ಜೂ.25ರಂದು ರಿಯಲ್ ಮಿ X3 ಸೂಪರ್ ಜೂಮ್‌ ಫೋನ್ ಮಾರುಕಟ್ಟೆಗೆ ಎಂಟ್ರಿ!

|

ಜನಪ್ರಿಯ ರಿಯಲ್‌ ಮಿ ಮೊಬೈಲ್ ಕಂಪನಿಯು ಕಡಿಮೆ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದ್ದು, ಹಲವು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಮತ್ತೆ ಹೊಸದಾಗಿ ರಿಯಲ್‌ ಮಿ ಎಕ್ಸ್‌ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಕಲ ತಯಾರಿ ನಡೆಸಿದೆ. ಬರಲಿರುವ ರಿಯಲ್‌ ಮಿ ಎಕ್ಸ್‌ ಸರಣಿಯು ಎರಡು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ.

ರಿಯಲ್‌ ಮಿ ಎಕ್ಸ್‌ 3

ಹೌದು, ರಿಯಲ್‌ ಮಿ ಸಂಸ್ಥೆಯು ಎಕ್ಸ್‌ ಸರಣಿಯಲ್ಲಿ ''ರಿಯಲ್‌ ಮಿ ಎಕ್ಸ್‌ 3'' ಮತ್ತು ''ರಿಯಲ್‌ ಮಿ ಎಕ್ಸ್‌ 3 ಸೂಪರ್ ಜೂಮ್‌'' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಸಜ್ಜಾಗಿದೆ. ಬಹು ನಿರೀಕ್ಷಿತ ಈ ಸರಣಿಯು ಇದೇ ಜೂನ್ 25ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಈ ಫೋನ್‌ ಬಿಡುಗಡೆ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ ನಡೆಯಲಿದ್ದು, ಗ್ರಾಹಕರು ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್ ತಾಣಗಳ ಮೂಲಕ ವೀಕ್ಷಿಸಬಹುದಾಗಿದೆ.

ರಿಯಲ್‌ ಮಿ ಎಕ್ಸ್‌ 3 ಸೂಪರ್ ಜೂಮ್

ರಿಯಲ್‌ ಮಿ ಕಂಪನಿಯ ಹೊಸ ರಿಯಲ್‌ ಮಿ ಎಕ್ಸ್ 3 ಮತ್ತು ರಿಯಲ್‌ ಮಿ ಎಕ್ಸ್‌ 3 ಸೂಪರ್ ಜೂಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ ಎಂಡ್‌ ಫೀಚರ್ಸ್‌ಗಳ ರಿಯಲ್‌ ಮಿ ಎಕ್ಸ್‌ 3 ಸೂಪರ್ ಜೂಮ್ ಗಮನ ಸೆಳೆಯುವಂತಿವೆ. ಈ ಫೋನ್ 12GB RAM ಮತ್ತು 256GB ಆಂತರಿಕ ಸ್ಟೋರೇಜ್‌ನ ಒಂದೇ ವೇರಿಯಂಟ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇನ್ನೊಂದು ಪ್ರಮುಖ ಹೈಲೈಟ್‌ ಅಂದರೇ ಈ ಫೋನ್ 60x ಜೂಮ್ ಸಾಮರ್ಥ್ಯ ಹೊಂದಿರಲಿದೆ. ಸ್ಟೇರಿ ಮೋಡ್ ಹಾಗೂ ಸೂಪರ್ ನೈಟ್‌ಸ್ಕೇಪ್‌ ಮೋಡ್‌ ಆಯ್ಕೆಗಳು ಇರಲಿವೆ.

ಹೆಚ್‌ಡಿ ಡಿಸ್‌ಪ್ಲೇ

ಇನ್ನು ರಿಯಲ್‌ ಮಿ ಎಕ್ಸ್ 3 ಸೂಪರ್‌ ಜೂಮ್ 1920 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುತ್ತದೆ. ಮತ್ತು ಈ ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ರಚನೆಯನ್ನು ಹೊಂದಿದೆ. ಹಾಗೆಯೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 855+ SoC ಪ್ರೊಸೆಸರ್ ಬಲ ಒಳಗೊಂಡಿರಲಿದೆ. ಹಾಗೆಯೇ ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಇರಲಿದೆ.

4,200mAh ಬ್ಯಾಟರಿ

ಹಾಗೆಯೇ ಈ ಸ್ಮಾರ್ಟ್‌ಫೋನ್ 4,200mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, 30W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಜೊತೆಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಇರಲಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸಲ್ ಸೆನ್ಸಾರ್ ಇರಲಿದ್ದು, ಇಮೇಜ್ ಸ್ಟೇಬಿಲೇಜೇಶನ್ ಹಾಗೂ ಆಪ್ಟಿಕಲ್ ಜೂಮ್ ಬೆಂಬಲ ಇರಲಿದೆ. ಮುಂಭಾಗದ ಮುಖ್ಯ ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಆಗಿದೆ.

Best Mobiles in India

English summary
Realme X3 and Realme X3 SuperZoom smartphones will be launched through a digital event at 12:30PM on June 25, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X