ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?

Posted By:

ಫೇಸ್‌ಬುಕ್‌ ಬಳಸುವುದು ಒಳ್ಳೆಯದೋ?..ಕೆಟ್ಟದ್ದೋ? ಈ ಪ್ರಶ್ನೆಗೆ ಹಲವರು ಹಲವು ರೀತಿಯ ಉತ್ತರಗಳನ್ನು ಕೊಡಬಹುದು. ಈ ವಿಚಾರದ ಬಗ್ಗೆ ಚರ್ಚೆ ಆರಂಭಿಸಿದ್ದರೆ ಅದು ಫೇಸ್‌ಬುಕ್‌ ಇರುವವರೆಗೆ ಖಂಡಿತಾ ಮುಗಿಯಲಾರದು. ಆದರೆ ಈ ಮಾಧ್ಯಮವನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಇದು ಒಳ್ಳೆಯದೋ? ಕೆಟ್ಟದ್ದೋ ತೀರ್ಮಾನವಾಗುತ್ತದೆ ಎಂದು ಹೇಳಬಹುದೇನೋ.!

ಫೇಸ್‌ಬುಕ್‌ ಬಂದು ಇಂದಿಗೆ ಹತ್ತು ವರ್ಷ‌ವಾಗಿದೆ. ಈ ಹತ್ತು ವರ್ಷದಲ್ಲಿ ಫೇಸ್‌ಬುಕ್‌‌‌ ಸಂಬಂಧಿಸಿದಂತೆ ಬಹಳಷ್ಟು ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿದೆ.ಹೀಗಾಗಿ ಕಳೆದ ವರ್ಷ‌ ಫೇಸ್‌‌ಬುಕ್‌ ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಹೇಗೆ ಪ್ರಭಾವ ಬೀರಿದೆ ಮತ್ತು ಬೀರುತ್ತಿದೆ ಎನ್ನುವುದಕ್ಕೆ ಕೆಲವೊಂದು ಘಟನೆಗಳು ನಡೆದಿದೆ. ಪ್ರಭಾವ ಬೀರಿದ ಫೇಸ್‌‌ಬುಕ್‌ ಸುದ್ದಿಗಳು ಕ್ವಿಕ್‌ ಲುಕ್‌ ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ನಿಂದ ಕಳ್ಳನ ಸೆರೆ!

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?

ತನಗೆ ಉದ್ಯೋಗ ನೀಡಿದವನಿಗೆ ಪಂಗನಾಮ ಹಾಕಿ ಪರಾರಿಯಾದ ಅಕೌಂಟೆಟ್‌ನನ್ನು ಮುಂಬೈ ಪೊಲೀಸರು ಫೇಸ್‌ಬುಕ್‌ನಿಂದಾಗಿ ಬಂಧಿಸಿದ್ದರು.ಎಲೆಕ್ಟ್ರಾನಿಕ್‌ ಅಂಗಡಿಯೊಂದರ ಕೆಲಸಗಾರನೊಬ್ಬ ಬ್ಯಾಂಕಿನಲ್ಲಿ ಠೇವಣಿ ಇಡಲು ಅಂಗಡಿ ಮಾಲೀಕ ನೀಡಿದ್ದ 20 ಸಾವಿರ ಹಣದೊಂದಿಗೆ ಪರಾರಿಯಾಗಿದ್ದ. ಮೊಬೈಲ್‌ನ್ನು ಸ್ವಿಚ್‌ ಆಫ್‌ ಮಾಡಿದ್ದರಿಂದ ಅವನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.ಆದರೆ ಅವನು ಫೇಸ್‌ಬುಕ್‌ನಲ್ಲಿ ಸಕ್ರೀಯನಾಗಿದ್ದರಿಂದ ಪೊಲೀಸರು ಫೇಸ್‌ಬುಕ್‌ನಲ್ಲೇ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

 ಬೆಂಗಳೂರು ಪೋಲಿಗಳು ಫೇಸ್‌ಬುಕ್‌ನಲ್ಲಿ ಸೆರೆ!

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?


ಬೆಂಗಳೂರಿನಲ್ಲಿ ಯುವತಿಯರು ರಸ್ತೆ ದಾಟುವ ವೇಳೆ ಬೈಕ್‌ನಲ್ಲಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿ ಕೈಸನ್ನೆ ಮಾಡಿದ್ದರು.ಈ ವೇಳೆ ಯುವಕರ ವರ್ತನೆಯನ್ನು ಆಕ್ಷೇಪಿಸಿದ ಸ್ನೇಹಿತರೊಬ್ಬರನ್ನು ಈ ಪುಂಡರು ತೆಗಳಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಪರಾರಿಯಗುತ್ತಿದ್ದಈ ಪುಂಡರ ಫೋಟೋವನ್ನು ತೆಗೆದು ಸ್ನೇಹಿತರು ಫೇಸ್‌ಬುಕ್‌ನಲ್ಲಿರುವ ಬೆಂಗಳೂರು ಪೊಲೀಸರ ಪೇಜ್‌ಗೆ ಪೋಸ್ಟ್‌ ಮಾಡಿದ್ದರು.ಫೇಸ್‌ಬುಕ್‌ನಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗೆ ಎಚ್ಚೆತ್ತು ಬೆಂಗಳೂರು ಪೊಲೀಸರು ತಪ್ಪಿತಸ್ಥರನ್ನು ಪತ್ತೆಹಚ್ಚಿ ದಂಡಪ್ರಯೋಗ ಮಾಡಿದ್ದರು.

ಫೇಸ್‌‌ಬುಕ್‌ ಬಳಕೆಗೆ ನಿಷೇಧ: ಯುವತಿ ಆತ್ಮಹತ್ಯೆ

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?


ಫೇಸ್‌ಬುಕ್‌ ಬಳಕೆಗೆ ಪೋಷಕರು ಅನುಮತಿ ನೀಡದ ಹಿನ್ನೆಲೆಯಲ್ಲಿ 17 ವರ್ಷದ ಯುವತಿಯೊಬ್ಬಳು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಪೋಷಕರು ಫೇಸ್‌‌ಬುಕ್‌ ಬಳಕೆಗೆ ಅನುಮತಿ ನೀಡದ ಕಾರಣ ಆತ್ಮಹತ್ಯೆ ಮಾಡುತ್ತಿರುವುದಾಗಿ ಯುವತಿ ತನ್ನ ಮರಣ ಪತ್ರದಲ್ಲಿಬರೆದು ಆತ್ಮಹತ್ಯೆ ಮಾಡಿದ್ದು ವಿಶೇಷವಾಗಿತ್ತು.

 ಮಗಳಿಗೆ ಅಪ್ಪನಿಂದ ಹಣದ ಆಮೀಷ:

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?


ಅಮೆರಿಕದಲ್ಲಿ ಫೇಸ್‌ಬುಕ್‌ನಲ್ಲಿ ಚಟ ಹತ್ತಿಸಿಕೊಂಡ ಮಗಳ ಚಟವನ್ನು ಬಿಡಿಸಲು ತಂದೆ ಮಗಳಿಗೆ ಹಣ‌ ನೀಡಿದ್ದರು. 5 ತಿಂಗಳ ಕಾಲ ಫೇಸ್‌ಬುಕ್‌ನ್ನು ಮಗಳು ಬಳಸದ್ದಕ್ಕೆ
ತಂದೆ 200 ಡಾಲರ್‌ ನೀಡಿದ್ದು ಮಾತ್ರವಲ್ಲದೇ ಒಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರು.ಈ ಒಪ್ಪಂದ ಪತ್ರ ಚಿತ್ರ ಮಾಧ್ಯಮಗಳಲ್ಲಿ ಪ್ರಕಟಗೊಂಡು ವಿಶ್ವದೆಲ್ಲೆಡೆ ಒಮ್ಮೆ ಸುದ್ದಿಯಾಗಿಚರ್ಚೆ‌ಯಾಗಿತ್ತು.

 ಹತ್ತುಲಕ್ಷ ಲೈಕ್‌ ಆದ್ರೆ ಮಾತ್ರ ಮದುವೆ!

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?


ಯೆಮೆನ್‌ಲ್ಲಿ ಮಾವನೊಬ್ಬ ತನ್ನ ಮಗಳನ್ನು ಮದುವೆಯಾಗುವ ಅಳಿಯನಿಗೆ ವಧುದಕ್ಷಿಣೆಯ ಬದಲಾಗಿ ತನ್ನ ಫೇಸ್‌ಬುಕ್‌ ಪೇಜ್‌‌ಗೆ ಹತ್ತುಲಕ್ಷ ಲೈಕ್‌ಗಳನ್ನು ಸೃಷ್ಟಿಸಿ ಕೊಡಬೇಕೆಂಬ ವಿಶೇಷವಾದ ಬೇಡಿಕೆಯನ್ನು ಇಟ್ಟಿದ್ದಾನೆ.ಯೆಮೆನ್‌ನಲ್ಲಿ ವಧು ದಕ್ಷಿಣೆ ಪ್ರಮಾಣ ಹೆಚ್ಚಾಗಿದ್ದು,ಕೆಲವು ಯುವಕರು ಹಣ ಕೊಡಲು ಸಾಧ್ಯವಾಗದೇ ಮದುವೆಯಾಗುತ್ತಿಲ್ಲ.ಈ ಕಾರಣಕ್ಕಾಗಿ ಯೆಮೆನ್‌‌ ಜನರಲ್ಲಿ ವಧು ದಕ್ಷಿಣೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ವಿಶೇಷ ವಧುದಕ್ಷಿಣೆಯ ಬೇಡಿಕೆಯನ್ನು ಸಲ್ಲಿಸಿದ್ದೇನೆ ಮಾವ ಮಾಧ್ಯಮಗಳಿಗೆ ತಿಳಿಸಿದ್ದಾನೆ.

 ಲೈಕೋ ಲೈಕ್‌..!

ಫೇಸ್‌ಬುಕ್‌ ಒಳ್ಳೆಯದೋ?..ಕೆಟ್ಟದ್ದೋ?


ಮಾಜಿ ರೈಲ್ವೆ ಮಾಜಿ ರೇಲ್ವೆ ಸಚಿವ ಪವನ್‌ ಕುಮಾರ್‌ ಬನ್ಸಲ್‌ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಫೇಸ್‌ಬುಕ್‌ನಲ್ಲಿ ಒಂದೇ ದಿನದಲ್ಲಿ ಹತ್ತು ಸಾವಿರ ಲೈಕ್‌ ದಾಖಲಾಗಿತ್ತು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದೆ ತಡ ಪವನ್‌ ಕುಮಾರ್‌ ಆತಂಕಕ್ಕೆ ಒಳಗಾಗಿದ್ದು,ಪೊಲೀಸರಿಗೆ ದೂರು ನೀಡಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ 66,434 ಲೈಕ್‌ ದಾಖಲಾಗಿದ್ದರೆ ಈಗ ಲೈಕ್‌ ಸಂಖ್ಯೆ 59,200ಕ್ಕೆ ಇಳಿದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot