ಮೊಬೈಲ್ ರಿಪೇರಿಗೆ ಕೊಟ್ಟಿದ್ದ ಮಾವನಿಗೇ ವಂಚಿಸಿದ್ದ ಅಳಿಯ!..ಇದು ಭಯಾನಕ ಮೋಸ!!

|

ಮೊಬೈಲ್ ಬ್ಯಾಂಕಿಂಗ್ ಮೂಲಕ ತನ್ನ ಸ್ವಂತ ಮಾವನನ್ನೇ ವಂಚಸಿದ್ದ ಅಳಿಯನನ್ನು ಒಂದು ವರ್ಷದ ನಂತರ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಮಾ. 7 ರಂದು ತಮ್ಮ ಎಸ್​ಬಿಐ ಖಾತೆಯಿಂದ 1,68,200 ರೂಪಾಯಿ ಹಣವನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ವಂಚಿಸಿರುವ ಬಗ್ಗೆ ನಿವೃತ್ತ ನೌಕರರೋರ್ವರು ನೀಡಿದ್ದ ದೂರಿಗೆ ಈಗ ಪರಿಹಾರ ಸಿಕ್ಕಿದೆ.

ಹೌದು, ತನ್ನ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಆನ್ಲೈನ್ ಮೂಲಕ ವಂಚಿಸಲಾಗಿದೆ ಎಂದು ನಿವೃತ್ತ ನೌಕರರೋರ್ವರು ಉತ್ತರ ಕರ್ನಾಟಕ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ಪ್ರಕರಣವನ್ನು ಜಿಲ್ಲಾ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಆ ಪ್ರಕರಣವನ್ನು ಪೊಲೀಸರು ಭೇದಿಸಿ ಅಳಿಯ ಕಳ್ಳನನ್ನು ಹಿಡಿದಿದ್ದಾರೆ.

ಮೊಬೈಲ್ ರಿಪೇರಿಗೆ ಕೊಟ್ಟಿದ್ದ ಮಾವನಿಗೇ ವಂಚಿಸಿದ್ದ ಅಳಿಯ!..ಇದು ಭಯಾನಕ ಮೋಸ!!

ನಿವೃತ್ತ ನೌಕರರಾದ ಗಂಗಾಧರ ಬಾಬಯ್ಯ ನಾಯ್ಕ ಎಂಬುವವರು ಮೊಬೈಲ್‌ನಲ್ಲಿ ಏನೋ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಿಕೊಡುವಂತೆ ತನ್ನ ಅಳಿಯನಿ​ಗೆ ಮೊಬೈಲ್ ನೀಡಿದ್ದರು. ಆದರೆ, ಆತ ಮೊಬೈಲ್ ಅನ್ನು ಸರಿಪರಿಡಿಸುವ ಬದಲು ಅದರಲ್ಲಿನ ಹಣವನ್ನು ತನ್ನ ಮಾವನಿಗೆ ತಿಳಿಯದಂತೆ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದನು.

ತನ್ನ ಮಾವನ ಬ್ಯಾಂಕ್ ಖಾತೆಯಲ್ಲಿ ನಿವೃತ್ತಿ ಹಣ ಇರುವುದನ್ನು ತಿಳಿದ ಆತ ಅವರ ಮೊಬೈಲ್‌ನಲ್ಲಿ ಪೋನ್ ಪೇ ಆಪ್ ಡೌನ್​ಲೋಡ್ ಮಾಡಿ 1,68,200 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದನು. ಅಲ್ಲದೆ, ಪ್ಲಿಪ್ ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ವೇಳೆಯಲ್ಲಿ ತನ್ನ ಮಾವನ ಖಾತೆಯಿಂದ ಹಣ ಕಡಿತವಾದರೂ ಒಟಿಪಿ ತನಗೆ ಬರುವಂತೆ ಮಾಡಿಕೊಂಡಿದ್ದನು.

ಮೊಬೈಲ್ ರಿಪೇರಿಗೆ ಕೊಟ್ಟಿದ್ದ ಮಾವನಿಗೇ ವಂಚಿಸಿದ್ದ ಅಳಿಯ!..ಇದು ಭಯಾನಕ ಮೋಸ!!

ಇದಾದ ಕೆಲ ದಿನಗಳ ನಂತರ ಗಂಗಾಧರ ನಾಯ್ಕ ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್​ ಮಾಡಿ ನೋಡಿದಾಗ ಅದರಲ್ಲಿ ಹಣ ಇಲ್ಲದಿರುವುದು ತಿಳಿದುಬಂದಿದೆ. ಕೂಡಲೇ ದುಷ್ಕರ್ಮಿಗಳು ವಂಚನೆ ಮಾಡಿರುವ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಪ್ರಕರಣವನ್ನು ಭೇದಿಸಲು ಒಂದು ವರ್ಷಗಳ ಕಾಲ ತೆಗೆದುಕೊಂಡಿರುವುದು ಆಶ್ಚರ್ಯವೇ ಸರಿ.!

Best Mobiles in India

English summary
mobile, scam, mobile banking, cheats, online, phonepe, ಮೊಬೈಲ್, ವಂಚನೆ, ಮೊಬೈಲ್ ಬ್ಯಾಂಕಿಂಗ್, ಫೋನ್‌ಪೇ, news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X