ಮಾರುಕಟ್ಟೆಗೆ ಬಂತು ಮೊದಲ 5G ಸ್ಮಾರ್ಟ್‌ಫೋನ್..!

By GizBot Bureau
|

ಮಾರುಕಟ್ಟೆಯಲ್ಲಿ ಮೊಟೊರೊಲಾ ಬೇಡಿಕೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವ ಮಾತು ಕೇಳಿ ಬಂದಿರುವ ಹಿನ್ನಲೆಯಲ್ಲಿ ಹೊಸ ಪ್ರಯತ್ನಗಳಿಗೆ ಮುಂದಾಗಿದೆ. ಇದೇ ಮಾದರಿಯಲ್ಲಿ ಅಮೆರಿಕಾ ಮಾರುಕಟ್ಟೆಯಲ್ಲಿ 5G MOD ಹೊಂದಿರುವ ಮೊಟೊ Z3 ಸ್ಮಾರ್ಟ್ ಪೋನ್ ಅನ್ನು ಆಗಸ್ಟ್ 3 ರಂದು ಲಾಂಚ್ ಮಾಡಿದೆ. ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಳ್ಳುವ ಎಲ್ಲಾ ಆಫರ್ ಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಬೆಲೆ:

ಸದ್ಯ ಅಮೆರಿಕಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೊಟೊ Z3 ಸ್ಮಾರ್ಟ್ ಫೋನ್ ಆಗಸ್ಟ್ 16 ರಿಂದ ಮಾರಾಟಕ್ಕೆ ಲಭ್ಯವಿರಲಿದೆ. ಇದು ರೂ.35000ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಇದೇ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿಯೂ ಮೊಟೊ Z3 ಸ್ಮಾರ್ಟ್ ಫೋನ್ ಆಗವು ಸಾಧ್ಯತೆ ಇದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬಂತು ಮೊದಲ 5G ಸ್ಮಾರ್ಟ್‌ಫೋನ್..!

5G ಮೊಟೊ MOD

ಈ ಸ್ಮಾರ್ಟ್ ಫೋನಿನೊಂದಿಗೆ ಮೊಟೊ 5G ಮೊಟೊ MOD ಅನ್ನು ಲಾಂಚ್ ಮಾಡಿದೆ. ಇದು ಸ್ನಾಪ್ ಡ್ರಾಹನ್ X50 ಮೊಡಮ್ ಮತ್ತು 5G ಕೆಪಬಲಿಟಿಯ ಚಿಪ್ ಸೆಟ್ ಅನ್ನು ಹೊಂದಿದೆ. ಇದು GBPS ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ.

ಇದಲ್ಲದೇ 5G ಮೊಟೊ MOD ನಲ್ಲಿ 2000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಇದು ಮೊದಲಿಗೆ Z ಸರಣಿಯ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಂಡ ಮಾದರಿಯಲ್ಲಿ ಇದೆ. 5G ಮೊಟೊ MOD ಮಾರುಕಟ್ಟೆಯಲ್ಲಿ ದೊಡ್ಡ ಮಾದರಿಯಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.

ಮೊಟೊ Z3 ಸ್ಮಾರ್ಟ್ ಫೋನ್ ವಿಶೇಷತೆ:

ಮೊಟೊ Z3 ಸ್ಮಾರ್ಟ್ ಫೋನಿನಲ್ಲಿ 6.0 ಇಂಚಿನ OLED ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು 2.5D ಕರ್ವಡ್ ಗ್ಲಾಸ್ ಪ್ರೋಟೆಕ್ಷನ್ ಅನ್ನು ಹೊಂದಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಸ್ನಾಪ್ ಡ್ರಾಗನ್ 835 ಆಕ್ಟ್ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ 4 GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ.

ಈ ಪೋನಿನ ಹಿಂಭಾಗದಲ್ಲಿ 4 K ವಿಡಿಯೋ ರೆಕಾರ್ಡ್ ಮಾಡುವ ಸಲುವಾಗಿ 12MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಉತ್ತಮ ಸೆಲ್ಫಿಗಳನ್ನು ತೆಗೆಯಲು ಸಹಾಯವನ್ನು ಮಾಡಲಿದೆ. ಅಲ್ಲದೇ ಇದಕ್ಕಾಗಿ ಸೆಲ್ಫಿ ಫ್ಲಾಷ್ ಅನ್ನು ನೀಡಲಾಗಿದೆ.
ಮೊಟೊ Z3 ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ವೇಗದ ಚಾರ್ಜಿಂಗ್ಗಾಗಿ ಟರ್ಬೋ ಚಾರ್ಜರ್ ಅನ್ನು ಅನ್ನು ಕಾಣಬಹುದಾಗಿದೆ. ಇದಲ್ಲದೇ USB ಟೈಪ್ C ಪೋರ್ಟ್ ಅನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ಓರಿಯೋದಲ್ಲಿ ಈ ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸಲಿದೆ.

Best Mobiles in India

English summary
Moto Z3 with true 5G capabilities officially launched for Rs 35,000. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X