Subscribe to Gizbot

ವಿಶ್ವದ ಅತ್ಯುತ್ತಮ ಫೋನ್ ಎಂಬ ಹೆಗ್ಗಳಿಕೆ: ಲಿಇಕೊ ಸ್ಮಾರ್ಟ್‌ಫೋನ್

Written By:

ಲಿಇಕೊ ಸೂಪರ್ ಫೋನ್ ಭಾರತದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡು ಮುಂದುವರಿಯುತ್ತಿದೆ. ಹೆಚ್ಚು ಸ್ಟೈಲಿಶ್ ಮತ್ತು ಆಕರ್ಷಕ ಬೆಲೆಯಿಂದ ಸೂಪರ್ ಫೋನ್ ಎಂದೆನಿಸಿದೆ. ಪೂರ್ಣ ಮೆಟಲ್ ಬಾಡಿಯೊಂದಿಗೆ ಈ ಡಿವೈಸ್ ಬಂದಿದ್ದು, ಮಾರುಕಟ್ಟೆಯಲ್ಲಿರುವ ಹೆಸರಾಂತ ಬ್ರ್ಯಾಂಡ್‌ಗಳ ಪೈಕಿ ಲಿಇಕೊ ಕೂಡ ಒಂದಾಗಿದೆ.

ಕಳೆದ ಎಪ್ರಿಲ್‌ನಂದು ಲಿಇಕೊ ಸ್ಮಾರ್ಟ್‌ಫೋನ್ ಕ್ಷೇತ್ರವನ್ನು ಪ್ರವೇಶಿಸಿದ್ದು, ನಾಲ್ಕು ಮಾಡೆಲ್ ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಲಿ1, ಲಿ1 ಪ್ರೊ, ಲಿಮ್ಯಾಕ್ಸ್ ಮತ್ತು ಲಿ1ಎಸ್ ಇವುಗಳಲ್ಲಿ ಎರಡು ಫೋನ್‌ಗಳು ಲಿಮ್ಯಾಕ್ಸ್ ಮತ್ತು ಲಿ1ಎಸ್ ಮೆಟಲ್ ವಿನ್ಯಾಸವನ್ನು ಪಡೆದುಕೊಂಡಿವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್‌ಗಳ ಕುರಿತು ಇನ್ನಷ್ಟು ವಿಶೇಷ ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂನಿಬಾಡಿ ಮೆಟಲ್ ಫೋನ್

ಮೆಟಲ್ ವಿನ್ಯಾಸ

ಲಿ ಮ್ಯಾಕ್ಸ್ ಬೇಜಲ್ ಲೆಸ್ ಮೆಟಲ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಚೀನಾದಲ್ಲಿ ಪ್ರಥಮ ಯೂನಿಬಾಡಿ ಮೆಟಲ್ ಫೋನ್ ಎಂದೇ ಹೆಸರುವಾಸಿಯಾಗಿದೆ. ಚೀನಾದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಡಿವೈಸ್‌ಗಳನ್ನು ಹಿಂದಿಕ್ಕಿ ಅಲ್ಲಿನವರ ಮನವನ್ನು ಹಿಡಿದಿಟ್ಟಿದೆ.

ಮೆಟಲ್ ಯೂನಿ ಬಾಡಿ ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ವಿನ್ಯಾಸ

2 ಮಿಲಿಯನ್‌ಗಿಂತಲೂ ಹೆಚ್ಚಿನ ಮಾರಾಟ

ಲಿ1ಎಸ್, ಚೀನಾದಲ್ಲಿ ಟಾಪ್ ಮಾರಾಟವನ್ನು ಕಂಡುಕೊಂಡಿದ್ದು, ಕೊನೆಯ ಅಕ್ಟೋಬರ್‌ನಂದು ಬಿಡುಗಡೆಗೊಂಡಿದೆ. ಎರಡೇ ತಿಂಗಳಲ್ಲಿ ಈ ಡಿವೈಸ್ 2 ಮಿಲಿಯನ್‌ಗಿಂತಲೂ ಹೆಚ್ಚಿನ ಮಾರಾಟವನ್ನು ಕಂಡಿದೆ. ಮೆಟಲ್ ಯೂನಿ ಬಾಡಿ ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ವಿನ್ಯಾಸವನ್ನು ಪಡೆದುಕೊಂಡಿದ್ದು ಇದನ್ನು ಸುದೃಢಗೊಳಿಸಿದೆ.

ಬಳಕೆದಾರರ ಮನ ಹಿಡಿದಿಟ್ಟಿದೆ

ಅದ್ಭುತ ವಿನ್ಯಾಸ

ಇನ್ನಷ್ಟು ಈ ಫೋನ್‌ಗಳ ಬಗ್ಗೆ ಹೇಳಬೇಕೆಂದಲ್ಲಿ ವಿಶ್ವದ ಮೆಟಲ್ ಯೂನಿ ಬಾಡಿ ಫೋನ್ ಇವುಗಳಾಗಿದ್ದು ಅದ್ಭುತ ವಿನ್ಯಾಸವನ್ನು ಪಡೆದುಕೊಂಡು ಬಳಕೆದಾರರ ಮನವನ್ನು ಹಿಡಿದಿಟ್ಟಿದೆ.

ಮೆಟಲ್ ಫೋನ್

5.5 ಇಂಚಿನ ಸ್ಕ್ರೀನ್

ಲಿಇ1ಎಸ್ ಮೆಟಲ್ ಫೋನ್ ಆಗಿದ್ದು, 169g, 23 ಗ್ರಾಮ್‌ಗಳನ್ನು ಪಡೆದುಕೊಂಡಿದೆ. ಐಫೋನ್ 6 ಎಸ್ ಪ್ಲಸ್‌ನಂತೆಯೇ ಇದು 5.5 ಇಂಚಿನ ಸ್ಕ್ರೀನ್ ಅನ್ನು ಪಡೆದುಕೊಂಡಿದೆ.

ಹಿಡನ್ ಬಟನ್

ಉತ್ತಮ ಸಿಗ್ನಲ್ ಕಾರ್ಯಕ್ಷಮತೆ

ಐಫೋನ್ 6 ಪ್ಲಸ್‌ಗೆ ಹೋಲಿಸಿದಾಗ ಎಲ್ಇ 1ಎಸ್ ಉತ್ತಮ ಸಿಗ್ನಲ್ ಕಾರ್ಯಕ್ಷಮತೆಯನ್ನು ಹೊಂದಿದೆ. ಫೋನ್ ಲಿ1 ಎಸ್ ತನ್ನ ಅನನ್ಯ ಹಿಡನ್ ಬಟನ್ ವಿನ್ಯಾಸದಿಂದ ಹೆಚ್ಚು ಪ್ರಸಿದ್ಧಿಯಲ್ಲಿದೆ.

ಫಾಸ್ಟ್ ಚಾರ್ಜಿಂಗ್ ಬ್ಯಾಟರಿ

ಟೈಪ್ ಸಿ ಯುಎಸ್‌ಬಿ

ವಿಶ್ವದ ಪ್ರಥಮ ಟೈಪ್ ಸಿ ಯುಎಸ್‌ಬಿಯನ್ನು ಇದು ಒಳಗೊಂಡಿದ್ದು, ಫಾಸ್ಟ್ ಚಾರ್ಜಿಂಗ್ ಬ್ಯಾಟರಿ, ಉತ್ತಮ ವಿನ್ಯಾಸದೊಂದಿಗೆ ಫೋನ್ ಬಳಕೆದಾರರನ್ನು ಹಿಡಿದಿಡುವಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Le 1s, the top seller in China since its release at the end of last October, has sold more than 2 million units in just two months.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot