Subscribe to Gizbot

ಕ್ಯಾನನ್‌ನಿಂದ ಕ್ಯಾಮೆರಾ ಕ್ಷೇತ್ರದಲ್ಲೇ ಅದ್ವಿತೀಯ ಸಾಧನೆ

Written By:

ಸ್ಮಾರ್ಟ್‌ಫೋನ್‌ಗಳ ಅಬ್ಬರದ ನಡುವೆ ಕ್ಯಾಮೆರಾ ಮೌಲ್ಯ ಕುಸಿಯುತ್ತಿದೆಯೇ ಎಂಬ ಗುಮಾನಿ ಈಗ ಸಣ್ಣದಾಗಿ ಪ್ರಾರಂಭಗೊಂಡಿದೆ. ಇದಕ್ಕೆ ಕಾರಣ ಫೋನ್‌ಗಳು ತಮ್ಮ ನಿರ್ಮಾಣದೊಂದಿಗೆ ಒದಗಿಸುತ್ತಿರುವ ಉತ್ತಮ ಗುಣಮಟ್ಟದ ಕ್ಯಾಮೆರಾ ಸೌಲಭ್ಯವಾಗಿದೆ.

ಸ್ಮಾರ್ಟ್‌ಫೋನ್‌ಗಳು ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಉತ್ತಮ ಮೆಗಾಪಿಕ್ಸೆಲ್ ಉಳ್ಳ ಕ್ಯಾಮೆರಾವನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ಕ್ಯಾಮೆರಾವನ್ನು ಖರೀದಿಸುವ ಪ್ರಯತ್ನಕ್ಕೆ ಗುಡ್ ಬೈ ಹೇಳುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು.

ಆದರೂ ಕ್ಯಾಮೆರಾ ಕಂಪೆನಿಗಳು ಈ ಸೋಲನ್ನು ಒಪ್ಪಿಕೊಳ್ಳಲು ತಯಾರಿದ್ದಂತೆ ಕಂಡುಬರುತ್ತಿಲ್ಲ. ಹೌದು ಕ್ಯಾಮೆರಾ ಕ್ಷೇತ್ರದಲ್ಲೇ ಅದ್ವಿತೀಯ ಎನ್ನಿಸಿಕೊಂಡಿರುವ ಕ್ಯಾನನ್ ಕ್ಯಾಮೆರಾ ತನ್ನ ಹಳೆಯ ಔದಾಸೀನ್ಯವನ್ನು ತೊರೆದು ಹೊಸದಾದ ಮಾದರಿಯ ಕ್ಯಾಮೆರಾಗಳನ್ನು ಬಳಕೆದಾರರಿಗೆ ನೀಡುವ ಪ್ರಯತ್ನವನ್ನು ಪ್ರಾರಂಭಿಸಿದೆ.

ಇಂದಿನ ಬದಲಾದ ಲ್ಯಾಂಡ್‌ಸ್ಕೇಪ್‌ಗೆ ಅನುಗುಣವಾಗಿ ಸುತ್ತಲೂ ಇರುವ ನವೀನ ಅಂಶಗಳೊಂದಿಗೆ ಅನ್ವೇಷಣೆಗಳನ್ನು ಪ್ರಯೋಗಗಳನ್ನು ಮಾಡುತ್ತಾ ಶೂಟರ್ ಫಿಟ್ ಕ್ಯಾಮೆರಾಗಳನ್ನು ಕ್ಯಾನನ್ ಮುಂದರಿಸಲು ಪ್ರಯತ್ನಿಸುತ್ತಿದೆ. ಇದು ಕಡಿಮೆ ಮೆಗಾಪಿಕ್ಸೆಲ್‌ಗಳನ್ನು ಹೊಂದಿದ್ದು ಉತ್ತಮ ಚಿತ್ರ ಗುಣಮಟ್ಟವನ್ನು ನೀಡಲಿದೆ.

ಅಂತೆಯೇ ನಿರಂತರ ಆಟೋಫೋಕಸ್ ಸೌಲಭ್ಯ ಮಾಕ್ರೋ ಈ ಕ್ಯಾಮೆರಾಗಳಲ್ಲಿದೆ. ಟಚ್ ಸ್ಕ್ರೀನ್ ವಿಶೇಷತೆ, ದ್ವಿ ರಿಂಗ್‌ಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಹಾಗೂ ಉತ್ತಮ ಆಯ್ಕೆಗಳಿಂದ ಈ ಕ್ಯಾಮೆರಾಗಳು ಕ್ಯಾನನ್ ನಿರ್ಮಾಣದಿಂದ ಹೊರಬಂದಿದ್ದು ಮಾರುಕಟ್ಟೆಯಲ್ಲಿ ನಿಜಕ್ಕೂ ಪವಾಡವನ್ನೇ ಸೃಷ್ಟಿಸಲಿದೆ.

ಹಾಗಿದ್ದರೆ ಕ್ಯಾನನ್ ಹೊಸದಾಗಿ ನಿರ್ಮಿಸುತ್ತಿರುವ ಕ್ಯಾಮೆರಾ ಗ್ಯಾಲರಿಯತ್ತ ನಿಮ್ಮನ್ನು ಈ ಲೇಖನ ಕೊಂಡೊಯ್ಯಲಿದ್ದು ಇದರ ವಿಶೇಷತೆಗಳಿಂದ ನೀವು ಆಶ್ಚರ್ಯಚಕಿತರಾಗುವುದಂತೂ ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿ1 ಎಕ್ಸ್ ಸೀಕ್ವೆಲ್ ಕ್ಯಾಮೆರಾ

#1

ಕ್ಯಾನನ್ ಜಿ1 ಎಕ್ಸ್ ಮಾರ್ಕ್ 11 ಹೈ ಎಂಡ್ ಪಾಯಿಂಟ್ ಹಾಗೂ ಶೂಟಿಂಗ್ ಕ್ಯಾಮೆರಾ ಆಗಿದ್ದು ಇದು 12.8 ಮೆಗಾಪಿಕ್ಸೆಲ್‌ಗಳು ಮತ್ತು 1.5 ಇಂಚಿನ ಸೆನ್ಸಾರ್ ಅನ್ನು ಹೊಂದಿದೆ. ಇದು 5 ಎಕ್ಸ್ ಆಪ್ಟಿಕಲ್ ಝೂಮ್‌ನೊಂದಿಗೆ 20 ಎಕ್ಸ್‌ನಷ್ಟು ವಿಸ್ತರಿಸಬಹುದಾದ ಡಿಜಿಟಲ್ ಝೂಮ್ ಅನ್ನು ಕೂಡ ಹೊಂದಿದೆ.

ಮಿಶನ್ ಕಂಟ್ರೋಲ್

#2

ನಿಮ್ಮ ಮುಖ್ಯ ಸೆಟ್ಟಿಂಗ್‌ಗಳನ್ನು ಹೊಂದಿಸುವುದಕ್ಕಾಗಿ ಸಾಮಾನ್ಯ ತ್ವರಿತ - ಪ್ರವೇಶ ಬಟನ್‌ಗಳು ಹಾಗೂ ಇನ್‌ಸ್ಟಾಂಟ್-ರೆಕಾರ್ಟ್ ಬಟನ್. ಹೆಚ್ಚಿನ ಸುಧಾರಿತ ಸೆಟ್ಟಿಂಗ್‌ಗಳಿಗಾಗಿ, ನೀವು ಟಚ್‌ಸ್ಕ್ರೀನ್ ಅನ್ನು ಬಳಸಿಕೊಂಡು, ನೀವು ಡೈವ್ ಮಾಡಬೇಕಾಗುತ್ತದೆ. ಅಂದರೆ ಲೆನ್ಸ್ ಬ್ಯಾರೆಲ್‌ನಲ್ಲಿರುವ ಸರ್ಕಲ್ ಪ್ಯಾಡ್ ಅಥವಾ ಡ್ಯುಯೆಲ್ ಅಡ್ಜಸ್ಟೇಬಲ್ ರಿಂಗ್ಸ್‌ಗಳು.

ಅದ್ಭುತ ಇಂಟರ್ಫೇಸ್

#3

ಕ್ಯಾಮೆರಾದ ಮೇಲ್ಭಾಗದಲ್ಲಿ ನಿಮ್ಮ ಪ್ರಮಾಣಿತ ಬಟನ್‌ಗಳ ಸಮೂಹ ಹಾಗೂ ಶೂಟಿಂಗ್ ಮೋಡ್ ವ್ಹೀಲ್ ಇರುತ್ತದೆ. ಇಲೆಕ್ಟ್ರಾನಿಕ್ ವ್ಯೂ ಫೈಂಡರ್ ಅಥವಾ ಹೆಚ್ಚುವರಿ ಫ್ಲ್ಯಾಶ್ ಅನ್ನು ಸೇರಿಸಲು ಹಾಟ್ ಶೂ ಈ ಕ್ಯಾಮೆರಾದಲ್ಲಿದೆ.

ಸೆಲ್ಫೀ ಮೋಡ್

#4

3 ಇಂಚಿನ 180 ಡಿಗ್ರಿಯ ಟಚ್ ಸ್ಕ್ರೀನ್ ನಿಮಗೆ ಸೆಲ್ಫೀ ಫೋಟೋವನ್ನು ತೆಗೆಯಲು ಅನುವು ಮಾಡಿಕೊಡುತ್ತದೆ.

ಪ್ರಿಸಿಶನ್ ಫ್ಲ್ಯಾಶಿಂಗ್

#5

ಪಾಪ್ - ಅಪ್ ಫ್ಲ್ಯಾಶ್ ಕುರಿತ ಒಂದು ಸುಂದರವಾದ ಅನುಭವ ಏನೆಂದರೆ ನೀವದನ್ನು ಹಿಂದಕ್ಕೆ ಎಳೆಯಬಹುದು, ವಿವಿಧ ಭಂಗಿಯಲ್ಲಿ ಇರಿಸಬಹುದು, ಹಾಗೂ ಇದರ ಮೂಲಕ ಬೌನ್ಸ್ ಅನ್ನು ರಚಿಸಬಹುದು. ಇದು ಫ್ಲ್ಯಾಶ್ ಇನ್ ಚಿತ್ರಗಳನ್ನು ಹೆಚ್ಚು ವಿಸ್ತಾರವಾಗಿ ಮತ್ತು ಕಡಿಮೆ ಹಾರ್ಶ್ ಉಳ್ಳದ್ದಾಗಿ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot