ಮೊಬೈಲ್ ಅಂಗರಕ್ಷಕ ಗೊರಿಲ್ಲಾ ಗ್ಲಾಸ್ 3 ಇನ್ನು ನಿಮ್ಮ ಸಂಗಾತಿ

By Shwetha
|

ವಿವಿಧ ಅಪ್ಲಿಕೇಶನ್‌ಗಳು ವಿಭಿನ್ನ ಸ್ಮಾರ್ಟ್‌ಫೋನ್‌ಗಳು ಈಗ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳಿಗೆ ಕಾರಣವಾಗಿರುವ ಈ ಬೆಳವಣಿಗೆ ಮೊಬೈಲ್ ಕ್ಷೇತ್ರದಲ್ಲಿ ನವ ಕ್ರಾಂತಿಯ ಉದಯಕ್ಕೆ ಮೂಲವಾಗಿದೆ.

ಸ್ಮಾರ್ಟ್‌ಫೋನ್‌ಗಳು ಈಗೀಗ ಗ್ರಾಹಕರ ಮೆಚ್ಚಿನ ಡಿವೈಸ್‍ಗಳಾಗಿದ್ದು ಅದರ ನವೀನ ಫೀಚರ್‍ಗಳು, ಅಪ್ಲಿಕೇಶನ್‌ಗಳು, ಕ್ಯಾಮೆರಾ ಮೆಗಾಪಿಕ್ಸೆಲ್‍ಗಳು, ಪ್ರೊಸೆಸಿಂಗ್ ಹೀಗೆ ಈ ಎಲ್ಲಾ ಅಂಶಗಳನ್ನು ಒಬ್ಬ ಗ್ರಾಹಕ ತನ್ನ ಸ್ಮಾರ್ಟ್‌ಫೋನ್‌ನಿಂದ ಎದುರು ನೋಡುತ್ತಾನೆ.

ಮೊಬೈಲ್ ಅಂಗರಕ್ಷಕ ಗೊರಿಲ್ಲಾ ಗ್ಲಾಸ್ 3 ಇನ್ನು ನಿಮ್ಮ ಸಂಗಾತಿ

ಅದಕ್ಕನುಗುಣವಾಗಿ ಮೊಬೈಲ್ ಕಂಪೆನಿಗಳು ಈ ಎಲ್ಲಾ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡೇ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ಗಳ ಸುರಕ್ಷತೆಗೂ ಮೊಬೈಲ್ ತಯಾರಿಕೆ ಕಂಪೆನಿ ಗಮನ ನೀಡಬೇಕಾಗುತ್ತದೆ.

ಒಂದು ರೀತಿಯಲ್ಲಿ ಹೇಳುವುದಾದರೆ ಕಂಪೆನಿಗಳ ಧ್ಯೇಯವಾಕ್ಯ ಸಾಫ್ಟ್‌ವೇರ್ ಭದ್ರತೆ ಮತ್ತು ಹಾರ್ಡ್‌ವೇರ್ ಸುರಕ್ಷೆಯಯಾಗಿದೆ. ಹ್ಯಾಂಡ್‍ಸೆಟ್ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಕೋರ್ನಿಂಗ್ ಅವರ ಗೊರಿಲ್ಲಾ ಗ್ಲಾಸ್ ಅನ್ನು ಮೊಬೈಲ್ ಕಂಪೆನಿಗಳು ಹೆಚ್ಚು ಬಳಸುತ್ತವೆ. ಗೊರಿಲ್ಲಾ ಗ್ಲಾಸ್ ಸ್ಮಾರ್ಟ್‌ಫೋನ್‌ಗಳು ಡಿಸ್ಪ್ಲೇ ಗ್ಲಾಸ್‍ನ ಸುರಕ್ಷೆಯ ಖಾತ್ರಿಯನ್ನು ಒದಗಿಸುತ್ತವೆ. ದೆಹಲಿಯಲ್ಲಿ ನಡೆದ ಈವೆಂಟ್‍ನಲ್ಲಿ ಕೋರ್ನಿಂಗ್ ಭಾರತದಲ್ಲಿರುವ ಅದರ ಗೊರಿಲ್ಲಾ ಗ್ಲಾಸ್ ವಿಧಗಳನ್ನು ತಿಳಿಸಿದೆ. ಭಾರತದಲ್ಲಿ ಕಂಪೆನಿಯ ಎರಡು ರೀತಿಯ ಗ್ಲಾಸ್ ತಂತ್ರಜ್ಞಾನವಿದ್ದು ನೇಟೀವ್ ಡ್ಯಾಮೆಜ್ ರೆಸಿಸ್ಟೆನ್ಸಿಯೊಂದಿಗೆ ಕೋರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಹಾಗೂ ಆಂಟಿಮೈಕ್ರೋಬಿಯಲ್ ಕೋರ್ನಿಂಗ್ ಗೊರಿಲ್ಲಾ ಗ್ಲಾಸ್ ಇಲ್ಲಿ ಲಭ್ಯವಿದೆ.

ಗೊರಿಲ್ಲಾ ಗ್ಲಾಸ್ ಅನ್ನು ಯುನೈಡೆಟ್ ಸ್ಟೇಟ್ಸ್, ಕೊರಿಯಾ ಮತ್ತು ಥೈವಾನ್‍ನಲ್ಲಿ ಉತ್ಪಾದಿಸಲಾಗುತ್ತಿದ್ದು ಪ್ರಸ್ತುತ ಈ ಗ್ಲಾಸ್ ಅನ್ನು 33 ಕ್ಕಿಂತ ಹೆಚ್ಚಿನ ಬ್ರಾಂಡ್‌ಗಳು, 2400 ಉತ್ಪನ್ನ ಮಾಡೆಲ್‌ಗಳು, ಮತ್ತು 2.4 ಬಿಲಿಯನ್ ಸಾಧನಗಳು ಬಳಸುತ್ತಿವೆ.
ಕಂಪೆನಿಯು ತನ್ನ ಗ್ಲಾಸ್‍ನಲ್ಲಿ ಬರುವ ಸ್ಕ್ರಾಚ್ ಮಾರ್ಕ್‌ಗಳನ್ನು ನಿವಾರಿಸುವ ಹಂತದಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದು ತನ್ನ ವಿಜ್ಞಾನಿಗಳು ಇದನ್ನು ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ. ಎನ್‍ಡಿಆರ್ ನೊಂದಿಗೆ ಬಂದಿರುವ ಗೊರಿಲ್ಲಾ ಗ್ಲಾಸ್ 3 ಸುಧಾರಿತ ಸ್ಕ್ರಾಚ್ ಪ್ರತಿರೋಧಕ ಸಾಮರ್ಥ್ಯಗಳಿಂದ ಕೂಡಿದೆ. ಇದು ಹೆಚ್ಚಿನ ಸ್ಕ್ರಾಚ್ ಉಂಟಾಗುವಿಕೆಯನ್ನು ತಡೆಗಟ್ಟಿ ಫೋನಿನ ರಕ್ಷಣೆಯನ್ನು ಮಾಡುತ್ತದೆ.

ಗ್ಲಾಸ್ ನಿರ್ಮಾಣಕ್ಕೆ ಬಳಸಲಾದ ಲೋಹ ಐಯೋನಿಕ್ ಸಿಲ್ವರ್ ಆಗಿದ್ದು ಪ್ರತಿರೋಧಕ ಶಕ್ತಿಯನ್ನು ತಡೆಯುವ ಪ್ರಾಬಲ್ಯವನ್ನು ಹೊಂದಿರುವಂತೆ ಹ್ಯಾಂಡ್‍ಸೆಟ್‌ಗಳಲ್ಲಿ ಗೊರಿಲ್ಲಾ ಗ್ಲಾಸ್ ಅನ್ನು ರೂಪಿಸಲಾಗಿದೆ. ಟ್ಯಾಬ್ಲೆಟ್, ಲ್ಯಾಪ್‍ಟಾಪ್, ನೋಟ್‍ಬುಕ್ ಡಿಸ್ಪ್ಲೇಗೂ ರಕ್ಷಣೆಯನ್ನು ಒದಗಿಸುವ ಗೊರಿಲ್ಲಾ ಗ್ಲಾಸ್ ಮಾರುಕಟ್ಟೆಯಲ್ಲಿ ಉತ್ತಮ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪೆನಿ ಹೇಳುವಂತೆ ಈ ಗ್ಲಾಸ್‍ಗಳ ಮಾರಾಟಕ್ಕೆ ಭಾರತೀಯ ಮಾರುಕಟ್ಟೆ ಒಂದು ಆಶಾಕೇಂದ್ರವಾಗಿದ್ದು ಯಶಸ್ಸಿನ ಭರವಸೆಯನ್ನು ಮೂಡಿಸಿದೆ. ಕಂಪೆನಿಯ ಗೊರಿಲ್ಲಾ ಗ್ಲಾಸ್ 3 ಹಿಂದಿನ ಗ್ಲಾಸ್ ವೈಶಿಷ್ಟ್ಯಗಳಿಂದ ವಿಭಿನ್ನವಾಗಿದೆ. ಹಿಂದಿನ ಗ್ಲಾಸ್ ಗುಣಮಟ್ಟವನ್ನೇ ಈ ಗ್ಲಾಸ್ 3 ಹೊಂದಿದ್ದು ನಿಮಗೆ ಬ್ರೈಟರ್ ಇಮೇಜ್‌ಗಳನ್ನು ಪೂರೈಸುವಲ್ಲಿ ಶಕ್ತವಾಗಿದೆ. ಎಂದು ಕೋರ್ನಿಂಗ್ ಟೆಕ್ನೋಲಜೀಸ್ ಇಂಡಿಯಾದ ಅಧ್ಯಕ್ಷ ಸಮಿತ್ ಬನ್ಸಾಲ್ ತಿಳಿಸಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X