಿ ಆಕ್ಟಿವೇಶನ್‌ಗೊಳ್ಳಲು ತಗುಲುವ ಸಮಯವೆಷ್ಟು?

ಇಂದಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್ ಡಿವೈಸ್‌ಗಳು ಉತ್ತಮ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಸಹಾಯ ಮಾಡಲಿವೆ. ಆಂಡ್ರಾಯ್ಡ್ ಮತ್ತು ಐಫೋನ್ ಈ ವಿಧದಲ್ಲಿ ನಿಮಗೆ ಸಹಕಾರವನ್ನು ನೀಡಲಿದ್ದು ನಿಮ್ಮ ಡಿವೈಸ್‌ಗಳಲ್ಲೇ ರೂಟರ್ ಅನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ ಎಂಬದುನ್ನು ಅರಿತುಕೊಳ್ಳೋಣ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಆಂಡ್ರಾಯ್ಡ್ ಫೋನ್ ಅನ್ನು ರೂಟರ್‌ನಂತೆ ಬಳಸಿಕೊಳ್ಳಲು ಕೆಲವೊಂದು ಹಂತಗಳು

ಆಂಡ್ರಾಯ್ಡ್ ಫೋನ್ ಅನ್ನು ರೂಟರ್‌ನಂತೆ ಬಳಸಿಕೊಳ್ಳಲು ಕೆಲವೊಂದು ಹಂತಗಳು

ಹಂತ 1: ಸೆಟ್ಟಿಂಗ್ ಆಪ್ಶನ್‌ಗೆ ಹೋಗಿ ಅದನ್ನು ಕ್ಲಿಕ್ ಮಾಡಿ
ಹಂತ 2: ಡ್ರಾಪ್ ಡೌನ್ ಮೆನುವಿನಿಂದ 'ಟೆದರಿಂಗ್ ಮತ್ತು ಮೊಬೈಲ್ ಹಾಟ್‌ಸ್ಪಾಟ್' ಕ್ಲಿಕ್ ಮಾಡಿ
ಹಂತ 3: 'ಪೋರ್ಟೇಬಲ್ ವೈ-ಫೈ ಹಾಟ್‌ಸ್ಪಾಟ್' ಆಯ್ಕೆಮಾಡಿ. ನಿಮ್ಮ ಆಂಡ್ರಾಯ್ಡ್ ಫೋನ್ ರೂಟರ್‌ನಂತೆ ಕೆಲಸ ಮಾಡಲು ಸಿದ್ಧವಾಗಿದೆ.
ಹಂತ 4: ಗೋಚರಿಸುವ ಲಭ್ಯವಿರುವ ನೆಟ್‌ವರ್ಕ್ ಪಟ್ಟಿಯಲ್ಲಿ 'ಆಂಡ್ರಾಯ್ಡ್ ಅಪ್' ಸ್ಪರ್ಶಿಸುವ ಮೂಲಕ ವೈಫೈ ಸಕ್ರಿಯವಾಗಿರುವ ಕಂಪ್ಯೂಟರ್ ಅಥವಾ ವೈರ್‌ಲೆಸ್ ಡಿವೈಸ್‌ಗೆ ಯಾವುದೇ ಸಂಖ್ಯೆಯನ್ನು ಸಂಪರ್ಕ ಮಾಡಿಕೊಳ್ಳಬಹುದಾಗಿದೆ.

ಐಫೋನ್ ಬಳಕೆದಾರರು ನಿಮ್ಮ ಡಿವೈಸ್‌ ಅನ್ನು ರೂಟರ್‌ನಂತೆ ಮಾರ್ಪಡಿಸಿಕೊಳ್ಳುವುದು ಹೇಗೆ

ಐಫೋನ್ ಬಳಕೆದಾರರು ನಿಮ್ಮ ಡಿವೈಸ್‌ ಅನ್ನು ರೂಟರ್‌ನಂತೆ ಮಾರ್ಪಡಿಸಿಕೊಳ್ಳುವುದು ಹೇಗೆ

ಹಂತ 1: ಹೋಮ್ ಸ್ಕ್ರೀನ್‌ನಲ್ಲಿ ಸೆಟ್ಟಿಂಗ್ಸ್ ಐಕಾನ್ ಆಯ್ಕೆಮಾಡಿ
ಹಂತ 2: 'ಪರ್ಸನಲ್ ಹಾಟ್‌ಸ್ಪಾಟ್' ಆಪ್ಶನ್ ಕ್ಲಿಕ್ ಮಾಡಿ ಮತ್ತು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆನ್/ಆಫ್ ಸ್ಪರ್ಶಿಸಿ
ಹಂತ 3: ವೈಫೈ ಪಾಸ್‌ವರ್ಡ್ ಇಲ್ಲಿ ಗೋಚರಗೊಳ್ಳುತ್ತದೆ, ಇದನ್ನು ನೋಟ್ ಮಾಡಿಕೊಳ್ಳಿ ಇದು ತೊಂದರೆ ಇಲ್ಲದ ಸಂಪರ್ಕವನ್ನು ಒದಗಿಸುತ್ತದೆ
ಹಂತ 4: ನಿಮ್ಮ ವೈಫೈ ಸಕ್ರಿಯಗೊಂಡಿರುವ ಅಥವಾ ವೈರ್‌ಲೆಸ್ ಡಿವೈಸ್ ಅನ್ನು ನೀವೀಗ ಸಂಪರ್ಕಪಡಿಸಬಹುದಾಗಿದೆ ಮತ್ತು ಲಭ್ಯವಿರುವ ನೆಟ್‌ವರ್ಕ್‌ಗಳಲ್ಲಿ ಗೋಚರಿಸುವ ಪಟ್ಟಿಯಿಂದ ಐಫೋನ್ ಹೆಸರನ್ನು ಆಯ್ಕೆಮಾಡಿ.

ಸ್ಮಾರ್ಟ್‌ಫೋನ್ ಅನ್ನು ರೂಟರ್‌ನಂತೆ ಬಳಸಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳು

ಸ್ಮಾರ್ಟ್‌ಫೋನ್ ಅನ್ನು ರೂಟರ್‌ನಂತೆ ಬಳಸಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳು

ಸ್ಮಾರ್ಟ್‌ಫೋನ್ಅನ್ನು ರೂಟರ್‌ನಂತೆ ಬಳಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ನಿಮ್ಮ ಡಿವೈಸ್ ಭದ್ರತೆಯನ್ನು ಇದು ಹೆಚ್ಚಿಸಲಿದ್ದು ಸಾರ್ವಜನಿಕ ವೈಫೈ ಪ್ರವೇಶಕ್ಕಿಂತಲೂ ಹೆಚ್ಚು ಸುರಕ್ಷಿತವಾಗಿದೆ.

ವೈರ್‌ಲೆಸ್ ಇಂಟರ್ನೆಟ್ ಅನ್ನು ಪ್ರವೇಶಿಸುವ ವ್ಯವಸ್ಥೆ

ವೈರ್‌ಲೆಸ್ ಇಂಟರ್ನೆಟ್ ಅನ್ನು ಪ್ರವೇಶಿಸುವ ವ್ಯವಸ್ಥೆ

ನೀವು ರೂಟರ್ ಅನ್ನು ಕೊಂಡೊಯ್ಯಲು ಮರೆತು ಹೋಗಿದ್ದ ಸಂದರ್ಭದಲ್ಲಿ ನಿಮ್ಮ ಮೊಬೈಲ್ ರೂಟರ್‌ನಂತೆ ಕಾರ್ಯನಿರ್ವಹಿಸಲಿದೆ. ಇದು ಯಾವುದೇ ಸಮಯದಲ್ಲಿ ಎಲ್ಲಿಂದ ಬೇಕಾದರೂ ವೈರ್‌ಲೆಸ್ ಇಂಟರ್ನೆಟ್ ಅನ್ನು ಪ್ರವೇಶಿಸುವ ವ್ಯವಸ್ಥೆಯನ್ನು ಪಡೆದುಕೊಂಡಿದೆ.

Best Mobiles in India

English summary
Hence, getting a decent internet connectivity from your smartphone, at a cheaper price can turn to be a boon to many.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X