Just In
Don't Miss
- News
ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಬೈಕ್ ಜಾಥಾ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Sports
ಸೈನ್ ಮಾಡಿ ಕೆಣಕಿದ ಕೆಸ್ರಿಕ್ಗೆ ಬ್ಯಾಟ್ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪೇಂದ್ರ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಿಮ್ಮ ಸ್ಮಾರ್ಟ್‌ಫೋನ್‌ಗೆ ಮರೆಯದೆ ಈ ಸೆಕ್ಯುರಿಟಿ ಕ್ರಮಗಳನ್ನು ಅನುಸರಿಸಿ!
ಪ್ರಸ್ತುತ ಡಿಜಿಟಲ್ ಯುಗವು ಎಲ್ಲಾ ಕೆಲಸಗಳನ್ನು ಸುಲಭವಾಗಿ ಆಗುವಂತೆ ಮಾಡಿದೆ. ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೇ ಸಾಕು ಬಹುತೇಕ ಕೆಲಸಗಳು ತಕ್ಷಣಕ್ಕೆ ಮಾಡಿಬಿಡಬಹುದು. ಬಳಕೆದಾರರು ಅವರ ಅಗತ್ಯ ಮಾಹಿತಿಗಳನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಸ್ಟೋರ್ ಮಾಡಿರುತ್ತಾರೆ. ಒಂದು ವೇಳೆ ಅಚಾನಕ್ ಆಗಿ ಫೋನ್ ಕಳೆದು ಹೋಗಿ ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಸ್ಮಾರ್ಟ್‌ಫೋನ್ ಕಾಳಜಿಯು ಅತೀ ಮುಖ್ಯವಾಗುತ್ತದೆ.

ಹೌದು, ಸ್ಮಾರ್ಟ್‌ಫೋನ್ ಇಂದು ಪ್ರತಿಯೊಬ್ಬರ ಅಗತ್ಯ ಸಾಧನವಾಗಿದ್ದು, ಸ್ಮಾರ್ಟ್‌ಫೋನ್ ಸೆಕ್ಯುರಿಟಿ ಒದಗಿಸುವುದು ಸಹ ಅನಿವಾರ್ಯವಾಗಿದೆ. ಫೋನಿಗೆ ಪಾಸ್‌ವರ್ಡ್ ಇಡುವುದೊಂದೆ ಸೆಕ್ಯುರಿಟಿ ಅಲ್ಲ. ಬದಲಿಗೆ ಅಗತ್ಯ ಆಪ್ಸ್, ಆನ್‌ಲೈನ್ ಬ್ರೌಸಿಂಗ್, ಡೇಟಾ ರಕ್ಷಣೆ, ಬ್ಲೂಟೂತ್ ಸೇರಿದಂತೆ ಇನ್ನು ಹಲವು ಹಂತಗಳಲ್ಲಿ ಸೆಕ್ಯುರಿಟಿ ಕ್ರಮಗಳನ್ನು ಅನುಸರಿಸಬೇಕಿರುತ್ತದೆ. ಹಾಗಾದರೇ ಸ್ಮಾರ್ಟ್‌ಫೋನ್‌ಗಳ ಯಾವೆಲ್ಲಾ ಸೆಕ್ಯುರಿಟಿ ಹಂತಗಳನ್ನು ಪಾಲಿಸಬೇಕು ಎನ್ನುವುದನ್ನು ಮುಂದೆ ನೋಡೋಣ.

ಸ್ಕ್ರೀನ್ ಲಾಕ್ ಬಳಸಿ
ಸ್ಮಾರ್ಟ್‌ಫೋನ್‌ಗಳನ್ನು ಆನ್ ಮಾಡಬೇಕಾದಾಗ ಸಾಮಾನ್ಯವಾಗಿ ಆರಂಭದಲ್ಲಿ ಪರದೆ ಸರಿಸುವ ಬೇಸಿಕ್ ಸೆಕ್ಯುರಿಟಿಯ ಆಯ್ಕೆ ಇರುತ್ತದೆ. ಅದನ್ನು ಬಳಕೆದಾರರು ಬದಲಿಸಿಕೊಳ್ಳಬಹುದು. ಇತ್ತೀಚಿನ ಬಹುತೇಕ ಫೋನ್‌ಗಳು ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿರುತ್ತವೆ ಅದನ್ನು ಸೆಟ್ ಮಾಡಿಕೊಳ್ಳಿ ಅಥವಾ ಪ್ಯಾಟರ್ನ್ ಲಾಕ್ ಇಲ್ಲವೇ ಪಿನ್ ಲಾಕ್ ವ್ಯವಸ್ಥೆ ಮಾಡಿಕೊಳ್ಳಿ. ಸ್ಮಾರ್ಟ್‌ಫೋನ್ ಇದು ಬೇಸಿಕ್ ರಕ್ಷಣೆ ಇದ್ದಂತೆ

ಡೇಟಾವನ್ನು ರಕ್ಷಿಸಿ
ಸ್ಮಾರ್ಟ್‌ಫೋನ್‌ಗಳಿಗೆ ಎಂಟ್ರಿ ಪಿನ್ ಲಾಕ್ ಮತ್ತು ಪಾಸ್‌ವರ್ಡ್ ಲಾಕ್‌ಗಳು ಸಹಾಯಕವಾಗಿದ್ದರೂ, ಸಹ ಡೇಟಾ ಕಾಪಾಡಲು ಪ್ರತ್ಯೇಕ ಸೆಕ್ಯೂರಿಟಿ ಬೇಕು ಎಂದೆನಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿನ ಅಗತ್ಯ ಡೇಟಾವನ್ನು ಕಂಪ್ಯೂಟರ್‌ಗೆ ಪ್ಲಗ್ ಸ್ಟೋರ್ ಮಾಡಬಹುದು ಅಥವಾ ಮೈಕ್ರೊ ಎಸ್‌ಡಿ ಕಾರ್ಡ್ ಅಥವಾ ಪೆನ್‌ಡ್ರೈವ್ ಸಾಧನಗಳಲ್ಲಿ ಸಂಗ್ರಹಿಸಬಹುದು. ಇಲ್ಲವೇ ಕ್ಲೌಡ್ ಸ್ಟೋರೇಜ್ ಬಳಕೆ ಮಾಡಬಹುದು.

ಬ್ಲೂಟೂತ್ ಬಗ್ಗೆ ಗಮನ
ಸ್ಮಾರ್ಟ್‌ಫೋನ್‌ಗಳಲ್ಲಿನ ಡೇಟಾ ಇತರರಿಗೆ ಸೆಂಡ್ ಮಾಡಲು ವಾಯರ್‌ಲೆಸ್ ಸೇವೆಗಳಾದ ಬ್ಲೂಟೂತ್, ಶೇರ್ ಇಟ್‌ನಂತಹ ಆಪ್ಸ್‌ಗಳನ್ನು ಬಳಸುತ್ತಿರಿ. ಬಳಕೆ ಇಲ್ಲದಿದ್ದಾಗ ಬ್ಲೂಟೂತ್ ಆಫ್ ಮಾಡಿಟ್ಟುಕೊಳ್ಳಿರಿ. ಕೆಲವೊಮ್ಮೆ ನಿಮ್ಮ ಅರಿವಿಲ್ಲದೆ ನಿಮ್ಮ ಫೋನ್ ಇತರರಿಗೆ ಕನೆಕ್ಟ್ ಆಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ನಿಮ್ಮ ಫೋನ್‌ನ ನೆಟ್‌ವರ್ಕ್ ಸೆಕ್ಯುರಿಟಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವುದು ಯೋಗ್ಯ.

ಅಪ್ಸ್ ಡೌನ್‌ಲೋಡ್ ಸುರಕ್ಷತೆ
ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ಸ್ ಡೌನ್‌ಲೋಡ್ ಮಾಡಿಕೊಳ್ಳುವಾಗ ಗೂಗಲ್ ಸಂಸ್ಥೆ ಸರ್ಟಿಫೈಡ್ ಇಲ್ಲದ ಆಪ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮವಲ್ಲ. ಕೆಲವೊಂದು ಆಪ್ಸ್‌ಗಳು ಅಸುರಕ್ಷಿತವಾದ ಮಾಲ್‌ವೇರ್ ಆಪ್‌ಗಳಾಗಿದ್ದು, ನಿಮ್ಮ ಖಾಸಗಿ ಡೇಟಾ ಸೋರಿಕೆ ಆಗುವ ಸಾಧ್ಯತೆಗಳಿರುತ್ತವೆ. ಡೌನ್‌ಲೋಡ್ ಮಾಡುವಾಗ ರೇಟಿಂಗ್ಸ್ ಮತ್ತು ರೀವ್ಯೂಗಳನ್ನು ಗಮನಿಸಿ.

ಇಂಟರ್ನೆಟ್ ಬ್ರೌಸಿಂಗ್
ಸ್ಮಾರ್ಟ್‌ಫೋನ್‌ಗಳಲ್ಲಿ ಬ್ರೌಸಿಂಗ್ ಮಾಡುವಾಗ ಜಾಗೃತರಾಗಿರಿ. ಅದರಲ್ಲೂ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಎಚ್ಚರಿಕೆ ಅಗತ್ಯ. ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರವನ್ನು ಮಾಡುವಾಗ ವೆಬ್‌ಸೈಟ್‌ಗಳ ಅಸಲಿಯತ್ತನ್ನು ಪರೀಕ್ಷಿಸಿ. ಆ ಸೈಟ್‌ಗಳ URL ಗಮನಿಸಿ ನೋಡಿ. ಹಾಗೂ ಪೇಮೆಂಟ್ ಮಾಡುವಾಗ ಬ್ಯಾಂಕ್ ಮಾಹಿತಿ, ಪಿನ್ ನೀಡುವುದು ಮಾಡಿ ಹಣ ಕಳೆದುಕೊಳ್ಳಬೇಡಿ.

ಸಿಮ್ ಕಾರ್ಡ್ ಲಾಕ್
ಫೋನಿನಲ್ಲಿ ಸ್ಕ್ರೀನ್ ಲಾಕ್ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಸಿಮ್ ಕಾರ್ಡ್ ಲಾಕ್ ಬಳಸುವುದು ಕಡಿಮೆ. ಸಿಮ್ ಲಾಕ್ ಮಾಡುವುದರಿಂದ ಯಾರಾದರೂ ಫೋನಿನಂದ ಸಿಮ್ ತೆಗೆದುಹಾಕಿ ಇನ್ನೊಂದು ಫೋನಿನಲ್ಲಿ ಬಳಸುವುದನ್ನು ತಡೆಯಬಹುದಾಗಿದೆ. ಅದಕ್ಕಾಗಿ ಪಿನ್ ಸಂಖ್ಯೆಯ ರೂಪದಲ್ಲಿ ಸಿಮ್ ಕಾರ್ಡ್ ಲಾಕ್ ಅನ್ನು ಮಾಡಬಹುದಾಗಿದೆ. ಆದರೆ ಈ ಆಯ್ಕೆ ಬಳಸಲು ಜಾಗೃತರಾಗಿರಬೇಕು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090