ಫೇಸ್‌ಬುಕ್‌ ಬರ್ತ್‌ಡೇ: ಇಂಟರೆಸ್ಟಿಂಗ್‌ ಫೇಸ್‌‌ಬುಕ್‌ ಸುದ್ದಿಗಳು

By Ashwath
|

ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್ ಫೇಸ್‌‌ಬುಕ್‌ ನಾಳೆಗೆ ಹತ್ತನೇ ವರ್ಷ‌ ಹು‌ಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.ಕಡಿಮೆ ಅವಧಿಯಲ್ಲೇ ವಿಶ್ವದ ಪ್ರತಿಷ್ಟಿತ ಕಂಪೆನಿಗಳಿಗೆ ಸೆಡ್ಡು ಹೊಡೆದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪೆನಿಯಾಗಿ ಫೇಸ್‌ಬುಕ್‌ ಬೆಳೆದಿದೆ.

ಫೇಸ್‌ಬುಕ್‌ ಹತ್ತನೇ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಫೇಸ್‌ಬುಕ್‌ಗೆ ಸಂಬಂಧಿಸಿದಂತೆ ಕೆಲವು ವಿಚಾರ, ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಕುರಿತ ಕೆಲವೊಂದು ಸ್ವಾರಸ್ಯಕರ ಮಾಹಿತಿಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಹೇಗಿದ್ದ ಫೇಸ್‌ಬುಕ್‌ ಹೇಗೆ ಬದಲಾಯಿತು?

ಫೇಸ್‌ಬುಕ್‌ ನಾಲ್ಕನೇಯ ಬಳಕೆದಾರ ಮಾರ್ಕ್‌ ಜುಕರ್‌ಬರ್ಗ್‌:

ಫೇಸ್‌ಬುಕ್‌ ನಾಲ್ಕನೇಯ ಬಳಕೆದಾರ ಮಾರ್ಕ್‌ ಜುಕರ್‌ಬರ್ಗ್‌:

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅಧಿಕೃತ ಫೇಸ್‌ಬುಕ್‌ ಅಕೌಂಟ್‌ ವೀಕ್ಷಿಸಬೇಕಿದ್ದಲ್ಲಿ ನಿಮ್ಮ ಯುಆರ್‌ಎಲ್‌ನ ನಂತರ '/4' (https://www.facebook.com/4) ಟೈಪ್‌ ಮಾಡಿ ಎಂಟರ್‌ ಬಟನ್‌ ಹೊಡೆದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಅಧಿಕೃತ ಖಾತೆ ಓಪನ್‌ ಆಗುತ್ತದೆ.

ಶಿಕ್ಷಣಕ್ಕೆ ಅರ್ಧದಲ್ಲೇ ಗುಡ್‌‌ಬೈ-ಫೇಸ್‌ಬುಕ್‌ ಸ್ಥಾಪನೆ

ಶಿಕ್ಷಣಕ್ಕೆ ಅರ್ಧದಲ್ಲೇ ಗುಡ್‌‌ಬೈ-ಫೇಸ್‌ಬುಕ್‌ ಸ್ಥಾಪನೆ

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕಲಿಯುತ್ತಿರುವಾಗ ಅರ್ಧದಲ್ಲಿ ಗುಡ್‌ಬೈ. ಕಾಲೇಜ್‌ ಬಿಟ್ಟ ನಂತರ ಸ್ನೇಹಿತ ಡಸ್ಟಿನ್‌ ಜೊತೆ ಸೇರಿ ಫೇಸ್‌ಬುಕ್‌ ಸ್ಥಾಪನೆ. ಕಳೆದ ವರ್ಷದ ಫೇಸ್‌ಬುಕ್‌ ಆದಾಯ 7.872 ಬಿಲಿಯನ್‌ ಡಾಲರ್‌

 ಫೇಸ್‌‌ಬುಕ್‌ ಬೆಸ್ಟ್‌:

ಫೇಸ್‌‌ಬುಕ್‌ ಬೆಸ್ಟ್‌:


ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌ ಈ ವರ್ಷದ ಅತ್ಯುತ್ತಮ ಬಾಸ್‌ ಪಟ್ಟ ಮಾರ್ಕ್ ಜುಕರ್‌ರ್ಗ್‌ಗೆ ಒಲಿದಿದೆ. ಫೇಸ್‌ಬುಕ್‌ನ ಶೇ.99 ರಷ್ಟು ಉದ್ಯೋಗಿಗಳು ಜ್ಯುಕರ್‌ಬರ್ಗ್ ಬಾಸ್‌ ಸ್ಥಾನಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಮೂರನೇ ಐಟಿ ಕಂಪೆನಿ ಎಂಬ ಹೆಗ್ಗಳಿಕೆಗೆ ಫೇಸ್‌ಬುಕ್‌ ಪಾತ್ರವಾಗಿದೆ.

 ಹ್ಯಾಕ್‌ ಮಾಡಿ ಹಣ ಸಂಪಾದಿಸಿ:

ಹ್ಯಾಕ್‌ ಮಾಡಿ ಹಣ ಸಂಪಾದಿಸಿ:


ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿ ಬಳಕೆದಾರರ ಖಾಸಗಿ ಮಾಹಿತಿ ಕದಿಯದೇ 24 ಗಂಟೆಯೊಳಗೆ ಫೇಸ್‌ಬುಕ್‌ಗೆ ಹ್ಯಾಕ್‌ ಮಾಡಿರುವ ಮಾಹಿತಿ ತಿಳಿಸಿದ್ದಲ್ಲಿ ಫೇಸ್‌ಬುಕ್‌ ನಿಮಗೆ 500 ಡಾಲರ್‍ ನೀಡುತ್ತದೆ.ತನ್ನ ಬಳಕೆರದಾರನಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡಲು ಫೇಸ್‌ಬುಕ್‌ ಈ ತಂತ್ರವನ್ನು ಹೂಡಿದೆ.

 ಫೇಸ್‌ಬುಕ್‌ನಲ್ಲಿ ಆಟ ಆಡಿ!

ಫೇಸ್‌ಬುಕ್‌ನಲ್ಲಿ ಆಟ ಆಡಿ!


ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಸುಲಭವಾಗಿ ಬದಲಾಯಿಸಬಹುದು. ಅದರಲ್ಲೂ ಒಂದು ಇಂಗ್ಲಿಷ್‌"Pirate" ಭಾಷೆಯಿದೆ.ಈ ಭಾಷೆಯನ್ನು ಸೆಲೆಕ್ಟ್‌ ಮಾಡಿ ಫೇಸ್‌‌ಬುಕ್‌ನಲ್ಲಿ ಆಟ ಆಡಬಹುದು! ಈ ಭಾಷೆಯನ್ನು ಸೆಲೆಕ್ಟ್‌ ಮಾಡಿದ್ದಲ್ಲಿ ಲೈಕ್‌, ಶೇರ್‌, ಪೋಸ್ಟ್‌‌ ಪದ ಸೇರಿದಂತೆ ಫೇಸ್‌ಬುಕ್‌ನಲ್ಲಿ ಬಳಕೆಯಾಗುವ ಆಂಗ್ಲ ಭಾಷೆಯ ಪದಗಳಿಗೆ ಹೊಸ ಪದದ ಅರ್ಥದೊಂದಿಗೆ ನಿಮ್ಮ ವಾಲ್‌ ಕಾಣುತ್ತಿರುತ್ತದೆ.
ಹೀಗೆ ಮಾಡಿ: Account ಸೆಟಿಂಗ್ಸ್‌ ಹೋಗಿ 'Languages' ಆಯ್ಕೆಯಲ್ಲಿರುವ"English (Pirate)" ಆಯ್ಕೆ ಆರಿಸಿ.

 41ಸಾವಿರ ಪೋಸ್ಟ್‌,18 ಲಕ್ಷ  ಲೈಕ್‌

41ಸಾವಿರ ಪೋಸ್ಟ್‌,18 ಲಕ್ಷ ಲೈಕ್‌


ಫೇಸ್‌ಬುಕ್‌ನಲ್ಲಿ ಒಂದು ನಿಮಿಷಕ್ಕೆ 41ಸಾವಿರ ಪೋಸ್ಟ್‌ಗಳು 18 ಲಕ್ಷ ಲೈಕ್‌ಗಳು ದಾಖಲಾಗುತ್ತದೆ.

 ಪ್ರೊಫೈಲ್‌ಗೆ ಭೇಟಿ ನೀಡಿದ ಫ್ರೆಂಡ್ಸ್‌ಗಳ ಮಾಹಿತಿ  ಅಸಾಧ್ಯ

ಪ್ರೊಫೈಲ್‌ಗೆ ಭೇಟಿ ನೀಡಿದ ಫ್ರೆಂಡ್ಸ್‌ಗಳ ಮಾಹಿತಿ ಅಸಾಧ್ಯ


ಆರ್ಕೂಟ್‌ನಲ್ಲಿದ್ದಂತೆ ಫೇಸ್‌ಬುಕ್‌ನಲ್ಲಿ ನಮ್ಮ ವೈಯಕ್ತಿಕ ಪ್ರೊಫೈಲ್‌ಗೆ ಯಾರು ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ.ಈ ರೀತಿಯ ಆಪ್‌ಗಳು ಕಂಡು ಬಂದ ಕೂಡಲೇ ಫೇಸ್‌ಬುಕ್‌ ಬ್ಲಾಕ್‌ ಮಾಡುತ್ತದೆ.

 ಆದಾಯದಲ್ಲಿ ನಂಬರ್‌ ಒನ್‌:

ಆದಾಯದಲ್ಲಿ ನಂಬರ್‌ ಒನ್‌:


ಜುಕರ್‌ಬರ್ಗ್‌ ವಿಶ್ವದಲ್ಲೇ ಅತ್ಯಧಿಕ ಆದಾಯ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.2012 ರಲ್ಲಿ ಅತ್ಯಧಿಕ ಆದಾಯ ಪಡೆದಿರುವ ಸಿಇಓಗಳ ಪಟ್ಟಿಯನ್ನು ಜಿಎಂಐ ಸಂಸ್ಥೆ ಬಿಡುಗಡೆ ಮಾಡಿದ್ದು. ಫೇಸ್‌‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ವೇತನ,ಬೋನಸ್‌ ಸೇರಿ 2,278,668,214 ಡಾಲರ್‌ ಆದಾಯಗಳಿಸುವ ಟಾಪ್‌ ಟೆನ್‌ ಸಿಇಓ ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನ ಗಳಿಸಿದ್ದಾರೆ.

  ಜುಕರ್‌ಬರ್ಗ್ ಫಾಲೋವರ್ಸ್‌:

ಜುಕರ್‌ಬರ್ಗ್ ಫಾಲೋವರ್ಸ್‌:


ಫೇಸ್‌ಬುಕ್‌ನಲ್ಲಿರುವ ಮಾರ್ಕ್‌ ಜುಕರ್‌ಬರ್ಗ್ ಅಧಿಕೃತ ಖಾತೆಯನ್ನು 21,609,423 ಮಂದಿ ಫಾಲೋ ಮಾಡುತ್ತಿದ್ದಾರೆ

 ವಿಶೇಷ ಪ್ರೈವೆಸಿ ಸೆಟ್ಟಿಂಗ್ಸ್‌:

ವಿಶೇಷ ಪ್ರೈವೆಸಿ ಸೆಟ್ಟಿಂಗ್ಸ್‌:


ಮಾರ್ಕ್ ಜುಕರ್‌ಬರ್ಗ್ ಮದುವೆಯ ವಿಚಾರ ಯಾರಿಗೂ ತಿಳಿಸಿದೇ ಕೊನೆ ಕ್ಷಣದಲ್ಲಿ ಪಾರ್ಟಿಯಲ್ಲಿ ಕಾಲೇಜ್‌ ಗೆಳತಿ ಪ್ರಿಸಿಲ್ಲಾ ಚಾನ್ಳನ್ನು ವಿವಾಹವಾಗಿದ್ದರು. ಪ್ರೈವೆಸಿ ಸೆಟ್ಟಿಂಗ್ಸನಲ್ಲಿ ಬದಲಾವಣೆ ಮಾಡಿಕೊಂಡು ಜುಕರ್‌ಬರ್ಗ್ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡಿದ್ದರು. ಈ ರೀತಿ ಯಾರಿಗೂ ತಿಳಿಸದೇ ಮದುವೆಯಾಗಿದ್ದು ವಿಶ್ವದಲ್ಲಿ ಚರ್ಚೆಯಾಗಿತ್ತು.

 ಜುಕರ್‌ಬರ್ಗ್‌ ಅಕೌಂಟ್‌ ಹ್ಯಾಕ್‌

ಜುಕರ್‌ಬರ್ಗ್‌ ಅಕೌಂಟ್‌ ಹ್ಯಾಕ್‌

ಪ್ಯಾಲೆಸ್ಟೈನ್‌ ಖಾಲಿ ಶ್ರೀಥ್‌(Khalil Shreateh) ಎನ್ನುವ ಹ್ಯಾಕರ್‌ ಫೇಸ್‌ಬುಕ್‌ನಲ್ಲಿ ಬಳಕೆದಾರರ ಅಕೌಂಟ್‌ ಹ್ಯಾಕ್‌ ಮಾಡಿ ಅವರ ವಾಲ್‌ನಲ್ಲಿ ಬೇರೊಬ್ಬರು ಮಾಹಿತಿಯನ್ನು ಪೋಸ್ಟ್‌ ಮಾಡಬಹುದು ಎಂದು ಫೇಸ್‌ಬುಕ್‌ಗೆ ತಿಳಿಸಿದ್ದ.

ಈ ಹ್ಯಾಕಿಂಗ್‌ ಮಾಹಿತಿ ತಿಳಿಸಿದ್ದಕ್ಕೆ ಫೇಸ್‌ಬುಕ್‌ ತನಗೆ 500 ಡಾಲರ್‍ ನೀಡಿ ಅಭಿನಂದಿಸುತ್ತದೆ ಎಂದು ಯೋಚಿಸುತ್ತಿದ್ದ ಖಾಲಿಗೆ ಫೇಸ್‌ಬುಕ್‌ 'ಈ ಕೋಡ್‌ನಲ್ಲಿ ಯಾವುದೇ ಎರರ್‌ ಇಲ್ಲ' ಎಂದು ಪ್ರತಿಕ್ರಿಯಿಸಿ ಬಹುಮಾನ ನೀಡದೇ ನಿರಾಸೆ ಮಾಡಿದ್ದಕ್ಕೆ ಈ ಹ್ಯಾಕರ್‌ ಜುಕರ್‌ಬರ್ಗ್‌ನ ಅಕೌಂಟ್‌ನ್ನೇ ಹ್ಯಾಕ್‌ ಮಾಡುವ ಮೂಲಕ ಫೇಸ್‌ಬುಕ್‌ಗೆ ಬಿಸಿ ಮುಟ್ಟಿಸಿದ್ದ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X