'ರಿಯಲ್‌ಮಿ ಎಕ್ಸ್' ಇಂಡಿಯಾ: ಬೆಲೆ ಮತ್ತು ಬಣ್ಣಗಳ ಅಧಿಕೃತ ಮಾಹಿತಿ ರಿಲೀಸ್!

|

ರಿಯಲ್ ಮಿ ಎಕ್ಸ್ ಮೊಬೈಲ್ ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೂ ಲಗ್ಗೆ ಇಡಲಿದೆ ಎಂದು ರಿಯಲ್ ಮಿ ಭಾರತದ ಸಿಇಒ ಮಾಧವ್ ಸೇಠ್ ಘೋಷಿಸಿದ್ದಾರೆ. ರಿಯಲ್ ಮಿ ಎಕ್ಸ್ ಚೀನಾದಲ್ಲಿ ಬಿಡುಗಡೆಯಾದ ಸ್ಮಾರ್ಟ್ ಫೋನ್ ಗಿಂತ ವಿಭಿನ್ನ ಫೀಚರ್ಸ್ ನಲ್ಲಿರಲಿದೆಯಂತೆ. ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾದರಿಯ ಬಣ್ಣವನ್ನು ಹೊಂದರಲಿದೆ ಎಂದು ಮಾಧವ್ ವಿವರಿಸಿದ್ದಾರೆ. ಭಾರತದಲ್ಲಿ ರಿಯಲ್ ಮಿ ಎಕ್ಸ್ ಸ್ಮಾರ್ಟ್ ಫೋನ್ ಬೆಲೆ ಎಷ್ಟು ಎಂಬುದನ್ನು ಸಹ ಮೊದಲೇ ರಿವೀಲ್ ಮಾಡಿದ್ದಾರೆ.

'ರಿಯಲ್‌ಮಿ ಎಕ್ಸ್' ಇಂಡಿಯಾ: ಬೆಲೆ ಮತ್ತು ಬಣ್ಣಗಳ ಅಧಿಕೃತ ಮಾಹಿತಿ ರಿಲೀಸ್!

ಹೌದು, 48 ಮೆಗಾಪಿಕ್ಸಲ್ ಸಾಮರ್ಥ್ಯದ ರಿಯರ್ ಕ್ಯಾಮೆರಾ, ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ, ಫಾಸ್ಟ್‌ ಚಾರ್ಜರ್‌ ಮತ್ತು ಅಂಚು ರಹಿತ ಡಿಸ್‌ಪ್ಲೇ ಆಯ್ಕೆಗಳು ಆಕರ್ಷಣಿಯ ಫೀಚರ್ಸ್ ಸ್ಮಾರ್ಟ್‌ಫೋನ್ 'ರಿಯಲ್ ಮಿ ಎಕ್ಸ್‌' ಭಾರತಕ್ಕೆ ಶೀಘ್ರವೇ ಕಾಲಿಡುತ್ತಿರುವುದು ಈ ಮೊದಲೇ ಖಚಿತವಾಗಿದೆ. ಜೊತೆಗೆ ಇದೀಗ ರಿಯಲ್‌ಮಿ ಇಂಡಿಯಾ ಸಿಇಒ ಮಾಧವ್ ಶೇಥ್ ಅವರು ಟ್ವಿಟ್ಟರ್‌ನಲ್ಲಿ ರಿಯಲ್‌ಮಿ ಎಕ್ಸ್ ಸ್ಮಾರ್ಟ್‌ ಫೋನಿನ ಬೆಲೆ ಹಾಗೂ ಬಣ್ಣಗಳ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಚೀನಾದಲ್ಲಿ ಬಿಡುಗಡೆಯಾಗಿ ಅಲ್ಲಿ ಭರ್ಜರಿ ಮಾರಾಟ ಕಾಣುತ್ತಿರುವ 'ರಿಯಲ್‌ ಮಿ ಎಕ್ಸ್‌' ಬೆಲೆಯು ಭಾರತದಲ್ಲಿ ಅಧಿಕೃತವಾಗಿದೆ. ರಿಯಲ್‌ಮಿ ಇಂಡಿಯಾ ಸಿಇಒ ಮಾಧವ್ ಶೇಥ್ ಅವರು ತಿಳಿಸಿರುವಂತೆ ಭಾರತದಲ್ಲಿ ರಿಯಲ್‌ ಮಿ ಕಂಪನಿಯ ಮೊದಲ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಸ್ಮಾರ್ಟ್‌ಫೋನ್ 'ರಿಯಲ್‌ ಮಿ ಎಕ್ಸ್‌' ಕೇವಲ 18,000 ರೂ.ಗಳಿಗೆ ಬಿಡುಗಡೆಯಾಗಲಿದೆ. ಹಾಗಾದರೇ 'ರಿಯಲ್ ಮಿ ಎಕ್ಸ್‌' ಸ್ಮಾರ್ಟ್‌ಫೋನಿನ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನೋಚ್‌ಲೆಸ್‌ ಡಿಸ್‌ಪ್ಲೇ

ನೋಚ್‌ಲೆಸ್‌ ಡಿಸ್‌ಪ್ಲೇ

6.5 ಇಂಚಿನ ವಿಶಾಲ AMOLED ನೋಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಪೂರ್ಣ ಹೆಚ್‌ಡಿ ರೆಶಲ್ಯೂಶನ್‌ ಒಳಗೊಂಡಿದೆ. ಡಿಸ್‌ಪ್ಲೇಯ ಸುತ್ತಲೂ ಅತಿ ಕಡಿಮೆ ಅಂಚನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಗೇಮ್ಸ್‌ ಆಡಲು ಮತ್ತು ವಿಡಿಯೊ ವೀಕ್ಷಿಸಲು ಡಿಸ್‌ಪ್ಲೇಯು ಅತ್ಯುತ್ತಮ ಎನಿಸಲಿದೆ.

ಸ್ನ್ಯಾಪ್‌ಡ್ರಾಗನ್ 710

ಸ್ನ್ಯಾಪ್‌ಡ್ರಾಗನ್ 710

ರಿಯಲ್ ಮಿ 3 ಪ್ರೊ ದಲ್ಲಿಯೂ ಸಹ ಕಂಪನಿಯು ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿತ್ತು. ಈಗ ರಿಯಲ್ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಅನ್ನು ನೀಡಿದೆ. ಮಲ್ಟಿಟಾಸ್ಕ್‌ ಕೆಲಸಗಳು ಸುಲಭವಾಗಿ ಮಾಡಬಹುದಾಗಿದ್ದು, ಗೇಮ್‌ ಆಡಲು ಸಹ ಪೂರಕವಾಗಿರಲಿದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಫೀಚರ್ಸ್‌ಗಳಲ್ಲಿ 48ಎಂಪಿ ಕ್ಯಾಮೆರಾ ಆಯ್ಕೆಯು ಸಹ ಒಂದಾಗಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್ ಸಹ ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಫೀಚರ್‌ ಅನ್ನು ಹೊಂದಿದ್ದು, ಸೋನಿಯ IMX586 ಸೆನ್ಸಾರ್‌ ಈ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಅದರ ಅಪರ್ಚರ್ f/1.7 ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಈಗಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸೆಲ್ಫಿಗಾಗಿ ಪಾಪ್‌ಅಪ್‌ ಕ್ಯಾಮೆರಾ ಆಯ್ಕೆಯನ್ನು ಒದಗಿಸಲಾಗುತ್ತಿದೆ. ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನಿನಲ್ಲಿಯೂ ಸಹ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನಿನ 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾವುನ್ನು ಒದಗಿಸಿದ್ದು, ಅದು 0.7 ಸೆಕೆಂಡ್ಸ್‌ನ ಒಳಗೆ ತೆರೆದುಕೊಳ್ಳುತ್ತದೆ.

VOOC 3.0

VOOC 3.0

ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್ಫೋನ್‌ನಲ್ಲಿ 3,765mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿಯು ದೀರ್ಘಕಾಲದವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ VOOC 3.0 ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್‌ ಪಡೆದುಕೊಳ್ಳುತ್ತದೆ.

Best Mobiles in India

English summary
Realme X India Launch Officially Teased. To Be Launched In Onion And Garlic Colors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X