ಸ್ಮಾರ್ಟ್‌ಫೋನ್‌ ಡೇಟಾ ಸುರಕ್ಷಿತವಾಗಿರಲು ಈ ಕ್ರಮಗಳನ್ನ ಅನುಸರಿಸಿ!

|

ಪ್ರಸ್ತುತ ಜಗತ್ತಿನಲ್ಲಿ ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ಬದಲಾವಣೆಗಳನ್ನ ನಾವು ಕಾಣುತ್ತಿದ್ದೆವೆ. ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ ಸ್ಮಾರ್ಟಫೋನ್‌ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಆನ್‌ಲೈನ್‌ ಬಳಕೆ ಕೂಡ ಹೆಚ್ಚಾಗಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಆನ್‌ಲೈನ್‌ ಸೇವೆ ಪಡೆಯುವ ಬಳಕೆದಾರರನ್ನ ಟಾಗೆರ್ಟ್‌ ಮಾಡಿ ವಂಚಕರು ಕೂಡ ಕಾದು ಕೂತಿದ್ದಾರೆ. ಸ್ಮಾರ್ಟ್‌ಫೋನ್ ಆಧಾರಿತ ವಂಚನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಬಳಕೆದಾರರು ಆನ್‌ಲೈನ್‌ ಸೇವೆಗಳನ್ನ ಪಡೆಯುವುದು ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ ಆಧಾರಿತ ವಂಚನೆ ಜಾಲ ಹೆಚ್ಚು ಆಕ್ಟಿವ್‌ ಆಗಿದೆ. ಅದರಲ್ಲೂ ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್‌ ಖಾತೆ, ಇಮೇಲ್‌ ಮುಂತಾದ ಎಲ್ಲಾ ಅತ್ಯಗತ್ಯ ಸುರಕ್ಷಿತ ದಾಖಲೆಗಳೆಲ್ಲವೂ ಈಗ ಸ್ಮಾರ್ಟ್‌ಫೋನ್‌ ಎಂಬ ಮಾಯಾ ಪೆಟ್ಟಿಗೆಯಲ್ಲಿ ಬೀಡುಬಿಟ್ಟಿವೆ. ಇದರಿಂದ ವಂಚಕರು ಸ್ಮಾರ್ಟ್‌ಫೋನಿಗೆ ಕನ್ನ ಹಾಕುವುದು ಸಲೀಸಾಗಿ ಹೋಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಹ್ಯಾಕರ್‌ ದಾಳಿಯಿಂದ ರಕ್ಷಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌

ಪ್ರಸ್ತುತ ಹೆಚ್ಚಿನ ಜನರು ತಮ್ಮ ಅನೇಕ ವ್ಯವಹಾರಗಳನ್ನ ಸ್ಮಾರ್ಟ್‌ಫೋನ್‌ ಮೂಲಕವೇ ನಡೆಸುತ್ತಾರೆ. ಅದರಲ್ಲೂ ಯುಪಿಐ ಆಧಾರಿತ ಪೇಮೆಂಟ್‌ ಸೇವೆ ಬಂದ ಮೇಲೆ ಹಣ ವರ್ಗಾವಣೆ ಕೂಡ ಸ್ಮಾರ್ಟ್‌ಫೋನ್‌ ಮೂಲಕ ಸುಲಭವಾಗಿದೆ. ಆದರೆ ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಂದ ಡೇಟಾವನ್ನು ಹ್ಯಾಕರ್‌ಗಳು ಸುಲಭವಾಗಿ ಕದಿಯಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾಲ್‌ವೇರ್ ದಾಳಿಗಳು ಹೆಚ್ಚಾಗಿದೆ ಎನ್ನಲಾಗಿದೆ.

ಮೊಬೈಲ್

ಸಾಮಾನ್ಯವಾಗಿ, ಮೊಬೈಲ್ ಸಾಧನಗಳು ಕಂಪ್ಯೂಟರ್‌ಗಳಂತೆ ಸುರಕ್ಷಿತವಾಗಿರುವುದಿಲ್ಲ. ಕಂಪನಿಗಳು ಕಾರ್ಯಕ್ಷೇತ್ರಗಳು ಮತ್ತು ಸರ್ವರ್‌ಗಳಿಗೆ ಬಳಸುವ ಅದೇ ಸುರಕ್ಷತಾ ಕ್ರಮಗಳು ಸಾಮಾನ್ಯವಾಗಿ ಮೊಬೈಲ್ ಸಾಧನಗಳಿಗೆ ಇರುವುದಿಲ್ಲ. ಈ ಕಾರಣದಿಂದಾಗಿ, ಫೈರ್‌ವಾಲ್‌ಗಳು, ಎನ್‌ಕ್ರಿಪ್ಶನ್ ಅಥವಾ ಆಂಟಿವೈರಸ್ ಸಾಫ್ಟ್‌ವೇರ್‌ನಿಂದ ಮೊಬೈಲ್ ಡಿವೈಸ್‌ಗಳನ್ನು ರಕ್ಷಿಸಲಾಗುವುದಿಲ್ಲ. ಅಲ್ಲದೆ ಮೊಬೈಲ್ ಭದ್ರತಾ ಸಮಸ್ಯೆಗೆ ಯಾವುದೇ ನೇರವಾದ, ಒಂದು-ಗಾತ್ರಕ್ಕೆ ಸರಿಹೊಂದುವ ಎಲ್ಲ ಪರಿಹಾರಗಳಿಲ್ಲ, ಆದರೆ ನಿಮ್ಮ ಸಾಧನವನ್ನು ರಕ್ಷಿಸಲು ಮತ್ತು ಅಂತಿಮವಾಗಿ ನಿಮ್ಮ ವೈಯಕ್ತಿಕ ಮಾಹಿತಿಗಾಗಿ ನೀವು ಸುರಕ್ಷ ಕ್ರಮಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.

ಮೊಬೈಲ್

ನಿಮ್ಮ ಮೊಬೈಲ್ ಸಾಧನವನ್ನು ಸುರಕ್ಷಿತವಾಗಿರಿಸಲು ಸುಲಭ ಪಾಸ್‌ವರ್ಡ್ ನೀಡುವ ಬದಲು ಸ್ಟ್ರಾಂಗ್‌ ಪಾಸ್‌ವರ್ಡ್‌ ನೀಡಬೇಕು. ಕನ್‌ಪ್ಯೂಸ್‌ ಮಾಡುವ ಪಾಸ್‌ವರ್ಡ್‌, ಸ್ಟ್ರಾಂಗ್‌ ಪಾಸ್‌ವರ್ಡ್‌ ಇದ್ದರೆ ನಿಮ್ಮ ಖಾತೆಯನ್ನು ಸೈಬರ್ ಕ್ರಿಮಿನಲ್‌ಗಳಿಂದ ರಕ್ಷಿಸಬಹುದಾಗಿದೆ. ಇದಲ್ಲದೆ ಆಗಾಗ ನಿಮ್ಮ ಸ್ಮಾರ್ಟ್‌ಫೋನ್‌ ಆಪರೇಟಿಂಗ್ ಸಿಸ್ಟಮ್ ಆಪ್ಡೇಟ್‌ ಮಾಡುತ್ತಿರಬೇಕು. ಅಪ್ಲಿಕೇಶನ್ ನವೀಕರಣಗಳನ್ನು ನಿರ್ಲಕ್ಷಿಸುವುದರಿಂದ ಹ್ಯಾಕರ್ ದಾಳಿಗೆ ತುತ್ತಾಗಬಹುದು. ಏಕೆಂದರೆ, ಹ್ಯಾಕರ್‌ಗಳಿಗೆ ದೋಷಗಳನ್ನು ಹೇಗೆ ಗುರುತಿಸುವುದು ಮತ್ತು ಬಳಸಿಕೊಳ್ಳುವುದು ತಿಳಿದಿರುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನನ್ನು ನಿಯಮಿತವಾಗಿ ನವೀಕರಿಸುತ್ತಿದ್ದರೆ ಸಿಸ್ಟಮ್ ದೌರ್ಬಲ್ಯಗಳನ್ನು ನಿವಾರಿಸಬಹುದು.

ಸ್ಮಾರ್ಟ್‌ಫೋನ್‌

ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪರಿಚಿತ ಇಮೇಲ್‌ಗಳು, ಅಪರಿಚಿತ ಆಪ್‌ಗಳ ಮೇಲೆ ಕ್ಲಿಕ್‌ ಮಾಡುವುದನ್ನು ನಿಲ್ಲಿಸಿ. ಯಾವುದೋ ಗೊತ್ತಿಲ್ಲದ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ಸೈಬರ್ ಕ್ರಿಮಿನಲ್‌ಗಳು ಸಂಪರ್ಕಿಸಲು ಸಾಧ್ಯ. ಇದರಿಂದ ನಿಮ್ಮ ಮಾಹಿತಿ ಅವರ ಪಾಲಾಗುವುದು ಕ್ಷಣಮಾತ್ರದಲ್ಲಿ ಸಾಧ್ಯ. ಹಾಗಾಗಿ, ಅಪರಿಚಿತರು ಕಳುಹಿಸಿರುವ ತಿಳಿಯದ ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ.

Best Mobiles in India

English summary
Hackers can easily steal data from mobile phones and tablets. Malware attacks aimed at Android have increased the past few months.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X