ರಿಯಲ್‌ಮಿ C 15 ಮತ್ತು ರೆಡ್ಮಿ 9 ಪ್ರೈಮ್‌: ಖರೀದಿಗೆ ಯಾವುದು ಯೋಗ್ಯ?

|

ರಿಯಲ್‌ಮಿ ಮತ್ತು ರೆಡ್ಮಿ ಎರಡು ಬಜೆಟ್‌ ದರದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ. ಇಂದು ರಿಯಲ್‌ಮಿ ಲಂಪನಿಯು ಹೊಸದಾಗಿ ರಿಯಲ್‌ಮಿ C 15 ಪರಿಚಯಿಸಿದೆ. ಹಾಗೆಯೇ ಇತ್ತೀಚಿಗೆ ರೆಡ್ಮಿಯು ರೆಡ್ಮಿ 9 ಪ್ರೈಮ್ ಫೋನ್ ಲಾಂಚ್ ಮಾಡಿದೆ. ಈ ಎರಡು ಫೋನ್‌ಗಳ ಫೀಚರ್ಸ್‌ಗಳು ಬಹುತೇಕ ಸಾಮ್ಯತೆ ಹೊಂದಿವೆ. ಹಾಗೆಯೇ ಬೆಲೆಯಲ್ಲಿಯೂ ಸಹ ಹೆಚ್ಚಿನ ಭಿನ್ನತೆ ಇಲ್ಲ. ಆದ್ರೆ ಖರೀದಿಗೆ ಯಾವುದು ಬೆಸ್ಟ್‌.

ರೆಡ್ಮಿ

ರಿಯಲ್‌ಮಿ C 15 ಮತ್ತು ರೆಡ್ಮಿ 9 ಪ್ರೈಮ್‌ ಈ ಎರಡು ಸ್ಮಾರ್ಟ್‌ಫೋನ್‌ಗಳು 10000 ಸಾವಿರ ಪ್ರೈಸ್‌ಟ್ಯಾಗ್‌ನ ಒಳಗೆ ಕಾಣಿಸಿಕೊಂಡಿವೆ. ಬಜೆಟ್‌ ದರದ ಫೋನಾಗಿದ್ದರೂ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿವೆ. ಎರಡು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ರಿಯಲ್‌ಮಿ C 15 ಮತ್ತು ರೆಡ್ಮಿ 9 ಪ್ರೈಮ್ ರಲ್ಲಿ ಖರೀದಿಗೆ ಯಾವುದು ಬೆಸ್ಟ್‌ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿವೆ

ಡಿಸ್‌ಪ್ಲೇ ಹೇಗಿವೆ

ರಿಯಲ್‌ಮಿ C15 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 20:9 ರಚನೆಯ ಅನುಪಾತದ ರಚನೆಯಲ್ಲಿದೆ. ಅದೇ ರೀತಿ ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 19.5: 9 ರಚನೆಯ ಅನುಪಾತವನ್ನು ಹೊಂದಿದೆ. ಪಿಕ್ಸಲ್ ರೆಸಲ್ಯೂಶನ್‌ನಲ್ಲಿ ರೆಡ್ಮಿ 9 ಪ್ರೈಮ್‌ ಉತ್ತಮ ಅನಿಸಲಿದೆ.

ಪ್ರೊಸೆಸರ್‌ ಬಲಾಬಲ

ಪ್ರೊಸೆಸರ್‌ ಬಲಾಬಲ

ರಿಯಲ್‌ಮಿ C15 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ‌ಇದು 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ರಿಯಲ್‌ಮಿ C15 ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13ಎಂಪಿ ಸೆನ್ಸಾರ್‌, ಎರಡನೇ ಕ್ಯಾಮೆರಾ 8ಎಂಪಿ ಸೆನ್ಸಾರ್ ಮೂರನೇ ಕ್ಯಾಮೆರಾ 2ಎಂಪಿ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2ಎಂಪಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8ಎಂಪಿ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ರೆಡ್‌ಮಿ 9 ಪ್ರೈಮ್ ಸ್ಮಾರ್ಟ್‌ಫೋನಿನಲ್ಲೂ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ. ಮುಖ್ಯ ಕ್ಯಾಮೆರಾ 13ಎಂಪಿ ಸೆನ್ಸಾರ್ ಪಡೆದಿದೆ. ಎರಡನೇ ಕ್ಯಾಮೆರಾ 8ಎಂಪಿ ಕ್ಯಾಮೆರಾ, ಮೂರನೇ ಕ್ಯಾಮೆರಾ 5 ಎಂಪಿ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2ಎಂಪಿ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ. ಎರಡರಲ್ಲಿಯೂ ಹೆಚ್ಚಿನ ಭಿನ್ನತೆ ಇಲ್ಲ.

ಬ್ಯಾಟರಿ ಮತ್ತು ಇತರೆ ಸೌಲಭ್ಯ

ಬ್ಯಾಟರಿ ಮತ್ತು ಇತರೆ ಸೌಲಭ್ಯ

ರಿಯಲ್‌ಮಿ C15 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಹಾಗೆಯೇ ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಬ್ಯಾಟರಿ ವಿಷಯವಾಗಿ ನೋಡುವುದಾದರೇ ರಿಯಲ್‌ಮಿ ಹೆಚ್ಚಿನ ಬ್ಯಾಕ್‌ಅಪ್‌ ಪಡೆದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರಿಯಲ್‌ಮಿ C15 ಸ್ಮಾರ್ಟ್‌ಫೋನ್ 3GB RAM + 32GB ವೇರಿಯಂಟ್ 9,999ರೂ. ಪ್ರೈಸ್‌ಟ್ಯಾಗ್‌ ನಲ್ಲಿದೆ ಹಾಗೆಯೇ 4GB RAM + 64GB ಶೇಖರಣಾ ವೇರಿಯಂಟ್ ಬೆಲೆ ರೂ. 10,999 ರೂ.ಆಗಿದೆ. ಅದೇ ರೀತಿ ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ ಆರಂಭಿಕ ವೇರಿಯಂಟ್ ದರವು 9,999ರೂ.ಗಳು ಆಗಿದೆ.

ಯಾವುದು ಬೆಸ್ಟ್?

ಯಾವುದು ಬೆಸ್ಟ್?

ಹೊಸ ರಿಯಲ್‌ಮಿ C15 ಸ್ಮಾರ್ಟ್‌ಫೋನ್ ಬ್ಯಾಟರಿ ವಿಷಯದಲ್ಲಿ ರೆಡ್ಮಿ ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನಿಗಿಂತ ಉತ್ತಮ ಅನಿಸುತ್ತದೆ. ಹೈ ಎಂಡ್ ವೇರಿಯಂಟ್ ಬೆಲೆಯು ಹೆಚ್ಚಿಲ್ಲ. ಇನ್ನು ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ, ಪ್ರೊಸೆಸರ್‌ ಪಾಯಿಂಟ್ಸ್‌ಗಳಿಂದ ಬೆಸ್ಟ್‌ ಅನಿಸುವುದು.

Best Mobiles in India

English summary
Both smartphones are in budget price. and offers a good spec sheet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X