ಅಮೆಜಾನ್‌ ಪ್ರೈಮ್‌ ಡೇ ಸೇಲ್‌ 2022 ಡೇಟ್‌ ಫಿಕ್ಸ್‌! ಡಿಸ್ಕೌಂಟ್‌ ಏನಿದೆ?

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಪಾಲಿನ ನೆಚ್ಚಿನ ತಾಣ ಎನಿಸಿಕೊಂಡಿದೆ. ಅಮೆಜಾನ್‌ ತನ್ನ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ 2022 ಅನ್ನು ಘೋಷಣೆ ಮಾಡಿದೆ. ಈ ಸೇಲ್‌ ಭಾರತದಲ್ಲಿ ಇದೇ ಜುಲೈ 23-24 ರ ನಡುವೆ ನಡೆಯಲಿದೆ ಎಂದು ಅಮೆಜಾನ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಹೆಸರೇ ಸೂಚಿಸುವಂತೆ ಅಮೆಜಾನ್‌ ಪ್ರೈಮ್ ಡೇ ಸೇಲ್‌ ನಿರ್ದಿಷ್ಟವಾಗಿ ಅಮೆಜಾನ್ ಪ್ರೈಮ್ ಗ್ರಾಹಕರಿಗಾಗಿ ನಡೆಸಲಾಗುತ್ತದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ರೈಮ್‌ ಗ್ರಾಹಕರಿಗಾಗಿ ನಡೆಸುವ ವಿಶೇಷ ಸೇಲ್‌ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇದೇ ಜುಲೈ 23-24 ರ ನಡುವೆ ನಡೆಯಲಿದೆ. ಈ ಸೇಲ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅನೇಕ ಪ್ರಾಡಕ್ಟ್‌ಗಳ ಮೇಲೆ ವಿಶೇಷ ರಿಯಾಯಿತಿಗಳು, ಡೀಲ್‌ಗಳು ಹಾಗೂ ಆಫರ್‌ಗಳನ್ನು ನೀಡಲಾಗುತ್ತದೆ. ಈ ಸೇಲ್‌ ಭಾರತದಲ್ಲಿ ಜುಲೈ 23 ರಂದು ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗಲಿದೆ. 48 ಗಂಟೆಗಳ ಕಾಲ ನಡೆಯುವ ಈ ಸೇಲ್‌ನಲ್ಲಿ 30,000 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಯಾಗಲಿವೆ ಎಂದು ಅಮೆಜಾನ್‌ ಹೇಳಿದೆ.

ಇಂಟೆಲ್‌

ಇನ್ನು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಸ್ಯಾಮ್‌ಸಂಗ್‌, ಶಿಯೋಮಿ, ಮತ್ತು ಇಂಟೆಲ್‌ ಕಂಪೆನಿ ಪ್ರಾಡಕ್ಟ್‌ಗಳು ಬಿಡುಗಡೆಯಾಗಲಿವೆ. ಇದಲ್ಲದೆ XECH, Cos-IQ, Himalayan Origins, SpaceinCart, Mirakii, Karagiri, Nirvi ಯಂತಹ 120 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳಿಂದ ಕೂಡ 2,000ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಗಯಾಗಲಿವೆ. ಇದರಲ್ಲಿ ಎಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಗ್ರೂಮಿಂಗ್, ಆಭರಣಗಳು ಕೂಡ ಸೇರಿವೆ. ಇನ್ನುಳಿದಂತೆ ಈ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ನೀವು ಯಾವೆಲ್ಲಾ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೈಮ್‌

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಗ್ರಾಹಕರು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳು ಹಾಗೂ EMI ವಹಿವಾಟುಗಳ ಮೂಲಕ ವಿವಿಧ ಉತ್ಪನ್ನಗಳ ಮೇಲೆ 10% ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಲ್ಲದೆ ಅಮೆಜಾನ್ ತನ್ನ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 55% ರಿಯಾಯಿತಿಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಉಪಕರಣಗಳು, ಟಿವಿಗಳು, ಕಿಚನ್‌, ದೈನಂದಿನ ಅಗತ್ಯ ವಸ್ತುಗಳು ಮತ್ತು ಆಟಿಕೆಗಳ ಮೇಲೂ ಕೂಡ ಈ ಸೇಲ್‌ನಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಅಮೆಜಾನ್‌ ಹೇಳಿದೆ.

ಮೇಲೆ

ಇನ್ನು ಈ ಸೇಲ್‌ನಲ್ಲಿ ಅಮೆಜಾನ್ ಬೇಸಿಕ್ಸ್ ಫೈರ್ ಟಿವಿ ಆವೃತ್ತಿ ಟಿವಿಗಳ ಮೇಲೆ ಬಿಗ್‌ ಡಿಲ್ಸ್‌ಗಳನ್ನು ನೀಡಲಿದೆ. ಅಲ್ಲದೆ ಪ್ರೈಮ್ ಡೇ ಸೇಲ್‌ ಅಲೆಕ್ಸಾ ಇಂಟರ್‌ಬಿಲ್ಟ್‌ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಸ್ಪೀಕರ್‌ಗಳು, ಟಿವಿಗಳ ಮೇಲೂ ಕೂಡ ಡಿಸ್ಕೌಂಟ್‌ ಘೋಷಣೆ ಮಾಡಿದೆ. ಹಾಗೆಯೇ ಆಂಡ್ರಾಯ್ಡ್‌ನಲ್ಲಿನ ಅಮೆಜಾನ್‌ ಶಾಪಿಂಗ್‌ ಅಪ್ಲಿಕೇಶನ್ ಮತ್ತು ಎಕೋ ಡಿವೈಸ್‌ಗಳಲ್ಲಿನ ಅಲೆಕ್ಸಾ ಮೂಲಕ "ಅಲೆಕ್ಸಾ, ಪ್ರೈಮ್ ಡೇ ಎಂದರೇನು?" ಎಂದು ಕೇಳುವ ಮೂಲಕ ಈ ಈವೆಂಟ್‌ನ ಬಗ್ಗೆ ಮಾಹಿತಿಯನ್ನು ತಿಳಿಯುವುದಕ್ಕೆ ಅವಕಾಶ ನೀಡಲಾಗಿದೆ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ವಿವಿಧ ವಸ್ತುಗಳ ಮೇಲೆ ರಿಯಾಯಿತಿಗಳ ಜೊತೆಗೆ 2,500 ರೂ.ವರೆಗಿನ ರಿವಾರ್ಡ್‌ಗಳನ್ನು ಕೂಡ ನೀಡಲಾಗುತ್ತದೆ. ಇದು ತಮ್ಮ ಬಿಲ್‌ಗಳು ಮತ್ತು ರೀಚಾರ್ಜ್‌ಗಳಿಗೆ ಪಾವತಿಸುವ ಮತ್ತು ಅಮೆಜಾನ್‌ ಪೇ ಬಳಸಿಕೊಂಡು ಹಣವನ್ನು ಕಳುಹಿಸುವ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಬಹುಮಾನಗಳು ಸೇಲ್‌ ಈವೆಂಟ್ ಲೈವ್‌ ಆಗುವ ತನಕ ಲಭ್ಯವಿರುತ್ತವೆ. ಇದಲ್ಲದೆ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪ್ರೈಮ್ ಡೇ ಸೇಲ್‌ನಲ್ಲಿ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಹಾಗೆಯೇ ಕ್ರೆಡಿಟ್ ಕಾರ್ಡ್‌ಗೆ ಸೈನ್ ಅಪ್ ಮಾಡುವುದರಿಂದ 2,200ರೂ. ಬಹುಮಾನವನ್ನು ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಪ್ರೈಮ್ ಡೇ ಈವೆಂಟ್‌ನಲ್ಲಿ ಹೆಚ್ಚುವರಿಯಾಗಿ ಎರಡು ಇಂಡಿಯನ್ ಅಮೆಜಾನ್ ಒರಿಜಿನಲ್ ಸಿರೀಸ್‌ ಕೂಡ ಲಾಂಚ್ ಆಗಲಿದೆ. ಅದರಂತೆ ಜುಲೈ 7 ರಂದು ತೆಲುಗಿನಲ್ಲಿ ಮಾಡರ್ನ್ ಲವ್ ಹೈದರಾಬಾದ್ ಮತ್ತು ಜುಲೈ 14 ರಂದು ಹಿಂದಿಯಲ್ಲಿ ಕಾಮಿಕ್‌ಸ್ಟಾನ್ ಸೀಸನ್ 3 ಬಿಡುಗಡೆ ಆಗಲಿವೆ. ಹಾಗೆಯೇ ಪ್ರೈಮ್ ಸದಸ್ಯರು ಎರಡು ಹೆಚ್ಚುವರಿ "ಹೆಚ್ಚು ನಿರೀಕ್ಷಿತ" ಶೀರ್ಷಿಕೆಗಳನ್ನು ಟೀಸ್‌ ಕೂಡ ಮಾಡಬಹುದಾಗಿದೆ. ಜೊತೆಗೆ ಪ್ರೈಮ್ ವೀಡಿಯೊ ಚಾನೆಲ್‌ಗಳ ಅಡಿಯಲ್ಲಿ ಒಟ್ಟುಗೂಡಿಸಲಾದ 12 ವೀಡಿಯೊ ಸ್ಟ್ರೀಮಿಂಗ್ ಸೇವೆಗಳಲ್ಲಿ ಹೆಚ್ಚಿನ ಆಡ್-ಆನ್ ಚಂದಾದಾರಿಕೆಗಳನ್ನು ಖರೀದಿಸಲು ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ 50% ರಿಯಾಯಿತಿ ದೊರೆಯಲಿದೆ.

ಅಮೆಜಾನ್‌

ಅಮೆಜಾನ್‌ ಈಗಾಗಲೇ ಆಸ್ಟ್ರಿಯಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಕ್ಸೆಂಬರ್ಗ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ಪೋರ್ಚುಗಲ್‌ನಲ್ಲಿನ ಪ್ರೈಮ್‌ ಸದಸ್ಯರಿಗೆ ಜುಲೈ 12-13 ರ ನಡುವೆ ಪ್ರೈಮ್ ಡೇ ಸೇಲ್ ನಡೆಸುವುದಾಗಿ ಘೋಷಿಸಿದೆ. ಇನ್ನು ಸಿಂಗಾಪುರ್, ಸ್ಪೇನ್, ಯುಕೆ ಮತ್ತು ಯುಎಸ್‌ ಜೊತೆಗೆ ಪೋಲೆಂಡ್ ಮತ್ತು ಸ್ವೀಡನ್‌ನಲ್ಲಿ ಮೊದಲ ಬಾರಿಗೆ ಲೈವ್ ಆಗಲಿದೆ. ಈ ಮೂಲಕ ಅಮೆಜಾನ್‌ ತನ್ನ ಗ್ರಾಹಕರಿಗೆ ಬಿಗ್‌ ಡಿಸ್ಕೌಂಟ್‌ ಅನ್ನು ಮತ್ತೆ ಹೊತ್ತು ತಂದಿದೆ.

ಅಮೆಜಾನ್‌

ಇನ್ನು ಇತ್ತೀಚಿಗೆ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಯಾಶನ್ ಶೂಸ್‌ಗಾಗಿ ವರ್ಚುವಲ್ ಟ್ರೈ-ಆನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಮೊಬೈಲ್ ಅನುಭವವಾಗಿದ್ದು, ಗ್ರಾಹಕರಿಗೆ ಪ್ರತಿ ಕೋನದಿಂದ ಒಂದು ಜೋಡಿ ಬೂಟುಗಳು ಹೇಗೆ ಕಾಣುತ್ತವೆ ಎಂಬುದನ್ನು ದೃಶ್ಯೀಕರಿಸಲು ಸಹಾಯ ಮಾಡಲು ವರ್ಚುವಲ್‌ ಅನುಭವ ನೀಡಲಿದೆ. ಇನ್ನು iOS ನಲ್ಲಿ ಅಮೆಜಾನ್‌ ಶಾಪಿಂಗ್ ಅಪ್ಲಿಕೇಶನ್ ಬಳಸುವ ಗ್ರಾಹಕರು ನ್ಯೂ ಬ್ಯಾಲೆನ್ಸ್‌, ಅಡಿಡಾಸ್‌, ರಿಬಾಕ್‌, ಪುಮಾ, ಸೂಪರ್‌ಗಾ, ಲಾಕಾಸ್ಟ್‌, ಆಸಿಕ್ಸ್‌ ಮತ್ತು ಸೌಕಾನಿ ಸೇರಿದಂತೆ ಬ್ರ್ಯಾಂಡ್‌ಗಳ ಶೈಲಿಗಳನ್ನು ದೃಶ್ಯೀಕರಿಸಲು ಶೂಸ್‌ಗಾಗಿ ವರ್ಚುವಲ್ ಟ್ರೈ-ಆನ್ ಅನ್ನು ಬಳಸಬಹುದಾಗಿದೆ.

Best Mobiles in India

English summary
Amazon Prime Day 2022 Coming Soon To India: Checkout The Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X