ನಿಮ್ಮ ಸ್ಮಾರ್ಟ್‌ಫೋನ್ ಅತಿಯಾಗಿ ಬಿಸಿಯಾಗುತ್ತಿದ್ದರೆ ಅದನ್ನು ತಡೆಯುವುದು ಹೇಗೆ?

|

ಸ್ಮಾರ್ಟ್‌ಫೋನ್ ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದು ಹೇಗೆ? ನಾವಿಲ್ಲಿ ಇದಕ್ಕೆ ಕೆಲವು ಸಾಮಾನ್ಯ ಕಾರಣಗಳು ಮತ್ತು ಅದಕ್ಕೆ ಸೂಕ್ತ ಪರಿಹಾರವೇನು ಎಂಬುದನ್ನು ತೋರಿಸುತ್ತಿದ್ದೇವೆ? ಸ್ಮಾರ್ಟ್‌ಫೋನ್ ಬಿಸಿಯಾಗುವುದಕ್ಕೆ ಇರುವ ಕಾರಣಗಳ ಬಗ್ಗೆ ನೀವು ಸರಿಯಾದ ಜಾಗೃತೆ ವಹಿಸಿದರೆ ಅದರಿಂದಾಗುವ ಸಮಸ್ಯೆಯನ್ನು ತಪ್ಪಿಸಿಕೊಂಡು ನಿಮ್ಮ ಡಿವೈಸ್ ನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಸ್ಮಾರ್ಟ್‌ಫೋನಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತೇವೆ ಮತ್ತು ಮಲ್ಟಿಟಾಸ್ಕಿಂಗ್ ಕೂಡ ಮಾಡುತ್ತೇವೆ. ಇದರಿಂದಲೂ ಕೂಡ ಆಂಡ್ರಾಯ್ಡ್ ಡಿವೈಸ್ ಬಿಸಿಯಾಗುತ್ತದೆ. ಸಿಪಿಯು ಸ್ಪೀಡ್ ನ್ನು ಒವರ್ ಕ್ಲಾಕಿಂಗ್ ಮಾಡುವುದರಿಂದಲೂ ಕೂಡ ಡಿವೈಸ್ ಬಿಸಿಯಾಗಿ ಅದು ಪ್ರೊಸೆಸರ್ ನ್ನು ಶಾಶ್ವತವಾಗಿ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವೆಲ್ಲ ಅಂಶಗಳು ಡಿವೈಸ್ ಬಿಸಿಯಾಗುವುದಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರಿಯುವುದು ಬಹಳ ಮುಖ್ಯ ಸಂಗತಿಯಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಅತಿಯಾಗಿ ಬಿಸಿಯಾಗುತ್ತಿದ್ದರೆ ಅದನ್ನು ತಡೆಯುವುದು ಹೇಗೆ?

ಹೀಗೆ ಒಮ್ಮೆ ನೀವು ಡಿವೈಸ್ ಬಿಸಿಯಾಗುವುದಕ್ಕೆ ಕಾರಣಗಳೇನು ಎಂಬುದನ್ನು ಅರಿತರೆ ಖಂಡಿತ ಕೂಡಲೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತೀರಿ. ಹಾಗಾದರೆ, ಯಾವೆಲ್ಲ ಪ್ರಮುಖ ಕಾರಣಗಳು ಸ್ಮಾರ್ಟ್‌ಫೋನ್ ಡಿವೈಸ್ ಅನ್ನು ಬಿಸಿ ಮಾಡಿ ಸಮಸ್ಯೆಗೆ ತಂದೊಡ್ಡುತ್ತದೆ ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳಿ ಮತ್ತು ಅದಕ್ಕೆ ಪರಿಹಾರವನ್ನು ಸಹ ಪಡೆಯಿರಿ.

#1 ಫೋನಿನ ಒರಿಜಿನಲ್ ಚಾರ್ಜರ್ ನ್ನು ಬಳಸಿ

#1 ಫೋನಿನ ಒರಿಜಿನಲ್ ಚಾರ್ಜರ್ ನ್ನು ಬಳಸಿ

ನೀವು ಯಾವತ್ತಾದ್ರೂ ನಿಮ್ಮ ಫೋನಿನ ಜೊತೆಗೆ ಬರುವ ಮ್ಯಾನುವಲ್ ನ್ನು ಓದಿದ್ದೀರಾ? ಪ್ರತಿಯೊಂದು ಫೋನ್ ತಯಾರಿಕಾ ಸಂಸ್ಥೆಯು ಡುಪ್ಲಿಕೇಟ್ ಚಾರ್ಜರ್ ನ್ನು ಬಳಕೆ ಮಾಡದಂತೆ ಸೂಚಿಸಿರುತ್ತದೆ ಮತ್ತು ಇದು ನಿಮ್ಮ ಫೋನಿನ ಬ್ಯಾಟರಿಯನ್ನು ಹಾಳು ಮಾಡುತ್ತದೆ ಎಂದು ಹೇಳಿರುತ್ತದೆ. ನಮ್ಮ ಫೋನ್ ಗಳು ಬಿಸಿಯಾಗುವುದಕ್ಕೆ ಪ್ರಮುಖ ಕಾರಣವೇ ಬ್ಯಾಟರಿ. ಹಾಗಾಗಿ ನಿಮ್ಮ ಫೋನಿನ ಒರಿಜಿನಲ್ ಚಾರ್ಜರ್ ನ್ನೇ ಫೋನ್ ಚಾರ್ಜ್ ಮಾಡುವುದಕ್ಕೆ ಬಳಸಿ.

#2 ಫೋನ್ ನ್ನು ಸರಿಯಾಗಿ ಚಾರ್ಜ್ ಮಾಡಿ

#2 ಫೋನ್ ನ್ನು ಸರಿಯಾಗಿ ಚಾರ್ಜ್ ಮಾಡಿ

ಬೆಳಗಿನ ಸಮಯದಲ್ಲಿ ಫೋನ್ ಅನ್ನು ಅತಿಯಾಗಿ ಚಾರ್ಜ್ ಮಾಡಬೇಡಿ ಬೆಳಗಿನ ಸಮಯದಲ್ಲಿ 70 ರಿಂದ 80 % ಚಾರ್ಜ್ ಮಾಡಿ ಮತ್ತು ರಾತ್ರಿಯ ವೇಳೆ 100% ಚಾರ್ಜ ಮಾಡಿ.

#3 ನಿಮ್ಮ ವೈ-ಫೈ ಯನ್ನು ಪರೀಕ್ಷಿಸಿ

#3 ನಿಮ್ಮ ವೈ-ಫೈ ಯನ್ನು ಪರೀಕ್ಷಿಸಿ

ವೈ-ಫೈ ಮಾತ್ರವೇ ನಿಮ್ಮ ಫೋನ್ ನ್ನು ಬಿಸಿ ಮಾಡುವುದಲ್ಲ. ಆದರೆ ವೈ-ಫೈ ನೆಟ್ ವರ್ಕ್ ಗೆ ನಿಮ್ಮ ಫೋನ್ ಕನೆಕ್ಟ್ ಆಗಿದ್ದಾಗ ಬ್ಯಾಕ್ ಗ್ರೌಂಡ್ ನಲ್ಲಿ ಟ್ರಿಗ್ಗರ್ ಆಗುವ ಆಪ್ ಗಳು ನಿಮ್ಮ ಫೋನ್ ನ್ನು ಬಿಸಿ ಮಾಡುತ್ತದೆ. ಹಾಗಾಗಿ ನೀವು ವೈ-ಫೈ ಗೆ ಕನೆಕ್ಟ್ ಆದಾಗ ನಿಮ್ಮ ಫೋನಿನ ಎಲ್ಲಾ ಬ್ಯಾಕ್ ಗ್ರೌಂಡ್ ಅಪ್ ಡೇಟ್ ನ್ನು ಚೆಕ್ ಮಾಡಿ.

#4 ಬ್ಲೂಟೂತ್ ಮತ್ತು ಜಿಪಿಎಸ್ ಆಫ್ ಮಾಡಿ

#4 ಬ್ಲೂಟೂತ್ ಮತ್ತು ಜಿಪಿಎಸ್ ಆಫ್ ಮಾಡಿ

ಬ್ಲೂಟೂತ್ ಮತ್ತು ಜಿಪಿಎಸ್ ನಿರಂತರವಾಗಿ ಲಭ್ಯವಿರುವ ನೆಟ್ ವರ್ಕ್ ಗಾಗಿ ಬ್ಯಾಕ್ ಗ್ರೌಂಡ್ ನಲ್ಲಿ ಸ್ಕ್ಯಾನ್ ಮಾಡುತ್ತಿರುತ್ತದೆ. ಒಂದು ವೇಳೆ ನೀವು ಆಂಡ್ರಾಯ್ಡ್ ಗೇಮ್ಸ್ ಗಳನ್ನು ರನ್ ಮಾಡುತ್ತಿದ್ದರೆ ಮತ್ತು ಬ್ಲೂಟೂತ್, ಜಿಪಿಎಸ್ ಫೀಚರ್ ಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅನೇಬಲ್ ಆಗಿದ್ದಲ್ಲಿ ಫೋನ್ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಬ್ಲೂಟೂತ್ ಮತ್ತು ಜಿಪಿಎಸ್ ನಿಮಗೆ ಅಗತ್ಯವಿಲ್ಲದೇ ಇದ್ದಾಗ ಆಫ್ ಆಗಿರುವಂತೆ ನೋಡಿಕೊಳ್ಳಿ.

#5 ಮಲ್ಟಿ-ಟಾಸ್ಕಿಂಗ್

#5 ಮಲ್ಟಿ-ಟಾಸ್ಕಿಂಗ್

ಆಪ್ಸ್ ಮತ್ತು ವಿಚಾರಗಳು ನೀವೇನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿತ್ತೀರೋ ಅದುವೇ ಫೋನ್ ನಲ್ಲಿರುತ್ತದೆ. ಫೋನಿಗೂ ಸುಸ್ತಾಗುತ್ತದೆ. ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಡಿವೈಸ್ ಪ್ರತಿದಿನ ಬಿಸಿಯಾಗುತ್ತಿದೆ ಎಂದರೆ ಬಹುಶ್ಯಃ ಅದಕ್ಕೆ ನಿರ್ವಹಿಸಲು ಅಸಾಧ್ಯವಾಗಿರುವಷ್ಟು ಆಪ್ ಗಳು ಇರಬಹುದು.ಈಗಿನ ಸಂದರ್ಬದಲ್ಲಿ ಆಂಡ್ರಾಯ್ಡ್ ಡಿವೈಸ್ ಗಳು ಬೆಸ್ಟ್. ಅವುಗಳು ನಿಮಗೆ ಸಾಕಷ್ಟು ಕೆಲಸಕ್ಕೆ ನೆರವಾಗುತ್ತದೆ. ಆಟ ಆಡಲು, ವೀಡಿಯೋ ಮತ್ತು ಮೂವಿ ನೋಡಲು, ಮ್ಯೂಸಿಕ್ ಕೇಳಲು, ಫೋಟೋ ಕ್ಲಿಕ್ಕಿಸಲು, ವೆಬ್ ಸರ್ಚ್ ಮಾಡಲು, ಹೆಚ್ಚಿನ ಅಧ್ಯಯನ ಕೈಗೊಳ್ಳಲು ಹೀಗೆ ಹತ್ತು ಹಲವು. ಆದರೆ ನಿಮ್ಮ ಇಚ್ಛೆಯಿಲ್ಲದೆ ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುತ್ತಿರುವ ಆಪ್ ಗಳ ಬಗ್ಗೆ ನೀವು ಸ್ವಲ್ಪ ಆಲೋಚಿಸಬೇಕು. ಅನಗತ್ಯ ಆಪ್ ಗಳು ರನ್ ಆಗುತ್ತಿದ್ದು ಮಲ್ಟಿ ಟಾಸ್ಕಿಂಗ್ ನಡೆಯುತ್ತಿದ್ದರೆ ದಯವಿಟ್ಟು ಅದನ್ನು ಕ್ಲೋಸ್ ಮಾಡಿ. ಇದು ನಿಮ್ಮ ಫೋನಿನ ಆಯಸ್ಸನ್ನು ಹೆಚ್ಚಿಸುತ್ತದೆ.

#6 ಅತಿಯಾಗಿ ಬಳಕೆ ಮಾಡಬೇಡಿ

#6 ಅತಿಯಾಗಿ ಬಳಕೆ ಮಾಡಬೇಡಿ

ಖಂಡಿತವಾಗಲೂ ಫೋನ್ ಬಿಸಿಯಾದರೆ ಈ ಫೋನ್ ಸರಿಇಲ್ಲ ಅಂತ ಬೈದುಕೊಳ್ಳುತ್ತೇವೆ.ಆದರೆ ನಾವು ಅದನ್ನು ಎಷ್ಟು ಬಳಸುತ್ತಿದ್ದೇವೆ ಎಂಬುದನ್ನು ಪರೀಕ್ಷಿಸುವುದಕ್ಕೆ ಮರೆತು ಬಿಡುತ್ತೇವೆ.ಸ್ಮಾರ್ಟ್ ಫೋನ್ ಗಳು ಅತ್ಯಂತ ಪವರ್ ಫುಲ್ ಆಗಿರುತ್ತದೆ ಆದರೆ ಅವುಗಳನ್ನು ನಿರಂತರವಾಗಿ ಬಳಕೆ ಮಾಡುವುದಕ್ಕಾಗಿ ತಯಾರಿಸಿರುವುದಿಲ್ಲ.ಕಂಪ್ಯೂಟರ್ ಗಳಿಗಿಂತ ಹೆಚ್ಚಾಗಿ ಇಂದಿನ ಜಮಾನದಲ್ಲಿ ಫೋನ್ ನ್ನು ಬಳಕೆ ಮಾಡುತ್ತಿದ್ದೇವೆ. ಕಂಪ್ಯೂಟರ್ ನಲ್ಲಿ ಇರುವಂತೆ ಫೋನಿನಲ್ಲಿ ಯಾವುದೇ ಕೂಲಿಂಗಿ ಸಿಸ್ಟಮ್ ಇರುವುದಿಲ್ಲ. ಹಾಗಾಗಿ ಅತಿಯಾಗಿ ಫೋನ್ ಬಳಸುವುದನ್ನು ಕಡಿಮೆ ಮಾಡಬೇಕಾಗುತ್ತದೆ.

#6 ಅತಿಯಾಗಿ ಸ್ಟ್ರೀಮ್ ಮಾಡುವುದು

#6 ಅತಿಯಾಗಿ ಸ್ಟ್ರೀಮ್ ಮಾಡುವುದು

ವೀಡಿಯೋಗಳನ್ನು ಮತ್ತು ಚಲನಚಿತ್ರಗಳನ್ನು ನೋಡುವುದು ನಿಮ್ಮ ಫೋನ್ ಬಿಸಿಯಾಗುವುದಕ್ಕೆ ಇರುವ ಮತ್ತೊಂದು ಕಾರಣವಾಗಿದೆ. ನಾವು ಮೂವಿಗಳನ್ನು ನೋಡುವುದಕ್ಕೆ ಹೆಚ್ಚಾಗಿ ಆಂಡ್ರಾಯ್ಡ್ ಡಿವೈಸ್ ಗಳನ್ನೇ ಬಳಸುತ್ತೇವೆ ಅದರಲ್ಲೂ ಪ್ರಮುಖವಾಗಿ ಎಲ್ಲಾದರೂ ಪ್ರಯಾಣ ಕೈಗೊಂಡ ಸಂದರ್ಬದಲ್ಲಿ ಹೆಚ್ಚಾಗಿ ಬಳಸುತ್ತೇವೆ,ಇದು ಪ್ರೊಸೆಸರ್ ಗೆ ಹೆಚ್ಚಿನ ಕೆಲಸ ಕೊಡುತ್ತದೆ ಮತ್ತು ಅತ್ಯಂತ ಹೆಚ್ಚು ಪವರ್ ಕೂಡ ಬೇಕಾಗುತ್ತದೆ ಹಾಗಾಗಿ ಫೋನ್ ಬಿಸಿಯಾಗುತ್ತದೆ.

#7 ಅತಿಯಾಗಿ ಗೇಮ್ ಆಡುವುದು

#7 ಅತಿಯಾಗಿ ಗೇಮ್ ಆಡುವುದು

ನಿಮ್ಮ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಿಮಗೆ ಸಾಕಷ್ಟು ಗೇಮ್ಸ್ ಮತ್ತು ಅಪ್ಲಿಕೇಷನ್ ಗಳನ್ನು ಪ್ರತಿದಿನ ನೀಡುತ್ತಲೇ ಇರುತ್ತದೆ. ಕೆಲವು ಗೇಮ್ ಗಳು ಹೆಚ್ಚಿನ ಪ್ರೊಸೆಸಿಂಗ್ ಪವರ್ ನ್ನು ಬೇಡುತ್ತದೆ, ಖಂಡಿತವಾಗಲೂ ಇದು ಆ ಆಪ್ ನ ಕಾಂಪ್ಲೆಕ್ಸಿಟಿ ಮೇಲೆ ನಿರ್ಧರಿತವಾಗಿರುವ ಅಂಶ. ಆದರೂ ಇದೆರಡು ಮರ್ಜ್ ಆದಾಗ ಮೊಬೈಲ್ ಬಿಸಿಯಾಗುತ್ತದೆ. ಗೇಮ್ ಗಳು ಇಂದಿನ ದಿನಗಳಲ್ಲಿ ಹೆಚ್ಚು RAM ನ್ನು ಮಾತ್ರವೇ ಬೇಡುವುದಿಲ್ಲ ಬದಲಾಗಿ ಉತ್ತಮ ಪ್ರೊಸೆಸರ್ ಗಾಗಿ ಡಾಟಾ ಕನೆಕ್ಷನ್ ನ್ನು ಕೂಡ ಬೇಡುತ್ತದೆ. ಹೆವಿ ಗೇಮ್ ಗಳನ್ನು ಆಡುವಾಗ ಬ್ಯಾಕ್ ಗ್ರೌಂಡ್ ಟಾಸ್ಕ್ ಗಳನ್ನು ಕ್ಲಿಯರ್ ಮಾಡಿಕೊಳ್ಳಿ.

#9 ಪ್ಲಾಸ್ಟಿಕ್ ಮತ್ತು ಲೆದರ್ ನ ಕೇಸ್ ಹಾಕುವುದು

#9 ಪ್ಲಾಸ್ಟಿಕ್ ಮತ್ತು ಲೆದರ್ ನ ಕೇಸ್ ಹಾಕುವುದು

ಹೊಸದಾಗಿ ಮೊಬೈಲ್ ಕವರ್ ಹಾಕಿದಾಗ ನೀವು ಮೊಬೈಲ್ ಓವರ್ ಹೀಟ್ ಆಗುವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾದರೆ ಆಗ ಕೇಸಿನ ಮೆಟೀರಿಯಲ್ ಯಾವುದು ಎಂಬುದನ್ನು ಪರೀಕ್ಷೆ ಮಾಡಿ. ಪ್ಲಾಸ್ಟಿಕ್ ಮತ್ತು ಲೆದರ್ ನ ಕೇಸ್ ಗಳು ಒಳಗೆ ಬಿಸಿಯಾಗಿರುತ್ತದೆ ಮತ್ತು ಹೊರಗೆ ತಣ್ಣಗಿರುತ್ತದೆ. ಇದು ಫೋನ್ ನ್ನು ಓವರ್ ಹೀಟ್ ಆಗುವಂತೆ ಮಾಡುತ್ತದೆ. ಒಂದು ವೇಳೆ ಹೀಗಾಗುತ್ತಿದ್ದಲ್ಲಿ ನೀವು ಫೋನಿಗೆ ಬಳಸಿರುವ ಕೇಸ್ ನ್ನು ರಿಮೂವ್ ಮಾಡಿ ಮತ್ತು ನಂತರ ಫೋನ್ ಬಳಸಿ.

Best Mobiles in India

English summary
How To Fix Overheating Issues of smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X