ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಬಿಡುಗಡೆ!..ಬೆಲೆ ಎಷ್ಟು?

|

ಜನಪ್ರಿಯ ಮೊಬೈಲ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಒಪ್ಪೋ ಇದೀಗ ಹೊಸದಾಗಿ ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಒಪ್ಪೋ ರೆನೋ 5 ಸರಣಿಯಲ್ಲಿ ಲಾಂಚ್ ಆಗಿದ್ದು, IP68 ಸರ್ಟಿಫಿಕೇಟ್‌ಶನ್ ಪಡೆದಿದೆ. ಈ ಹೊಸ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಒಪ್ಪೋ

ಹೌದು, ಒಪ್ಪೋ ಕಂಪೆನಿ ತನ್ನ ಹೊಸ ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಅನ್ನು ಜಪಾನನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯು 90 Hz ರೀಫ್ರೇಶ್ ರೇಟ್‌ ಅನ್ನು ಪಡೆದಿದೆ. ಹಾಗಾದರೇ ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಪುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

ಕ್ವಾಡ್ ಕ್ಯಾಮೆರಾ ವಿನ್ಯಾಸ

ಕ್ವಾಡ್ ಕ್ಯಾಮೆರಾ ವಿನ್ಯಾಸ

ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಮೊನೊ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 802.11 ಎಸಿ, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ ರೆನೋ 5A ಸ್ಮಾರ್ಟ್‌ಫೋನ್‌ ಸಿಂಗಲ್ ಮೆಮೊರಿ ರೂಪಾಂತರದಲ್ಲಿ 6GB RAM ಮತ್ತು 128 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದರ ಬೆಲೆ ಜಪಾನನಲ್ಲಿ JPY 39,800 (ಭಾರತದಲ್ಲಿ ಅಂದಾಜು 26,600ರೂ. ಎನ್ನಲಾಗಿದೆ).

Best Mobiles in India

English summary
Oppo Reno 5A include a Qualcomm Snapdragon 765G SoC, 128GB storage, and a hole-punch design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X