Subscribe to Gizbot

ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಟ್ರಾಫಿಕ್ ಯೋಜನೆ

Written By:

ಟೆಕ್ ದೈತ್ಯ ಸಾಪ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನೆಲ್ಲಾ ಉದ್ಯೋಗಿಗಳಿಗೆ "ವರ್ಕ್ ಫ್ರಮ್ ಟ್ರಾಫಿಕ್" ಸೌಲಭ್ಯವನ್ನು ಒದಗಿಸಿದೆ. ಟ್ರಾಫಿಕ್‌ನಲ್ಲಿ 5-6 ಗಂಟೆಗಳ ಕಾಲ ಕಳೆಯುವ ಉದ್ಯೋಗಿಗಳಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ಹೆಚ್ಚಿನ ಎಲ್ಲಾ ಐಟಿ ಕೇಂದ್ರಗಳು ಈ ಯೋಜನೆಯನ್ನು ಶೀಘ್ರದಲ್ಲಿಯೇ ಅಳವಡಿಸಲಿದ್ದು ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ತಮ್ಮ ಕೆಲಸದ ಒತ್ತಡವನ್ನು ನೆನೆದು ಗೋಳಾಡುವವರಿಗೆ ಇದೊಂದು ಸೂಪರ್ ಯೋಜನೆ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಾಡಕ್ಟಿವಿಟಿ ಹೆಚ್ಚು

ಪ್ರಾಡಕ್ಟಿವಿಟಿ ಹೆಚ್ಚು

ಈ ಯೋಜನೆಯಿಂದ ಕಂಪೆನಿಯ ಪ್ರಾಡಕ್ಟಿವಿಟಿ ಹೆಚ್ಚುವುದರ ಜೊತೆಗೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಂಕಟ ಪಡುವ ಉದ್ಯೋಗಿಗಳಿಗೆ ಇದು ಅತ್ಯುತ್ತಮ ಎಂದೆನಿಸಿದೆ. ಇದರಿಂದ ಕಂಪೆನಿ ಮತ್ತು ಉದ್ಯೋಗಿ ಇಬ್ಬರಿಗೂ ಲಾಭವಿದೆ ಎಂದು ಬೆಂಗಳೂರಿನ ಸಾಪ್ ಡೆಲಿವರಿ ಮುಖ್ಯಸ್ಥ ಜಂಥನು ತಿಳಿಸಿದ್ದಾರೆ.

ವರ್ಕ್ ಫ್ರಮ್ ಟ್ರಾಫಿಕ್

ವರ್ಕ್ ಫ್ರಮ್ ಟ್ರಾಫಿಕ್

ಇನ್ನು ಉದ್ಯೋಗಿಗಳು ತಮ್ಮ ನಿವಾಸವನ್ನು ಬಿಟ್ಟ ಒಡನೆಯೇ ಡಬ್ಲ್ಯೂಎಫ್‌ಟಿಗೆ (ವರ್ಕ್ ಫ್ರಮ್ ಟ್ರಾಫಿಕ್) ಸದ್ಯದಲ್ಲಿಯೇ ಅಪ್ಲೈ ಮಾಡಬಹುದಾಗಿದೆ.

ಜಿಪಿಎಸ್ ಸ್ಥಾನ

ಜಿಪಿಎಸ್ ಸ್ಥಾನ

ಇವರುಗಳು ಜಿಪಿಎಸ್ ಸ್ಥಾನವನ್ನು ಎಲ್ಲಾ ಸಮಯದಲ್ಲಿ ಕಂಪೆನಿ ಟ್ರ್ಯಾಕ್ ಮಾಡಲಿದ್ದು ಯಾವುದೇ ತೊಡಕಿಲ್ಲದೆ ತಮ್ಮ ಕೆಲಸವನ್ನು ನಿರ್ವಹಿಸುವ ಸೌಲಭ್ಯವನ್ನು ಇವರಿಗೆ ಒದಗಿಸಲಾಗುತ್ತದೆ.

ಮೊದಲಾದ ಕಾರ್ಯ

ಮೊದಲಾದ ಕಾರ್ಯ

ಅವರಿಗೆ ನೀಡಿರುವಂತಹ ಕೆಲಸಗಳನ್ನು ಮುಗಿಸುವುದು, ಕರೆಗಳನ್ನು ಸ್ವೀಕರಿಸುವುದು ಮತ್ತು ಮೀಟಿಂಗ್‌ನಲ್ಲಿ ಹಾಜರಿರುವುದು ಇವೇ ಮೊದಲಾದ ಕಾರ್ಯಗಳನ್ನು ಉದ್ಯೋಗಿಗಳು ನಡೆಸಬಹುದಾಗಿದೆ.

ಉದ್ಯೋಗಿ ಸ್ನೇಹಿ

ಉದ್ಯೋಗಿ ಸ್ನೇಹಿ

ಇನ್ನು ಆದಷ್ಟು ಈ ಯೋಜನೆಯನ್ನು ಉದ್ಯೋಗಿ ಸ್ನೇಹಿಯನ್ನಾಗಿ ಮಾಡುವುದು ಕಂಪೆನಿಯ ಉದ್ದೇಶವಾಗಿದೆ.

ಟ್ರಯಲ್ ಆವೃತ್ತಿ

ಟ್ರಯಲ್ ಆವೃತ್ತಿ

ಇನ್ನು ಈ ಕಾರ್ಯಯೋಜನೆಯ ಟ್ರಯಲ್ ಆವೃತ್ತಿಯನ್ನು ಕಂಪೆನಿ ಹೊರತಂದಿದ್ದು ಅದರಲ್ಲಿ ಯಶಸ್ಸನ್ನು ಪಡೆದುಕೊಂಡಿದೆ.

ಕೆಲಸದ ನಡುವೆ ವಿರಾಮ

ಕೆಲಸದ ನಡುವೆ ವಿರಾಮ

ಇನ್ನು ಟ್ರಯಲ್ ಅವೃತ್ತಿಯನ್ನು ನಡೆಸಿದ ಉದ್ಯೋಗಿಯೊಬ್ಬರು ನಿಜಕ್ಕೂ ಕಂಪೆನಿಯ ವರ್ಕ್ ಫ್ರಮ್ ಟ್ರಾಫಿಕ್ ಅದ್ಭುತವಾದ ಐಡಿಯಾವಾಗಿದೆ. ಕೆಲಸದ ನಡುವೆ ವಿರಾಮವನ್ನು ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತಿದೆ ಎಂದು ತಿಳಿಸಿದೆ.

ಅತ್ಯುತ್ತಮ ಸೌಲಭ್ಯ

ಅತ್ಯುತ್ತಮ ಸೌಲಭ್ಯ

ಇನ್ನು ಈ ರೀತಿ ಕೆಲಸ ಮಾಡುವವರಿಗೆ ಕಂಪೆನಿ ಕೆಲವೊಂದು ಅತ್ಯುತ್ತಮ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The tech giant SAP is now going to provide ‘Work From Traffic’ facility to all its employees working in Bangalore. The who’s who of the industry have deemed the policy as a blessing for the people of Bangalore, who, on an average, spend around 5-10 hours in traffic while commuting to and from their workplaces.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot