ಹೊಸ ಮೊಬೈಲ್ ಖರೀದಿಸಿದಾಗ ರಾತ್ರಿ ಪೂರ್ತಿ ಚಾರ್ಜ್ ಮಾಡಲು ಹೇಳುವುದೇಕೆ?

ಹಾಗಾದರೆ, ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡದೆ ಏಕೆ ಬಳಸಬಾರದು?

|

ಮೊಬೈಲ್ ಅಂಗಡಿಗೆ ತೆರಳಿ ಹೊಸ ಮೊಬೈಲ್ ಅನ್ನು ಖರೀದಿಸುತ್ತೀರಾ. ನಂತರ ಅಂಗಡಿಯವನು ನಿಮಗೆ ಮೊಬೈಲ್ ನೀಡಿ ಕನಿಷ್ಟ 10 ಗಂಟೆ ಚಾರ್ಚ್‌ಗೆ ಹಾಕಿ ಬಿಡಿ, ಯಾವುದೇ ಕಾರಣಕ್ಕೂ ಚಾರ್ಜ್ ಮಾಡದೆ ಮೊಬೈಲ್ ಬಳಕೆ ಮಾಡಬೇಡಿ ಎಂದು ನಿಮಗೆ ಹೇಳಿತ್ತಾನೆ.ಹೊಸ ಮೊಬೈಲ್ ಆಗಿರುವುದರಿಂದ ಅಂಗಡಿಯವನು ಹೇಳಿದಂತೆ ನೀವು ಪಾಲಿಸುತ್ತೀರಾ. ಅಲ್ಲವೇ?

ಹಾಗಾದರೆ, ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡದೆ ಏಕೆ ಬಳಸಬಾರದು? ಒಂದು ವೇಳೆ ಹಾಗೆಯೇ ಬಳಸಿದರೆ ಏನಾಗುತ್ತದೆ? ಇದರ ಹಿಂದಿರುವ ಸಾಮಾನ್ಯ ಜ್ಞಾನ ಏನು ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಿ ಏಕೆ ಬಳಸಬೇಕು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಲೀ-ಐಯಾನ್ ಬ್ಯಾಟರಿ ಕಾರಣ.

ಲೀ-ಐಯಾನ್ ಬ್ಯಾಟರಿ ಕಾರಣ.

ಪ್ರಸ್ತುತ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿರುವ ಲಿ-ಐಯಾನ್ ಬ್ಯಾಟರಿ ಖರೀದಿಸಿದ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಿ ಬಳಸಲು ಮುಖ್ಯ ಕಾರಣಲಿ-ಐಯಾನ್ ಬ್ಯಾಟರಿಯಲ್ಲಿನ ಪ್ರತಿ ಕೋಶದ DOD (ಡೆಪ್ತ್ ಆಫ್ ಡಿಸ್ಟಾರ್ಜ್) ಯನ್ನು ಪೂರ್ತಿ ತಗ್ಗಿಸಲು ಮೊಬೈಲ್ ಕಂಪೆನಿಗಳು ಸೂಚಿಸುತ್ತವೆ. ಬ್ಯಾಟರಿಯು 100% ಸಂಪೂರ್ಣ ಚಾರ್ಜ್ ಆಗಿದ್ದರೆ ಬ್ಯಾಟರಿಯ ಡಿಒಡಿ 0% ಆಗಿದೆ ಎಂದರ್ಥ

20% ಗಿಂತ ಕಡಿಮೆ ಇರಬೇಕು ಡಿಒಡಿ

20% ಗಿಂತ ಕಡಿಮೆ ಇರಬೇಕು ಡಿಒಡಿ

ಮೇಲೆ ತಿಳಿಸಿದಂತೆ ಲಿ-ಐಯಾನ್ ಬ್ಯಾಟರಿಯ DOD (ಡೆಪ್ತ್ ಆಫ್ ಡಿಸ್ಟಾರ್ಜ್) ಪೂರ್ತಿ ಕಡಿಮೆ ಇದ್ದರೆ ಒಳ್ಳೆಯದು. ಅಂದರೆ, ಸಂಪೂರ್ಣ ಚಾರ್ಜ್ ಆದ ಬ್ಯಾಟರಿ ಫೋನ್ ಶುರು ಮಾಡಲು ಇರಬೇಕು. ಹಾಗಾಗಿ, ಬ್ಯಾಟರಿಯಲ್ಲಿ ಕನಿಷ್ಟಪಕ್ಷ ಎಂದರೂ 20% ಗಿಂತ ಕಡಿಮೆ ಡಿಒಡಿ ಇರಬೇಕು. ಅಂದರೆ 80% ಹೆಚ್ಚು ಬ್ಯಾಟರಿ ಶಕ್ತಿ ತುಂಬಿರಬೇಕು.

ಹಾರ್ಡ್‌ವೇರ್ ರಕ್ಷಣೆಗಾಗಿ

ಹಾರ್ಡ್‌ವೇರ್ ರಕ್ಷಣೆಗಾಗಿ

ತುಂಬಾ ದಿನಗಳಿಂದ ಬಳಕೆಯಲ್ಲಿರದ ಮೊಬೈಲ್ ಬ್ಯಾಟರಿ, ಒಮ್ಮೆಲೇ ಮೊಬೈಲ್‌ನ ಎಲ್ಲಾ ಬಿಡಿಭಾಗಗಳಿಗೂ ವಿಧ್ಯತ್ ಶಕ್ತಿಯನ್ನು ಪೂರೈಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಮೊಬೈಲ್‌ನ ಹಾರ್ಡ್ವೇರ್ ಭಾಗಗಳು ಹೆಚ್ಚು ವಿಧ್ಯುತ್ ಶಕ್ತಿಯನ್ನು ಬೇಡುವುದರಿಂದ ಮೊಬೈಲ್ ಬ್ಯಾಟರಿ ಪೂರ್ತಿ ತುಂಬಿರಬೇಕು.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಚಾರ್ಜ್ ಮಾಡದಿದ್ದರೆ ಏನಾಗುತ್ತದೆ?

ಚಾರ್ಜ್ ಮಾಡದಿದ್ದರೆ ಏನಾಗುತ್ತದೆ?

ಮೊಬೈಲ್‌ಗಳು ತಯಾರಾಗಿ ಓರ್ವ ಗ್ರಾಹಕನ ಕೈ ತಲುಪಲು ಕನಿಷ್ಟ ಎಂದರೂ 3 ರಿಂದ 6 ತಿಂಗಳ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಬ್ಯಾಟರಿ ಸೆಲ್‌ಗಳು ಸಂಕುಚಿತಗೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ. ಒಮ್ಮೆ ಬ್ಯಾಟರಿ ಪೂರ್ಣ ಡೆಡ್ ಆದರೆ ಅದರ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ.

ಇನ್ನೊಂದು ಕಾರಣವಿದೆ.

ಇನ್ನೊಂದು ಕಾರಣವಿದೆ.

ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಲು ಹೇಳಲು ಇವಿಷ್ಟೆ ಕಾರಣಗಳಲ್ಲದೇ ಮತ್ತೊಂದು ಕಾರಣವಿದೆ. ಹೌದು, ಗ್ರಾಹಕರು ಹೊಸ ಮೊಬೈಲ್ ಖರೀದಿಸಿದ ನಂತರ ಮೊಬೈಲ್ ಬಳಕೆಯ ಪೂರ್ತಿ ಅನುಭವ ಪಡೆಯಬೇಕು. ಬ್ಯಾಟರಿ ಬೇಗ ಖಾಲಿಯಾಗುವ ಕಿರಿಕಿರಿ ಅವರಿಂದ ದೂರವಿರಬೇಕು ಎಂದು ಮೊಬೈಲ್ ಕಂಪೆನಿಗಳು ಹೀಗೆ ಹೇಳುತ್ತವೆ.

Best Mobiles in India

English summary
Electronic device mfrs ship their products with a partial charge in the Li-ion battery for the following reasons. to know more visit to kannada.gizbotcom

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X