ಮೀಡಿಯಾಕ್ಕೆ ಲಗಾಮು ಬೇಕಾ..? ಸ್ಪೇಸ್ X ಸಂಸ್ಥಾಪಕ ಕೇಳಿದ್ದಕ್ಕೇ ಜನ ಏನ್ ಅಂದ್ರು? ನೀವು ಏನ್ ಅಂತಿರಾ?

|

ಸ್ಪೇಸ್ X ಯೋಜನೆಯ ಮೂಲಕ ಮರುಬಳಕೆ ಮಾಡುವ ರಾಕೇಟ್ ಹಾರಿಸಿ ಜಾಗತಿಕವಾಗಿ ಸದ್ದು ಮಾಡುತ್ತಿರುವ ಎಲಾನ್ ಮಸ್ಕ್ , ಸದ್ಯ ಹೊಸದೊಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಅವರು ಇಟ್ಟಿರುವ ಹೊಸದೊಂದು ವಾದಕ್ಕೇ ಸಾರ್ವಜನಿಕರಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಧ್ಯಮವನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಹೊಸದೊಂದು ವೆಬ್ ಸೈಟ್ ಶುರು ಮಾಡುವುದಾಗಿ ತಿಳಿಸಿದ್ದಾರೆ.

ಮೀಡಿಯಾಕ್ಕೆ ಲಗಾಮು ಬೇಕಾ..? ಸ್ಪೇಸ್ X ಸಂಸ್ಥಾಪಕ ಕೇಳಿದ್ದಕ್ಕೇ ಜನ ಏನ್ ಅಂದ್ರು?

ಇಂದಿನ ದಿನದಲ್ಲಿ ಮಾಧ್ಯಮಗಳು ತಮ್ಮ ಸಿದ್ದಾಂತಗಳನ್ನು ಬದಲಾಯಿಸಿಕೊಂಡಿದ್ದು, ಪತ್ರಕರ್ತರು ತತ್ವಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತಮ್ಮ ಲಾಭಕ್ಕಾಗಿ ಬೇರೆಯವರು ಟೀಕಿಸುವ ಮತ್ತು ಏತ್ತರಕ್ಕೇ ಏರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಏನು ಬೇಕಾದರು ಮಾಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಮೀಡಿಯಾ ಕ್ರೆಡಿಬಲಿಟಿ ರೇಂಟಿಗ್ ಕೊಟ್ಟರೇ ಹೇಗೆ ಎಂದು ಎಲಾನ್ ಮಸ್ಕ್ ಹೊಸದೊಂದು ಐಡಿಯಾವನ್ನು ಕೊಟ್ಟಿದ್ದಾರೆ.

ಟ್ವಿಟರ್ ಪ್ರಶ್ನೆ ವ್ಯಾಪಕ ಬೆಂಬಲ:

ಸಾರ್ವಜನಿಕರಿಗೆ ಟ್ವಿಟರ್ ಮೂಲಕ ಪ್ರಶ್ನೆಯೊಂದನ್ನು ಇಟ್ಟಿದ್ದ ಎಲಾನ್ ಮಸ್ಕ್ , ಮೀಡಿಯಾ ಕ್ರೆಡಿಬಲ್ ರೈಟಿಂಗ್ ಸೈಟ್ ವೊಂದನ್ನು ರಚಿಸಬೇಕೆ ಎನ್ನುವ ಪ್ರಶ್ನೆಗೆ ಬೇಕು ಅಥವಾ ಬೇಡವೇ ಎನ್ನುವ ಪ್ರಶ್ನೇಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮೂಗದಾರ ಬೇಕು:

ಎಲಾನ್ ಮಸ್ಕ್ ಪ್ರಶ್ನೆಗೆ ಉತ್ತರಿಸಿರುವ 100% ಮಂದಿಯಲ್ಲಿ 88% ಮಂದಿ ಮೀಡಿಯಾ ರೇಟಿಂಗ್ ಸೈಟ್ ವೊಂದನ್ನು ಆರಂಭಿಸ ಬೇಕು ಎನ್ನುವ ವಾದಕ್ಕೇ ಬೆಂಬಲವನ್ನು ನೀಡಿದ್ದಾರೆ. ಅವರಿಗೂ ಮೂಗುದಾರ ಹಾಕಬೇಕು ಎನ್ನುವ ವಾದ ವನ್ನು ಮುಂದಿಟ್ಟಿದ್ದಾರೆ.

ಯಾರು ಯಾರಿಗೆ ರೇಟಿಂಗ್:

ಯಾರು ಯಾರಿಗೆ ರೇಟಿಂಗ್:

ಪತ್ರಕರ್ತರೆಂದು ಗುರುತಿಸಿಕೊಂಡವರಿಗೆ, ಸಂಪಾದಕರಿಗೆ ಮತ್ತು ಪ್ರಕಾಶಕರಿಗೆ ರೇಟಿಂಗ್ ನೀಡುವ ಯೋಜನೆಯೊಂದನ್ನು ಇಯಾನ್ ಮಾಸ್ಕ್ ಹಾಕಿಕೊಂಡಿದ್ದಾರೆ. ಇದನ್ನು ಜನರೇ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಯಾವ ಪತ್ರಕರ್ತರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರ ಅಭಿಪ್ರಾಯಕ್ಕೆ ಜನ ಮನ್ನಣೆ ಹೇಗಿದೆ ಎಂಬುದು ತಿಳಿಯಲಿದೆ.

ಯಾಕೇ ಈ ಯೋಜನೆ:

ಯಾಕೇ ಈ ಯೋಜನೆ:

ಸದ್ಯ ಪತ್ರಿಕೋದ್ಯಮವೂ ವ್ಯವಹಾರವಾಗಿ ಬದಲಾಗಿದ್ದು, ಜನರ ಮೇಲೆ ಪ್ರಭಾವ ಬೀರುವ ಸಲುವಾಗಿ ಪತ್ರಕರ್ತರನ್ನು, ಪತ್ರಿಕೆಗಳನ್ನು, ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಜನಭಿಪ್ರಾಯವನ್ನು ಬದಲಾಯಿಸುವ ಶಕ್ತಿಯನ್ನು ಉತ್ತಮ ಕೆಲಸಗಳಿಗೆ ಮತ್ತು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಯತ್ನ ಎನ್ನಲಾಗಿದೆ.

ಇಯಾನ್ ಮಾಡುತ್ತಿರುವ ಏಕೆ..?

ಇಯಾನ್ ಮಾಡುತ್ತಿರುವ ಏಕೆ..?

ಸದ್ಯ ಎಲಾನ್ ಮಸ್ಕ್ ಮಾಡುತ್ತಿರುವ ಪ್ರಾಜೆಕ್ಟ್ ಗಳ ಬಗ್ಗೆ ಕೆಲವು ಮಾಧ್ಯಮಗಳು ನೆಗೆಟಿವ್ ಆಗಿ ವರದಿಯನ್ನು ಮಾಡುತ್ತಿದ್ದು, ಕೆಲವು ಸತ್ಯದ ಹೊರತಾಗಿದೆ. ಇದರಿಂದಾಗಿ ಇಯಾನ್ ಮಾಸ್ಕ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಉತ್ತಮ ಪತ್ರಕರ್ತರನ್ನು ಗುರುತಿಸಲು ಸಹಾಯವಾಗುವಂತೆ ಮಾಡಲು ಮುಂದಾಗಿದ್ದಾರೆ.

Best Mobiles in India

English summary
Create a media credibility rating site. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X